AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಎದುರಾಳಿ, ನನ್ನ ಆಪ್ತ ಗೆಳೆಯ… ವಿಲಿಯಮ್ಸನ್ ನಿವೃತ್ತಿಗೆ ಕೊಹ್ಲಿ ಭಾವುಕ ಪತ್ರ!

Kane Williamson Retirement: ನ್ಯೂಝಿಲೆಂಡ್ ಕ್ರಿಕೆಟ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾದ ಕೇನ್ ವಿಲಿಯಮ್ಸನ್, ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಬರೋಬ್ಬರಿ 19,346 ರನ್ ಗಳಿಸುವ ಮೂಲಕ ಕಿವೀಸ್ ಪರ ಅತಿ ಹೆಚ್ಚು ರನ್ ಬಾರಿಸಿದ ದಾಖಲೆ ಹೊಂದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 54ಕ್ಕೂ ಹೆಚ್ಚಿನ ಸರಾಸರಿಯಲ್ಲಿ 33 ಶತಕಗಳ ನೆರವಿನಿಂದ 9,515 ರನ್ ಸಿಡಿಸಿರುವ ಅವರು, ತಂಡದ ಬ್ಯಾಟಿಂಗ್ ಬೆನ್ನೆಲುಬಾಗಿದ್ದರು. ಇದೀಗ 35 ವಯಸ್ಸಿಗೆ ಎಲ್ಲಾ ಮಾದರಿಯ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದಾರೆ.

ನನ್ನ ಎದುರಾಳಿ, ನನ್ನ ಆಪ್ತ ಗೆಳೆಯ... ವಿಲಿಯಮ್ಸನ್ ನಿವೃತ್ತಿಗೆ ಕೊಹ್ಲಿ ಭಾವುಕ ಪತ್ರ!
Virat Kohli - Kane WilliamsonImage Credit source: ICC
ಝಾಹಿರ್ ಯೂಸುಫ್
|

Updated on:Jun 13, 2026 | 7:52 AM

Share

ಜೂನ್ 12, 2026 ರಂದು ನ್ಯೂಝಿಲೆಂಡ್​ನ ಶ್ರೇಷ್ಠ ಬ್ಯಾಟರ್ ಹಾಗೂ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮಧ್ಯದಲ್ಲೇ ಹೊರಬಿದ್ದ ಈ ದಿಢೀರ್ ನಿರ್ಧಾರ ಇಡೀ ಕ್ರಿಕೆಟ್ ಜಗತ್ತಿಗೆ ಆಘಾತ ನೀಡಿದೆ. ಈ ಬೆನ್ನಲ್ಲೇ, ವಿಲಿಯಮ್ಸನ್ ಅವರ ಆಪ್ತ ಗೆಳೆಯ ಹಾಗೂ ಭಾರತದ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಭಾವನಾತ್ಮಕ ಪತ್ರ ಈಗ ಎಲ್ಲರ ಗಮನ ಸೆಳೆದಿದೆ.

‘ಮೈದಾನದ ಎದುರಾಳಿ ಈಗ ಜೀವಮಾನದ ಗೆಳೆಯ’

ಆಧುನಿಕ ಕ್ರಿಕೆಟ್‌ನ ‘ಫ್ಯಾಬ್ ಫೋರ್’ ಜೋಡಿಯಾಗಿರುವ ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ನಡುವಿನ ಸ್ನೇಹ ಜಗತ್ಪ್ರಸಿದ್ಧ. ವಿಲಿಯಮ್ಸನ್ ನಿವೃತ್ತಿ ವಿಷಯ ತಿಳಿಯುತ್ತಿದ್ದಂತೆ ಕೊಹ್ಲಿ ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಹಾಗೂ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶುಭ ಹಾರೈಸಿದ್ದಾರೆ.

“ವರ್ಷಗಳ ಪಯಣದಲ್ಲಿ ಒಬ್ಬ ಕಠಿಣ ಎದುರಾಳಿಯಿಂದ ಅತ್ಯಾಪ್ತ ಗೆಳೆಯನಾಗಿ ಬದಲಾದ ಕಥೆ ನಮ್ಮದು. ಕೇನ್, ಇಷ್ಟು ವರ್ಷಗಳ ಕಾಲ ನಿನ್ನ ಅದ್ಭುತ ಬ್ಯಾಟಿಂಗ್ ನೋಡುವುದು ಮತ್ತು ನಿನ್ನ ವಿರುದ್ಧ ಸ್ಪರ್ಧಿಸುವುದು ನನಗೆ ಸಿಕ್ಕ ದೊಡ್ಡ ಹೆಮ್ಮೆ. ಆದರೆ ಎಲ್ಲಕ್ಕಿಂತ ಹೆಚ್ಚಾಗಿ ಕ್ರಿಕೆಟ್ ಮತ್ತು ಅದರಾಚೆಗಿನ ನಮ್ಮ ಸ್ನೇಹ ಹಾಗೂ ನಾವು ಹಂಚಿಕೊಂಡ ಆಲೋಚನೆಗಳಿಗೆ ನಾನು ಹೆಚ್ಚಿನ ಗೌರವ ನೀಡುತ್ತೇನೆ. ನಾವು ಭೇಟಿಯಾದ ಹಾಗೂ ಮಾತನಾಡಿದ ಪ್ರತಿ ಕ್ಷಣವನ್ನೂ ನಾನು ಸದಾ ನೆನಪಿಸಿಕೊಳ್ಳುತ್ತೇನೆ. ನನ್ನ ಸಹೋದರನಿಗೆ ಮುಂದಿನ ಜೀವನಕ್ಕೆ ಶುಭ ಹಾರೈಕೆಗಳು. ನೀನು ನಿನ್ನ ಪಾಲಿನ ಕರ್ತವ್ಯವನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದೀಯಾ, ಈಗ ವಿಶ್ರಾಂತಿ ಪಡೆಯುವ ಸಮಯ. ಜೀವನ ಈಗಷ್ಟೇ ಆರಂಭವಾಗಿದೆ ಗೆಳೆಯ, ವೆಲ್ ಡನ್!” ಎಂದು ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.

ಪೈಪೋಟಿಯಿಂದಲೇ ಗೆಳೆತನ:

ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಅವರ ಪೈಪೋಟಿ ಇಂದು ನಿನ್ನೆಯದ್ದಲ್ಲ. 2008 ರ ಅಂಡರ್-19 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇವರಿಬ್ಬರೂ ತಂತಮ್ಮ ದೇಶಗಳ ಮುನ್ನಡೆಸುವ ನಾಯಕರಾಗಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದರು. ಅಲ್ಲಿಂದ ಆರಂಭವಾದ ಈ ಕ್ರಿಕೆಟ್ ಪಯಣ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬರೋಬ್ಬರಿ 16 ವರ್ಷಗಳ ಕಾಲ ಮುಂದುವರಿಯಿತು.

ಮೈದಾನದಲ್ಲಿ ಎಷ್ಟೇ ತೀವ್ರ ಪೈಪೋಟಿ ಇದ್ದರೂ, ಇವರಿಬ್ಬರ ನಡುವಿನ ಸೌಜನ್ಯ ಮತ್ತು ಕ್ರೀಡಾ ಸ್ಫೂರ್ತಿ ಎಂದಿಗೂ ಕಡಿಮೆಯಾಗಲಿಲ್ಲ. 2020 ರ ನ್ಯೂಝಿಲೆಂಡ್ ಪ್ರವಾಸದ ವೇಳೆ ಇಬ್ಬರೂ ಬೌಂಡರಿ ಗೆರೆಯ ಬಳಿ ಕುಳಿತು ಮಾತನಾಡುತ್ತಿದ್ದ ಚಿತ್ರ ಇಂದಿಗೂ ಕ್ರಿಕೆಟ್ ಪ್ರೇಮಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.

ನಾಯಕನಾಗಿ ಐತಿಹಾಸಿಕ ಸಾಧನೆ!

ಕೇನ್ ವಿಲಿಯಮ್ಸನ್ ಕೇವಲ ಬ್ಯಾಟಿಂಗ್ ಮಾತ್ರವಲ್ಲದೆ, ಕಿವೀಸ್ ತಂಡವನ್ನು ಅದ್ಭುತವಾಗಿ ಮುನ್ನಡೆಸಿದರು. 2021 ರ ಚೊಚ್ಚಲ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನಲ್ಲಿ ಭಾರತ ತಂಡವನ್ನೇ ಸೋಲಿಸಿ ನ್ಯೂಝಿಲೆಂಡ್‌ಗೆ ಐತಿಹಾಸಿಕ ಟ್ರೋಫಿ ತಂದುಕೊಟ್ಟ ಕೀರ್ತಿ ಇವರದ್ದಾಗಿದೆ. ಇದಲ್ಲದೆ 2019 ರ ಏಕದಿನ ವಿಶ್ವಕಪ್‌ನಲ್ಲಿ ತಂಡವನ್ನು ಫೈನಲ್‌ಗೆ ಮುನ್ನಡೆಸಿ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಪಡೆದಿದ್ದರು.

ಇದನ್ನೂ ಓದಿ: ವಿಶ್ವ ದಾಖಲೆಯ ಮೊತ್ತ ಪೇರಿಸಿ ಗೆದ್ದ ಇಂಗ್ಲೆಂಡ್

ಅವರ ಈ ಶಾಂತ ಸ್ವಭಾವ ಮತ್ತು ಅಪ್ರತಿಮ ಕ್ರೀಡಾ ಮನೋಭಾವದಿಂದಾಗಿ, ವಿರಾಟ್ ಕೊಹ್ಲಿ ಸೇರಿದಂತೆ ಜಗತ್ತಿನ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಇಂದು ಈ ‘ಜೆಂಟಲ್‌ಮನ್’ ಆಟಗಾರನಿಗೆ ಗೌರವದ ವಿದಾಯ ಕೋರುತ್ತಿದ್ದಾರೆ.

Published On - 7:49 am, Sat, 13 June 26

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ರೆವೆನ್ಯೂ ಇನ್​ಸ್ಪೆಕ್ಟರ್
ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದ ರೆವೆನ್ಯೂ ಇನ್​ಸ್ಪೆಕ್ಟರ್
ಧಾರವಾಡದಲ್ಲಿ ಜೈಲರ್ ಆತ್ಮಹತ್ಯೆ: ಅಲೋಕ್ ಕುಮಾರ್ ವಿರುದ್ಧ ಗಂಭೀರ ಆರೋಪ
ಧಾರವಾಡದಲ್ಲಿ ಜೈಲರ್ ಆತ್ಮಹತ್ಯೆ: ಅಲೋಕ್ ಕುಮಾರ್ ವಿರುದ್ಧ ಗಂಭೀರ ಆರೋಪ
ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳ ದರ್ಬಾರ್
ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳ ದರ್ಬಾರ್
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​