ಕೋಲಾರದಲ್ಲಿ ರಾತ್ರೋರಾತ್ರಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ! ವಿವಾದ ಕೇಂದ್ರವಾದ ಮಾಲೂರಿನ ಬಾಲಾಜಿ ಸರ್ಕಲ್

| Updated By: sandhya thejappa

Updated on: Jun 26, 2022 | 2:17 PM

ಕೆಂಪೇಗೌಡ ಜಯಂತಿ ಹತ್ತಿರವಾಗುತ್ತಿದ್ದಂತೆ ದಿಢೀರ್ ಆಗಿ ಕೆಂಪೇಗೌಡ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಮಾಲೂರು ಬಾಲಾಜಿ ವೃತ್ತ ವಿವಾದಿತ ಕೇಂದ್ರವಾಗಿ ಪರಿಣಮಿಸಿದೆ.

ಕೋಲಾರದಲ್ಲಿ ರಾತ್ರೋರಾತ್ರಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ! ವಿವಾದ ಕೇಂದ್ರವಾದ ಮಾಲೂರಿನ ಬಾಲಾಜಿ ಸರ್ಕಲ್
ಸ್ಥಾಪನೆಗೊಂಡ ಕೆಂಪೇಗೌಡ ಪ್ರತಿಮೆ
Follow us on

ಕೋಲಾರ: ಜಿಲ್ಲೆಯ ಮಾಲೂರು ಪಟ್ಟಣದ ಬಾಲಾಜಿ ವೃತ್ತದಲ್ಲಿ ಅಪರಿಚಿತರು ರಾತ್ರೋರಾತ್ರಿ ಕೆಂಪೇಗೌಡ ಪ್ರತಿಮೆಯನ್ನು (Kempegowda Statue) ಸ್ಥಾಪನೆ ಮಾಡಿದ್ದಾರೆ. ಡಾ.ರಾಜ್ಕುಮಾರ್ (Dr Rajkumar), ರಾಯಣ್ಣ ಪ್ರತಿಮೆ ಇಡಬೇಕೆಂದು ಈ ಹಿಂದೆ ಪುರಸಭೆಯಲ್ಲಿ ಪ್ರಸ್ತಾಪವಿತ್ತು. ಕೆಂಪೇಗೌಡ ಜಯಂತಿ ಹತ್ತಿರವಾಗುತ್ತಿದ್ದಂತೆ ದಿಢೀರ್ ಆಗಿ ಕೆಂಪೇಗೌಡ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಮಾಲೂರು ಬಾಲಾಜಿ ವೃತ್ತ ವಿವಾದಿತ ಕೇಂದ್ರವಾಗಿ ಪರಿಣಮಿಸಿದೆ. ಸ್ಥಾಪಿಸಲಾದ ಪ್ರತಿಮೆಯನ್ನು ತೆರವು ಮಾಡಲಾಗುತ್ತದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ಕಳೆದ ಕೆಂಪೇಗೌಡ ದಿನಾಚರಣೆ ಪೂರ್ವ ಬಾವಿ ಸಭೆಯಲ್ಲಿ ಪ್ರತಿಮೆ ಸ್ಥಾಪನೆ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಸುಪ್ರೀಂಕೋರ್ಟ್ ನಿರ್ದೇಶನದಂತೆ ಪ್ರತಿಮೆಗಳನ್ನು ಪ್ರತಿಷ್ಠಾಪನೆ ಮಾಡಲು ಜಿಲ್ಲಾಡಳಿತದ ಅನುಮತಿ ಅಗತ್ಯ. ಹೀಗಾಗಿ ಅಪರಿಚಿತರು ರಾತ್ರೋರಾತ್ರಿ ಪ್ರತಿಮೆಯನ್ನು ತಂದು ಇಟ್ಟಿದ್ದಾರೆ. ಇದು ಕಾನೂನು ಬಾಹಿರ. ಕಾನೂನಿನ ಅನ್ವಯ ತೆರವು ಮಾಡಲು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತೆರವು ಮಾಡಲಾಗುತ್ತದೆ ಎಂದು ತಹಶೀಲ್ದಾರ್ ಮಂಜುನಾಥ್ ಟಿವಿ9ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Bypoll Vote Counting: ಉತ್ತರ ಪ್ರದೇಶದಲ್ಲಿ ಎಸ್​ಪಿ, ಪಂಜಾಬ್​​ನಲ್ಲಿ ಆಪ್​ಗೆ ಹಿನ್ನಡೆ, ಬಿಜೆಪಿಗೆ ಮುನ್ನಡೆ

ಇದನ್ನೂ ಓದಿ
Ben Stokes: ಸಿಕ್ಸರ್​ಗಳ ಸರದಾರ: ಟೆಸ್ಟ್ ಕ್ರಿಕೆಟ್​ನಲ್ಲಿ ನೂತನ ದಾಖಲೆ ಬರೆದ ಬೆನ್ ಸ್ಟೋಕ್ಸ್
ಅಲ್ಲು ಅರ್ಜುನ್​ಗೆ ಬಾಡಿ ಶೇಮಿಂಗ್; ‘ವಡಾಪಾವ್ ಲುಕ್​’ ಎಂದು ಟೀಕಿಸಿದ ಫ್ಯಾನ್ಸ್​
Mann Ki Baat: ಮನ್​ ಕಿ ಬಾತ್​ನಲ್ಲಿ 1975ರ ತುರ್ತು ಪರಿಸ್ಥಿತಿ ನೆನಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ
Viral Video: ವಿಮಾನದಲ್ಲಿ ಎಸಿ ಸ್ಥಗಿತಗೊಂಡು ಪ್ರಯಾಕರು ಸುಸ್ತೋ ಸುಸ್ತು! ವಿಮಾನ ಬಹಿಷ್ಕಾರದ ಎಚ್ಚರಿಕೆ ನೀಡಿದ ಪ್ರಯಾಣಿಕರು

ಬಾಲಾಜಿ ವೃತ್ತದಲ್ಲಿ ಕೆಂಪೇಗೌಡ ಪ್ರತಿಮೆ ಇಡುವ ಬಗ್ಗೆ 2011ರಲ್ಲಿ ಮಾಲೂರು ಪುರಸಭೆಯಲ್ಲಿ ರೆಸಲೂಷನ್ ಮಾಡಲಾಗಿತ್ತು. ಆದರೆ ಅದು ಕಾರ್ಯರೂಪಕ್ಕೆ ತಂದಿರಲ್ಲಿಲ್ಲ. ಈಗ ಕೆಂಪೇಗೌಡ ದಿನಾಚರಣೆ ಸಮೀಪವಿರುವಾಗ ಪ್ರತಿಮೆ ಇಟ್ಟಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಮೊದಲು ಇದೇ ವೃತ್ತದಲ್ಲಿ ಡಾ.ರಾಜ್ ಕುಮಾರ್ ಪ್ರತಿಮೆ ಇಡಬೇಕು, ಸಂಗೊಳ್ಳಿ ರಾಯಣ್ಣ ಪ್ರತಿಮೆ ಇಡಬೇಕೆಂದು ಕೆಲವು ಸಂಘಟನೆಗಳು ಒತ್ತಾಯ ಮಾಡಿದ್ದರು. ಆದರೆ ಈ ವಿವಾದಗಳ ನಡುವೆಯೇ ಕೆಂಪೇಗೌಡ ಪ್ರತಿಮೆ ಸ್ಥಾಪನೆಯಾಗಿದೆ.

ಇದನ್ನೂ ಓದಿ: ಇಂದು ಅಂತಾರಾಷ್ಟ್ರೀಯ ಡ್ರಗ್ಸ್ ವಿರೋಧಿ ದಿನಾಚರಣೆ; 15 ಸಾವಿರ ವಿದ್ಯಾರ್ಥಿಗಳಿಂದ ಜಾಗೃತಿ ಮೆರವಣಿಗೆ

Published On - 2:11 pm, Sun, 26 June 22