ಅದು ವೃಕ್ಷಮಾತೆ ಸಾಲುಮರದ ತಿಮ್ಮಕ್ಕರ (Vrikshamla saalumarada Thimmakka) ಹೆಸರಲ್ಲಿ ನಿರ್ಮಾಣ ಮಾಡಲಾಗಿರುವ ಪಾರ್ಕ್, ಅರಣ್ಯ ಇಲಾಖೆ ವತಿಯಿಂದ ತಾಲೂಕಿಗೊಂದು ಪಾರ್ಕ್ ನಿರ್ಮಾಣ, ಆದರೆ ಆ ಪಾರ್ಕ್ ನಿರ್ಮಾಣವಾಗಿ ಐದು ವರ್ಷಗಳೇ ಕಳೆದಿವೆ. ಆದರೆ ಆ ಪಾರ್ಕ್ ಮಾತ್ರ ಇನ್ನೂ ಸಾರ್ವಜನಿಕರ ಅನುಕೂಲಕ್ಕೆ ಸಿಗುತ್ತಿಲ್ಲ, ಪಾರ್ಕ್ ನಲ್ಲಿ ಅಳಡಿಸಿರುವ ಅಟಿಕೆಗಳು ತುಕ್ಕು ಹಿಡಿಯುವ ಹಂತಕ್ಕೆ ಬಂದಿದೆ. ಮತ್ತೊಂದಡೆ ಉದ್ಯಾನವನದ ಮುಖ್ಯದ್ವಾರದ ಗೇಟ್ ಗೆ ಬೀಗ ಹಾಕಿರುವುದು, ಅಷ್ಟಕ್ಕೂ ಆ ಪಾರ್ಕ್ ಎಲ್ಲಿದೆ ಅಂತೀರಾ ಈ ಸ್ಟೋರಿ ನೋಡಿ… ಮೇಲೆ ಹೇಳಿದ ದೃಶ್ಯಗಳು ಕಂಡು ಬಂದಿದ್ದು ಕೋಲಾರದಲ್ಲಿ. ಹೌದು ಕೋಲಾರದ ಹೊರವಲಯದಲ್ಲಿ ಅದರಲ್ಲೂ ಜಿಲ್ಲಾ ಅರಣ್ಯಾಧಿಕಾರಿಗಳ ಕಚೇರಿಯ (Forest Department office Kolar) ಪಕ್ಕದಲ್ಲಿರುವಂತಹ ಪಾರ್ಕ್ ಸರಿಯಾಗಿ ನಿರ್ವಹಣೆಯಿಲ್ಲದೆ ಅವನತ್ತಿಯತ್ತ ಸಾಗಿದೆ. ಅರಣ್ಯ ಇಲಾಖೆ ಸಾಲುಮರದ ತಿಮ್ಮಕ್ಕ ಅವರ ಹೆಸರಲ್ಲಿ ತಾಲ್ಲೂಕಿಗೊಂದು ಉದ್ಯಾನವನವನ್ನು ನಿರ್ಮಾಣ ಮಾಡಿದ್ದು, ಕಳೆದ 5 ವರ್ಷಗಳ ಹಿಂದೆ ಅರಣ್ಯ ಇಲಾಖೆ ಸಾಲುಮರದ ತಿಮ್ಮಕ್ಕ ಹೆಸರಿನಲ್ಲಿ ಒಂದು ಪಾರ್ಕ್ ನಿರ್ಮಾಣ ಮಾಡಲಾಗಿದೆ.
ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಪಾರ್ಕ್ ನಿರ್ಮಾಣ ಮಾಡಿದೆ. ಆದರೆ ಪಾರ್ಕ್ ನಿರ್ಮಾಣವಾಗಿ ಐದು ವರ್ಷಗಳೇ ಕಳೆದಿದ್ದರೂ ಪಾರ್ಕ್ ನಲ್ಲಿ ಆಟವಾಡಲು ಮಕ್ಕಳಾಗಲೀ, ವೃದ್ದರಾಗಲೀ, ಪೊಷಕರಾಗಲೀ ಯಾರು ಕೂಡಾ ಬರುತ್ತಿಲ್ಲ. ಕಾರಣ ಉದ್ಯಾನವನದ ನಿರ್ವಹಣೆ ಇಲ್ಲದ ಹಿನ್ನೆಲೆ ಸಂಪೂರ್ಣವಾಗಿ ಹಾಳಾಗಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಮಕ್ಕಳ ಅಟಿಕೆಗಳು, ಮತ್ತು ಉಪಕರಣಗಳನ್ನು ಅಳವಡಿಸಿದ್ದು ಇವೆಲ್ಲಾ ಜನರ ಬಳಕೆಯಾಗದೆ ತುಕ್ಕು ಹಿಡಿಯುತ್ತಿದೆ. ಜೊತೆಗೆ ಜನರೇ ಇಲ್ಲಿಗೆ ಬಾರದಂತೆ ಸೋ ಕಾಲ್ಡ್ ಪಾರ್ಕ್ನ ಮುಖ್ಯದ್ವಾರಕ್ಕೆ ಬೀಗ ಹಾಕಿದ್ದು, ಯಾರು ಸಹ ಉದ್ಯಾನವನಕ್ಕೆ ಹೋಗಲು ಆಗುತ್ತಿಲ್ಲ, ಶುದ್ದ ನೀರಿನ ಘಟಕ ತಕ್ಕು ಹಿಡಿಯುವ ಜೊತೆಗೆ ಸಂಪೂರ್ಣವಾಗಿ ಹಾಳಾಗಿದೆ.
ಇನ್ನು ಪಾರ್ಕ್ಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಪಾರ್ಕ್ ನಿರ್ಮಾಣ ಮಾಡಿ ಅದಕ್ಕೆ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರ ಹೆಸರಿಟ್ಟು, ಕೊನೆಗೆ ಅವರ ಹೆಸರಿಗಾದರೂ ಸಾರ್ಥಕತೆ ಬರುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ನಡೆದುಕೊಳ್ಳಬೇಕಿತ್ತು. ಆದರೆ ಪಾರ್ಕ್ ನಿರ್ಮಾಣ ಮಾಡಿ ಐದು ವರ್ಷಗಳೇ ಕಳೆದರೂ ಪಾರ್ಕ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ಕೊನೆ ಪಕ್ಷ ನಿರ್ಮಾಣ ಮಾಡಿದ ಪಾರ್ಕ್ ಹೇಗಿದೆ ಅನ್ನೋದನ್ನು ಕೂಡಾ ನೋಡಿಲ್ಲ.
ತಾಲೂಕಿಗೊಂದು ಜನರ ಅನುಕೂಲಕ್ಕಾಗಿ ಅರಣ್ಯ ಇಲಾಖೆ ನಿರ್ಮಾಣ ಮಾಡಿರುವ ಉದ್ಯಾನವನ ಕೆಲವಡೆ ನಿರ್ವಹಣೆ ಮಾತ್ತು ಜನರ ಸಂಪರ್ಕವಿಲ್ಲದೆಯೇ ಅವನತಿಯತ್ತ ಸಾಗಿದೆ. ಲಕ್ಷಾಂತರ ರೂಪಾಯಿ ಹಣದಲ್ಲಿ ನಿರ್ಮಾಣ ಮಾಡಿದ್ದ ಎಲ್ಲಾ ಮಕ್ಕಳ ಆಟಿಕೆ ಹಾಗೂ ಉಪಕರಣ ತುಕ್ಕು ಹಿಡಿಯುತ್ತಿವೆ. ಜನರ ಪ್ರವೇಶಕ್ಕೂ ನಿರ್ಬಂಧ ಹಾಕಿ ಉದ್ಯಾನವನದ ದ್ವಾರಬಾಗಿಲಿಗೆ ಬೀಗ ಹಾಕಿರುವುದರಿಂದ ಜನರು ಸಹ ಉದ್ಯಾನವನಕ್ಕೆ ಹೋಗಲು ಆಗದೆ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.
ಅರಣ್ಯ ಇಲಾಖೆಯ ಜಿಲ್ಲಾ ಕಚೇರಿ ಉದ್ಯಾನವನ ಪಕ್ಕದಲ್ಲಿದೆ. ಇದ್ರೂ ಸಹ ಅಧಿಕಾರಿಗಳು ಉದ್ಯಾನವನದ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಅರಣ್ಯ ಕಾಪಾಡಬೇಕಾದ ಇಲಾಖೆ ಪಕ್ಕದಲ್ಲಿರುವ ಉದ್ಯಾನವನ ನಿರ್ವಹಣೆ ಮಾಡಲು ಆಗುತ್ತಿಲ್ಲ, ಇಷ್ಟದರೂ ಸಹ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಕಿಂಚಿತ್ತೂ ಗಮನ ನೀಡುತ್ತಿಲ್ಲ.
ಒಟ್ಟಾರೆ ಅರಣ್ಯ ಇಲಾಖೆ ಮಕ್ಕಳಿಗೆ, ವೃದ್ದರಿಗೆ ಹಾಗೂ ವಾಯುವಿಹಾರಿಗಳಿಗೆ ಅನುಕೂಲವಾಗಬೇಕಿದ್ದ ಒಂದು ಪಾರ್ಕ್ ಇವತ್ತು ವ್ಯರ್ಥವಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ ಪಾರ್ಕ್ ಅಟಿಕೆಗಳು ತುಕ್ಕು ಹಿಡಿಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳ ಈಗಲಾದರೂ ಎಚ್ಚೆತ್ತುಕೊಂಡು ಜನರ ಬಳಕೆಗೆ ಅನುಕೂಲವಾಗುವ ವಾತಾವರಣ ನಿರ್ಮಿಸಿಕೊಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ