ಚಿತ್ರದುರ್ಗದಲ್ಲಿ ನಾಯಿ ದಾಳಿಗೆ 10 ವರ್ಷದ ಬಾಲಕ ಸಾವು
ಚಿತ್ರದುರ್ಗದಲ್ಲಿ 15 ದಿನಗಳ ಹಿಂದೆ ನಾಯಿ ಕಡಿದಿತದಿಂದ ಗಾಯಗೊಂಡಿದ್ದ ತರುಣ್‌ಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ತರುಣ್ ಮೃತಪಟ್ಟಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೆಲ ದಿನಗಳ ಹಿಂದೆ ಕುಷ್ಟಗಿಯಲ್ಲೂ ನಾಯಿ ದಾಳಿಗೆ ಹಲವರು ಗಾಯಗೊಂಡಿದ್ದ ಘಟನೆ ನಡೆದಿತ್ತು.
ಚಿತ್ರದುರ್ಗ, ಡಿ.17: ಜಿಲ್ಲೆಯಲ್ಲಿ ನಾಯಿ ಕಡಿತದಿಂದ ಬಾಲಕನೊಬ್ಬ ಮೃತಪಟ್ಟಿದ್ದಾನೆ (Dog Bite). ಚಿತ್ರದುರ್ಗದಲ್ಲಿ ನಾಯಿ ದಾಳಿಗೆ ಒಳಗಾಗಿದ್ದ 10 ವರ್ಷದ ಬಾಲಕ ಮೃತಪಟ್ಟಿದ್ದಾನೆ (Death). ಮೆದೇಹಳ್ಳಿಯ ತರುಣ್‌ಗೆ 15 ದಿನಗಳ ಹಿಂದೆ ನಾಯಿ ಕಡಿದಿತ್ತು. ಗಾಯಗೊಂಡಿದ್ದ ತರುಣ್‌ಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ತರುಣ್ ಮೃತಪಟ್ಟಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲ ದಿನಗಳ ಹಿಂದೆ ಕುಷ್ಟಗಿಯಲ್ಲೂ ನಾಯಿ ದಾಳಿಗೆ ಹಲವರು ಗಾಯಗೊಂಡಿದ್ದ ಘಟನೆ ನಡೆದಿತ್ತು. ಬಾಲಕನ ಕೆನ್ನೆ ಹಾಗೂ ಕಾಲಿಗೆ ನಾಯಿ ಕಚ್ಚಿ ಹಾಕಿತ್ತು. ಇನ್ನು ನಾಯಿ ದಾಳಿಯಿಂದ ಗಾಯಗೊಂಡಿದ್ದ ಗಾಯಾಳುಗಳಿಗೆ ಸ್ಥಳೀಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಮನೆಯಲ್ಲಿ ಸಿಲಿಂಡರ್ ಸ್ಫೋಟ, ಏಳು ಮಂದಿಗೆ ಗಾಯ
ಇನ್ನು ಮತ್ತೊಂದೆಡೆ ರಾತ್ರೋ ರಾತ್ರಿ ಮನೆಯಲ್ಲಿ ಗ್ಯಾಸ್ ಸೋರಿಕೆಯಾಗಿದ್ದು ಸಿಲಿಂಡರ್ ಸ್ಫೋಟಗೊಂಡು ಏಳು ಮಂದಿಗೆ ಗಾಯಗಳಾದ ಘಟನೆ ನಡೆದಿದೆ. ಬೆಳಗಾವಿಯ ಅಕ್ಕತಂಗೇರಹಾಳ ಗ್ರಾಮದ ಮನೆಯೊಂದರಲ್ಲಿ ಸಿಲಿಂಡರ್ ಬ್ಲಾಸ್ಟ್ ಆಗಿದ್ದು, ಏಳು ಮಂದಿಗೆ ಗಾಯವಾಗಿದೆ. 9 ತಿಂಗಳ ಹಸುಗೂಸು ಸೇರಿ 7 ಜನರಿಗೆ ಗಂಭೀರ ಗಾಯವಾಗಿದೆ. ನಿನ್ನೆ ರಾತ್ರಿ ಮನೆಯವರೆಲ್ಲ ಮಲಗಿದ್ದಾಗ ಗ್ಯಾಸ್ ಲೀಕ್ ಆಗಿದೆ. ಆದ್ರೆ, ಬೆಳಗ್ಗೆ ಎದ್ದು ಸ್ಟೌವ್ ಆನ್ ಮಾಡಿದಾಗ ಸಿಲಿಂಡರ್ ಸ್ಫೋಟಗೊಂಡಿದೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಲಿಂಡರ್ ಸ್ಫೋಟಕ್ಕೆ ಮನೆ ಧ್ವಂಸವಾಗಿದ್ದು, ಛಾವಣಿ, ಮನೆಯ ವಸ್ತುಗಳಿಗೆಲ್ಲಾ ಹಾನಿಯಾಗಿದೆ.
ಇದನ್ನೂ ಓದಿ: ಮಂಗಳೂರು: KPSC ಪರೀಕ್ಷೆಯಲ್ಲಿ ಬೇಜವಾಬ್ದಾರಿತನ, ಅಭ್ಯರ್ಥಿಗಳ ತಪಾಸಣೆಗೆ ವಿದ್ಯಾರ್ಥಿಗಳ ಬಳಕೆ
ಕಾಲು ಜಾರಿ ವಿದ್ಯಾರ್ಥಿ ನೀರುಪಾಲು
ಸ್ನೇಹಿತರ ಜತೆ ಪ್ರವಾಸಕ್ಕೆ ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಪಾಲಾಗಿರೋ ಘಟನೆ ಬೆಂಗಳೂರಿನ ದೇವನಹಳ್ಳಿಯಲ್ಲಿ ನಡೆದಿದೆ. ಮೇಕೆದಾಟು ಬಳಿ ಚುಂಚಿ ಫಾಲ್ಸ್ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ವರುಣ್ ನೀರುಪಾಲು ಪಾಲಾಗಿದ್ದಾನೆ. ನಿನ್ನೆ ನಾಲ್ವರು ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ರು. ಈ ವೇಳೆ ನೀರಿನಲ್ಲಿ ಆಟವಾಡುವಾಗ ಕಾಲು ಜಾರಿಬಿದ್ದು ವರುಣ್ ನೀರುಪಾಲಾಗಿದ್ದಾನೆ. ವರುಣ್ಗಾಗಿ ಶೋಧ ನಡೆಯುತ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ