AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳ್ಳತನವಾಗಿದ್ದ ಶ್ವಾನವನ್ನು ಪತ್ತೆ ಮಾಡಿದ ಕೋಲಾರ ಪೊಲೀಸ್​: ನಾಯಿ ಕದ್ದ ಇಬ್ಬರ ಬಂಧನ

ಕೋಲಾರ ನಗರದ ಗಲ್​​​ ಪೇಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ನಾಯಿಯನ್ನ ಮನೆ ಮಾಲಿಕರಿಗೆ ಪೊಲೀಸರು ಒಪ್ಪಿಸಿದ್ದಾರೆ. ಶಿವಗಿರಿ ಮಠದ ಸಂತೋಷ ಸಿಂಗ್ ಎಂಬುವರಿಗೆ ಸೇರಿದ ಸಿಜಿ, ಬ್ಲೂ ಐಸ್ ತಳಿಯ 25,000 ಸಾವಿರ ರೂ. ಬೆಲೆ ಬಾಳುವ ನಾಯಿಯನ್ನು ಖದೀಮರು ಕಳ್ಳತನ ಮಾಡಿದ್ದರು. ಕಾರ್ಯಾಚರಣೆ ಮಾಡಿ ನಾಯಿ ಹಾಗೂ ಆರೋಪಿಗಳನ್ನು ಪೊಲೀಸರು ಮತ್ತೆ ಮಾಡಿದ್ದು ಇಬ್ಬರನ್ನು ಬಂಧಿಸಲಾಗಿದೆ.

ಕಳ್ಳತನವಾಗಿದ್ದ ಶ್ವಾನವನ್ನು ಪತ್ತೆ ಮಾಡಿದ ಕೋಲಾರ ಪೊಲೀಸ್​: ನಾಯಿ ಕದ್ದ ಇಬ್ಬರ ಬಂಧನ
ಕಳ್ಳತನ ಮಾಡಿದ ವ್ಯಕ್ತಿ, ನಾಯಿ ಮಾಲೀಕರು
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಗಂಗಾಧರ​ ಬ. ಸಾಬೋಜಿ|

Updated on:Feb 28, 2024 | 8:02 PM

Share

ಕೋಲಾರ, ಫೆಬ್ರವರಿ 28: ಸಾಕು ನಾಯಿಗಳು (dog) ಅಂದರೇ ಅದೆಷ್ಟೋ ಜನರಿಗೆ ಸಾಕಷ್ಟು ಪ್ರೀತಿ. ಮನೆಯವರಿಗಿಂತ ಅವುಗಳನ್ನೆ ಹುಚ್ಚು ಇಷ್ಟ ಪಡುತ್ತಾರೆ. ಹೀಗೆ ಪ್ರೀತಿಯಿಂದ ಸಾಕಿರುವ ತಮ್ಮ ನೆಚ್ಚಿನ ನಾಯಿಗಳ ಜೊತೆ ಸಾಕಷ್ಟು ಅವಿನಾಭಾವ ಸಂಬಂಧವನ್ನು ಹೊಂದಿರುತ್ತಾರೆ. ಸಾಮಾನ್ಯ ವರ್ಗದ ಜನರು ಬೀದಿ ನಾಯಿಗಳನ್ನು ಸಾಕಿದರೆ, ದೊಡ್ಡ ದೊಡ್ಡ ಶ್ರೀಮಂತರು ವಿವಿಧ ತಳಿಯ ನಾಯಿಯನ್ನು ಸಾಕುತ್ತಾರೆ. ಈ ಬೇರೆ ಬೇರೆಯ ತಳಿಯ ನಾಯಿಗಳಿಗೆ ದುಬಾರಿ ಬೆಲೆಗಳಿರುತ್ತವೆ. ಆದರೆ ಇದನ್ನು ತಿಳಿದಿರುವ ಕಳ್ಳರು ಆ ದುಬಾರಿ ಬೆಲೆಗಳ ನಾಯಿಗಳನ್ನೇ ಕಳ್ಳತನ ಮಾಡುತ್ತಿದ್ದಾರೆ. ಸದ್ಯ ಇಂತಹದೇ ಒಂದು ಪ್ರಕರಣ ನಡೆದಿದ್ದು, ಕಳ್ಳತನವಾಗಿದ್ದ ನಾಯಿಯನ್ನು ಪತ್ತೆ ಮಾಡಿದ ಪೊಲೀಸರು ಮಾಲೀಕರಿಗೆ ಒಪ್ಪಿಸಿದ್ದಾರೆ.

ನಗರದ ಗಲ್ ಪೇಟೆ ಪೊಲೀಸರು ಕಾರ್ಯಾಚರಣೆ ಮಾಡಿ, ಶಿವಗಿರಿ ಮಠದ ಸಂತೋಷ ಸಿಂಗ್ ಎಂಬುವರಿಗೆ ಸೇರಿದ ಸಿಜಿ, ಬ್ಲೂ ಐಸ್ ತಳಿಯ 25,000 ಸಾವಿರ ರೂ. ಬೆಲೆ ಬಾಳುವ ನಾಯಿಯನ್ನು ಖದೀಮರು ಕಳ್ಳತನ ಮಾಡಿದ್ದರು. ಚಿನ್ನಾಪುರ ಗ್ರಾಮದ ಶಶಿ ಹಾಗೂ ಗಣೇಶ್ ಎಂಬುವರಿಂದ ನಾಯಿ ಕಳ್ಳತನ ಮಾಡಲಾಗಿತ್ತು. ಕಾರ್ಯಾಚರಣೆ ಮಾಡಿ ನಾಯಿ ಹಾಗೂ ಆರೋಪಿಗಳನ್ನು ಪೊಲೀಸರು ಮತ್ತೆ ಮಾಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಒಂದೇ ದೇಹ 2 ತಲೆ, 6 ಕಾಲು ಹೊಂದಿದ ವಿಚಿತ್ರ ಕರು ಜನನ: ನೋಡಲು ಮುಗಿಬಿದ್ದ ಜನ

ನಾಯಿ ಸಿಕ್ಕ ತಕ್ಷಣ ನಾಯಿಯನ್ನು ಹಿಡಿದು ಮಾಲೀಕರು ಮುದ್ದಾಡಿದ್ದಾರೆ. ಗಲ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರಾಯಚೂರಿನಲ್ಲಿ ಮತ್ತೆ ಮಕ್ಕಳ ಮೇಲೆ ಬೀದಿ ನಾಯಿಗಳ ಅಟ್ಟಹಾಸ

ರಾಯಚೂರು: ಜಿಲ್ಲೆಯ ಸಿಂಧನೂರು ಪಟ್ಟಣಲ್ಲಿ ಬಾಲಕನ ಮೇಲೆ ಬೀದಿ ನಾಯಿ ಅಟ್ಯಾಕ್ ಮಾಡಿ ಜನರನ್ನ ಬೆಚ್ಚಿ ಬೀಳಿಸಿತ್ತು. ಈಗ ಅದನ್ನೂ ಮೀರಿಸುವಂತಹ ರಣ ಭೀಕರ ಘಟನೆ ರಾಯಚೂರು ನಗರದಲ್ಲಿ ನಡೆದಿತ್ತು. ನಗರದ ಇಬ್ಬರು ಮಕ್ಕಳ ಮೇಲೆ ಬೀದಿ ನಾಯಿಗಳು ಅಟ್ಯಾಕ್ ಮಾಡಿದ್ದು, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು. ಆರು ವರ್ಷ ಅಖಿಲ್ ಹಾಗೂ ಹತ್ತು ವರ್ಷದ ಜೋಯಾ ಫಾರುಕಿ ಗಂಭೀರವಾಗಿ ಗಾಯಗೊಂಡಿದ್ದರು.

ಇದನ್ನೂ ಓದಿ: ಬರದ ನಾಡಿನಲ್ಲಿ ವಿದೇಶಿ ಪಕ್ಷಿಗಳ ಕಲರವ! ಗುಂಪು ಗುಂಪಾಗಿ ಕಾಣಸಿಗುವ ಸೈಬೇರಿಯನ್ ಪಕ್ಷಿಗಳು

ಅದರಲ್ಲೂ ಇಂದಿರಾನಗರದ ನಿವಾಸಿಯಾಗಿರುವ ಜೋಯಾ ಫಾರುಕಿ ಘಟನೆಯಿಂದ ಬೆಚ್ಚಿ ಬಿದ್ದಿದ್ದಳು. ಕಾಲಿಗೆ ನಾಯಿ ಕಚ್ಚಿದ್ದರಿಂದ ಕಾಲಿಗೆ ಗಾಯವಾಗಿತ್ತು. ಶಾಲೆಯಿಂದ ಮನೆಗೆ ಹೋಗೋವಾಗ ನಾಯಿ ಕಚ್ಚಿದೆ ಸರ್. ನಾಯಿ ನೋಡಿದ್ರೆ ಭಯವಾಗುತ್ತಿತ್ತು. ಶಾಲೆಗೆ ಹೋಗಲು ಭಯ ಆಗ್ತಿದೆ ಅಂತ ಗಾಯಾಳು ಜೋಪಾ ಫಾರುಕಿ ಅಳಲನ್ನ ತೋಡಿಕೊಂಡಿದ್ದಳು.

ತಂದೆಯೊಡನೆ ಮಂಗಳವಾರಪೇಟೆಯಲ್ಲಿ ಹೊರಟಿದ್ದ ವೇಳೆ ಬೀದಿ ನಾಯಿ ಏಕಾಏಕಿ ಬಾಲಕ ಅಖಿಲ್ ಮೇಲೆ ಅಟ್ಯಾಕ್ ಮಾಡಿತ್ತು. ನೋಡನೋಡುತ್ತಲೇ ಬಾಲಕನನ್ನ ಕಚ್ಚಿ ಗಾಯಗೊಳಿಸಿತ್ತು. ಘಟನೆಯಲ್ಲಿ ಅಖಿಲ್ ನ ಕೆನ್ನೆ ಹಾಗೂ ಬಾಯಿಗೆ ಸಂಪೂರ್ಣವಾಗಿ ಗಾಯವಾಗಿದ್ದು, ಊಟ ಮಾಡಲಾಗದೇ ಬಾಲಕ ಪರದಾಡಿದ್ದ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:02 pm, Wed, 28 February 24