AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರದ ಪ್ರೇಮ ಭವಿಷ್ಯ: ಜೂನ್ 14ರಿಂದ 20ರವರೆಗೆ ಪ್ರೀತಿಯ ಲೋಕದಲ್ಲಿ ಅಚ್ಚರಿಯ ಚಮತ್ಕಾರ!; ಈ ರಾಶಿಯವರಿಗೆ ಸಿಗಲಿದೆ ಸಂಗಾತಿಯ ಗಿಫ್ಟ್

ಜೂನ್ 14 ರಿಂದ 20 ರವರೆಗಿನ ಈ ವಾರವು ಪ್ರೇಮದಲ್ಲಿ ಅನೇಕ ಅಚ್ಚರಿಗಳನ್ನು ತರಲಿದೆ. ಶುಕ್ರನು ಚಂದ್ರನ ರಾಶಿಯಲ್ಲಿ ಸ್ಥಿತನಾಗಿರುವುದರಿಂದ, ಅನಿರೀಕ್ಷಿತ ರೋಮಾಂಚನದ ಕ್ಷಣಗಳು ನಿಮ್ಮದಾಗಲಿವೆ. ಪ್ರತಿಯೊಂದು ರಾಶಿಗೂ ಪ್ರೀತಿಯಲ್ಲಿ ಹೊಸ ತಿರುವುಗಳು, ಬಾಂಧವ್ಯ ಸುಧಾರಣೆ ಮತ್ತು ಸುವರ್ಣಾವಕಾಶಗಳು ಕಾದಿವೆ. ನಿಮ್ಮ ಪ್ರೇಮ ಜೀವನದಲ್ಲಿ ಹೊಸ ಲಯ, ಮಾತುಗಳ ಮಂತ್ರ, ಮತ್ತು ಆತ್ಮೀಯತೆಯ ದುಪ್ಪಟ್ಟು ಹೆಚ್ಚಳವನ್ನು ನಿರೀಕ್ಷಿಸಬಹುದು.

ವಾರದ ಪ್ರೇಮ ಭವಿಷ್ಯ: ಜೂನ್ 14ರಿಂದ 20ರವರೆಗೆ ಪ್ರೀತಿಯ ಲೋಕದಲ್ಲಿ ಅಚ್ಚರಿಯ ಚಮತ್ಕಾರ!; ಈ ರಾಶಿಯವರಿಗೆ ಸಿಗಲಿದೆ ಸಂಗಾತಿಯ ಗಿಫ್ಟ್
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jun 12, 2026 | 9:00 PM

Share

ಜೂನ್ 14ರಿಂದ ಜೂನ್ 20ರವರೆಗೆ ಪ್ರೇಮದಲ್ಲಿ ಅನೇಕ ಅಚ್ಚರಿಯ ಸಂಗತಿಗಳು ನಡೆಯಲಿವೆ. ಶುಕ್ರನು ಚಂದ್ರನ ರಾಶಿಯಲ್ಲಿ ಸ್ಥಿತನಾಗಿದ್ದಾನೆ. ಅನಿರೀಕ್ಷಿತವಾದ ರೋಮಾಂಚನದ ಕ್ಷಣಗಳು ನಿಮ್ಮದಾಗಲಿದೆ. ​

ಮೇಷ ರಾಶಿ :

ಹೃದಯದ ಬಡಿತಕ್ಕೆ ಹೊಸ ಲಯ ಸಿಗಲಿದ್ದು, ಮಂಗಳನ ಪ್ರಭಾವದಿಂದ ಪ್ರೀತಿಯಲ್ಲಿ ರೋಮಾಂಚನ ಕಾದಿದೆ. ಕಣ್ಣಲ್ಲೇ ಸನ್ನೆ ಮಾಡಿ ಮನಸ್ಸು ಕದಿಯುವಿರಿ. ಸಂಗಾತಿಯೊಂದಿಗೆ ಸುಂದರ ಪಯಣಕ್ಕೆ ಸಕಾಲವಿದು.

​ವೃಷಭ ರಾಶಿ :

​ಮೌನ ಕರಗಿ, ಒಲವಿನ ಮಾತು ಚಿಗುರುವುದು. ನಿಮ್ಮ ಪ್ರೀತಿಯ ಆಳ ಸಂಗಾತಿಗೆ ಮನವರಿಕೆಯಾಗಲಿದೆ. ಮುನಿಸುಗಳೆಲ್ಲಾ ಮರೆಯಾಗಿ, ಒಲವಿನ ಹೂವು ಅರಳಲಿದೆ. ಕಂಕಣ ಭಾಗ್ಯಕ್ಕೆ ದಾರಿಯಾಗುವ ಮಧುರ ವಾರವಿದು.

​ಮಿಥುನ ರಾಶಿ :

​ಮಾತುಗಳೇ ಮಂತ್ರವಾಗಿ ಹೃದಯ ಗೆಲ್ಲುವ ಕ್ಷಣವಾಗಲಿದೆ. ನಿಮ್ಮ ಮಾತುಗಳಿಗೆ ಸಂಗಾತಿ ಫಿದಾ ಆಗಲಿದ್ದಾರೆ. ಪ್ರೇಮದ ಸುಳಿಯಲ್ಲಿ ಸಿಲುಕಿ ಹೊಸ ಲೋಕವನ್ನೇ ಸೃಷ್ಟಿಸುವಿರಿ. ಪ್ರೀತಿಯಲ್ಲಿ ನೆನಪಿನಲ್ಲಿ ಉಳಿಯುವಂತಹ ರೋಮಾಂಚನಕಾರಿ ತಿರುವು ಸಿಗಲಿದೆ.

​ಕರ್ಕಾಟಕ ರಾಶಿ :

ಈ ರಾಶಿಯಲ್ಲಿ ​ಶುಕ್ರನ ವಾಸ, ಒಲವಿನ ಸಾಮ್ರಾಜ್ಯದಲ್ಲಿ ಹೊಸ ಹರ್ಷ. ನಿಮ್ಮ ರಾಶಿಯ ಶುಕ್ರ ಪ್ರೇಮದ ಮಳೆ ಸುರಿಸಲಿದ್ದಾನೆ. ಸಂಗಾತಿಯ ತೋಳಿನಲ್ಲಿ ಸ್ವರ್ಗ ಸುಖ ಕಾಣುವಿರಿ, ಆತ್ಮೀಯತೆ ದುಪ್ಪಟ್ಟಾಗಲಿದೆ.

​ಸಿಂಹ ರಾಶಿ :

​ಚಂದಿರನ ಬೆಳಕಿನಲ್ಲಿ ಪ್ರೇಮದ ಕಾವ್ಯ ಮೂಡುವುದಿದೆ. ಭಾವನೆಗಳ ಅಲೆ ನಿಮ್ಮನ್ನು ಸಂಗಾತಿಯ ಹತ್ತಿರ ತರಲಿದೆ. ಪ್ರೀತಿಯಲ್ಲಿ ನಿಷ್ಠೆ ಹೆಚ್ಚಲಿದ್ದು, ವಿಶೇಷ ಉಡುಗೊರೆಯೊಂದಿಗೆ ಅವರ ಮನಸ್ಸನ್ನು ಸಂಪೂರ್ಣವಾಗಿ ಗೆಲ್ಲುವಿರಿ.

​ಕನ್ಯಾ ರಾಶಿ :

​ವಾದಗಳನ್ನು ಬದಿಗಿಟ್ಟು, ಪ್ರೀತಿಯ ಗೀತೆ ಹಾಡುವ ಸಮಯ. ಮನಸ್ಸಿನ ಗೊಂದಲಗಳು ದೂರವಾಗಿ ಸಂಗಾತಿಯ ಸನಿಹ ಸುಖ ನೀಡಲಿದೆ. ಪ್ರೇಮಕ್ಕೆ ಕುಟುಂಬದ ಹರಕೆ ಸಿಗುವ ಸುವರ್ಣ ಅವಕಾಶವಿದೆ. ಪ್ರೀತಿ ಮಾಗುವ ಸುಂದರ ದಿನಗಳಿವು.

​ತುಲಾ ರಾಶಿ :

​ಹೃದಯಗಳು ಒಂದಾಗಿ, ಪ್ರೇಮದ ಹೆಜ್ಜೆ ಇಡುವ ಕಾಲ. ಸಂಗಾತಿಯ ಕಣ್ಣಲ್ಲೇ ನಿಮ್ಮ ಜಗತ್ತನ್ನು ಕಾಣುವಿರಿ. ಪ್ರೀತಿಯ ಸಂಬಂಧ ಮುಂದಿನ ಹಂತಕ್ಕೆ ತಲುಪಲು ಈ ವಾರ ಹೆಜ್ಜೆಯಿಡಲಿದ್ದೀರಿ. ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ.

​ವೃಶ್ಚಿಕ ರಾಶಿ :

​ಸಂಶಯದ ಮೋಡ ಸರಿದು, ಪ್ರೇಮದ ಸೂರ್ಯ ಮೂಡುವ ವಾರವಿದು. ನಿಮ್ಮ ನಿಗೂಢ ಪ್ರೀತಿ ಈಗ ಬಹಿರಂಗವಾಗುವ ಸಮಯ. ಸಂಗಾತಿಯ ನಂಬಿಕೆ ನಿಮ್ಮಲ್ಲಿ ಹೊಸ ಚೈತನ್ಯ ತುಂಬಲಿದೆ. ಪ್ರೇಮ ಸಾಮ್ರಾಜ್ಯದಲ್ಲಿ ನೀವೇ ರಾಜ ಮತ್ತು ರಾಣಿಯರು.

​ಧನು ರಾಶಿ :

​ಹೊಸ ಕನಸು, ಹೊಸ ಒಲವು ಮೂಡುವ ರಂಗಿನ ದಿನಗಳು ನಿಮಗೆ. ಒಂಟಿತನಕ್ಕೆ ಬ್ರೇಕ್ ಬೀಳಲಿದೆ. ಹೊಸಬರ ಪ್ರವೇಶದಿಂದ ಮನಸ್ಸು ತೇಲಲಿದೆ. ಹಳಬರ ಮುನಿಸು ಕರಗಿ, ಪ್ರೀತಿಯ ಸವಿ ಸಿಗುವ ಅದ್ಭುತ ವಾರವಿದು.

ಇದನ್ನೂ ಓದಿ: ಉದ್ಯೋಗ ಭವಿಷ್ಯ: ಜೂನ್ 14ರಿಂದ 20ರವರೆಗೆ ಈ ರಾಶಿಯವರಿಗೆ ಸಿಗಲಿದೆ ಪ್ರಮೋಷನ್; ನಿಮ್ಮ ರಾಶಿಯ ಉದ್ಯೋಗ ಯೋಗ ಹೇಗಿದೆ?

ಮಕರ ರಾಶಿ :

​ನಂಬಿಕೆಯ ತಳಹದಿಯ ಮೇಲೆ ಪ್ರೇಮದ ಅರಮನೆ ನಿರ್ಮಾಣವಾಗಲಿ. ಮಾತಗಿಂತ ಕೃತಿಯಲ್ಲಿ ಪ್ರೀತಿ ತೋರಿಸುವಿರಿ. ಸಂಗಾತಿಯ ಜವಾಬ್ದಾರಿಯುತ ನಡವಳಿಕೆ ನಿಮ್ಮಲ್ಲಿ ನೆಮ್ಮದಿ ತರಲಿದೆ. ಪ್ರೇಮ ಜೀವನದಲ್ಲಿ ಸ್ಥಿರತೆ ಮತ್ತು ಗೌರವ ಹೆಚ್ಚಾಗಲಿದೆ.

​ಕುಂಭ ರಾಶಿ :

​ಹಠ ಬಿಟ್ಟು ಒಲವಿಗೆ ಶರಣಾಗುವ ಮಧುರ ಕ್ಷಣ ಬರಲಿದೆ. ಸಂಗಾತಿಯ ಸಣ್ಣ ಮುನಿಸನ್ನು ಪ್ರೀತಿಯಿಂದಲೇ ಗೆಲ್ಲುವಿರಿ. ವಾರಾಂತ್ಯದಲ್ಲಿ ದೂರವಿಹಾರ ನಿಮ್ಮ ಪ್ರೇಮದ ರಂಗನ್ನು ಮತ್ತಷ್ಟು ಹೆಚ್ಚಿಸಲಿದೆ.

​ಮೀನ ರಾಶಿ :

​ಶನಿಯ ಸ್ಥಿರತೆಯಲ್ಲಿ, ಅಮರ ಪ್ರೇಮದ ಪಿಸುಮಾತು ಬರಲಿದೆ. ಮೀನದ ಶನಿ ಪ್ರೀತಿಗೊಂದು ಜವಾಬ್ದಾರಿ ನೀಡಲಿದ್ದಾನೆ. ಸಂಗಾತಿಯ ಮೌನವನ್ನೂ ಅರ್ಥೈಸಿಕೊಂಡು, ಗಾಢವಾದ ಭಾವನಾತ್ಮಕ ಬಾಂಧವ್ಯವನ್ನು ಅನುಭವಿಸುವಿರಿ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ಅಲ್ಲು ಅರ್ಜುನ್ ಮಾಡಿದ್ದು ನೋಡಿ ಭೇಷ್ ಎಂದ ಅಭಿಮಾನಿಗಳು: ವಿಡಿಯೋ ನೋಡಿ
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ವೈಮನಸ್ಸು ಮರೆತು ದರ್ಶನ್ ಭೇಟಿ ಮಾಡಲು ಜೈಲಿಗೆ ಬಂದ ನಟ ಧನ್ವೀರ್
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಲ್ಲಿ ವ್ಯರ್ಥವಾಗಿ ಸಮುದ್ರ ಸೇರುತ್ತಿರುವ ಕಾವೇರಿ ನೀರು!
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ಕಾವೇರು ನೀರು ಬಿಡದಂತೆ ಸರ್ಕಾರಕ್ಕೆ ಎಚ್ಚರಿಕೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ತಮಿಳುನಾಡಿಗೆ ನೀರು ಹರಿಸುವ ಆದೇಶ ಖಂಡಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
ಪ್ರಧಾನ್ ಅವರನ್ನು ತೆಗೆದು ಪ್ರಧಾನಿಯನ್ನು ಉಳಿಸಿಕೊಂಡಿರಿ; ಅಖಿಲೇಶ್ ಯಾದವ್
"ಕಳೆದ 2 ವರ್ಷಗಳಲ್ಲಿ 3000ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ"
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ
ಕಾವೇರಿ ಸಂಧಾನ ಸೂತ್ರಕ್ಕೆ‌ ದಿನಾಂಕ ಫಿಕ್ಸ್, ಆ.3ರಂದು ಸಿಎಂಗಳ ಸಭೆ ನಿಗದಿ
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!
ಕೆ.ಆರ್.ಪೇಟೆ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಹೈಡ್ರಾಮಾ!
ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: CID ತನಿಖೆಗೆ ಆದೇಶ
ಪಶುವೈದ್ಯರ ನೇಮಕಾತಿಯಲ್ಲಿ ಅಕ್ರಮ ಪ್ರಕರಣ: CID ತನಿಖೆಗೆ ಆದೇಶ