ಕ್ರೆಡಲ್ ಎಸ್​ಇ ಐಷಾರಾಮಿ ಮನೆ ಮೇಲೆ ಲೋಕಾ ರೈಡ್​: ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ತೆ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 05, 2023 | 9:25 PM

ಒಂದಲ್ಲ ಎರಡಲ್ಲ ಬರೋಬ್ಬರಿ 63 ಕಡೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕ್ರೆಡಿಲ್ ಸೂಪರಿಡೆಂಟ್ ಇಂಜಿನಿಯರ್ ಆಗಿರುವ ತಿಮ್ಮರಾಜಪ್ಪ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಳು ದಾಳಿ ಮಾಡಿದ್ದಾರೆ. ಈ ವೇಳೆ ಕೊಟ್ಟಕೋಟ್ಯಂತರ ರೂಪಾಯಿ ಮೌಲ್ಯದ ಮನೆ, ಆಸ್ತಿ, ಜಮೀನು ದಾಖಲೆಗಳು ಪತ್ತೆಯಾಗಿದೆ

ಕ್ರೆಡಲ್ ಎಸ್​ಇ ಐಷಾರಾಮಿ ಮನೆ ಮೇಲೆ ಲೋಕಾ ರೈಡ್​: ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ತೆ
ತಿಮ್ಮರಾಜಪ್ಪ
Follow us on

ಕೋಲಾರ, ಡಿಸೆಂಬರ್​​ 05: ಬೆಂಗಳೂರಿನ 7 ಕಡೆ, ಬೆಳಗಾವಿ ಸೇರಿದಂತೆ 10 ಕಡೆ ಇಂದು ಲೋಕಾಯುಕ್ತ ದಾಳಿ (Lokayukta Raid) ಮಾಡಿದ್ದು, ಕೋಟ್ಯಂತರ ರೂ. ಮೌಲ್ಯದ ಆಸ್ತಿ, ಜಮೀನು ದಾಖಲೆಗಳ ಜಪ್ತಿ ಮಾಡಿದ್ದಾರೆ. ಬೆಳಗಾವಿ ಕ್ರೆಡಲ್ ಅಧೀಕ್ಷಕ ಅಭಿಯಂತರ ಎಸ್​ಇ ತಿಮ್ಮರಾಜಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದಾರೆ. ಕೋಲಾರದ ಮಹದೇವಪುರದಲ್ಲಿ 3 ಅಂತಸ್ತಿನ ಐಷಾರಾಮಿ ಮನೆಯಲ್ಲಿ ಲೋಕಾಯುಕ್ತ ಎಸ್​ಪಿ ಉಮೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. 15 ಎಕರೆ ಕೃಷಿ ಜಮೀನು, 1 ಲಕ್ಷ ನಗದು, 300 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ವಸ್ತುಗಳು, ಬೆಂಗಳೂರಿನಲ್ಲಿ 5 ಭವ್ಯಬಂಗಲೆ, 3 ಫ್ಲ್ಯಾಟ್, ಬೇನಾಮಿ ಹೆಸರಿನಲ್ಲಿ 1 ಅಪಾರ್ಟ್​ಮೆಂಟ್ ಪತ್ತೆ ಆಗಿದೆ.

ಹುಡುಕಾಟದ ಸಮಯದಲ್ಲಿ ಈ ಕೆಳಗಿನ ಸ್ವತ್ತುಗಳು

ಸ್ಥಿರಾಸ್ತಿಗಳ ಅಂದಾಜು ಮೌಲ್ಯ: ನಿವೇಶನ, ಮನೆ, ಭೂ ಆಸ್ತಿಗಳು ಮತ್ತು ದಾಖಲೆಗಳು: 8,00,00,000.
ಚರ ಆಸ್ತಿಗಳ ಅಂದಾಜು ಮೌಲ್ಯ: ನಗದು ರೂ 90,000. 250 ಗ್ರಾಂ ಚಿನ್ನ, 300 ಗ್ರಾಂ ಬೆಳ್ಳಿ ಒಟ್ಟು.1,00,00,000. ಒಟ್ಟು ಮೌಲ್ಯ: 9,00,00,000

ಇದನ್ನೂ ಓದಿ: Lokayukta Raid: 60 ಕಡೆ ಲೋಕಾಯುಕ್ತ ದಾಳಿ: 13 ಭ್ರಷ್ಟರು ಟಾರ್ಗೆಟ್‌, ಇಂಜಿನಿಯರ್‌ ಮನೆಯಲ್ಲಿ ಕೆಜಿ ಕೆಜಿ ಬಂಗಾರ, ಬೆಳ್ಳಿ!

ಬೆಳಗಾವಿ ಸೇರಿ ತಿಮ್ಮರಾಜಪ್ಪಗೆ ಸೇರಿದ ಹತ್ತು ಕಡೆಗಳಲ್ಲಿ ಇಂದು ದಾಳಿ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳೆ ಶಾಕ್ ಆಗಿದ್ದಾರೆ. ಕೊಟ್ಟಕೋಟ್ಯಂತರ ರೂ. ಮೌಲ್ಯದ ಮನೆ, ಆಸ್ತಿ, ಜಮೀನು ದಾಖಲೆಗಳು ಪತ್ತೆಯಾಗಿದೆ ಎಂದು ಕೋಲಾರ ಲೋಕಾಯುಕ್ತ ಎಸ್ಪಿ ಉಮೇಶ್ ಮಾಹಿತಿ ನೀಡಿದ್ದಾರೆ.

ಪುರಸಭೆ ಪರಿಸರ ವಿಭಾಗದ ಇಂಜಿನಿಯರ್​​ ಲೋಕಾಯುಕ್ತ ದಾಳಿ

ಕೊಪ್ಪಳ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಆರೋಪದ ಮೇಲೆ ರಾಯಚೂರು ಜಿಲ್ಲೆಯ ಕಂಪ್ಲಿ ಪುರಸಭೆಯ ಪರಿಸರ ಅಭಿಯಂತರ ಮನೆ ಮೇಲೆ ಕೊಪ್ಪಳ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ಟೀಚರ್ ಕಾಲೋನಯಲ್ಲಿರುವ ಕಂಪ್ಲಿ ಪುರಸಬೆ ಪರಿಸರ ಅಭಿಯಂತರ ಶರಣಪ್ಪ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲಾತಿಗಳ ಪರಿಶೀಲನೆ ಮಾಡಿದ್ದಾರೆ.

1,49,04,000 ಮೌಲ್ಯದ ಆಸ್ತಿ ಪತ್ತೆ

ಯಾದಗಿರಿ: DHO ಡಾ.ಪ್ರಭುಲಿಂಗ ಕೆ.ಮಾನಕರಗೆ ಸೇರಿದ 4 ಸ್ಥಳದಲ್ಲಿ ಲೋಕಾಯುಕ್ತ ಶೋಧ ಮಾಡಿದ್ದು, 1,49,04,000 ಮೌಲ್ಯದ ಆಸ್ತಿ ಪತ್ತೆ ಆಗಿದೆ. ನಿವೇಶನ, ಮನೆ, ಆಸ್ತಿ ದಾಖಲೆ ಸೇರಿದಂತೆ 1 ಕೋಟಿ ಮೌಲ್ಯ ಸ್ಥಿರಾಸ್ತಿ ಮತ್ತು ನಗದು, ಚಿನ್ನ, ಬೆಳ್ಳಿ ಸೇರಿದಂತೆ 49.04 ಲಕ್ಷ ರೂ. ಮೌಲ್ಯದ ಚರಾಸ್ತಿ ಪತ್ತೆ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:49 pm, Tue, 5 December 23