ಕೋಲಾರ: ಹೆಣ್ಣು ಮಕ್ಕಳ ನಗ್ನ ಫೋಟೋ, ವಿಡಿಯೋ ಮಾಡಿದ್ದ ಶಿಕ್ಷಕನಿಗೆ ಹೈಕೋರ್ಟ್​​ನಲ್ಲೂ ಸಂಕಷ್ಟ

| Updated By: Ganapathi Sharma

Updated on: Sep 07, 2024 | 10:10 AM

ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಕಿರುಕುಳ ಕೊಟ್ಟು, ನಗ್ನ ವಿಡಿಯೋ ಮಾಡಿಟ್ಟುಕೊಂಡಿದ್ದ ಮಾಲೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಚಿತ್ರಕಲಾ ಶಿಕ್ಷಕ ಮುನಿಯಪ್ಪಗೆ ಹೈಕೋರ್ಟ್​​ನಲ್ಲೂ ಸಂಕಷ್ಟ ಕಾದಿದೆ. ಪೋಕ್ಸೋ ಕೇಸ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಕೋಲಾರ: ಹೆಣ್ಣು ಮಕ್ಕಳ ನಗ್ನ ಫೋಟೋ, ವಿಡಿಯೋ ಮಾಡಿದ್ದ ಶಿಕ್ಷಕನಿಗೆ ಹೈಕೋರ್ಟ್​​ನಲ್ಲೂ ಸಂಕಷ್ಟ
ಕರ್ನಾಟಕ ಹೈಕೋರ್ಟ್
Follow us on

ಕೋಲಾರ, ಸೆಪ್ಟೆಂಬರ್ 7: ಮೊಬೈಲ್​ನಲ್ಲಿ ಹೆಣ್ಣು ಮಕ್ಕಳ ನಗ್ನ ಫೋಟೋ, ವಿಡಿಯೋ ಮಾಡಿ ಇಟ್ಟುಕೊಂಡಿದ್ದ ಹಾಗೂ ವಿದ್ಯಾರ್ಥನಿಯರಿಗೆ ಕಿರುಕುಳ ನೀಡಿದ್ದ ಆರೋಪ ಎದುರಿಸುತ್ತಿರುವ ಕೋಲಾರದ ಶಿಕ್ಷಕನೊಬ್ಬ ಪೋಕ್ಸೋ ಕೇಸ್ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಕೋಲಾರ ಜಿಲ್ಲೆ ಮಾಲೂರು ತಾಲೂಕಿನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಚಿತ್ರಕಲಾ ಶಿಕ್ಷಕ ಮುನಿಯಪ್ಪ ಮೊಬೈಲ್​ನಲ್ಲಿ ಸುಮಾರು 5000 ನಗ್ನ ವಿಡಿಯೋಗಳು ಪತ್ತೆಯಾಗಿದ್ದವು.

ವಿದ್ಯಾರ್ಥಿಗಳಿಂದ ಶೌಚಗುಂಡಿ ಶುಚಿಗೊಳಿಸಿದ ಆರೋಪದಲ್ಲಿ ತನಿಖೆ ನಡೆಸಲಾಗಿತ್ತು. ಆದರೆ, ತನಿಖೆ ವೇಳೆ ಭಯನಾಕ ಸತ್ಯ ಹೊರಬಂದಿತ್ತು. ತನಿಖೆ ಸಂದರ್ಭ ಶಿಕ್ಷಕ ಮುನಿಯಪ್ಪನ 4 ಮೊಬೈಲ್​ಗಳನ್ನು ಸೀಜ್ ಮಾಡಲಾಗಿತ್ತು. ಮೊಬೈಲ್​ ಪರಿಶೀಲನೆ ಮಾಡಿದಾಗ ಹೆಣ್ಣುಮಕ್ಕಳ ನಗ್ನ ವಿಡಿಯೋ‌, ಫೋಟೋಗಳು ಪತ್ತೆಯಾಗಿದ್ದವು. ಹೀಗಾಗಿ ಶಿಕ್ಷಕನ ವಿರುದ್ಧ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಮಹಾಲಿಂಗಪುರದಲ್ಲಿ ಮತ್ತೊಂದು ಭ್ರೂಣಹತ್ಯೆ; ಹೆಣ್ಣು ಎಂದು ಗರ್ಭಪಾತ, ಆದ್ರೆ ಅದು ಗಂಡು ಮಗುವಾಗಿತ್ತು

2023ರ ಡಿಸೆಂಬರ್​ 17ರಂದು ವಸತಿ ಶಾಲೆಯಲ್ಲಿ ಬೆಳಕಿಗೆ ಬಂದಿದ್ದ ಪ್ರಕರಣ ಇದಾಗಿದೆ. ಆ ಸಂದರ್ಭದಲ್ಲಿ, ಮಕ್ಕಳಿಗೆ ಶಿಕ್ಷಕ ಚಿತ್ರಹಿಂಸೆ ನೀಡಿ ರೆಕಾರ್ಡ್ ಮಾಡಿದ್ದ ವಿಡಿಯೋ ವೈರಲ್ ಕೂಡ ಆಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ