ಕುಡಿದು ನಡು ರಸ್ತೆಯಲ್ಲಿ ಹುಟ್ಟುಹಬ್ಬ ಆಚರಣೆ; ತಡೆಯಲು ಹೋದ ಪೊಲೀಸರ ಮೇಲೆ ಹಲ್ಲೆ, ಯುವಕರು ಅರೆಸ್ಟ್

ಕೋಲಾರ ನಗರದ ಕುರುಬರ ಪೇಟೆ ಬಳಿಯ ಮದ್ಯ ರಸ್ತೆಯಲ್ಲಿ ಶ್ರೀಕಾಂತ್ ಹಾಗೂ ಅನಿಲ್ ಸ್ನೇಹಿತರು ರಸ್ತೆಯಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಿದ್ದಾರೆ. ಈ ವೇಳೆ ಆಚರಣೆ ತಡೆಯಲು ಹೋದ ಪೊಲೀಸರ ಮೇಲೆಯೇ ಯುವಕರು ಹಲ್ಲೆಗೆ ಯತ್ನಿಸಿದ್ದು ಕೋಲಾರ ನಗರ ಪೊಲೀಸರು ಯುವಕರನ್ನ ವಶಕ್ಕೆ ಪಡೆದಿದ್ದಾರೆ.

ಕುಡಿದು ನಡು ರಸ್ತೆಯಲ್ಲಿ ಹುಟ್ಟುಹಬ್ಬ ಆಚರಣೆ; ತಡೆಯಲು ಹೋದ ಪೊಲೀಸರ ಮೇಲೆ ಹಲ್ಲೆ, ಯುವಕರು ಅರೆಸ್ಟ್
ಕುಡಿದು ನಡು ರಸ್ತೆಯಲ್ಲಿ ಹುಟ್ಟುಹಬ್ಬ ಆಚರಣೆ; ತಡೆಯಲು ಹೋದ ಪೊಲೀಸರ ಮೇಲೆ ಹಲ್ಲೆ, ಯುವಕರು ಅರೆಸ್ಟ್
Follow us
TV9 Web
| Updated By: ಆಯೇಷಾ ಬಾನು

Updated on:Mar 15, 2022 | 8:56 PM

ಕೋಲಾರ: ಕುಡಿದ ಮತ್ತಿನಲ್ಲಿ ಮಧ್ಯ ರಸ್ತೆಯಲ್ಲಿ ಯುವಕರು ಹುಟ್ಟುಹಬ್ಬ ಆಚರಿಸಿ ರಂಪಾಟ ನಡೆಸಿರುವ ಘಟನೆ ನಡೆದಿದೆ. ಕೋಲಾರ ನಗರದ ಕುರುಬರ ಪೇಟೆ ಬಳಿಯ ಮದ್ಯ ರಸ್ತೆಯಲ್ಲಿ ಶ್ರೀಕಾಂತ್ ಹಾಗೂ ಅನಿಲ್ ಸ್ನೇಹಿತರು ರಸ್ತೆಯಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಿದ್ದಾರೆ. ಈ ವೇಳೆ ಆಚರಣೆ ತಡೆಯಲು ಹೋದ ಪೊಲೀಸರ ಮೇಲೆಯೇ ಯುವಕರು ಹಲ್ಲೆಗೆ ಯತ್ನಿಸಿದ್ದು ಕೋಲಾರ ನಗರ ಪೊಲೀಸರು ಯುವಕರನ್ನ ವಶಕ್ಕೆ ಪಡೆದಿದ್ದಾರೆ.

ಕುಡಿದ ಮತ್ತಿನಲ್ಲಿ ರಸ್ತೆ ಬಂದ್ ಮಾಡಿ ನಡು ರಸ್ತೆಯಲ್ಲಿ ಹುಟ್ಟಿದ ಹಬ್ಬ ಆಚರಣೆಗೆ ಮುಂದಾದಾಗ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ ಆಗ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಆಗ ಜನರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ಕೊಟ್ಟಾಗ ಸ್ಥಳಕ್ಕೆ ಬಂದ ಕೋಲಾರ ನಗರ ಠಾಣೆ ಪೊಲೀಸರು ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.

ಇಂಥಾದೊಂದು ಘಟನೆ ಕೋಲಾರ ನಗರದ ಕುರುಬರಪೇಟೆಯಲ್ಲಿ ನಡೆದಿದೆ, ಬಂಗಾರಪೇಟೆ ಬಾಗೇಪಲ್ಲಿ ಮುಖ್ಯ ರಸ್ತೆಯ ಕುರುಬರಪೇಟೆ ಬಳಿ ಮುಡುದ ಮತ್ತಿನಲ್ಲಿದ್ದ ಯುವಕರ ತಂಡ ಏಕಾಏಕಿ ರಸ್ತೆ ಬಂದ್ ಮಾಡಿ ಶ್ರೀಕಾಂತ್ ಹಾಗೂ ಅನಿಲ್ ಹುಟ್ಟು ಹಬ್ಬ ಆಚರಣೆಗೆ ಮುಂದಾದಾಗ ಸಾರ್ವಜನಿಕರು ಪ್ರಶ್ನೆ ಮಾಡಿದಾಗ ಅವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ, ನಂತರ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಸ್ಥಳಕ್ಕೆ ಬಂದ‌ ಪೊಲೀಸರು ಯುವಕರನ್ನು ವಶಕ್ಕೆ ಪಡೆಯಲು ಹೋದಾಗ ಪೊಲೀಸರ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ, ನಂತರ ಪೊಲೀಸರು ಇಬ್ಬರು ಯುವಕರನ್ನು ವಶಕ್ಕೆ ಪಡೆದು ರಸ್ತೆ ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ.

ಜೆ.ಸಿ.ನಗರ: ಕುಡಿದ ಅಮಲಿನಲ್ಲಿ ಎಟಿಎಂ ಕೇಂದ್ರದಲ್ಲಿ ದರೋಡೆಗೆ ಯತ್ನ ಬೆಂಗಳೂರು: ಕುಡಿದ ಅಮಲಿನಲ್ಲಿ ಖಾಸಗಿ ಬ್ಯಾಂಕಿನ ಎಟಿಎಂ ಕೇಂದ್ರದಲ್ಲಿ ದರೋಡೆಗೆ ಯತ್ನಿಸಿರುವ ಘಟನೆ ನಡೆದಿದೆ. ಬೆಂಗಳೂರಿನ ಜೆ.ಸಿ. ನಗರ ಪೊಲೀಸರಿಂದ ಕೊಂಡಯ್ಯ (35) ಎಂಬಾತನನ್ನು ಬಂಧಿಸಿದ್ದಾರೆ. ಎಂಆರ್​ಎಸ್​ ಪಾಳ್ಯದ HDFC ಬ್ಯಾಂಕ್​ ಎಟಿಎಂನಲ್ಲಿ ಈ ಕುಕೃತ್ಯ ನಡೆದಿದೆ. ಖಾಸಗಿ ಕಚೇರಿಯಲ್ಲಿ ಹೌಸ್​ಕೀಪಿಂಗ್​ ಕೆಲಸ ಮಾಡುತ್ತಿದ್ದ ಕೊಂಡಯ್ಯ ಕುಡಿದ ಅಮಲಿನಲ್ಲಿ ಎಟಿಎಂ ಕೇಂದ್ರಕ್ಕೆ ನುಗ್ಗಿದ್ದ.

ಸಿಸಿ ಕ್ಯಾಮರಾ ಒಡೆದುಹಾಕಿ, ಎಟಿಎಂ ಒಡೆಯಲು ಪ್ರಯತ್ನಿಸಿದ್ದ. ಆ ವೇಳೆ ಎಟಿಎಂ ನಿರ್ವಹಣಾ ಕೇಂದ್ರಕ್ಕೆ ಅಲರ್ಟ್​ ಸಂದೇಶ ಹೋಗಿತ್ತು. ಸದರಿ ನಿರ್ವಹಣಾ ಕೇಂದ್ರದವರು ತಕ್ಷಣ ಜೆ.ಸಿ. ನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಬರುವ ವೇಳೆಗೆ ದರೋಡೆಗೆ ಯತ್ನಿಸಿ ಪರಾರಿಯಾಗಿದ್ದ ಕೊಂಡಯ್ಯ. ವಿಫಲ ಯತ್ನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನ ಪೊಲೀಸರು ತಕ್ಷಣ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಚುನಾವಣೆಯಲ್ಲಿ ಭಾರೀ ಮುಖಭಂಗ; ಐದೂ ರಾಜ್ಯಗಳ ಕಾಂಗ್ರೆಸ್​ ಅಧ್ಯಕ್ಷರಿಗೆ ರಾಜೀನಾಮೆ ನೀಡಲು ಸೋನಿಯಾ ಗಾಂಧಿ ಆದೇಶ

ಪುನೀತ್​​ ಬಯೋಗ್ರಫಿ ‘ನೀನೆ ರಾಜಕುಮಾರ’ ರಿಲೀಸ್ ಮಾಡಿದ ಕಿಚ್ಚ ಸುದೀಪ್​ ಹೇಳಿದ್ದೇನು?

Published On - 8:11 pm, Tue, 15 March 22