ಏನು ದೇವರಾಜ್ ಕುಟುಂಬಕ್ಕೇ ಚಿಕ್ಕಪೇಟೆ ಕ್ಷೇತ್ರ ಮೀಸಲಾಗಿದೆಯಾ? ಈ ಬಾರಿ ಇಲ್ಲಿಂದ ನಾನು ನಿಲ್ಲುವೆ -ಕೆಜಿಎಫ್ ಬಾಬು ಸಮರ ಘೋಷಣೆ

| Updated By: ಆಯೇಷಾ ಬಾನು

Updated on: Aug 23, 2022 | 7:59 PM

ಚಿಕ್ಕಪೇಟೆ ಕ್ಷೇತ್ರದಲ್ಲಿ ಆರ್.ವಿ ದೇವರಾಜ್ ಮಾತ್ರ ಸ್ಪರ್ಧಿಸಬೇಕಾ? ಅವರ ಮಗಾ, ಪತ್ನಿ ಮಾತ್ರ ಸ್ಪರ್ಧಿಸಬೇಕಾ? ಅವರ ಕುಟುಂಬ ಬಿಟ್ಟು ಬೇರೆ ಯಾರು ಸ್ಪರ್ಧೆ ಮಾಡಬಾರದ. ನಾನು, ನನ್ನ ಪೂರ್ವಿಕರು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇವೆ.

ಏನು ದೇವರಾಜ್ ಕುಟುಂಬಕ್ಕೇ ಚಿಕ್ಕಪೇಟೆ ಕ್ಷೇತ್ರ ಮೀಸಲಾಗಿದೆಯಾ? ಈ ಬಾರಿ ಇಲ್ಲಿಂದ ನಾನು ನಿಲ್ಲುವೆ -ಕೆಜಿಎಫ್ ಬಾಬು ಸಮರ ಘೋಷಣೆ
ಕೆಜಿಎಫ್ ಬಾಬು
Follow us on

ದೆಹಲಿ: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತೇನೆ ಎಂದು ದೆಹಲಿಯ ಕರ್ನಾಟಕ ಭವನದಲ್ಲಿ ಕೆಜಿಎಫ್ ಬಾಬು ತಾವು ಚುನಾವಣೆಗೆ ನಿಲ್ಲುವ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ. ಅಲ್ಲದೆ ಮುಂಬರುವ ಚುನಾವಣೆಗೆ ಸಮರ ಸಾರಿದ್ದಾರೆ. ನಾನು, ನನ್ನ ಪೂರ್ವಿಕರು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇವೆ. ಕ್ಷೇತ್ರದ ಜನರು ಚುನಾವಣೆ ನಿಲ್ಲಲು ಒತ್ತಾಯ ಮಾಡುತ್ತಿದ್ದಾರೆ ಎಂದರು.

ಚಿಕ್ಕಪೇಟೆ ಕ್ಷೇತ್ರದಲ್ಲಿ ಆರ್.ವಿ ದೇವರಾಜ್ ಮಾತ್ರ ಸ್ಪರ್ಧಿಸಬೇಕಾ? ಅವರ ಮಗಾ, ಪತ್ನಿ ಮಾತ್ರ ಸ್ಪರ್ಧಿಸಬೇಕಾ? ಅವರ ಕುಟುಂಬ ಬಿಟ್ಟು ಬೇರೆ ಯಾರು ಸ್ಪರ್ಧೆ ಮಾಡಬಾರದ. ನಾನು, ನನ್ನ ಪೂರ್ವಿಕರು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇವೆ. ಕ್ಷೇತ್ರದ ಜನರು ಚುನಾವಣೆ ನಿಲ್ಲಲ್ಲು ಒತ್ತಾಯ ಮಾಡುತ್ತಿದ್ದಾರೆ. ಹೀಗಾಗಿ ನಾನು ಸ್ಪರ್ಧಿಸುತ್ತೇನೆ. ಹೈಕಮಾಂಡ್ ನಾಯಕರು ನನ್ನ ಕೆಲಸ ಗಮನಿಸಬೇಕು. ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ಜನರಿಗೆ ಸಹಾಯ ಮಾಡಲು ಅವಕಾಶ ನೀಡಬೇಕು. ಚಿಕ್ಕಪೇಟೆಯಲ್ಲಿ ನಾನು ಆಡಿ ಬೆಳೆದಿದ್ದೇನೆ. ನಾನೇ ಸ್ಪರ್ಧೆ ಮಾಡಬೇಕು ಎಂದು ಜನರು ಕೇಳುತ್ತಿದ್ದಾರೆ. ಹೈಕಮಾಂಡ್ ನಾಯಕರು ಗಮನಿಸಬೇಕು ಎಂದು ಕೆಜಿಎಫ್ ಬಾಬು ತಿಳಿಸಿದ್ದಾರೆ. ಇನ್ನು ಈ ಹಿಂದೆ ಇಡಿ ವಿಚಾರಣೆ ವೇಳೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಕೆಜಿಎಫ್ ಬಾಬು ತಿಳಿಸಿದ್ದರು.

ಮುಂದಿನ ಚುನಾವಣೆಯಲ್ಲಿ ಚಿಕ್ಕಪೇಟೆ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ನನ್ನ ಆದಾಯದ ಶೇ.25ರಷ್ಟು ಮೊತ್ತವನ್ನು ಕ್ಷೇತ್ರಕ್ಕೆ ಖರ್ಚುಮಾಡುವೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಗೆ ಹಣ ಖರ್ಚು ಮಾಡುತ್ತೇವೆ ಎಂದು ಕೆಜಿಎಫ್ ಬಾಬು ತಿಳಿಸಿದ್ದರು.

ಪತ್ನಿಗೆ ಆಪರೇಷನ್ ಆಗಿ 14 ದಿನಗಳಾಗಿದೆ, ಆದರೂ ವಿಚಾರಣೆಗೆ ಬಂದಿದ್ದೇವೆ: ನಮಗೆ ಈಗ ಈ ದೇಶವೇ ಬೇಡ ಅನಿಸಿದೆ -ಕೆಜಿಎಫ್ ಬಾಬು

ಬೆಂಗಳೂರು: ಸ್ಕ್ರ್ಯಾಪ್ ಬ್ಯುಸಿನೆಸ್ ಶುರುಮಾಡಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಬೆಳೆದ ಕಾಂಗ್ರೆಸ್ ಮುಖಂಡ ಕೆಜಿಎಫ್ ಬಾಬು(KGF Babu) ಸದ್ಯ ಇಡಿ(Enforcement Directorate) ವಿಚಾರಣೆ ಎದುರಿಸುತ್ತಿದ್ದು ದೆಹಲಿಯಲ್ಲಿ ಇಂದು ವಿಚಾರಣೆಗೆ ಹಾಜರಾಗಿದ್ದರು. ಇನ್ನು ಕೆಜಿಎಫ್ ಬಾಬು ಜೊತೆ ಅವರ ಪತ್ನಿ ರುಕ್ಸಾನ್ ತಾಜ್ ಕೂಡ ವಿಚಾರಣೆಗೆ ಬಂದಿದ್ದು ಇಡಿ ವಿಚಾರಣೆ ವೇಳೆ ಬೆದರಿಸುವ ಪ್ರಯತ್ನ ಮಾಡಲಾಯ್ತು ಎಂದು ಆರೋಪ ಮಾಡಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಪತಿ ರಾಜಕೀಯದಲ್ಲಿದ್ದಾರೆಂದು ಟಾರ್ಗೆಟ್ ಮಾಡಲಾಗುತ್ತಿದೆ. ಇಡಿ ಅಧಿಕಾರಿಗಳ ದಾಳಿ ವೇಳೆ ಒಂದು ವೈಯಕ್ತಿಕ ಡೈರಿ ಸಿಕ್ಕಿತ್ತು. ಡೈರಿ ಸಂಬಂಧ ಇಂದು ಪ್ರಶ್ನೆಗಳನ್ನು ಕೇಳಿದ್ರು. ಹಣಕಾಸು ವ್ಯವಹಾರದ ಬಗ್ಗೆ ಇಡಿ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ವಿಚಾರಣೆ ವೇಳೆ ಶಾಸಕ ಜಮೀರ್ ಅಹ್ಮದ್ ವಿಚಾರ ಪ್ರಸ್ತಾಪಿಸಿಲ್ಲ ಎಂದು ಇಡಿ ವಿಚಾರಣೆ ಬಳಿಕ KGF ಬಾಬು ಪತ್ನಿ ರುಕ್ಸಾನ್ ತಾಜ್ ಹೇಳಿದ್ರು.

Published On - 7:49 pm, Tue, 23 August 22