10ನೇ ತರಗತಿ ಇಂಗ್ಲಿಷ್ ಪರೀಕ್ಷೆ ಪತ್ರಿಕೆಯ ವಿವಾದಿತ ಪ್ಯಾರಾಗ್ರಾಫ್ ಕೈಬಿಟ್ಟ ಸಿಬಿಎಸ್ಇ, ವಿದ್ಯಾರ್ಥಿಗಳಿಗೆ ಈ ಪ್ರಶ್ನೆ ಬದಲು ಪೂರ್ಣ ಅಂಕ ನೀಡಲು ನಿರ್ಧಾರ

ಶನಿವಾರ ನಡೆದ 10 ನೇ ತರಗತಿಯ ಇಂಗ್ಲಿಷ್ ಮೊದಲ ಅವಧಿ ಬೋರ್ಡ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಒಂದು ಸೆಟ್‌ನಲ್ಲಿ ಈ ಪ್ಯಾರಾಗ್ರಾಫ್ ಕಾಣಿಸಿಕೊಂಡಿದೆ. ಮೂರು-ಪ್ಯಾರಾಗ್ರಾಫ್​​ಗಳಲ್ಲಿ ಮಹಿಳೆಯರ ವಿರುದ್ಧ ,ಲಿಂಗ ಅಸಮಾನತೆಯ ಅಂಶಗಳು ಕಾಣಿಸಿದ್ದು ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು

10ನೇ ತರಗತಿ ಇಂಗ್ಲಿಷ್ ಪರೀಕ್ಷೆ ಪತ್ರಿಕೆಯ ವಿವಾದಿತ  ಪ್ಯಾರಾಗ್ರಾಫ್ ಕೈಬಿಟ್ಟ ಸಿಬಿಎಸ್ಇ, ವಿದ್ಯಾರ್ಥಿಗಳಿಗೆ ಈ ಪ್ರಶ್ನೆ ಬದಲು ಪೂರ್ಣ ಅಂಕ ನೀಡಲು ನಿರ್ಧಾರ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 13, 2021 | 3:48 PM

ದೆಹಲಿ: ಸಿಬಿಎಸ್ಇ (CBSE) ತನ್ನ 10 ನೇ ತರಗತಿಯ ಇಂಗ್ಲಿಷ್ ಬೋರ್ಡ್ ಪರೀಕ್ಷೆಯ ಪತ್ರಿಕೆಯಿಂದ (English board exam paper) ವಿವಾದಿತ ಪ್ಯಾರಾಗ್ರಾಫ್ ಕೈ ಬಿಟ್ಟಿದ್ದು, ಆ ಪ್ರಶ್ನೆಗಳಿಗೆ ಎಲ್ಲಾ ವಿದ್ಯಾರ್ಥಿಗಳಿಗೆ ಪೂರ್ಣ ಅಂಕಗಳನ್ನು ನೀಡಲಾಗುವುದು ಎಂದು ಹೇಳಿದೆ . ಶನಿವಾರ ನಡೆದ 10 ನೇ ತರಗತಿಯ ಇಂಗ್ಲಿಷ್ ಮೊದಲ ಅವಧಿ ಬೋರ್ಡ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಒಂದು ಸೆಟ್‌ನಲ್ಲಿ ಈ ಪ್ಯಾರಾಗ್ರಾಫ್ ಕಾಣಿಸಿಕೊಂಡಿದೆ. ಮೂರು-ಪ್ಯಾರಾಗ್ರಾಫ್​​ಗಳಲ್ಲಿ ಮಹಿಳೆಯರ ವಿರುದ್ಧ ,ಲಿಂಗ ಅಸಮಾನತೆಯ ಅಂಶಗಳು ಕಾಣಿಸಿದ್ದು ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ಕೊನೆಯ ಪ್ಯಾರಾಗ್ರಾಫ್ ನಲ್ಲಿ  “ಮಹಿಳೆಯರಿಗೆ ನೀಡುವ ವಿಮೋಚನೆ (ಸ್ವಾತಂತ್ರ್ಯ) ಮಕ್ಕಳ ಮೇಲಿನ ಪಾಲಕರ ಅಧಿಕಾರ ನಾಶ ಮಾಡುತ್ತದೆ ಎಂಬುದನ್ನು ಜನರು ಗ್ರಹಿಸಿಕೊಳ್ಳಲು ಹಿಂದೆಬಿದ್ದಿದ್ದರು. ಪುರುಷನನ್ನುಆತನ ಸ್ಥಾನದಿಂದ ಕೆಳಗಿಳಿಸುವಲ್ಲಿ ಮಹಿಳೆಯರು ತಮ್ಮನ್ನು ತಾವು ಕಳೆದುಕೊಂಡರು. ಆದರೆ ಮಹಿಳೆಯರು ತಮ್ಮ ಪತಿಯ ಮಾರ್ಗವನ್ನು ಅನುಸರಿಸುವ ಮೂಲಕ ಮಾತ್ರ ಕಿರಿಯರಿಂದ ವಿಧೇಯತೆಯನ್ನು ಗಳಿಸಬಹುದು ಎಂದು ಇದೆ. ಟೀಕೆಗಳ ನಂತರ, ಮಂಡಳಿಯು ವಿಷಯವನ್ನು ತಜ್ಞರ ಸಮಿತಿಯ ಗಮನಕ್ಕೆ ತಂದಿದ್ದು ಸೋಮವಾರದಂದು ಸುತ್ತೋಲೆ ಹೊರಡಿಸಿ ಪ್ಯಾರಾಗ್ರಾಫ್ ಕೈಬಿಡಲಾಗಿದೆ ಎಂದು ತಿಳಿಸಿದೆ. ಪ್ರಶ್ನೆ ಪತ್ರಿಕೆಗಳ ಸೆಟ್ಟಿಂಗ್‌ಗೆ ಸಂಬಂಧಿಸಿದಂತೆ ಬೋರ್ಡ್‌ನ ಮಾರ್ಗಸೂಚಿಗಳಿಗೆ ಅನುಗುಣವಾಗಿಲ್ಲ ಎಂಬ ಪ್ಯಾರಾಗ್ರಾಫ್ ನ್ನು ಗಮನಿಸಿ, “ಪ್ಯಾಸೇಜ್ ಸಂಖ್ಯೆ 1 ಅನ್ನು ಕೈಬಿಡಲು ನಿರ್ಧರಿಸಲಾಗಿದೆ” ಎಂದು ಅದು ಹೇಳಿದೆ. 1 ಮತ್ತು ಪ್ರಶ್ನೆ ಪತ್ರಿಕೆ ಸರಣಿಯ JSK / 1 ರ ಅದರ ಜೊತೆಗಿನ ಪ್ರಶ್ನೆಗಳಿಗೆ ಎಲ್ಲಾ ವಿದ್ಯಾರ್ಥಿಗಳಿಗೆ ಪೂರ್ಣ ಅಂಕಗಳನ್ನು ನೀಡಲಾಗುವುದು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಇತರ ಪ್ರಶ್ನೆಪತ್ರಿಕೆ ಸೆಟ್‌ಗಳಲ್ಲಿ ವಿಭಿನ್ನ ಪ್ಯಾಸೇಜ್‌ಗಳು ಕಾಣಿಸಿಕೊಂಡಿರುವುದರಿಂದ ಪ್ಯಾಸೇಜ್ ನಂ. 10 ನೇ ತರಗತಿ ಸಿಬಿಎಸ್ಇ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ಎಲ್ಲಾ ಸೆಟ್‌ಗಳಿಗೆ ಪೂರ್ಣ ಅಂಕ ನೀಡಲಾಗುವುದು.ಇದಕ್ಕೂ ಮುನ್ನ ಸೋಮವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 10 ನೇ ತರಗತಿ ಸಿಬಿಎಸ್‌ಇ ಪರೀಕ್ಷೆಯ ಇಂಗ್ಲಿಷ್ ಪತ್ರಿಕೆಯಲ್ಲಿ ಲಿಂಗ-ಅಸಮಾನತೆಯ ಪ್ಯಾರಾಗ್ರಾಫ್ ಹಿಂಪಡೆಯುವಂತೆ ಒತ್ತಾಯಿಸಿದರು. ಈ ವಿಷಯವನ್ನು ಎತ್ತಿ ಹಿಡಿದು ಪ್ರತಿಪಕ್ಷಗಳು ಲೋಕಸಭೆಯಲ್ಲಿ ಸಭಾತ್ಯಾಗ ನಡೆಸಿದವು.

ಸಂಸತ್ತಿನಲ್ಲಿ ವಿವಿಧ ಪಕ್ಷಗಳು ಈ ಪ್ಯಾರಾಗ್ರಾಫ್ ” ಸ್ತ್ರೀದ್ವೇಷದಿಂದ ಮತ್ತು ಅಸಹ್ಯದಿಂದ ಕೂಡಿದ್ದುಎಂದು ಹೇಳಿದವು. ಕಾಂಗ್ರೆಸ್ ನೇತೃತ್ವದಲ್ಲಿ ಡಿಎಂಕೆ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ನ್ಯಾಷನಲ್ ಕಾನ್ಫರೆನ್ಸ್ ಸದಸ್ಯರು ಲೋಕಸಭೆಯಲ್ಲಿ ಈ ವಿಷಯವಾಗಿ ವಾಕ್‌ಔಟ್ ನಡೆಸಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ವಿಷಯವನ್ನು ಪ್ರಸ್ತಾಪಿಸಿ ಸ್ತ್ರೀದ್ವೇಷವನ್ನು ಖಂಡಿಸಿದರು ಮತ್ತು ನರೇಂದ್ರ ಮೋದಿ ಸರ್ಕಾರದಿಂದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಆಕ್ಷೇಪಾರ್ಹ ಪ್ರಶ್ನೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಮತ್ತು “ಗಂಭೀರ ಲೋಪ” ಕ್ಕೆ ಕಾರಣವಾದ ಬಗ್ಗೆ ಪರಿಶೀಲನೆಗೆ ಆದೇಶಿಸಬೇಕು ಎಂದು ಅವರು ಹೇಳಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಟ್ವೀಟ್‌ನಲ್ಲಿ ಈ ಪ್ಯಾರಾಗ್ರಾಫ್ ನ್ನು ಅಸಹ್ಯಕರ ಎಂದು ಬಣ್ಣಿಸಿದ್ದಾರೆ. ಅಂತಹ ನಡೆಗಳು “ಯುವಕರ ನೈತಿಕತೆ ಮತ್ತು ಭವಿಷ್ಯವನ್ನು ಹತ್ತಿಕ್ಕುವ ವಿಶಿಷ್ಟವಾದ ಆರ್‌ಎಸ್‌ಎಸ್-ಬಿಜೆಪಿ ತಂತ್ರಗಳು” ಎಂದು ಹೇಳಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ “ನಂಬಲಾಗುತ್ತಿಲ್ಲ! ನಾವು ನಿಜವಾಗಿಯೂ ಮಕ್ಕಳಿಗೆ ಈ ಪ್ರೇರಣೆಯನ್ನು ಕಲಿಸುತ್ತಿದ್ದೇವೆಯೇ? ಸ್ಪಷ್ಟವಾಗಿ ಬಿಜೆಪಿ ಸರ್ಕಾರವು ಮಹಿಳೆಯರ ಮೇಲಿನ ಈ ಹಿಮ್ಮುಖ ದೃಷ್ಟಿಕೋನಗಳನ್ನು ಅನುಮೋದಿಸುತ್ತದೆ, ಇಲ್ಲದಿದ್ದರೆ ಇದು ಸಿಬಿಎಸ್ಇ ಪಠ್ಯಕ್ರಮದಲ್ಲಿ ಏಕೆ ಕಾಣಿಸಿಕೊಳ್ಳಬೇಕು ಎಂದು ಅವರು ಟ್ವೀಟ್ ಮಾಡಿದ್ದಾರೆ.

ಟ್ರೆಂಡ್ ಆದ #CBSEinsultswomen   ಸಿಬಿಎಸ್​ಇ ಪ್ರಶ್ನೆ ಪತ್ರಿಕೆಯ ಪ್ಯಾರಾಗ್ರಾಫ್​​ಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆ #CBSEinsultswomen ಎಂಬ ಹ್ಯಾಷ್​ಟ್ಯಾಗ್​ ವಿಪರೀತ ವೈರಲ್ ಆಗುತ್ತಿದೆ. ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ ಸ್ತ್ರೀದ್ವೇಷ ಮತ್ತು ಪ್ರತಿಗಾಮಿ ಅಭಿಪ್ರಾಯಗಳನ್ನು ಬಿತ್ತುತ್ತಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಕೂಡ ಈ ಬಗ್ಗೆ ಟ್ವೀಟ್ ಮಾಡಿ ಅಸಹ್ಯ ಎಂದಿದ್ದಾರೆ. ಬಿಜೆಪಿ ಮತ್ತು ಆರ್​ಎಸ್​ಎಸ್​ ವಿರುದ್ಧ ಕಿಡಿಕಾರಿದ್ದಾರೆ. ಈ ಬೆನ್ನಲ್ಲೇ ಸಿಬಿಎಸ್​ಇ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿ, ಸಿಬಿಎಸ್​ಇ 10ನೇ ತರಗತಿ ಇಂಗ್ಲಿಷ್​ ಪತ್ರಿಕೆಯಲ್ಲಿ ಇರುವ ಪ್ರಸ್ತುತ ಪ್ಯಾಸೇಜ್​ಗೆ ಗರಿಷ್ಠ ಮಟ್ಟದಲ್ಲಿ ಮಿಶ್ರಣ ಪ್ರತಿಕ್ರಿಯೆ ಬಂದಿದೆ. ಸಂಬಂಧಪಟ್ಟ ವಿಷಯ ತಜ್ಞರ ಗಮನಕ್ಕೂ ಇದು ಬಂದಿದೆ ಎಂದು ಹೇಳಿದ್ದರು

ಇದನ್ನೂ ಓದಿ: ಸಿಬಿಎಸ್​ಇ 10ನೇ ತರಗತಿ ಪ್ರಶ್ನೆ ಪತ್ರಿಕೆ ವಿರುದ್ಧ ಪ್ರಿಯಾಂಕಾ ಗಾಂಧಿ, ನೆಟ್ಟಿಗರ ಕಿಡಿ; ಟ್ರೆಂಡ್ ಆಯ್ತು ಸ್ತ್ರೀನಿಂದಕ ಸಿಬಿಎಸ್​ಇ ಎಂಬ ಹ್ಯಾಷ್​ಟ್ಯಾಗ್​

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ