ಅಯ್ಯೋ ವಿಧಿಯೇ! ಹಳ್ಳದಲ್ಲಿ ಮುಳುಗುತ್ತಿದ್ದ ತಮ್ಮನನ್ನು ರಕ್ಷಿಸಲು ಹೋಗಿ ಅಣ್ಣನೂ ಸಾವು

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 10, 2024 | 8:35 PM

ಇತ್ತೀಚೆಗೆ ಈಜಲು ಹೋಗಿ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಅದರಂತೆ ಇಂದು(ಏ.10) ಯುಗಾದಿ ಹಬ್ಬ ವರ್ಷತೊಡಕಿನ ನಂತರ ಕ್ವಾರಿ ಹಳ್ಳದಲ್ಲಿ ಈಜಲು ಹೋಗಿದ್ದ ಇಬ್ಬರು ಸಹೋದರರ ಸಾವನ್ನಪ್ಪಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು(Malur)ತಾಲೂಕಿನ ಮಲ್ಯಪ್ಪನಹಳ್ಳಿ ಬಳಿ ನಡೆದಿದೆ.

ಅಯ್ಯೋ ವಿಧಿಯೇ! ಹಳ್ಳದಲ್ಲಿ ಮುಳುಗುತ್ತಿದ್ದ ತಮ್ಮನನ್ನು ರಕ್ಷಿಸಲು ಹೋಗಿ ಅಣ್ಣನೂ ಸಾವು
ಮೃತರು
Follow us on

ಕೋಲಾರ, ಏ.10: ಯುಗಾದಿ ಹಬ್ಬ ವರ್ಷತೊಡಕಿನ ನಂತರ ಕ್ವಾರಿ ಹಳ್ಳದಲ್ಲಿ ಈಜಲು ಹೋಗಿದ್ದ ಇಬ್ಬರು ಸಹೋದರರ ಸಾವನ್ನಪ್ಪಿದ ಘಟನೆ ಕೋಲಾರ ಜಿಲ್ಲೆಯ ಮಾಲೂರು(Malur)ತಾಲೂಕಿನ ಮಲ್ಯಪ್ಪನಹಳ್ಳಿ ಬಳಿ ನಡೆದಿದೆ. ಸಹೋದರರಾದ ಪವನ್​ಕುಮಾರ್​ ಮತ್ತು ಮಧುಕುಮಾರ್​ ಮೃತ ರ್ದುದೈವಿಗಳು. ಮುಳುಗುತ್ತಿದ್ದ ತಮ್ಮನನ್ನು ರಕ್ಷಿಸಲು ಹೋಗಿ ಅಣ್ಣನೂ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹಳೇ ದ್ವೇಷ ಹಿನ್ನೆಲೆ ಯುವಕನ ಬರ್ಬರ ಕೊಲೆ

ಮಂಡ್ಯ: ಹಳೆ ದ್ವೇಷ ಹಿನ್ನಲೆ ನಗರದ ಸ್ವರ್ಣಸಂದ್ರ ಬಡಾವಣೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನ ಕೊಲೆ ಮಾಡಲಾಗಿದೆ. ಅಕ್ಷಯ್(24) ಕೊಲೆಯಾದ ವ್ಯಕ್ತಿ. ಫೋನ್ ಮಾಡಿ ಕರೆಸಿಕೊಂಡು ಅಕ್ಷಯ್​ನನ್ನು​ ಹತ್ಯೆ ಮಾಡಲಾಗಿದ್ದು,  ದ್ವೇಷದ ಹಿನ್ನೆಲೆ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಮಂಡ್ಯ ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:ಪ್ರತ್ಯೇಕ ಪ್ರಕರಣ: ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು, ಆಡು ಮೇಯಿಸಲು ಹೋಗಿದ್ದ ಯುವಕ ನದಿಯಲ್ಲಿ ‌ಮುಳುಗಿ ಸಾವು ಶಂಕೆ

ಟಾಟಾಏಸ್​​​ ಡಿಕ್ಕಿ ಹೊಡೆದು ಇಬ್ಬರು ಬೈಕ್ ಸವಾರರು ಸಾವು

ಬೆಂಗಳೂರು: ಹೆಗ್ಗನಹಳ್ಳಿಯ ಮುಖ್ಯರಸ್ತೆಯಲ್ಲಿ ಟಾಟಾಏಸ್​ ಡಿಕ್ಕಿ ಹೊಡೆದು ಇಬ್ಬರು ಬೈಕ್​ ಸವಾರರು ಸಾವನ್ನಪ್ಪಿದ ಘಟನೆ ತಡರಾತ್ರಿ ನಡೆದಿದೆ. ಬೈಕ್​ ಸವಾರರಾದ ಮಹಮ್ಮದ್​​ ಫಾರೂಖ್​, ಅಬ್ರಾರ್​​ ಅಹಮದ್​​ ಮೃತ ರ್ದುದೈವಿಗಳು. ಮಹಮ್ಮದ್ ಸಿದ್ದಿಕ್ ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಗ್ಗನಹಳ್ಳಿ ಬಳಿ ಮೂವರು ಯುವಕರು ಬೈಕ್ ನಿಲ್ಲಿಸಿಕೊಂಡು ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಟಾಟಾಏಸ್ ವಾಹನ ಡಿಕ್ಕಿಯಾಗಿ ದುರಂತ ಸಂಭವಿಸಿದೆ. ಘಟನೆ ಬಳಿಕ  ಟಾಟಾಏಸ್ ವಾಹನ ಬಿಟ್ಟು ಚಾಲಕ ಪರಾರಿ ಆಗಿದ್ದಾನೆ. ಮೃತ​​ ಫಾರೂಖ್​,​​ ಅಹಮದ್​​ ಇಬ್ಬರೂ ಪಿಯುಸಿ ವಿದ್ಯಾರ್ಥಿಗಳಾಗಿದ್ದು, ಸ್ಕ್ರಾಪ್​ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಓದುತ್ತಿದ್ದರು. ರಂಜಾನ್ ಉಪವಾಸ ಮುಗಿಸಿ ತಂದೆ ಬಳಿ ಹಣ ಪಡೆದಿದ್ದ ಯುವಕರು, ಚಪ್ಪಲಿ ಖರೀದಿಸಲು ಅಂಗಡಿಗೆ ಹೋಗಿದ್ದಾಗ ಈ ಅವಘಡ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:22 pm, Wed, 10 April 24