‘ಅಯ್ಯೋ ಸಾರ್ ಭಯ ಆಗ್ತಿದೆ’; ಮಾತೆತ್ತಿದರೆ ತಿಹಾರ್ ಜೈಲು ಅಂತಾರೆ -ಇ.ಡಿ. ವಿಚಾರಣೆಗೆ ಸುಸ್ತಾದ ‘ಕೈ’ ಮುಖಂಡ ಕೆಜಿಎಫ್ ಬಾಬು
ನನಗೆ ಈ ರಾಜಕೀಯನೂ ಬೇಡ, ಚುನಾವಣೆನೂ ಬೇಡ. ಇದರಿಂದ ಆಚೆ ಬಂದರೆ ಸಾಕು ಎಂದು ಇಡಿ ವಿಚಾರಣೆಗೆ ‘ಕೈ’ ಮುಖಂಡ ಕೆಜಿಎಫ್ ಬಾಬು ಬೇಸತ್ತಿದ್ದಾರೆ. ನಾನು ವಿಧಾನಪರಿಷತ್ ಚುನಾವಣೆಗೆ ನಿಂತಿದ್ದೆ ತಪ್ಪಾಯ್ತು. ರಾಜಕೀಯವಾಗಿ ಗುರಿ ಮಾಡಲಾಗುತ್ತಿದೆ.
ದೆಹಲಿ: ಕಳೆದ ಬಾರಿಯ ವಿಧಾನ ಪರಿಷತ್ ಎಲೆಕ್ಷನ್ಗೆ ನಿಂತು ಸದ್ದು ಮಾಡಿದ್ದ ಕಾಂಗ್ರೆಸ್ ಮುಖಂಡ ಕೆಜಿಎಫ್ ಬಾಬುಗೆ ಇಡಿ(Enforcement Directorate) ಬುಲಾವ್ ಹಿನ್ನೆಲೆ ಬಾಬು ಈಗ ದೆಹಲಿಯಲ್ಲಿದ್ದಾರೆ. ಆದ್ರೆ ವಿಚಾರಣೆ ಎದುರಿಸುತ್ತಿರುವ ಕೆಜಿಎಫ್ ಬಾಬು(KGF Babu) ಭಯ ವ್ಯಕ್ತಪಡಿಸಿದ್ದಾರೆ. ಇಡಿ ನೋಟಿಸ್ ವಿಚಾರಕ್ಕೆ ಸಂಬಂಧಿಸಿ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ‘ಅಯ್ಯೋ ಸಾರ್ ಭಯ ಆಗ್ತಿದೆ’. ಮಾತೆತ್ತಿದರೆ ತಿಹಾರ್ ಜೈಲು ಅಂತಾರೆ, ಭಯ ಆಗುತ್ತಿದೆ. ಈ ರಾಜಕೀಯನೂ ಬೇಡ, ಚುನಾವಣೆನೂ ಬೇಡ ಎಂದಿದ್ದಾರೆ.
ನನಗೆ ಈ ರಾಜಕೀಯನೂ ಬೇಡ, ಚುನಾವಣೆನೂ ಬೇಡ. ಇದರಿಂದ ಆಚೆ ಬಂದರೆ ಸಾಕು ಎಂದು ಇಡಿ ವಿಚಾರಣೆಗೆ ‘ಕೈ’ ಮುಖಂಡ ಕೆಜಿಎಫ್ ಬಾಬು ಬೇಸತ್ತಿದ್ದಾರೆ. ನಾನು ವಿಧಾನಪರಿಷತ್ ಚುನಾವಣೆಗೆ ನಿಂತಿದ್ದೆ ತಪ್ಪಾಯ್ತು. ರಾಜಕೀಯವಾಗಿ ಗುರಿ ಮಾಡಲಾಗುತ್ತಿದೆ. ನನ್ನದು ಎಲ್ಲ ವೈಟ್ ಬ್ಯುಸಿನೆಸ್. ಲೀಗಲ್ ವ್ಯವಹಾರ ಮಾಡಿದರೂ ಇಡಿಯವರು ಬಿಡುತ್ತಿಲ್ಲ. 1740 ಕೋಟಿ ಆಸ್ತಿ ಘೋಷಣೆ ಮಾಡಿದ್ದೇನೆ. ಅದಕ್ಕೆ ಸರಿಯಾಗಿ ಟ್ಯಾಕ್ಸ್ ಕಟ್ಟುತ್ತಿದ್ದೇನೆ. ಐಟಿ, ಸಿಸಿಬಿ, ಇಡಿ ಒಬ್ಬರಾದ ಮೇಲೆ ಒಬ್ಬರು ದಾಳಿ ಮಾಡಿ ಜಪ್ತಿ ಮಾಡಿದ ನನ್ನ 4 ಕೆಜಿ ಚಿನ್ನ ಬಿಡಿಸಿಕೊಳ್ಳಲು ಬಂದಿದ್ದೇನೆ. ವಕೀಲರನ್ನು ಸಂಪರ್ಕಿಸಿ ನ್ಯಾಯಾಲಯದ ಮೂಲಕ ಚಿನ್ನ ವಾಪಸ್ ಪಡೆಯಲು ಪ್ರಯತ್ನ ಮಾಡುತ್ತಿದ್ದೇನೆ ಎಂದು ದೆಹಲಿಯಲ್ಲಿ ಕಾಂಗ್ರೆಸ್ ಮುಖಂಡ ಕೆಜಿಎಫ್ ಬಾಬು ತಿಳಿಸಿದ್ದಾರೆ. ಇದನ್ನೂ ಓದಿ: ಉಡುಪಿಯಲ್ಲಿ 5 ದಿನ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ
ಕೆಜಿಎಫ್ ಬಾಬು ಮನೆ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಸ್ಕ್ರ್ಯಾಪ್ ಬ್ಯುಸಿನೆಸ್ ಶುರುಮಾಡಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿ ಬೆಳೆದ ಕೆಜಿಎಫ್ ಬಾಬು ಕಳೆದ ಬಾರಿಯ ವಿಧಾನ ಪರಿಷತ್ ಎಲೆಕ್ಷನ್ಗೂ ನಿಂತು ಸದ್ದು ಮಾಡಿದ್ದವರು. ಆದ್ರೆ, ಇಂತಹ ಬಾಬು ಖಜಾನೆ ಮೇಲೆ ಇಡಿ ಕಣ್ಣು ಬಿದ್ದಿತ್ತು. ಮೇ 28ರ ಶನಿವಾರ ಬಾಬು ಮನೆ ಮೇಲೆ ರೇಡ್ ಮಾಡಿ, ಸುಮಾರು 18 ಗಂಟೆಗಳ ಕಾಲ ತಲಾಶ್ ನಡೆಸಿದ್ದ ಅಧಿಕಾರಿಗಳು ಹಲವು ಕಡತಗಳನ್ನ, ಚಿನ್ನವನ್ನು ವಶಕ್ಕೆ ಪಡೆದಿದ್ದರು. ಈ ಹಿನ್ನೆಲೆ ಕೆಜಿಎಫ್ ಬಾಬುಗೆ ವಿಚಾರಣೆಗಾಗಿ ದೆಹಲಿಗೆ ಬರುವಂತೆ ನೋಟಿಸ್ ನೀಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:14 pm, Tue, 21 June 22