ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಕಲು ಡ್ರೋನ್ ಗಸ್ತು: ಏನಿದು ಕೋಲಾರ ಪೊಲೀಸರ ಹೊಸ ಪ್ರಯೋಗ?
ಕೋಲಾರ ಜಿಲ್ಲಾ ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಅಪರಾಧ ತಡೆಗೆ ಹೊಸ ಪ್ರಯೋಗವೊಂದಕ್ಕೆ ಮುಂದಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಈ ಹೊಸ ಪ್ರಯೋಗವನ್ನು ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಆ ಮೂಲಕ ಕಾನೂನು ಬಾಹಿರ ಮತ್ತು ಅಕ್ರಮ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಇದು ಸಹಕಾರಿಯಾಗಲಿದೆ. ಹಾಗಾದರೆ ಆ ಮಾಸ್ಟರ್ ಪ್ಲಾನ್ ಏನು ಎಂಬ ಮಾಹಿತಿ ಇಲ್ಲಿದೆ.

ಕೋಲಾರ, ಡಿಸೆಂಬರ್ 04: ಆ ಜಿಲ್ಲೆಯಲ್ಲಿ ಅಪರಾಧ ತಡೆಗೆ ಪೊಲೀಸ್ ಇಲಾಖೆ (Police Department) ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ. ಕಾನೂನು ಬಾಹಿರ ಚಟುವಟಿಕೆಗಳು, ಜೂಜಾಟ, ಕೋಳಿ ಪಂದ್ಯ ಮತ್ತು ಅಕ್ರಮ ಚಟುವಟಿಕೆಗಳ ತಡೆಗೆ ಡ್ರೋನ್ ಬೀಟ್ (Drone Beat) ಎನ್ನುವ ಹೊಸ ಪ್ರಯೋಗ ಆರಂಭಿಸಿದೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಈ ಕಾರ್ಯಾಚರಣೆ ಆರಂಭಿಸಲಾಗಿದೆ.
ಮೂರು ಡ್ರೋನ್ಗಳಿಂದ ಗಸ್ತು
ಕೋಲಾರ ಜಿಲ್ಲಾ ಪೊಲೀಸ್ ಇಲಾಖೆ, ರಾಜ್ಯದಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಡ್ರೋನ್ ಗಸ್ತು ಕಾರ್ಯಾಚರಣೆ ಆರಂಭಿಸಿದೆ. ಜಿಲ್ಲೆಯಲ್ಲಿ ಮೂರು ಡ್ರೋನ್ಗಳಿಂದ ಗಸ್ತು ಕಾರ್ಯಾಚರಣೆ ಆರಂಭಿಸಲಾಗಿದ್ದು, ಪ್ರತಿ ದಿನ ಒಂದೊಂದು ತಾಲೂಕಿಗೆ ಡ್ರೋನ್ನ್ನು ಕಳುಹಿಸಿಕೊಡಲಾಗುತ್ತಿದೆ. ಗಸ್ತು ಕಾರ್ಯಾಚರಣೆಗಾಗಿ ಇಲಾಖೆ 8 ಜನ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.
ಇದನ್ನೂ ಓದಿ: ಕೊರೆವ ಚಳಿ, ದಟ್ಟ ಮಂಜು: ಊಟಿಯಂತಾದ ಬಯಲು ಸೀಮೆ ಕೋಲಾರ
ಪೊಲೀಸ್ ಇಲಾಖೆಯ 112 ನಂಬರ್ಗೆ ದೂರು ಬಂದರೆ ಡ್ರೋನ್ ಗಸ್ತು ಮಾಡಲಾಗುತ್ತದೆ. ಸುಮಾರು 5ಕಿ.ಮೀ ದೂರದಲ್ಲಿ ನಡೆಯುವಂತಹ ಕಾನೂನು ಬಾಹಿರ ಮತ್ತು ಅಕ್ರಮ ಚಟುವಟಿಕೆಗಳನ್ನು ಪತ್ತೆ ಹಚ್ಚಬಹುದಾಗಿದೆ. ಬಹುಮುಖ್ಯವಾಗಿ ಬೆಟ್ಟ, ಅರಣ್ಯ ಪ್ರದೇಶಗಳು ಮತ್ತು ನಿರ್ಜನ ಪ್ರದೇಶಗಳಲ್ಲಿ ನಡೆಯುವ ಕೆಲವೊಂದು ಅಕ್ರಮ ಚಟುವಟಿಕೆಗಳನ್ನು ಡ್ರೋನ್ ಮುಖಾಂತರ ಪತ್ತೆ ಹಚ್ಚಿ ಅಂತವರ ಮೇಲೆ ನಿಗಾ ಇಡಲು ಈ ಡ್ರೋನ್ ಬೀಟ್ ಅನುಕೂಲಕರವಾಗಿದೆ.
ಜಿಲ್ಲಾ ವರಿಷ್ಠಾಧಿಕಾರಿ ನಿಖಿಲ್ ಹೇಳಿದ್ದಿಷ್ಟು
ಇನ್ನು ಇತ್ತೀಚಿಗೆ ಅರಣ್ಯ ಪ್ರದೇಶದಲ್ಲಿ ಜೂಜಾಟ, ಅಕ್ರಮ ಚಟುವಟಿಕೆಗಳು, ಪಾರ್ಟಿಗಳು ಸೇರಿ ಗಡಿ ಭಾಗದಲ್ಲಿ ನಡೆಯುವಂತಹ ಅಪರಾಧ ಪ್ರಕರಣಗಳ ತಡೆಗೆ ಡ್ರೋನ್ ನಿಯೋಜನೆ ಮಾಡಲಾಗಿದ್ದು, ಇನ್ನು ಮುಂದೆ ಕೋಲಾರ ಜಿಲ್ಲೆ ಡ್ರೋನ್ ಕಣ್ಗಾವಲಿನಲ್ಲಿ ಇರಲಿದೆ. ಈ ಡ್ರೋನ್ ಬೀಟ್ ಕಾರ್ಯಚರಣೆಯನ್ನು ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಿದ್ದು, ಹಂತಹಂತವಾಗಿ ಇಡೀ ರಾಜ್ಯಕ್ಕೆ ವಿಸ್ತರಣೆ ಮಾಡಲು ರಾಜ್ಯ ಪೊಲೀಸ್ ಇಲಾಖೆ ಉದ್ದೇಶ ಹೊಂದಿದೆ ಎಂದು ಜಿಲ್ಲಾ ವರಿಷ್ಟಧಿಕಾರಿ ನಿಖಿಲ್ ಅವರು ಹೇಳುತ್ತಾರೆ.
ಇನ್ನು ಪೊಲೀಸರ ಕಣ್ಣುತಪ್ಪಿಸಿ ನಿರ್ಜನ ಪ್ರದೇಶ, ತೋಟ, ಬೆಟ್ಟಗಳ ಮೇಲೆ ನಡೆಯುವ ಜೂಜಾಟ ಸೇರಿದಂತೆ ಅಪರಾಧ ಪ್ರಕರಣಗಳ ಮೇಲೆ ನಿಗಾಯಿಡಲು ಕೋಲಾರ ಜಿಲ್ಲಾ ಪೊಲೀಸ್ ಡ್ರೋನ್ಗಳ ಮುಖಾಂತರ ಕಣ್ಗಾವಲಿಡಲು ಮುಂದಾಗಿದೆ. ಜೂಜಾಟಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕಠಿಣ ಕಾನೂನುಗಳನ್ನು ಜಾರಿಗೊಳಸಿದರು ಅದು ನಿಲ್ಲುತ್ತಿಲ್ಲ. ಪೋಲೀಸರ ಕಣ್ಣು ತಪ್ಪಿಸಿ ಅಲ್ಲಲ್ಲಿ ಅಡ್ಡೆಗಳಲ್ಲಿ ಲಕ್ಷಾಂತರ ರೂ ಗ್ಯಾಬ್ಲಿಂಗ್ ನಡೆಯುತ್ತಿದೆ. ಆದರೆ ಪೊಲೀಸರು ದಾಳಿ ಮಾಡುವಷ್ಟರಲ್ಲಿ ತಪ್ಪಿಸಿಕೊಳ್ಳುತ್ತಾರೆ. ಹೀಗಾಗಿ ಪೊಲೀಸರು ಹೋಗಲು ಸಾಧ್ಯವಾಗದ ಸ್ಥಳಗಳಲ್ಲಿ ಡ್ರೋನ್ ಮೂಲಕ ಸುಲಭವಾಗಿ ಕಾರ್ಯಚರಣೆ ನಡೆಸಿ ತಿಳಿದುಕೊಳ್ಳಬಹುದಾಗಿದೆ. ಹಾಗಾಗಿ ಡ್ರೋನ್ ಗಸ್ತು ಹೆಚ್ಪು ಪರಿಣಾಮಕಾರಿಯಾಗಲಿದೆ.
ಸಾರ್ವಜನಿಕರಿಂದ ಪ್ರಶಂಸೆ
ಇನ್ನು ಜಿಲ್ಲಾ ಪೊಲೀಸ್ ಇಲಾಖೆಯ ಡ್ರೋನ್ ಗಸ್ತು ಕಾರ್ಯಚರಣೆಗೆ ಕೋಲಾರದ ಸಾರ್ವಜನಿಕರಿಂದ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿವೆ. ಆದರೆ ಇದನ್ನು ಸಮರ್ಪಕವಾಗಿ ಬಳಿಸಿಕೊಳ್ಳಬೇಕಿದೆ. ಇದರಲ್ಲೂ ಮಾಹಿತಿ ಸೋರಿಕೆ ಮಾಡುವ ಮೂಲಕ ಕಳ್ಳರಿಗೆ ನೆರವು ನೀಡದಂತೆ ಎಚ್ಚರ ವಹಿಸಬೇಕು ಎಂದು ಸ್ಥಳೀಯರಾದ ಮಂಜುನಾಥ್ ಎಂಬುವವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕೋಲಾರದಲ್ಲಿ RTO ಅಧಿಕಾರಿಗಳ ಭರ್ಜರಿ ಬೇಟೆ; 32 ಖಾಸಗಿ ಬಸ್ಗಳು ಸೀಜ್
ಒಟ್ಟಾರೆ ದ್ರೋನ್ ಗಸ್ತಿನ ಮೂಲಕ ಗಡಿ ಭಾಗಗಳಲ್ಲಿ, ಬೆಟ್ಟಗುಡ್ಡಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಮೇಲೆ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಡಲಿದ್ದು, ಕದ್ದು ಮುಚ್ಚಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಅಪರಾಧಿಗಳ ಮೇಲೆ ಡ್ರೋನ್ ಬೀಟ್ ಪರಿಣಾಮ ಬೀರುವುದಂತೂ ಸತ್ಯ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:13 pm, Thu, 4 December 25




