Nirmala Sitharaman: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅನುದಾನ ಬಳಕೆ, ಕೆರೆಗಳ ನಾಡಲ್ಲಿ 75 ಕೆರೆಗಳಿಗೆ ಖುಲಾಯಿಸಿದ ಅದೃಷ್ಟ!
lake rejuvenation: ಅನೇಕ ನದಿ ನಾಲೆಗಳಿದ್ದ ಕೋಲಾರದ ಮೇಲೆ ಪ್ರಧಾನಿ ಮೋದಿ ಹಾಗೂ ಹಣಕಾಸು ಸಚಿವರು ವಿಶೇಷ ಕಾಳಜಿ ವಹಿಸುವ ಮೂಲಕ ಬರದ ನಾಡು ಕೋಲಾರದ ಕೆರೆಗಳನ್ನು ಅಭಿವೃದ್ದಿ ಪಡಿಸುವ ಕೆಲಸ ಶುರುಮಾಡಿದ್ದಾರೆ. ಅಂದುಕೊಂಡಂತೆ ನಡೆದರೆ ನಿಜಕ್ಕೂ ಜಿಲ್ಲೆಯಲ್ಲೊಂದು ಕೆರೆಗಳ ಅಭಿವೃದ್ದಿ ಕ್ರಾಂತಿ ನಡೆಯೋದರಲ್ಲಿ ಎರಡು ಮಾತಿಲ್ಲ..
ಅದು ಅಮೃತ ಸರೋವರ ಎನ್ನುವ ಪ್ರಧಾನಿ ಮೋದಿಯವರ ಕನಸಿನ ಯೋಜನೆಗಳಲ್ಲೊಂದು ಈ ಯೋಜನೆಯ ಭಾಗ್ಯ ಬರದನಾಡು ಕೋಲಾರಕ್ಕೆ ಸಿಕ್ಕಿದ್ದು, ದೇಶದ ಹಣಕಾಸು ಸಚಿವರ ಅನುಧಾನದ ಜೊತೆಗೆ ಜಿಲ್ಲೆಯಲ್ಲಿ ಸರಿ ಸುಮಾರು 75 ಕೆರೆಗಳನ್ನು ಅಭಿವೃದ್ದಿ ಮಾಡುವ ಕೆಲಸ ಭರದಿಂದ ಸಾಗಿದೆ..
ಕೆರೆಗಳ ನಾಡಲ್ಲಿ ಕೆರೆಗಳಿಗೆ ಖುಲಾಯಿಸಿದ ಅದೃಷ್ಟ 75 ಕೆರೆಗಳ ಅಭಿವೃದ್ದಿ ಕೆಲಸ ಶುರು..! ಕೋಲಾರ ಜಿಲ್ಲೆಯನ್ನು ಕೆರೆಗಳ ನಾಡು ಎಂದು ಕೆರೆಯಲಾಗುತ್ತದೆ ಕಾರಣ ಕೋಲಾರದಲ್ಲಿ ಸರಿಸುಮಾರು 2000 ಕ್ಕೂ ಹೆಚ್ಚಿನ ಕೆರೆಗಳಿವೆ, ಕೋಲಾರದಲ್ಲಿ ಯಾವುದೇ ನದಿ ನಾಲೆಗಳಿಲ್ಲದ ಕಾರಣ ಕೆರೆಗೆಳೇ ಜಿಲ್ಲೆಯ ಜೀವನಾಡಿಗಳು ಹಾಗಾಗಿ ಇಲ್ಲಿನ ಕೆರೆಗಳನ್ನು ಅಭಿವೃದ್ದಿ ಪಡಿಸಿ ಕೆರೆಗಳಲ್ಲಿ ನೀರು ನಿಂತರೆ ಸಾಕು ಬರದ ನಾಡು ಹಸಿರ ನಾಡಾಗಿ ಪರಿವರ್ತನೆಯಾಗುತ್ತದೆ ಅಷ್ಟೇ ಅಲ್ಲದೆ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಕೂಡಾ ಬಗೆಹರಿಯುತ್ತದೆ. ಸದ್ಯ ಇದನ್ನು ಅರಿತಿರುವ ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜಿಲ್ಲೆಯ ಕೆರೆಗಳ ಅಭಿವೃದ್ದಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ವಂತ ಅನುದಾನ ಬಳಕೆ..! ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೋಲಾರ ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದು ಅಮೃತ ಸರೋವರಾ ಅನ್ನೋ ಯೋಜನೆಯಡಿಯಲ್ಲಿ ಕೋಲಾರ ಜಿಲ್ಲೆಯ 75 ಕೆರೆಗಳಲ್ಲಿ ಹೂಳು ತೆಗೆದು ಅದಕ್ಕೆ ಬೇಕಾದ ಪೋಷಕ ಕಾಲುವೆಗಳು ಸೇರಿದಂತೆ ಒತ್ತುವರಿ ತೆರವು ಮಾಡಲು ಸೂಚನೆ ನೀಡಿದ್ದಾರೆ ಅಷ್ಟೇ ಅಲ್ಲದೆ ಅದಕ್ಕಾಗಿ ತಮ್ಮ ವೈಯಕ್ತಿಕವಾಗಿ ಸಂಸದರ ಅನುದಾನದಿಂದಲೂ 1.80 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದು ಜಿಲ್ಲೆಯಲ್ಲಿ 75 ಕೆರೆಗಳನ್ನು ಆಯ್ಕೆ ಮಾಡಿಕೊಂಡಿದ್ದು ಕಾಮಗಾರಿ ಶುರುವಾಗಿದೆ ಅನ್ನೋದು ಕೋಲಾರ ಸಂಸದ ಎಸ್.ಮುನಿಸ್ವಾಮಿ ಅವರ ಮಾತು.
ಅನುದಾನ ಬಿಡುಗಡೆ ಮಾಡಿ ಅಧಿಕಾರಗಳಿಂದ ಕಾಮಗಾರಿ ಮಾಹಿತಿ ಪಡೆಯುತ್ತಿರುವ ಸಚಿವೆ…! ಸಂಸದರ ಅನುದಾನ ಬಿಡುಗಡೆ ಮಾಡಿ ಸುಮ್ಮನಿರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 75 ಕೆರೆಗಳನ್ನು ಅಭಿವೃದ್ದಿ ಪಡಿಸಲು ಅಧಿಕಾರಿಗಳಿಗೆ ಟಾರ್ಗೆಟ್ ಕೊಟ್ಟಿದ್ದಾರೆ ಇನ್ನು ಎರಡು ತಿಂಗಳಲ್ಲಿ 75 ಕೆರೆಗಳನ್ನು ಹೂಳು ತೆಗೆಯಬೇಕು ಅಗತ್ಯ ಬಿದ್ದರೆ ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲೂ ಕೆರೆಗಳನ್ನು ಅಭಿವೃದ್ದಿ ಪಡಿಸಲು ತಿಳಿಸಿದ್ದಾರೆ. ಮುಂದಿನ ತಿಂಗಳು ಜಿಲ್ಲೆಗೆ ತಾವು ಖುದ್ದು ಬೇಟಿ ನೀಡಿ ಕೆರೆ ಅಭಿವೃದ್ದಿ ಕಾಮಗಾರಿಗಳನ್ನು ಪರಿಶೀಲನೆ ನಡೆಸುವುದಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಅದರ ಮೊದಲ ಬಾಗವಾಗಿ ಈಗಾಗಲೇ ಕೇಂದ್ರದಿಂದ ಅಧಿಕಾರಿಗಳ ತಂಡ ಜಿಲ್ಲೆಗೆ ಬೇಟಿ ನೀಡಿ ಪ್ರಗತಿಯಲ್ಲಿರುವ ಅಮೃತ ಸರೋವರ ಯೋಜನೆಯ ಕಾಮಗಾರಿಯನ್ನು ಪರಿಶೀಲನೆ ನಡೆಸಿದ್ದಾರೆ ಅನ್ನೋದು ಜಿಲ್ಲಾ ಪಂಚಾಯ್ತಿಸಿ ಸಿಇಓ ಯುಕೇಶ್ ಕುಮಾರ್ ಅವರ ಮಾತು.
ಹಣಕಾಸು ಸಚಿವರ ಅನುದಾನ ಬಳಕೆಗೆ ವಿಶೇಷ ಪ್ಲಾನ್..! ಕೋಲಾರ ಜಿಲ್ಲೆಯ ಮೇಲೆ ವಿಶೇಷ ಕಾಳಜಿ ವಹಿಸಿ ಅನುಧಾನ ಬಿಡುಗಡೆ ಮಾಡಿರುವ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಅವರ ಅನುಧಾನದ ಹಣವನ್ನು ಕೆಲವು ಆಯ್ದ ಕೆರೆಗಳನ್ನು ಸುಂದರೀಕರಣ ಮಾಡಲು ಬಳಸಿಕೊಳ್ಳಲು ನಿರ್ಧಾರಿಸಿದ್ದಾರೆ, ಅದಕ್ಕಾಗಿ ಹೆದ್ದಾರಿ ಪಕ್ಕದಲ್ಲಿರುವ ಕೆರೆಗಳನ್ನು ಶುಚಿಗೊಳಿಸಿ ಸುಂದರೀಕರಣ ಮಾಡಲು ಸಿಇಓ ಯುಕೇಶ್ ಕುಮಾರ್ ಪ್ಲಾನ್ ಮಾಡುತ್ತಿದ್ದಾರೆ.
ಅನೇಕ ನದಿ ನಾಲೆಗಳಿದ್ದ ಕೋಲಾರದ ಮೇಲೆ ಪ್ರಧಾನಿ ಮೋದಿ ಹಾಗೂ ಹಣಕಾಸು ಸಚಿವರು ವಿಶೇಷ ಕಾಳಜಿ ವಹಿಸುವ ಮೂಲಕ ಬರದ ನಾಡು ಕೋಲಾರದ ಕೆರೆಗಳನ್ನು ಅಭಿವೃದ್ದಿ ಪಡಿಸುವ ಕೆಲಸ ಶುರುಮಾಡಿದ್ದಾರೆ. ಅಂದುಕೊಂಡಂತೆ ನಡೆದರೆ ನಿಜಕ್ಕೂ ಜಿಲ್ಲೆಯಲ್ಲೊಂದು ಕೆರೆಗಳ ಅಭಿವೃದ್ದಿ ಕ್ರಾಂತಿ ನಡೆಯೋದರಲ್ಲಿ ಎರಡು ಮಾತಿಲ್ಲ..
-ರಾಜೇಂದ್ರ ಸಿಂಹ