ಇಂಗ್ಲಿಷ್ ಸಬ್ಜೆಕ್ಟ್​ನಲ್ಲಿ ಫೇಲ್ ಆದ ಯುವಕನೇ ಇಂದು ಇಂಗ್ಲಿಷ್ ಪಂಡಿತ; ಇದೊಂದು ಸ್ಪೂರ್ತಿದಾಯಕ ಸ್ಟೋರಿ

| Updated By: preethi shettigar

Updated on: Jan 21, 2022 | 7:47 PM

ರಮೇಶ್​ ಚೆನ್ನಾಗಿ ಇಂಗ್ಲಿಷ್​​ ಕಲಿತ ಮೇಲೆ ಮಲೇಷಿಯಾ, ಸಿಂಗಾಪುರಗಳಲ್ಲಿ ಟೂರ್​ ಗೈಡಾಗಿ ಕೆಲಸ ಮಾಡಿದ್ದಾನೆ. ಹತ್ತಾರು ಸರ್ಕಾರಿ ಕಾಲೇಜುಗಳಿಗೆ ಇಂಗ್ಲಿಷ್​ ​ ರಿಸೋರ್ಸ್​ ಪರ್ಸ್​ನ್​ ಆಗಿದ್ದಾನೆ. ಅಷ್ಟೇ ಅಲ್ಲದೆ ಇವರ ಬಳಿ ಇಂಗ್ಲಿಷ್​​ ಶಿಕ್ಷಕರು, ಇಂಗ್ಲಿಷ್​​ ಉಪನ್ಯಾಸಕರು, ಪೊಲೀಸ್​ ಅಧಿಕಾರಿಗಳು, ಕೆಎಎಸ್,​ ಅಧಿಕಾರಿಗಳು ಕೂಡಾ ಇಂಗ್ಲಿಷ್​​ ಕಲಿಯುವುದಕ್ಕೆ ಬರುತ್ತಾರೆ.

ಇಂಗ್ಲಿಷ್ ಸಬ್ಜೆಕ್ಟ್​ನಲ್ಲಿ ಫೇಲ್ ಆದ ಯುವಕನೇ ಇಂದು ಇಂಗ್ಲಿಷ್ ಪಂಡಿತ; ಇದೊಂದು ಸ್ಪೂರ್ತಿದಾಯಕ ಸ್ಟೋರಿ
ರಮೇಶ್
Follow us on

ಕೋಲಾರ: ಪಿಯುಸಿಯಲ್ಲಿ (PUC) ಇಂಗ್ಲಿಷ್ ವಿಷಯದಲ್ಲಿ​ ಫೇಲ್​​ ಆಗಿ ಕೂಲಿ ಕೆಲಸ ಮಾಡಲು ಹೋಗಿದ್ದ ಯುವಕ, ಸೋತಲ್ಲೇ ಮತ್ತೆ ಎದ್ದು ನಿಲ್ಲಬೇಕೆಂದು ಹಠದಿಂದ ಹೋರಾಟ ನಡೆಸಿದ್ದಾನೆ. ಪರಿಣಾಮ ಇಂದು ತನಗೆ ಪಾಠ ಕಲಿಸಿದ ಗುರುಗಳಿಗೆ ಇಂಗ್ಲಿಷ್ (English) ​ ಹೇಳಿಕೊಡುವಷ್ಟರ ಮಟ್ಟಿಗೆ ಬೆಳೆದಿದ್ದಾನೆ. ಅಷ್ಟೇ ಅಲ್ಲ ಇಂಗ್ಲಿಷ್ ​ ಕಲಿಯಲು ತನ್ನದೇ ಸೂತ್ರಗಳನ್ನು ಬರೆದು ವಿಶ್ವದಾಖಲೆ (World record) ಮಾಡಿದ್ದಾನೆ. ಸೌತ್​ ಆಫ್ರಿಕಾ, ಅಮೇರಿಕಾ, ಸಿಂಗಾಪುರ, ಮಲೇಷಿಯಾ, ಶೈಲಿ​ಯಲ್ಲಿ ಇಂಗ್ಲಿಷ್​ ಮಾತನಾಡಬಲ್ಲ ಈತನ ಇಂಗ್ಲಿಷ್​ ಪಾಂಡಿತ್ಯಕ್ಕೆ ಸಿಕ್ಕಿರುವ ಗೌರವ ಹಾಗೂ ವಿಶ್ವದಾಖಲೆಗಳು ಹತ್ತು ಹಲವು. ಇಲ್ಲಿದೆ ಕೋಲಾರ ಜಿಲ್ಲೆಯ ಯುವಕನ ಸ್ಪೂರ್ತಿದಾಯಕ ಕಥೆ.

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಉಪ್ಪಾರಹಳ್ಳಿಯ ಬಡ ಕುಟುಂಬದಲ್ಲಿ ಹುಟ್ಟಿದ ರಮೇಶ್​ ಎಂಬ ಯುವಕ ಕಳೆದ ಹತ್ತು ವರ್ಷಗಳ ಹಿಂದೆ ಇಂಗ್ಲಿಷ್​ ವಿಷಯದಲ್ಲಿ ಪಿಯುಸಿಯಲ್ಲಿ ಪೇಲ್​ ಆಗಿದ್ದ. ಆಗ ಬೇರೆ ದಾರಿ ಕಾಣದೆ ಮಾಲೂರು ಸೇರಿ ಹಲವೆಡೆ ಕೂಲಿ ಕೆಲಸಕ್ಕೆ ಹೊಗಿದ್ದಾನೆ. ಸುಮಾರು ತಿಂಗಳುಗಳ ಕಾಲ ಕೂಲಿಕೆಲಸ ಮಾಡಿಕೊಂಡಿದ್ದ ರಮೇಶ್​ ಸಾಕಷ್ಟು ಅವಮಾನಗಳಿಂದ ನೊಂದಿದ್ದನು. ಇದರಿಂದ ತಾನು ಎಲ್ಲಿ ಸೋತಿದ್ದೇನೋ ಅಲ್ಲಿಂದೆ ಮೇಲೆದ್ದು ಬರಬೇಕೆಂದು ನಿರ್ಧರಿಸಿ ಹೊರಟು ಇಂದು ತನ್ನ ಗುರಿ ತಲುಪುವಲ್ಲಿ ಯಶಸ್ವಿಯಾಗಿದ್ದಾನೆ.

ಬಡತನದಲ್ಲೂ ಹಠ ಬಿಡದೆ ಗೆದ್ದು ಬಂದ ಯುವಕ

ರಮೇಶ್​ ತನ್ನ ಗುರಿಯ ಬೆನ್ನೇರಿ ಹೊರಟಾಗ ಹತ್ತಾರು ಅಡೆ ತಡೆಗಳು ಬಂದಿವೆ. ಆದೆಲ್ಲವನ್ನು ಮೆಟ್ಟಿನಿಂತು ರಮೇಶ್​ ಹಣವಿಲ್ಲದೆ ಮೊದಲು ತನ್ನ ಅಕ್ಕನ ಚಿನ್ನದ ಉಂಗುರುವನ್ನು ಮಾರಿ ಟ್ಯೂಷನ್​ಗೆ ಸೇರಿ ಪಿಯುಸಿ ಪಾಸ್​ ಮಾಡಿದ್ದಾನೆ. ನಂತರ ರಮೇಶ್​ ಬೆಂಗಳೂರಿನಲ್ಲಿ ಪದವಿ ತರಗತಿಗೆ ಸೇರಿ ಅಲ್ಲೇ ಇಂಗ್ಲಿಷ್​ ಕಲಿಯುವುದಕ್ಕೆ ಶುರು ಮಾಡಿದ್ದ ಆಗ ಅಲ್ಲಿ ತನಗೆ ಸಿಕ್ಕ ಗೆಳೆಯರು ಹಾಗೂ ಪ್ರಾದ್ಯಾಪರುಗಳ ಸಹಾಯದಿಂದ ಹಠಕ್ಕೆ ಬಿದ್ದವನಂತೆ ಹಗಲು ರಾತ್ರಿ ಇಂಗ್ಲಿಷ್​ ​ ಪಠಣೆ ಮಾಡಲು ಶುರು ಮಾಡಿಕೊಂಡಿದ್ದಾನೆ ಪರಿಣಾಮ ಇಂದು ರಮೇಶ್​ ಇಂಗ್ಲೀಷ್​ ಪಂಡಿತನಾಗಿದ್ದಾನೆ.

ಮಲೇಷಿಯಾ ಸಿಂಗಾಪುರಗಳಲ್ಲಿ ಕೆಲಸ ಮಾಡಿದ ಅನುಭವ ಇದೆ!

ರಮೇಶ್​ ಚೆನ್ನಾಗಿ ಇಂಗ್ಲಿಷ್​​ ಕಲಿತ ಮೇಲೆ ಮಲೇಷಿಯಾ, ಸಿಂಗಾಪುರಗಳಲ್ಲಿ ಟೂರ್​ ಗೈಡಾಗಿ ಕೆಲಸ ಮಾಡಿದ್ದಾನೆ. ಹತ್ತಾರು ಸರ್ಕಾರಿ ಕಾಲೇಜುಗಳಿಗೆ ಇಂಗ್ಲಿಷ್​ ​ ರಿಸೋರ್ಸ್​ ಪರ್ಸ್​ನ್​ ಆಗಿದ್ದಾನೆ. ಅಷ್ಟೇ ಅಲ್ಲದೆ ಇವರ ಬಳಿ ಇಂಗ್ಲಿಷ್​​ ಶಿಕ್ಷಕರು, ಇಂಗ್ಲಿಷ್​​ ಉಪನ್ಯಾಸಕರು, ಪೊಲೀಸ್​ ಅಧಿಕಾರಿಗಳು, ಕೆಎಎಸ್,​ ಅಧಿಕಾರಿಗಳು ಕೂಡಾ ಇಂಗ್ಲಿಷ್​​ ಕಲಿಯುವುದಕ್ಕೆ ಬರುತ್ತಾರೆ.

ಗೂಗಲ್​ನಲ್ಲೂ ಸಿಗದ 5000 ಸೂತ್ರಗಳನ್ನು ಬರೆದು ವಿಶ್ವ ದಾಖಲೆ ಮಾಡಿರುವ ರಮೇಶ್​!

ರಮೇಶ್​ ಇಂಗ್ಲಿಷ್​​ ಕಲಿಯೋದಕ್ಕೆ ಹಾಗೂ ಇಂಗ್ಲಿಷ್​​ ಕಲಿಸೋದಕ್ಕೆ ತನ್ನದೇ ಕೆಲವು ಸೂತ್ರಗಳನ್ನು ಮಾಡಿಕೊಂಡಿದ್ದಾನೆ. ನಿಮಗೆ ಗೂಗಲ್​ನಲ್ಲೂ ಸಿಗದ ಸುಮಾರು ಇಂಗ್ಲಿಷ್​​ನ 5000 ಸೂತ್ರಗಳನ್ನು ಬರೆದು ಹಲವು ವಿಶ್ವದಾಖಲೆಗಳನ್ನು ಮಾಡಿದ್ದಾನೆ. ಈ ಸೂತ್ರಗಳ ಅಡಿಯಲ್ಲೇ ರಮೇಶ್​ ಯಾರಿಗೆ ಬೇಕಾದರು ಸುಲಭವಾಗಿ ಇಂಗ್ಲಿಷ್​ ಹೇಳಿಕೊಡಬಲ್ಲ ಇಂಗ್ಲಿಷ್​ ​ ಪಂಡಿತನಾಗಿ ಹೆಸರುವಾಸಿಯಾಗಿದ್ದಾನೆ.

ರಮೇಶ್​ ಸಾಧನೆಗೆ ಸಿಕ್ಕಿವೆ ಹತ್ತು ಹಲವು ದಾಖಲೆಗಳು

ಇಷ್ಟಕ್ಕೇ ನಿಲ್ಲದ ರಮೇಶ್​ರವರ ಇಂಗ್ಲಿಷ್​ ಪ್ರತಿಭೆ ತನ್ನ ಇಂಗ್ಲಿಷ್​​ ಸೂತ್ರಗಳಿಂದಲೇ ಅಮೇರಿಕಾ ಬುಕ್​ ಆಫ್​ ರೆಕಾರ್ಡ್​, ಇಂಡಿಯಾ ಬುಕ್​ ಆಫ್​ ರೆಕಾರ್ಡ್​, ಎಕ್ಸ್ಲೂಸಿವ್​ ವರ್ಡ್​ ರೆಕಾರ್ಡ್​, ಬ್ರಾವೋ ಇಂಟರ್​ನ್ಯಾಷನಲ್​ ಬುಕ್​ ಆಫ್​ ರೆಕಾರ್ಡ್​, ಹೈರೇಂಜ್​ ಬುಕ್​ ಆಫ್​​ ವರ್ಡ್​ ರೆಕಾರ್ಡ್​, ಇಂಟರ್​ನ್ಯಾಷನಲ್​ ಬುಕ್​ ಆಫ್​ ರೆಕಾರ್ಡ್​, ಫೆಂಟಾಸ್ಟಿಕ್​ ಅಚೀವ್​ಮೆಂಟ್​ ಅವಾರ್ಡ್​, ಮಾರ್ವಲೆಸ್​ ಬುಕ್​ ಆಫ್​ ರೆಕಾರ್ಡ್ ಹೀಗೆ 4 ಅಂತರಾಷ್ಟ್ರೀಯ ದಾಖಲೆ, 8 ರಾಷ್ಟ್ರ ಮಟ್ಟದ ದಾಖಲೆಗಳನ್ನು ಮಾಡಿದ್ದಾನೆ. ಅಷ್ಟೇ ಯಾಕೆ ರಮೇಶ್​ ಸುಮಾರು ಸೌತ್​ ಆಫ್ರಿಕಾ, ಅಮೆರಿಕಾ, ಇಂಗ್ಲೆಂಡ್​, ಮಲೇಷಿಯಾ, ಸಿಂಗಾಪುರ್​, ಜಪಾನ್​, ಸೇರಿದಂತೆ 14 ದೇಶಗಳ ಶೈಲಿಯಲ್ಲಿ ಇಂಗ್ಲಿಷ್​ ಮಾತನಾಡುವ ಕಲೆಯನ್ನು ಮೈಗೂಡಿಸಿಕೊಂಡಿದ್ದಾನೆ.

ತನ್ನ ತವರಲ್ಲೇ ಇಂಗ್ಲಿಷ್​ ಕಲಿಸುವ ಕಾಯಕ ಮಾಡಿಕೊಂಡು ಸೇವೆ

ಇಷ್ಟೇಲ್ಲಾ ಬುದ್ಧಿವಂತಿಕೆ​ ಇರುವ ರಮೇಶ್​ಗೆ ಲಕ್ಷಾಂತರ ರೂಪಾಯಿ ಸಂಬಳ ಸಿಗುವ ಕೆಲಸ ಸಿಗುತ್ತದೆ. ಹಲವಾರು ಕಂಪನಿಗಳು ಆಫರ್​ ಮಾಡಿದ್ದಾರೆ. ಆದರೆ ಅದ್ಯಾವುದನ್ನೂ ಲೆಕ್ಕಕ್ಕಿಡದ ರಮೇಶ್​ ತನ್ನ ತವರಲ್ಲೇ ಏನಾದರೂ ಮಾಡಬೇಕು ಎಂದು ನಿರ್ಧಾರ ಮಾಡಿದ್ದಾನೆ. ಡೆಪೋಡೈಲ್ಸ್​ ಇಂಗ್ಲಿಷ್​ ಅಕಾಡೆಮಿ ಅನ್ನೋ ಸಂಸ್ಥೆಯನ್ನು ಕಟ್ಟಿ ಅದರಲ್ಲಿ ಆಸಕ್ತರಿಗೆ ಇಂಗ್ಲಿಷ್​ ಹೇಳಿಕೊಡುತ್ತಾ ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ಇಲ್ಲಿ ಸರ್ಕಾರಿ ಶಾಲೆ ಶಿಕ್ಷಕರು, ಪ್ರಾದ್ಯಾಪಕರು, ಅಧಿಕಾರಿಗಳು, ಪೊಲೀಸ್​ ಅಧಿಕಾರಿಗಳು, ವಿದ್ಯಾರ್ಥಿಗಳು, ಜನಪ್ರತಿನಿಧಿಗಳಿಗೆ ಸುಲಭವಾಗಿ ಇಂಗ್ಲಿಷ್​ ಹೇಳಿಕೊಡುವ ಮೂಲಕ ಇಂಗ್ಲಿಷ್​ ಕಲಿಸುವುದನ್ನೇ ತನ್ನ ಜೀವನದ ಕೆಲಸವನ್ನಾಗಿ ರೂಪಿಸಿಕೊಂಡಿದ್ದಾರೆ. ಇನ್ನು ಇವರ ಬಳಿ ಇಂಗ್ಲಿಷ್​ ಕಲಿತಿರುವ ಅದೆಷ್ಟೋ ಜನರು ಕೂಡಾ ತಮ್ಮ ಜೀವನವನ್ನೇ ಉಜ್ವಲವಾಗಿಸಿಕೊಂಡಿದ್ದಾರೆ.

ಒಟ್ಟಾರೆ ಮನಸ್ಸಿದ್ದರೆ ಮಾರ್ಗ ಜೀವನದಲ್ಲಿ ಹಠವೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎನ್ನುವುದಕ್ಕೆ ಹಳ್ಳಿ ಹುಡುಗ ರಮೇಶ್​ ಸಾಕ್ಷಿ. ಇಂಗ್ಲಿಷ್​ನಲ್ಲೇ ಫೇಲ್​​ ಆಗಿ ಇಂದು ಗೂಗಲ್​ಗೆ ಇಂಗ್ಲಿಷ್​ ಹೇಳಿಕೊಡುವಷ್ಟರ ಮಟ್ಟಿಗೆ ಸಾಧನೆ ಮಾಡಿದ್ದಾರೆ. ಅಂದರೆ ಅದು ನಿಜಕ್ಕೂ ತಮಾಷೆಯ ಮಾತಲ್ಲ. ರಮೇಶ್ ​ಅವರ ಬೆಟ್ಟದಷ್ಟು ಸಾಧನೆಯ ಹಿಂದೆ ಬೆಟ್ಟದಷ್ಟು ಪರಿಶ್ರಮವೂ ಇದೆ.

ವರದಿ : ರಾಜೇಂದ್ರ ಸಿಂಹ

ಇದನ್ನೂ ಓದಿ:

Writer : ‘ಇಂಗ್ಲಿಷ್​ನಲ್ಲಿ ಬರೆದಿದ್ದರೆ ಇಷ್ಟು ಹೊತ್ತಿಗೆ ನನಗೆ ಕೆಲವು ಪ್ರಶಸ್ತಿಗಳು ಬರುತ್ತಿದ್ದವು!’ ಲೇಖಕ ಮಹಾಬಲೇಶ್ವರ ರಾವ್ ಬೇಸರ

ಸೋತು ಸೋತು ದಾಖಲೆ ನಿರ್ಮಿಸುತ್ತೇನೆ ಎನ್ನುತ್ತಾರೆ ಈ ವೃದ್ಧ; ತಮ್ಮ 94ನೇ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಸ್ವತಂತ್ರ ಅಭ್ಯರ್ಥಿ