TV9: ಟಿವಿ 9 ಮಾರುವೇಷ ಕಾರ್ಯಕ್ರಮದಲ್ಲಿ ಮಗನ ವಿದ್ಯಾಭ್ಯಾಸಕ್ಕೆ ನೆರವಾದವರಿಗೆ ಕೃತಜ್ಞತೆ ಸಲ್ಲಿಸಿದ ಕಾರಹಳ್ಳಿ ಚಂದ್ರಪ್ಪ ಕುಟುಂಬ
TV 9 Maruvesha: ಯಾವ ಕಾಲೇಜಿನಲ್ಲಿ ಸೀಟ್ ಸಿಕ್ಕರೂ ಅಲ್ಲಿನ ಕಾಲೇಜು ಶುಲ್ಕದ ಜೊತೆಗೆ ಹಾಸ್ಟೆಲ್ ಫೀಸ್ ಎಲ್ಲವನ್ನೂ ನಾನು ನೀಡುತ್ತೇನೆ. ನಿನ್ನ ನಾಲ್ಕು ವರ್ಷದ ಸಂಪೂರ್ಣ ವೆಚ್ಚವನ್ನು ತಾನೇ ಭರಿಸುವುದಾಗಿ ಕೋಲಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡರು ಭರವಸೆ ನೀಡಿದ್ರು.
ಕಳೆದ ವಾರ ಕೋಲಾರ (Kolar) ತಾಲ್ಲೂಕು ಕಾರಹಳ್ಳಿ ಗ್ರಾಮದ ಚಂದ್ರಪ್ಪ ಹಾಗೂ ಸುಶೀಲಮ್ಮ ಕುಟುಂಬದ ಸ್ಥಿತಿ ಕುರಿತು ಟಿವಿ 9 ಕನ್ನಡದಲ್ಲಿ ಮಾರುವೇಷ (Maruvesha) ಕಾರ್ಯಕ್ರಮ ಪ್ರಸಾರವಾಗಿತ್ತು. ಕಣ್ಣುಕಾಣದ ಚಂದ್ರಪ್ಪ ಕೂಲಿ ಮಾಡಿ ಸಂಸಾರ ನಿರ್ವಹಣೆ ಮಾಡುತ್ತಿರುವ ಸುಶೀಲಮ್ಮ ಅವರ ಒಬ್ಬನೇ ಮಗನ ಚೆನ್ನಾಗಿ ಓದುತ್ತಿದ್ದಾನೆ (Education). ಆತನಿಗೆ ಪಿಯುಸಿಯಲ್ಲಿ 86 ಪರ್ಸೆಂಟ್ ಮಾರ್ಕ್ ತೆಗೆದುಕೊಂಡು ಎಂಜಿನಿಯರಿಂಗ್ ಓದಬೇಕು ಅನ್ನೋ ಆಸೆ ಇದೆ. ಆದರೆ ಎಂಜಿನಿಯರಿಂಗ್ ಓದಿಸುವಷ್ಟು ಶಕ್ತಿ ನಮಗಿಲ್ಲ ಯಾರಾದ್ರು ಸಹಾಯ ಮಾಡಿ (Financial Assistance) ಎಂದು ಕುಟುಂಬ ಮನವಿ ಮಾಡಿಕೊಂಡಿತ್ತು.
ಇನ್ನು ಈ ಕುಟುಂಬದ ಸಂಕಷ್ಟವನ್ನು ಆಲಿಸಿದ ವೀಕ್ಷಕ ಮಹಾಪ್ರಭುಗಳು ಚಂದ್ರಪ್ಪ ಹಾಗೂ ಸುಶೀಲಮ್ಮರ ಮಗ ಹೇಮಂತ್ ಕುಮಾರ್ ವಿದ್ಯಾಭ್ಯಾಸಕ್ಕೆಂದು ರಾಜ್ಯದ ನಾನಾ ಕಡೆಗಳಿಂದ ನೂರಾರು ಜನರು ಇವರ ನೆರವಿಗೆ ನಿಂತಿದ್ದಾರೆ. ಈವರೆಗೆ ಹೇಮಂತ್ ಕುಮಾರ್ ಅವರ ಅಕೌಂಟ್ಗೆ ಸುಮಾರು 72,500 ರೂಪಾಯಿ ಹಣ ಸಂದಾಯ ಮಾಡಿದ್ದಾರೆ.
ಅಷ್ಟೇ ಅಲ್ಲದೆ ಮಾರುವೇಷ ಕಾರ್ಯಕ್ರಮವನ್ನು ನೋಡಿದ ಕೋಲಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಗೋವಿಂದಗೌಡರು ನಮ್ಮ ಕೋಲಾರ ಪ್ರತಿನಿಧಿ ರಾಜೇಂದ್ರ ಸಿಂಹ ಅವರಿಗೆ ಕರೆ ಮಾಡಿ ಬ್ಯಾಂಕ್ ಬಳಿಗೆ ಕರೆಸಿಕೊಂಡು, ಆ ಕುಟುಂಬದ ಮಾಹಿತಿ ಪಡೆದರು. ಆ ಕುಟುಂಬಕ್ಕೆ ನಾವು ಸಹಾಯ ಮಾಡೋಣ ಎಂದು ಅವರದ್ದೇ ಕಾರಿನಲ್ಲಿ ನಮ್ಮ ಪ್ರತಿನಿಧಿ ರಾಜೇಂದ್ರ ಸಿಂಹ ಅವರನ್ನು ಕರೆದುಕೊಂಡು ಕೋಲಾರ ತಾಲ್ಲೂಕು ಕಾರಹಳ್ಳಿ ಗ್ರಾಮಕ್ಕೆ ಹೋಗಿ, ಚಂದ್ರಪ್ಪ ಹಾಗೂ ಸುಶೀಲಮ್ಮ ಅವರ ಮನೆಗೆ ಭೇಟಿ ನೀಡಿದರು. ಅವರ ಕುಟುಂಬಕ್ಕೆ ಗೋವಿಂದಗೌಡರು ಧೈರ್ಯ ಹೇಳಿದ್ದಾರೆ. ಅಷ್ಟೇ ಅಲ್ಲದೆ ಸ್ಥಳದಲ್ಲೇ ಆ ಕುಟುಂಬಕ್ಕೆ 60 ಸಾವಿರ ರೂಪಾಯಿ ಹಣ ನೀಡಿದ ಗೋವಿಂದಗೌಡರು, ಹೇಮಂತ್ ಕುಮಾರ್ ಎಂಜಿನಿಯರರಿಂಗ್ಗೆ ಎಷ್ಟು ಬೇಕೋ ಅಷ್ಟು ಹಣವನ್ನು ತಾವೇ ನೀಡುವುದಾಗಿ ಹೇಳಿದ್ರು.
ನೀನು ಯಾವ ಕಾಲೇಜಿನಲ್ಲಿ ಸೀಟ್ ಸಿಕ್ಕರೂ ಅಲ್ಲಿನ ಕಾಲೇಜು ಶುಲ್ಕದ ಜೊತೆಗೆ ಹಾಸ್ಟೆಲ್ ಫೀಸ್ ಎಲ್ಲವನ್ನೂ ನಾನು ನೀಡುತ್ತೇನೆ. ನಿನ್ನ ನಾಲ್ಕು ವರ್ಷದ ಸಂಪೂರ್ಣ ವೆಚ್ಚವನ್ನು ತಾನೇ ಭರಿಸುವುದಾಗಿ ಭರವಸೆ ನೀಡಿದ್ರು. ಅಲ್ಲದೆ ಅಲ್ಲೇ ತಾವೇ ತಮ್ಮ ಫೋನ್ ನಂಬರ್ ಬರೆದುಕೊಟ್ಟು, ಏನೇ ಕಷ್ಟ ಎದುರಾದರೂ ನನಗೆ ಕಾಲ್ ಮಾಡಿ ಎಂದು ಹೇಳಿದರು.
ಇನ್ನು ಈವರೆಗೆ ಈ ಕುಟುಂಬಕ್ಕೆ ಸಿಕ್ಕಿರುವ ಒಟ್ಟು ನೆರವಾದ್ರು ಅಂದ್ರೆ 1,32,500 ರೂಪಾಯಿಗಳು. ಟಿವಿ 9 ಮಾರುವೇಷ ಕಾರ್ಯಕ್ರಮದಿಂದಾ ಸಹಾಯದಿಂದ ಸಂತೋಷಗೊಂಡ ಕುಟುಂಬಸ್ಥರು ಟಿವಿ9 ಗೆ ಧನ್ಯವಾದ ಹೇಳಿದ್ದಾರೆ. ಅದೇ ರೀತಿ ಸಹಾಯ ಮಾಡಿದ ಗೋವಿಂದಗೌಡರಿಗೂ ಧನ್ಯವಾದ ಹೇಳಿದ್ದಾರೆ.
Also Read: