ನಿತ್ಯ ಭವಿಷ್ಯ: ಇಂದು ಈ ರಾಶಿಯವರು ಅನ್ಯರ ಕಾರ್ಯದಲ್ಲಿ ತೊಡಗಿ, ಸ್ವಕಾರ್ಯ ನಷ್ಟ
Horoscope Today 13 June : ಜೂನ್ 13ರ ಇಂದಿನ ಭವಿಷ್ಯ: ಶಾಲಿವಾಹನ ಶಕವರ್ಷ 1949ರ ಕೃಷ್ಣ ಪಕ್ಷದ ತ್ರಯೋದಶೀ ತಿಥಿಯ ಶನಿವಾರದ ನಿತ್ಯ ಭವಿಷ್ಯ. ಅನ್ಯರ ಕಾರ್ಯದಲ್ಲಿ ಅತಿಯಾಗಿ ತೊಡಗಿದರೆ ಸ್ವಂತ ಕೆಲಸಗಳು ನಷ್ಟವಾಗುವ ಎಚ್ಚರಿಕೆ ಇದೆ. ಮೇಷದಿಂದ ಮೀನದವರೆಗೆ ಎಲ್ಲಾ ರಾಶಿಗಳಿಗೂ ಪ್ರಮುಖ ಜ್ಯೋತಿಷ್ಯ ಸಲಹೆಗಳು, ಶುಭಾಶುಭ ಕಾಲ, ಮತ್ತು ನಿಮ್ಮ ದಿನವನ್ನು ಸುಧಾರಿಸುವ ಮಾರ್ಗದರ್ಶನ ಇಲ್ಲಿದೆ. ನಿಮ್ಮ ಪ್ರತಿಯೊಂದು ನಿರ್ಧಾರದಲ್ಲೂ ಜಾಗರೂಕರಾಗಿರಿ.

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ಅಧಿಕ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ತ್ರಯೋದಶೀ ತಿಥಿಯ ಶನಿವಾರದಂದು ಅಧಿಕಾರಕ್ಕೆ ಪ್ರಯತ್ನ, ವಸ್ತು ದಾನ, ವಾಹನ ದುರಸ್ತಿ, ಲೆಕ್ಕಪತ್ರ ಸಿದ್ಧತೆ, ಅಸ್ಪಷ್ಟ ಚಿಂತನೆ, ಧಾರ್ಮಿಕ ನಂಬಿಕೆ ಇವೆಲ್ಲ ಈ ದಿನದ ಭವಿಷ್ಯ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಮೃಗಶಿರಾ, ವಾರ : ಶನಿ, ಪಕ್ಷ : ಕೃಷ್ಣ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಕೃತ್ತಿಕಾ, ಯೋಗ : ಶೋಭನ, ಕರಣ : ವಣಿಜ, ಸೂರ್ಯೋದಯ – 05 – 56 am, ಸೂರ್ಯಾಸ್ತ – 06 – 52 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:11 – 10:48, ಯಮಗಂಡ ಕಾಲ 14:01 – 15:38, ಗುಳಿಕ ಕಾಲ 05:57 – 07:34
ಮೇಷ ರಾಶಿ :
ಧಾರ್ಮಿಕಶ್ರದ್ಧೆಯಿಂದ ನಿಮಗೆ ಅನುಕೂಲವಿದ್ದರೂ ಅದನ್ನು ಮಾಡಲು ನಿಮಗೆ ಶ್ರದ್ಧೆ, ಭಕ್ತಿಯ ಕೊರತೆ ಹೆಚ್ಚಿರಲಿದೆ. ಅತಿಯಾದ ಕಾಯುವಿಕೆಯಿಂದ ನಿಮ್ಮ ಗೌರವವೇ ಕಡಿಮೆಯಾಗುವುದು. ಮನೆಯಲ್ಲಿ ಸಾಕಷ್ಟು ಚಟುವಟಿಕೆಗಳಿದ್ದು, ದಿನವನ್ನು ಅತಿ ಉತ್ಸಾಹದಿಂದ ಮತ್ತು ಮುದದಿಂದ ಕೂಡಿರುತ್ತದೆ. ಇನ್ನೊಬ್ಬರಿಗೆ ನೀವು ಸಹಾಯವನ್ನು ಮಾಡಲು ಹೆಚ್ಚು ಇಷ್ಟಪಡುವಿರಿ. ವಿಳಂಬವಾಗಿ ಬರುತ್ತದೆ ಎಂದುಕೊಂಡ ಹಣವು ಬೇಗ ನಿಮಗೆ ಬೇಗ ಸಿಗಬಹುದು. ನಿಮ್ಮ ನಿರ್ಧಾರವು ತೂಗುಕತ್ತಿಯಂತೆ ಇರಲಿದೆ.
ವೃಷಭ ರಾಶಿ :
ಹೊಸತನವನ್ನು ಹುಡುಕಲು ಆರಂಭಿಸುವಿರಿ. ವೈಯಕ್ತಿಕ ವಿಚಾರಕ್ಕೆ ಅನ್ಯರು ಪ್ರವೇಶ ಮಾಡುವುದು ಸರಿಕಾಣದು. ಇಂದು ನಿಮಗೆ ಹಣಕಾಸಿನ ಹರಿವು ಹೆಚ್ಚಾಗುವುದರ ಜೊತೆಗೆ ಆತಂಕವೂ ಇರುವುದು. ನಿಮಗೆ ಬೇಡದ್ದನ್ನು ಕೊಟ್ಟು ದಾನಶೂರತೆಯನ್ನು ಮೆರೆಯುವಿರಿ. ತನ್ನದು ಇಷ್ಟೇ ಸಾಮರ್ಥ್ಯ ಎಂಬ ತೀರ್ಮಾನಕ್ಕೆ ಬರುವಿರಿ. ಪತ್ನಿಯ ಮನಃಸ್ಥಿತಿಯನ್ನು ಅರಿತು ಇಂದು ಅವರೊಡನೆ ವ್ಯವಹರಿಸುವುದು ಒಳ್ಳೆಯದು. ನಿಮ್ಮ ಮಾತುಗಳು ದುರುದ್ದೇಶದಿಂದ ಕೂಡಿರುವುದು.
ಮಿಥುನ ರಾಶಿ :
ನಂಬಿಕೆಯ ದ್ರೋಹದಿಂದ ನಿಮಗೆ ಬೇಸರವಾಗಲಿದೆ. ಸಹೋದರ ಜೊತೆ ನಿಮಗೆ ಯೋಗ್ಯ ಸಲಹೆಯು ಸಿಗಬಹುದು. ಸೃಜನಾತ್ಮಕವಾಗಿ ಬದುಕುವ ಸ್ವಭಾವಕ್ಕೆ ಫಲಸಿಗಬಹುದು. ಹೊಸ ಮನೆಗಿಂತ ಹಳೆಯ ಮನೆಯೇ ಸುಖವೆನಿಸಿ, ಅಲ್ಲಿಗೇ ಬರುವಿರಿ. ನಿಮ್ಮ ಕಾಳಜಿ ಹಿಂಸೆಯಾಗಬಹುದು. ಕೆಲಸದಲ್ಲಿ ನಿರತವಾಗಿದ್ದರೆ ನೀವು ಹೆಚ್ಚು ಶಾಂತ ವಾತಾವರಣವನ್ನು ಬಯಸುವಿರಿ. ವಾಹನಭೀತಿಯಿಂದ ಮನೆಯಲ್ಲಿ ಇರುವಿರಿ. ಅಮೂಲ್ಯವಸ್ತುವಿನ ಕಳ್ಳತನವಾಗಬಹುದು.
ಕರ್ಕಾಟಕ ರಾಶಿ :
ನಿಮ್ಮ ವೇತನವನ್ನು ಪ್ರಯತ್ನಪೂರ್ವಕವಾಗಿ ಯಾರಾದರೂ ಕೇಳಬಹುದು. ನಿಮ್ಮನ್ನು ನೀವು ಪರಿಚಯ ಮಾಡಿಕೊಳ್ಳುವಿರಿ. ಹೊಸ ಕೆಲಸಗಳನ್ನು ತಂದುಕೊಳ್ಳುವ ಬಗ್ಗೆ ಯೋಜನೆ ಹಾಕುವಿರಿ. ನಿಮಗೆ ಇಂದು ಪ್ರೇಮವಿವಾಹದಿಂದ ಆಗುವ ತೊಂದರೆಗಳ ಅರಿವಾಗಬಹುದು. ವ್ಯವಹಾರದಿಂದ ಅರ್ಧಕ್ಕೆ ಕೈಬಿಡುವ ಸಾಧ್ಯತೆ ಇದೆ. ಇನ್ನೊಬ್ಬರನ್ನು ಪ್ರಶಂಸಿಸುವ ಮನೋಭಾವ ನಿಮ್ಮಲ್ಲಿ ಇರದು. ಉತ್ಸಾಹಕ್ಕೆ ಮನೆಯಲ್ಲಿ ಹಿನ್ನಡೆಯಾಗಬಹುದು. ಬಹಳ ದಿನಗಳ ಅನಂತರ ಸ್ನೇಹಿತರ ಜೊತೆ ಹರಟೆ ಹೊಡೆಯುವುದು ನಿಮ್ಮ ಮನಸ್ಸಿಗೆ ಖುಷಿಯನ್ನು ಕೊಡಬಹುದು.
ಸಿಂಹ ರಾಶಿ :
ಹಿತಶತ್ರುಗಳಿಂದ ಬೇಕಾದ ಮಾಹಿತಿಯು ಸಿಗಲಿದೆ. ಸಂಗಾತಿಯ ಬಗ್ಗೆ ಪ್ರೀತಿಯನ್ನು ಅನುಭವಿಸುವಿರಿ. ಇಂದು ನೀವು ಉದ್ಯೋಗವನ್ನು ಕಳೆದುಕೊಂಡು ಒದ್ದಾಡುವಿರಿ. ಖಾಸಗಿ ಉದ್ಯೋಗದವರಿಗೆ ಬಡ್ತಿ ಬರಬಹುದು. ಮಲಗಿದಾಗ ಮೇಲಿಂದ ಬೀಳಬಹುದು. ಕುಟುಂಬದ ಕಾರ್ಯಕ್ರಮದಲ್ಲಿ ನಿಮ್ಮನ್ನು ಕಡೆಗಣಿಸಿದ ಅನುಭವವಾಗಲಿದೆ. ಒತ್ತಡವಿರುವ ಸಂದರ್ಭದಲ್ಲಿ ಯಾರ ಜೊತೆಯೂ ಮಾತನಾಡಲು ಹೋಗಬೇಡಿ. ನಿಮ್ಮನ್ನು ತಮಾಷೆ ಮಾಡಲೆಂದು ಏನನ್ನಾದರೂ ಹೇಳಬಹುದು.
ಕನ್ಯಾ ರಾಶಿ :
ನೀವೇ ಇಂದು ಕುಟುಂಬದ ಅಸಮಾಧಾನಕ್ಕೆ ಕಾರಣವಾಗಬಹುದು. ಕೌಶಲ್ಯಗಳು ಕೆಲಸದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಅಮೂಲ್ಯ ವಸ್ತುಗಳನ್ನು ಎಲ್ಲಿಯೂ ಪ್ರಕಟಿಸಲಾರಿರಿ. ಸ್ತ್ರೀಯರು ಕಲಹದ ಸಂದರ್ಭದಲ್ಲಿ ವಿಷಯಗಳನ್ನು ಬದಲಾಯಿಸಲು ಹಾಗೂ ಎಲ್ಲವನ್ನೂ ಮರೆಯಲು ಸುತ್ತಾಡಲು ಬಯಸಬಹುದು. ಕರ್ತವ್ಯವನ್ನು ಬಿಡಸೇ ನಿರ್ವಹಿಸಿ. ಅಪರಿಚಿತ ವ್ಯಕ್ತಿಯ ಜೊತೆ ಜಗಳವಾಡಿ ದ್ವೇಷ ಬರುವಂತೆ ಮಾಡಿಕೊಳ್ಳುವಿರಿ.
ತುಲಾ ರಾಶಿ :
ಇಂದು ಧಾರ್ಮಿಕ ಕಾರ್ಯಗಳಿಗೆ ಸಮಯವನ್ನೂ ಬೇಕಾದ ವ್ಯವಸ್ಥೆಯನ್ನೂ ಮಾಡಿಕೊಳ್ಳುರಿ. ಪರೋಪಕಾರದಲ್ಲಿ ಆಸಕ್ತಿ ಹೆಚ್ಚಿದ್ದು ಇನ್ನೊಬ್ಬರನ್ನೂ ಇದಕ್ಕೆ ಪ್ರೇರಿಸುವಿರಿ. ಆಸ್ತಿಯ ಹಂಚಿಕೆಯ ವ್ಯವಹಾರವನ್ನು ಮುಕ್ತಾಯಗೊಳಿಸಲು ಇದು ಉತ್ತಮ ದಿನ. ಎಲ್ಲದಕ್ಕೂ ಸುಲಭ ದಾರಿ ಸಿಗದು. ಕೆಲವು ಒತ್ತಡಗಳು ನಿಮ್ಮನ್ನು ಆಧ್ಯಾತ್ಮಿಕ ಸ್ಥಳದ ಕಡೆಗೆ ಹೋಗುವಂತೆ ಮಾಡಬಹುದು. ನಿಮ್ಮ ಗುರಿಯ ಬಗ್ಗೆ ಅಸ್ಪಷ್ಟತೆ ಇರಲಿದ್ದು ಅನುಭವಿಗಳಿಂದ ಸ್ಪಷ್ಟತೆಯನ್ನು ತಂದುಕೊಳ್ಳುವಿರಿ.
ವೃಶ್ಚಿಕ ರಾಶಿ :
ನಿಮಗೆ ಲಾಭವಾಗುವ ಕೆಲವು ಕಾರ್ಯಗಳು ನಿಮಗೆ ಸಿಗಬಹುದು. ಸಂಗಾತಿಯನ್ನು ಹೊರಗೆ ಕರೆದುಕೊಂಡುಹೋಗುವ ಸನ್ನಿವೇಶ ಬರಬಹುದು. ನಿಮ್ಮ ದುರಭ್ಯಾಸವು ಅತಿಯಾಗಲಿದೆ. ನಿಮ್ಮ ಭಕ್ತಿಯ ಪ್ರಾರ್ಥನೆಗೆ ಫಲ ಸಿಗಲಿದೆ. ವಸ್ತುಗಳನ್ನು ಸದುಪಯೋಗ ಮಾಡಲು ಕಲಿಯಬೇಕಾಗುವುದು. ಕೆಲಸದ ಕಾರ್ಯಕ್ಷಮತೆಯು ಉನ್ನತ ಅಧಿಕಾರಿಗಳನ್ನು ಗೆಲ್ಲುತ್ತಿದೆ. ಮನಸ್ಸನ್ನು ಸುಮ್ಮನೆ ಬಿಡದೇ ಅನ್ಯ ಕಾರ್ಯದಲ್ಲಿ ತೊಡಗಿಸಿ. ವಿದ್ಯಾರ್ಥಿಗಳು ಅಭ್ಯಾಸವನ್ನು ಅರ್ಧಕ್ಕೇ ನಿಲ್ಲಸಬೇಕಾಗಿಬರಬಹುದು.
ಧನು ರಾಶಿ :
ಇಂದು ಹೆಚ್ಚು ಸಮಯವು ಸಿಗುವ ಕಾರಣ ಇನ್ನೊಬ್ಬರ ಕುರಿತು ಹರಟೆ ಮಾಡುವಿರಿ. ನಿಮಗೆ ಇಂದು ಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರವು ಗಟ್ಟಿತನ ಕೊಡಲಿದೆ. ಕೆಲಸದಲ್ಲಿ ಪ್ರಶಂಸೆ ನಿಮ್ಮನ್ನು ಇನ್ನೂ ಉತ್ತಮವಾಗಿ ಮಾಡಲು ಪ್ರೇರೇಪಿಸುತ್ತದೆ. ಪ್ರಗತಿಯ ಪರಿಶೀಲನೆಗೆ ತೆರಳುವಿರಿ. ನೀವು ಕುಟುಂಬದ ಸಮಸ್ಯೆಯನ್ನು ಸರಿಪಡಿಸಲು ಸಹಾಯ ಮಾಡಬಹುದು. ಮಕ್ಕಳಿಂದ ಸಂತೋಷವಾರ್ತೆ ಬರಲಿದೆ. ಮೇಲಧಿಕಾರಿಗಳ ಪ್ರಶಂಸೆಯಿಂದ ಕೆಲಸದಲ್ಲಿ ಆಸಕ್ತಿ ಬರಲಿದೆ. ಮನಸ್ಸನ್ನು ಏಕಾಗ್ರಗೊಳಿಸುವತ್ತ ಗಮನಹರಿಸಿ.
ಮಕರ ರಾಶಿ :
ನಿಮಗೆ ಎಲ್ಲ ಕಡೆಗಳಿಂದ ತೊಂದರೆಯಾದಂತೆ ಅನ್ನಿಸೀತು. ಸಾಲದ ವಸೂಲಿಯನ್ನು ಬಹಳ ತಾಳ್ಮೆಯಿಂದ ಸಿಟ್ಟನ್ನೆಲ್ಲ ನಿಯಂತ್ರಣದಲ್ಲಿ ಇರಿಸಿಕೊಂಡು ಮಾಡಬೇಕಾಗುತ್ತದೆ. ನಿಮ್ಮ ಎಲ್ಲ ತಿಳಿವಳಿಕೆಯನ್ನೂ ಇನ್ನೊಬ್ಬರ ಮೇಲೆ ಹೇರುವುದು ಬೇಡ. ಹೆಚ್ಚಿನ ವೇತನದ ಯೋಜನೆ ನಿಮ್ಮ ತೆಕ್ಕೆಗೆ ಸಿಗಲಿದೆ, ಸ್ಥಿರವಾಗಿರಿ. ನೀವು ಇಂದು ಮನೆಯಲ್ಲಿನ ವಿಷಯಗಳ ಮೇಲೆ ನಿಗಾ ಇಡಬೇಕಾಗುತ್ತದೆ. ಸಂಗಾತಿಯ ಜೊತೆ ಹರಟೆ ಹೊಡೆಯುವಷ್ಟು ಅವಕಾಶ ಸಿಗುವುದು. ಕುಟುಂಬದಲ್ಲಿ ಕೆಲವು ಸಮಸ್ಯೆಗಳಿರುತ್ತವೆ.
ಇದನ್ನೂ ಓದಿ: ಶನಿಯ ಮನೆಯಲ್ಲಿ ರಾಹುವಿನ ನಕ್ಷತ್ರದಲ್ಲಿಯೇ ರಾಹುವಿನ ಸಂಚಾರ .. ಆಗಲಿದೆ ಅನೇಕ ಚಮತ್ಕಾರ…
ಕುಂಭ ರಾಶಿ :
ನಿಮಗೆ ಉದ್ಯೋಗದಲ್ಲಿ ಬಡ್ತಿಯಿಂದ ಸಂತೋಷವು ಇಮ್ಮಡಿಸುವುದು. ಕೆಲವು ಸಂದರ್ಭದಲ್ಲಿ ನೀವು ತಾಳ್ಮೆಯನ್ನು ಕಳೆದುಕೊಳ್ಳಬಹುದು. ನಿಮ್ಮ ವ್ಯವಹಾರ ಪಾಲುದಾರರನ್ನು ನಿಮ್ಮ ಕಲ್ಪನೆಗೆ ಸೇರಿಸಿಕೊಳ್ಳುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಮನೆ ಬದಲಾವಣೆಗೆ ನಿಮ್ಮ ಸಲಹೆಯನ್ನು ಸ್ವೀಕರಿಸಲಾಗುತ್ತದೆ. ಇಂದು ಸಮಯಯನಿಮ್ಮ ಇಚ್ಛೆಗೆ ವಿರುದ್ಧವಾಗಿ ನಡೆದರೂ ಸುಮ್ಮನಿರುವಿರಿ. ಎಲ್ಲರನ್ನೂ ಸಮಾಧಾನ ಮಾಡಲಾಗದು. ನಿಮ್ಮ ಕರ್ತವ್ಯವನ್ನು ಮಾಡಿ ಮುಗಿಸಿ. ರಾಜಕೀಯ ವ್ಯಕ್ತಿಗಳಿಗೆ ಬೆಂಬಲವಿರುವುದನ್ನು ಕಾಣಬಹುದು.
ಮೀನ ರಾಶಿ :
ಇಂದು ನಿಮಗೆ ಬರುವ ಕೋಪವನ್ನು ಕಡಿಮೆ ಮಾಡಿಕೊಳ್ಳಿ. ಮನಸ್ಸು ಶಾಂತವಾದ ಬಳಿಕ ನಿಮ್ಮ ಕಾರ್ಯಗಳನ್ನು ಆರಂಭಿಸುವುದೇ ಉತ್ತಮ. ಯಾಮಾರಿದರೆ ಇರುವ ಸಂಪತ್ತು ನಷ್ಟ. ನಿರೀಕ್ಷಿತ ಹಣವು ಅಂತಿಮವಾಗಿ ನಿಮ್ಮನ್ನು ತಲುಪಬಹುದು. ವ್ಯವಹಾರದಲ್ಲಿ ನಿಮಗಾಗಿ ಒಂದು ಸುವರ್ಣ ಅವಕಾಶ ಕಾಯುತ್ತಿರಬಹುದು. ಕುಟುಂಬದ ಸದಸ್ಯರು ಆನಂದದ ಆಶ್ಚರ್ಯವನ್ನು ಕಾಯ್ದಿರಿಸುವೆರು. ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವಿರಿ. ಸ್ವಂತ ಉದ್ಯಮದಲ್ಲಿ ನಿರೀಕ್ಷಿತ ಲಾಭವನ್ನು ಕಾಣುವಿರಿ.
-ಲೋಹಿತ್ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




