Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳ ತಜ್ಞೆಯಾಗುವ ಕನಸು ಹೊತ್ತಿದ್ದ ವೈದ್ಯೆ ಕೋಲಾರದ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ, ಕಾರಣ ಏನು?

ಸ್ನೇಹಿತ ಮಣಿಗೆ ಕರೆ ಮಾಡಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾಳೆ. ಸ್ನೇಹಿತ ಮಣಿ ಎಷ್ಟು ಹೇಳಿದರೂ ದರ್ಶಿನಿ ಕೇಳಿಲ್ಲ. ಆಗ ಆಕೆಯ ತಾಯಿಗೆ ಕಾನ್ಫರೆನ್ಸ್ ಕಾಲ್​ ಹಾಕಿ ಮಾತನಾಡಿಸಲು ಯತ್ನಿಸಿದ್ದಾನೆ. ಆದರೆ ದರ್ಶಿನಿ ಕಾಲ್​ ಕಟ್​​​ ಮಾಡಿದ್ದಾಳೆ.

ಮಕ್ಕಳ ತಜ್ಞೆಯಾಗುವ ಕನಸು ಹೊತ್ತಿದ್ದ ವೈದ್ಯೆ ಕೋಲಾರದ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ, ಕಾರಣ ಏನು?
ಮಕ್ಕಳ ತಜ್ಞೆಯಾಗುವ ಕನಸು ಹೊತ್ತಿದ್ದ ವೈದ್ಯೆ ಕೋಲಾರದ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಸಾಧು ಶ್ರೀನಾಥ್​

Updated on:Jun 06, 2023 | 9:04 AM

ಆಕೆ ಎಂಬಿಬಿಎಸ್ ಮುಗಿಸಿ ಎಂಡಿ ಓದುತ್ತಿದ್ದವಳು, ಮುಂದೆ ವೈದ್ಯೆಯಾಗಿ ಮಕ್ಕಳ ತಜ್ಞೆಯಾಗುವ ಕನಸು ಹೊತ್ತು ದೂರದ ಬಳ್ಳಾರಿಯಿಂದ ಬೆಂಗಳೂರಿಗೆ ಬಂದಿದ್ದಳು, ತಂದೆಯನ್ನ ಕಳೆದುಕೊಂಡಿದ್ದ ಆಕೆ ಕೆಲಸದ ಒತ್ತಡ, ಹಿರಿಯ ವೈದ್ಯರ ಕಿರಕುಳದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಕೊನೆಯದಾಗಿ ತನ್ನ ಸ್ನೇಹಿತನಿಗೆ ಕರೆ ಮಾಡಿ ಆತ್ಮಹತ್ಯೆ ವಿಷಯ ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಒಂದು ಕಡೆ ಕ್ವಾರಿಹಳ್ಳದ ನೀರಿನಲ್ಲಿ (quarry lake in kendatti in kolar) ತೇಲುತ್ತಿರುವ ವೈದ್ಯಕೀಯ ವಿದ್ಯಾರ್ಥಿನಿಯ ಶವ, ಮತ್ತೊಂದೆಡೆ ಶವವನ್ನು ಮೇಲೆತ್ತುತ್ತಿರುವ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು, ಇನ್ನೊಂದೆಡೆ ಶವಗಾರದ ಎದುರು ಕಣ್ಣೀರಾಕುತ್ತಿರುವ ಪೊಷಕರು ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರದಲ್ಲಿ. ಹೌದು ಕೋಲಾರ ತಾಲ್ಲೂಕು ಕೆಂದಟ್ಟಿ ಗ್ರಾಮದ ಬಳಿ ಇರುವ ಕ್ವಾರಿಹಳ್ಳದಲ್ಲಿ ಬಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಎಂವಿಜೆ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಓದುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆಗೆ (suicide) ಶರಣಾಗಿದ್ದಾಳೆ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ ಬಳ್ಳಾರಿ ಮೂಲದ ದರ್ಶಿನಿ (MD medical student Darshini ). ಅಷ್ಟಕ್ಕೂ ಆಗಿದ್ದೇನು ಅಂತ ನೋಡೋದಾದ್ರೆ ಹೊಸಕೋಟೆ ಎಂವಿಜೆ ಮೆಡಿಕಲ್​ ಕಾಲೇಜಿನಲ್ಲಿ ಪೀಡಿಯಾಟ್ರಿಕ್​ ಎಂಡಿ ಮಾಡುತ್ತಿದ್ದ ವಿದ್ಯಾರ್ಥಿನಿ ದರ್ಶಿನಿ (24) ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ನಿರ್ಧಾರ ಮಾಡಿದ್ದಾಳೆ. ಈ ವೇಳೆ ಮೊನ್ನೆ ಭಾನುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಾಲೇಜಿನಿಂದ ಹೊರಟು ನೇರ ಕೋಲಾರ ತಾಲ್ಲೂಕು ಕೆಂದಟ್ಟಿ ಬಳಿ ಇರುವ ಕ್ವಾರಿಹಳ್ಳದ ಬಳಿ ಬಂದಿದ್ದಾಳೆ. ಬಂದು ತನ್ನ ಶೂ ಹಾಗೂ ಮೊಬೈಲ್​ ನ್ನು ಒಂದೆಡೆ ಬಿಚ್ಚಿಟ್ಟು ಕೊನೆಯದಾಗಿ ತನ್ನ ಸ್ನೇಹಿತ ಮಣಿ ಎಂಬಾತನಿಗೆ ಕರೆ ಮಾಡಿ ತಾನು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಖಿನ್ನತೆಯಿಂದ ಹೊರ ಬರಲು ಆಗುತ್ತಿಲ್ಲ. ಹಾಗಾಗಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾಳೆ.

ಈ ವೇಳೆ ಸ್ನೇಹಿತ ಮಣಿ ಎಷ್ಟು ಹೇಳಿದರೂ ದರ್ಶಿನಿ ಕೇಳಿಲ್ಲ. ಆಗ ಆಕೆಯ ತಾಯಿಗೆ ಕಾನ್ಫರೆನ್ಸ್ ಕಾಲ್​ ಹಾಕಿ ಮಾತನಾಡಿಸಲು ಯತ್ನಿಸಿದ್ದಾನೆ. ಆದರೆ ದರ್ಶಿನಿ ಕಾಲ್​ ಕಟ್​​​ ಮಾಡಿದ್ದಾಳೆ. ಮತ್ತೆ ಎಷ್ಟೇ ಪ್ರಯತ್ನಿಸಿದರೂ ಕಾಲ್​ ರಿಸೀವ್ ಮಾಡಿಲ್ಲ. ಅಷ್ಟೊತ್ತಿಗೆ ತಾನು ಕ್ವಾರಿಹಳ್ಳದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಹೇಳಿದ ಹಿನ್ನೆಲೆ ತಕ್ಷಣವೇ ಹುಡುಕಿಕೊಂಡು ಬಂದಿದ್ದಾರೆ. ಆದರೆ ಆ ವೇಳೆಗೆ ದರ್ಶಿನಿ ನೀರಿನಲ್ಲಿ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಳು.

ಅತ್ಯಂತ ಪ್ರತಿಭಾವಂತೆಯಾಗಿದ್ದ ದರ್ಶಿನಿ ಎಂಬಿಬಿಎಸ್ ಮುಗಿಸಿ ಉಚಿತ ಎಂಡಿ ಸೀಟ್​ ಗಿಟ್ಟಿಸಿಕೊಂಡಿದ್ದಳು. ಜೊತೆಗೆ ತಾನು ದೊಡ್ಡ ಮಕ್ಕಳ ತಜ್ಞೆಯಾಗಿ ಕೆಲಸ ಮಾಡಬೇಕು ತನ್ನೂರಿನಲ್ಲಿ ತನ್ನದೊಂದು ನರ್ಸಿಂಗ್ ಹೋಂ ತೆರೆಯಬೇಕು ಎಂದೆಲ್ಲಾ ಕನಸು ಹೊತ್ತಿದ್ದಳು. ತಂದೆಯನ್ನು ಕಳೆದುಕೊಂಡಿದ್ದ ದರ್ಶಿನಿ ತನ್ನ ತಾಯಿಯ ಆಶ್ರಯದಲ್ಲೇ ಬೆಳೆಯುತ್ತಿದ್ದವಳು. ತನ್ನ ತಾಯಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಾ ಮಗಳನ್ನು ವೈದ್ಯೆ ಮಾಡಬೇಕು ಅನ್ನೋ ಕನಸಿಗೆ ತಕ್ಕಂತೆ ಓದುತ್ತಿದ್ದ ದರ್ಶಿನಿ, ಕಳೆದ ಏಳು ತಿಂಗಳ ಹಿಂದಷ್ಟೇ ಎಂವಿಜೆ ಮೆಡಿಕಲ್​ ಕಾಲೇಜಿಗೆ ದಾಖಲಾಗಿದ್ದಳು.

ಆದರೆ ಇತ್ತೀಚೆಗೆ ಮೆಡಿಕಲ್​ ಕಾಲೇಜಿನಲ್ಲಿ ಸತತ 48 ಗಂಟೆಗಳ ಕಾಲ ವಿಶ್ರಾಂತಿ ಇಲ್ಲದೆ ಕೆಲಸ ಮಾಡಬೇಕಾಗಿದ್ದು ಊಟಕ್ಕೂ ಸಹ ಬಿಡುತ್ತಿರಲಿಲ್ಲ ಎನ್ನಲಾಗಿದೆ. ಜೊತೆಗೆ ಹಿರಿಯ ವೈದ್ಯ ಮಹೇಶ್ ಎಂಬಾತನ ಕಿರುಕುಳ ಹೆಚ್ಚಾಗಿದ್ದು, ಕಾಫಿ ಕುಡಿದು ಬರೋಣ ಬಾ ಎಂದು ದರ್ಶಿನಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಎಂದು ಪೋಷಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ವೈದ್ಯಕೀಯ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಯಿಂದ ಕಿರುಕುಳ, ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

ಇಷ್ಟೆಲ್ಲಾ ಕಿರುಕುಳ ಇದ್ದರೂ ಆಡಳಿತ ಮಂಡಳಿಯವರ ಕಿರುಕುಳವನ್ನ ಪ್ರಶ್ನೆ ಮಾಡಿದ್ರೆ ಇಂಟರ್ನಲ್ ಮಾರ್ಕ್ ಕೊಡುವುದಿಲ್ಲ ಎಂಬ ಭಯದಿಂದ, ಮನೆಯವರಿಗೆ ಕಿರುಕುಳದ ಕುರಿತು ತಿಳಿಸದೆ, ಸ್ನೇಹಿತ ಮಣಿ ಎಂಬುವರ ಬಳಿ ತಮ್ಮ ಅಳಲನ್ನ ತೋಡಿಕೊಂಡಿದ್ದಳು. ಇನ್ನು ಘಟನೆ ಸಂಬಂಧ ಎಂವಿಜೆ ಕಾಲೇಜು ಆಡಳಿತ ಮಂಡಳಿ ಹಾಗೂ ಹಿರಿಯ ವೈದ್ಯ ಮಹೇಶ್​ ವಿರುದ್ದ ಪೋಷಕರು ಕೋಲಾರ ಗ್ರಾಮಾಂತರ ದೂರು ನೀಡಿದ್ದು ಇವರ ವಿರುದ್ದ ಪ್ರಕರಣ ದಾಖಲಾಗಿದೆ.

ಒಟ್ಟಾರೆ ಮಕ್ಕಳ ತಜ್ಞೆಯಾಗುವ ಆಸೆ ಹೊತ್ತಿದ್ದ ಮಗುವಿನಂತ ಮನಸ್ಸಿನ ದರ್ಶಿನಿಗೆ ತನ್ನ ವೃತ್ತಿ ಜೀವನದ ಕಷ್ಟ ಎದುರಿಸುವ ಶಕ್ತಿ ಇರಲಿಲ್ಲವೋ, ಕಾಲೇಜು ಆಡಳಿತ ಮಂಡಳಿ, ಹಿರಿಯ ವೈದ್ಯರ ಕಿರಕುಳ ಹೆಚ್ಚಾಗಿತ್ತೋ, ಮಾನಸಿಕವಾಗಿ ನೊಂದಿದ್ದ ದರ್ಶಿನಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳಾ, ಇಲ್ಲಾ ಯಾವುದೋ ಒತ್ತಡಕ್ಕೆ ಮಣಿದಳಾ… ಹೀಗೆ ಹಲವು ಅನುಮಾನಗಳು ಮೂಡಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:58 am, Tue, 6 June 23

ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ಬೆಂಗಳೂರು: ಸರ್ಕಾರಿ ಶಾಲೆ ಮಕ್ಕಳಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಹೆಚ್​ಎಂ
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು
ರಸ್ತೆಯಲ್ಲಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ಹಾಲಿನ ದರ ಏರಿಕೆಯನ್ನು ಸಮರ್ಥಿಸಿಕೊಂಡ ಡಿಕೆ ಶಿವಕುಮಾರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್
ದರ್ಶನ್​ನಿಂದ ಸಿಕ್ಕ ಬೆಸ್ಟ್ ಗಿಫ್ಟ್ ಯಾವುದು? ವಿವರಿಸಿದ ಧನ್ವೀರ್