ನೃತ್ಯಾಭ್ಯಾಸ ಮಾಡುವಾಗ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು
ಕೋಲಾರ: ನೃತ್ಯಾಭ್ಯಾಸ ಮಾಡುವಾಗ ವಿದ್ಯಾರ್ಥಿನಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಕೆಜಿಎಫ್ ತಾಲೂಕಿನ ಟಿ.ಗೊಲ್ಲಹಳ್ಳಿಯಲ್ಲಿ ನಡೆದಿದೆ. ಶನಿವಾರ ಶಾಲಾ ವಾರ್ಷಿಕೋತ್ಸವ ಹಿನ್ನೆಲೆ ನೃತ್ಯಾಭ್ಯಾಸ ಮಾಡುತ್ತಿದ್ದ 9ನೇ ತರಗತಿಯಲ್ಲಿ ಓದುತ್ತಿದ್ದ ಪೂಜಿತಾ ಮೃತ ಪಟ್ಟ ವಿದ್ಯಾರ್ಥಿನಿ. ನಿನ್ನೆ ಪೂಜಿತಾ ಶಾಲಾ ಕೊಠಡಿಯಲ್ಲಿ ನೃತ್ಯ ಮಾಡುತ್ತಲೆ ನೆಲಕ್ಕೆ ಕುಸಿದು ಬಿದ್ದಿರುವ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ. ವಿಧ್ಯಾರ್ಥಿನಿ ಕೆಳಗೆ ಕುಸಿದು ಬಿದ್ದರು ಶಿಕ್ಷಕ ಸಹಾಯ ಮಾಡದೆ ಅಮಾನವೀಯತೆ ತೋರಿದ್ದಾನೆ. ದೃಶ್ಯಾವಳಿಯಲ್ಲಿ ಶಿಕ್ಷಕ ಎರಡು ಜೇಬಲ್ಲಿ ಕೈಯಿಟ್ಟು ನಿಂತು ನೋಡ್ತಿದ್ದ ದೃಶ್ಯ ಸೆರೆಯಾಗಿದೆ. […]
ಕೋಲಾರ: ನೃತ್ಯಾಭ್ಯಾಸ ಮಾಡುವಾಗ ವಿದ್ಯಾರ್ಥಿನಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಕೆಜಿಎಫ್ ತಾಲೂಕಿನ ಟಿ.ಗೊಲ್ಲಹಳ್ಳಿಯಲ್ಲಿ ನಡೆದಿದೆ. ಶನಿವಾರ ಶಾಲಾ ವಾರ್ಷಿಕೋತ್ಸವ ಹಿನ್ನೆಲೆ ನೃತ್ಯಾಭ್ಯಾಸ ಮಾಡುತ್ತಿದ್ದ 9ನೇ ತರಗತಿಯಲ್ಲಿ ಓದುತ್ತಿದ್ದ ಪೂಜಿತಾ ಮೃತ ಪಟ್ಟ ವಿದ್ಯಾರ್ಥಿನಿ.
ನಿನ್ನೆ ಪೂಜಿತಾ ಶಾಲಾ ಕೊಠಡಿಯಲ್ಲಿ ನೃತ್ಯ ಮಾಡುತ್ತಲೆ ನೆಲಕ್ಕೆ ಕುಸಿದು ಬಿದ್ದಿರುವ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ. ವಿಧ್ಯಾರ್ಥಿನಿ ಕೆಳಗೆ ಕುಸಿದು ಬಿದ್ದರು ಶಿಕ್ಷಕ ಸಹಾಯ ಮಾಡದೆ ಅಮಾನವೀಯತೆ ತೋರಿದ್ದಾನೆ. ದೃಶ್ಯಾವಳಿಯಲ್ಲಿ ಶಿಕ್ಷಕ ಎರಡು ಜೇಬಲ್ಲಿ ಕೈಯಿಟ್ಟು ನಿಂತು ನೋಡ್ತಿದ್ದ ದೃಶ್ಯ ಸೆರೆಯಾಗಿದೆ. ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.