ಕೋಲಾರದ ಕಲಾಂ ಎಂದೇ ಖ್ಯಾತಿ ಪಡೆದಿದ್ದ ನಿವೃತ್ತ ಶಿಕ್ಷಕ ನಿಧನ
ಕೋಲಾರದ ಕಲಾಂ ಎಂದೇ ಹೆಸರು ಪಡೆದಿದ್ದ ನಿವೃತ್ತ ಶಿಕ್ಷಕ ಶ್ರೀರಾಮರೆಡ್ಡಿ 84 ನಿಧನರಾಗಿದ್ದಾರೆ. ನಿವೃತ್ತಿ ನಂತರವೂ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳುತ್ತಿದ್ದ ಶ್ರೀರಾಮರೆಡ್ಡಿ ಇಂದು(ಡಿಸೆಂಬರ್ 08) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕೋಲಾರ, (ಡಿಸೆಂಬರ್ 08): ಕೋಲಾರದ Kolar) ಕಲಾಂ ಎಂದೇ ಹೆಸರು ಪಡೆದಿದ್ದ ನಿವೃತ್ತ ಶಿಕ್ಷಕ(retired teacher) ಶ್ರೀರಾಮರೆಡ್ಡಿ 84 ನಿಧನರಾಗಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಇಮರಕುಂಟೆ ನಿವಾಸಿಯಾಗಿರುವ ಶ್ರೀರಾಮರೆಡ್ಡಿ ಇಂದು(ಡಿಸೆಂಬರ್ 08) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶಿಕ್ಷಣ ತಜ್ಞರು, ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀರಾಮರೆಡ್ಡಿ, ವಿದ್ಯಾರ್ಥಿಗಳಿಗೆ ಹಾಗೂ ಯುವ ಜನಾಂಗಕ್ಕೆ ಮಾರ್ಗದರ್ಶರಾಗಿದ್ದರು.
ತಮ್ಮ ವೇತನವನ್ನು ಮಕ್ಕಳ ಅಭಿವೃದ್ಧಿಗೆ, ಶಾಲೆ ನಿರ್ಮಾಣಕ್ಕೆಂದು ಖರ್ಚು ಮಾಡುತ್ತಿದ್ದರು. ಅಲ್ಲದೇ ನಿವೃತ್ತಿ ನಂತರವೂ ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳುತ್ತಿದ್ದರು. 2021ನೇ ಸಾಲಿನ 11ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದರು. ಹಾಗೇ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದರು.
Published On - 9:03 am, Fri, 8 December 23