Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 10ರ ದಿನಭವಿಷ್ಯ
ಯಾವುದೇ ಕೆಲಸವನ್ನು ಮಾಡುವುದಕ್ಕೆ ಹೊರಟಾಗ ಅಲಸ್ಯ ಕಾಡುತ್ತಾ ಇದ್ದಲ್ಲಿ ಗಣಪತಿಗೆ ಇಪ್ಪತ್ತೊಂದು ದೂರ್ವಾ (ಗರಿಕೆಯನ್ನು) ಅರ್ಪಿಸಿ. ಇದು ಮನೆ ಹತ್ತಿರದ ದೇವಸ್ಥಾನದಲ್ಲಿಯಾದರೂ ಅರ್ಪಿಸಬಹುದು. ಅಥವಾ ಮನೆಯಲ್ಲಿ ಇದ್ದಲ್ಲಿ ಗಣಪತಿ ಮೂರ್ತಿ ಎದುರು ಈ ಇಪ್ಪತ್ತೊಂದು ಗರಿಕೆಯನ್ನು ಇಟ್ಟು ಪ್ರಾರ್ಥನೆ ಮಾಡಿಕೊಳ್ಳಿ.

8ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 10ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನೀವು ಇಷ್ಟು ಕಾಲ ಕೇಳಿದ ತಕ್ಷಣ ಇತರರಿಗೆ ಕೆಲಸ ಮಾಡಿಕೊಡುತ್ತಿದ್ದವರಿಗೆ ಕೆಲಸ ಆಗುವ ತನಕ ಒಂದು ರೀತಿ ಇದ್ದು, ಆ ನಂತರ ಜನರು ಬದಲಾಗುತ್ತಿದ್ದಾರೆ ಎಂದು ಬಲವಾಗಿ ಅನಿಸುವುದಕ್ಕೆ ಶುರುವಾಗುತ್ತದೆ. ಒಂದೇ ಕಡೆ ಹಾಗೂ ಒಂದೇ ರೀತಿಯಲ್ಲಿ ಆಲೋಚನೆ ಮಾಡುತ್ತಿದ್ದ ನೀವು ಇದೀಗ ನಾಲ್ಕೂ ಕಡೆಯ ಸಾಧ್ಯತೆಗಳನ್ನು ಅಳೆದು- ತೂಗಿ ನೋಡುವುದಕ್ಕೆ ಆರಂಭಿಸುತ್ತೀರಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಇಷ್ಟು ದಿನದ ಲೆಕ್ಕ ಬೇರೆ, ಈ ದಿನದಿಂದ ಬೇರೆ ಎಂದು ಆಲೋಚನೆಯನ್ನು ಮಾಡಲಿದ್ದೀರಿ. ಅದಕ್ಕೆ ತಕ್ಕಂತೆ ಕೆಲವು ಯೋಚನೆ ನಿಮಗೆ ಬರಲಿದೆ. ಎಷ್ಟೇ ಪ್ರಯತ್ನ ಮಾಡಿದರೂ ಆದಾಯ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ, ಅಂದುಕೊಂಡ ವೇಗದಲ್ಲಿ ಕೆಲಸ ಸಾಗುತ್ತಿಲ್ಲ ಎಂದು ನಿಮಗೆ ಅನಿಸಲಿದ್ದು, ಇದಕ್ಕೆ ಕಾರಣ ಏನು ಎಂಬುದನ್ನು ಆಲೋಚಿಸಿಕೊಂಡು, ಈ ದಿನ ನಿಮ್ಮ ಸ್ವಂತ ವಿಚಾರದಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಳ್ಳುವುದಕ್ಕೆ ನಿರ್ಧರಿಸಲಿದ್ದೀರಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನವ ವಿವಾಹಿತರು ಇದ್ದಲ್ಲಿ ಕುಟುಂಬದ ಎಲ್ಲ ಸದಸ್ಯರ ಜತೆಗೆ ಹೆಚ್ಚಿನ ಸಮಯ ಕಳೆಯುವುದಕ್ಕೆ ನಿರ್ಧಾರ ಮಾಡುತ್ತೀರಿ. ರೆಸಾರ್ಟ್, ಸಿನಿಮಾ ಅಥವಾ ರೆಸ್ಟೋರೆಂಟ್ ಗಳಿಗೆ ತೆರಳುವಂಥ ಯೋಗ ಇದೆ. ಇನ್ನು ನಿಮ್ಮಲ್ಲಿ ಕೆಲವರು ಕಿರು ಪ್ರವಾಸಕ್ಕೆ ತೆರಳುವಂಥ ಯೋಗ ಇದೆ. ಆದರೆ ಈ ದಿ ಮಕ್ಕಳ ಅಥವಾ ಮನೆಯಲ್ಲಿ ಇರುವಂಥ ಕಿರಿಯ ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯವನ್ನು ವಹಿಸಿ.
ಲೇಖನ- ಸ್ವಾತಿ ಎನ್.ಕೆ.
