ಕಾರವಾರ: ಹೊಳೆಯಲ್ಲಿ ಮುಳುಗುತ್ತಿರುವವನನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಐವರು ನೀರುಪಾಲು
ಈಜಲು ಹೋದವನನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಐವರು ನೀರುಪಾಲಾಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಹಸ್ರಲಿಂಗ ಬಳಿಯ ಭೂತದಗುಂಡಿಯಲ್ಲಿ ನಡೆದಿದೆ. ಶಿರಸಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸರಿಂದ ಶೋಧ ಕಾರ್ಯಾಚರಣೆ ನಡೆದಿದೆ.
ಕಾರವಾರ, ಡಿಸೆಂಬರ್ 17: ಈಜಲು ಹೋದವನನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಐವರು ನೀರುಪಾಲಾಗಿರುವಂತಹ (death) ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಹಸ್ರಲಿಂಗ ಬಳಿಯ ಭೂತದಗುಂಡಿಯಲ್ಲಿ ನಡೆದಿದೆ. ರಾಮನಬೈಲಿನ ನಿವಾಸಿಗಳಾದ ಮೌಲಾನ ಮಹಮ್ಮದ್ ಸಲೀಮ್ ಕಲೀಲ್ ರೆಹಮಾನ್ (44), ನಾದಿಯಾ ನೂರ್ (20), ನಬಿಲ್ ನೂರ್ ಅಹ್ಮದ್(22), ವಿದ್ಯಾರ್ಥಿಗಳಾದ ಉಮರ್ ಸಿದ್ದಿಕ್(14), ಮಿಸ್ಬಾ ತಬಸುಮ್(21) ಮೃತರು. ಭಾನುವಾರ ರಜೆ ಹಿನ್ನೆಲೆಯಲ್ಲಿ ಈಜಲು ತೆರಳಿದ್ದಾಗ ಅವಘಡ ಸಂಭವಿಸಿದೆ.
ಓರ್ವನ ಮೃತ ದೇಹ ಪತ್ತೆಯಾಗಿದ್ದು, ನಾಲ್ವರ ಮೃತ ದೇಹಕ್ಕಾಗಿ ಅಗ್ನಿಶಾಮಕ ಸಿಬ್ಬಂದಿಗಳಿಂದ ಕಾರ್ಯಾಚರಣೆ ಮುಂದುವರೆದಿದೆ. ಸ್ಥಳಕ್ಕೆ ಶಿರಸಿ ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದಾರೆ.
ಅನುಮಾನಸ್ಪದವಾಗಿ ವ್ಯಕ್ತಿ ಸಾವು
ತುಮಕೂರು: ಅನುಮಾನಸ್ಪದವಾಗಿ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ತುಮಕೂರಿನ ರೈಲ್ವೆ ನಿಲ್ದಾಣ ಬಳಿ ಕಂಡುಬಂದಿದೆ. ಅಪರಿಚಿತ ಸುಮಾರು 30 ವರ್ಷದ ವ್ಯಕ್ತಿ. ಮದ್ಯ ವ್ಯಸನದಿಂದ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಹೊಸ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಸ್ಥಳದಲ್ಲೇ ಬೈಕ್ ಸವಾರ ಸಾವು
ಕಲಬುರಗಿ: ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮಾಡಬೂಳ ಕ್ರಾಸ್ ಹತ್ತಿರ ನಡೆದಿದೆ. ದಂಡೋತಿ ಗ್ರಾಮದ ಪ್ರಕಾಶ್ (24 ) ಮೃತಪಟ್ಟ ದುರ್ದೈವಿ.
ಇದನ್ನೂ ಓದಿ: ಬೆಂಗಳೂರಿಗೆ ವಿಚಿತ್ರ ಮುಸುಕುದಾರಿ ಕಳ್ಳರ ಎಂಟ್ರಿ: ಅಂಡರ್ವೇರ್ ಇವರ ಡ್ರೆಸ್ ಕೋಡ್
ದಂಡೋತಿ ಗ್ರಾಮದಿಂದ ಚಿತ್ತಾಪುರಕ್ಕೆ ಬರುವಾಗ ಅವಘಡ ಸಂಭವಿಸಿದೆ. ಸ್ಥಳಕ್ಕೆ ಚಿತ್ತಾಪುರ ಪೊಲೀಸರು ಭೇಟಿ ನೀಡಿ ಪರೀಶಿಲನೆ ಮಾಡಿದ್ದು, ಪ್ರಕರಣ ದಾಖಲಾಗಿದೆ.
ರೈಲಿನ ಶೌಚಾಲಯದಲ್ಲಿ ಪಿಸ್ತೂಲ್ ಪತ್ತೆ
ಬೆಂಗಳೂರು: ಮಂಡ್ಯ ಪೊಲೀಸರ ಪಿಸ್ತೂಲ್ ಕೆಂಗೇರಿ ರೈಲ್ವೆ ನಿಲ್ದಾಣದ ಬಳಿ ಪತ್ತೆಯಾಗಿರುವಂತಹ ಘಟನೆ ನಡೆದಿದೆ. ಇಂದು ಬೆಳಗ್ಗೆ ಕೆಂಗೇರಿ ರೈಲ್ವೆ ನಿಲ್ದಾಣದ ಬಳಿ ಬಂದ ಕಾಚಿಗುಡಿ ರೈಲಿನ ಶೌಚಾಲಯದಲ್ಲಿ ಪಿಸ್ತೂಲ್ ಪತ್ತೆಯಾಗಿದ್ದು, ಕೂಡಲೇ ಎಲ್ಲ ಕಂಟ್ರೋಲ್ ರೂಂಗಳಿಗೆ ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ. ಕೊನೆಗೆ ಮಂಡ್ಯ ಪೊಲೀಸರ ಪಿಸ್ತೂಲ್ ಎಂಬುದು ಪತ್ತೆ ಆಗಿದೆ.
ಪಿಪಿ ಒಬ್ಬರ ಬಂದೋಬಸ್ತ್ಗೆ ನಿಯೋಜನೆಯಾಗಿದ್ದ ಗನ್ ಮ್ಯಾನ್ ವಾಶ್ ರೂಂ ಹೋದಾಗ ಪಿಸ್ತೂಲ್ ಮರೆತಿದ್ದರು. ಸದ್ಯ ಪಿಸ್ತೂಲ್ ರೈಲ್ವೆ ಪೊಲೀಸರ ವಶದಲ್ಲಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:02 pm, Sun, 17 December 23