ಮೊಮ್ಮಗನನ್ನು ನೋಡಲು ಹೋದ ಮಹಿಳೆ ಮೇಲೆ ಎರಗಿದ ಕಾಡಾನೆ; ಏಕಾಏಕಿ ದಾಳಿಯಿಂದ ಮಹಿಳೆ ಸಾವು
ಬೆಳಗ್ಗಿನ ಜಾವ ಮೊಮ್ಮಗನನ್ನು ನೋಡಲೆಂದು ಸಿದ್ದಮ್ಮ ಗುಲ್ಲಹಳ್ಳಿ ಗ್ರಾಮದಿಂದ ಗೊಡಗಮಂದೆ ಗ್ರಾಮಕ್ಕೆ ತೆರಳುತ್ತಿದ್ದರು. ಆದರೆ, ಮಾರ್ಗಮಧ್ಯೆ ಅನಿರೀಕ್ಷಿತವಾಗಿ ಕಾಡಾನೆ ಎದುರಾಗಿದೆ.
ಕೋಲಾರ: ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗುಲ್ಲಹಳ್ಳಿ ಬಳಿ ಕಾಡಾನೆ ದಾಳಿಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಗುಲ್ಲಹಳ್ಳಿಯಿಂದ ಗೊಡಗಮಂದೆ ಕಡೆ ಮೊಮ್ಮಗನನ್ನು ನೋಡಲು ಹೋಗುತ್ತಿದ್ದ ಸಿದ್ದಮ್ಮ (49 ವರ್ಷ) ಎಂಬುವವರ ಮೇಲೆ ಕಾಡಾನೆ ದಾಳಿ ಮಾಡಿದೆ. ಆನೆಯ ಏಕಾಏಕಿ ದಾಳಿಯಿಂದ ತಪ್ಪಿಸಿಕೊಳ್ಳಲಾಗದೆ ದುರ್ದೈವಿ ಸಿದ್ದಮ್ಮ ಸಾವಿಗೀಡಾಗಿದ್ದಾರೆ.
ಬೆಳಗ್ಗಿನ ಜಾವ ಮೊಮ್ಮಗನನ್ನು ನೋಡಲೆಂದು ಸಿದ್ದಮ್ಮ ಗುಲ್ಲಹಳ್ಳಿ ಗ್ರಾಮದಿಂದ ಗೊಡಗಮಂದೆ ಗ್ರಾಮಕ್ಕೆ ತೆರಳುತ್ತಿದ್ದರು. ಆದರೆ, ಮಾರ್ಗಮಧ್ಯೆ ಅನಿರೀಕ್ಷಿತವಾಗಿ ಕಾಡಾನೆ ಎದುರಾಗಿದೆ. ದಿಢೀರ್ ಎಂದು ಆನೆ ದಾಳಿ ನಡೆಸಿದ ಪರಿಣಾಮ ಸಿದ್ದಮ್ಮರಿಗೆ ಅಲ್ಲಿಂದ ಓಡಿಹೋಗಲು ಅವಕಾಶವೂ ಸಿಕ್ಕಿಲ್ಲ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕು ಗುಲ್ಲಹಳ್ಳಿ ಗ್ರಾಮದ ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಕಾಳಗದಲ್ಲಿ ಗಂಭೀರವಾಗಿ ಗಾಯಗೊಂಡ ಹುಲಿ ಸಾವು ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ವ್ಯಾಪ್ತಿಯಲ್ಲಿ ಗಾಯಗೊಂಡಿದ್ದ ಹುಲಿಯೊಂದನ್ನು ಚಿಕಿತ್ಸೆಗಾಗಿ ಬನ್ನೇರುಘಟಕ್ಕೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ರೆ ಅರಣ್ಯದ ಸುತ್ತನಹಳ್ಳ ಬಳಿ ಎರಡು ಹುಲಿಗಳ ನಡುವೆ ನಡೆದ ಭೀಕರ ಕಾಳಗದಲ್ಲಿ ಒಂದು ಹುಲಿ ಗಂಭೀರವಾಗಿ ಗಾಯಗೊಂಡಿತ್ತು.
ಗಾಯಗೊಂಡ ಹುಲಿಗೆ ಅರವಳಿಕೆ ಮದ್ದು ನೀಡುವ ಮೂಲಕ ಸೆರೆಹಿಡಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಅದಕ್ಕೆ ಹೆಚ್ಚಿನ ಚಿಕಿತ್ಸೆ ನೀಡಲೆಂದು ಬನ್ನೇರುಘಟಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ, ಕಾಳಗದ ವೇಳೆ ಮತ್ತೊಂದು ವ್ಯಾಘ್ರನ ದಾಳಿಗೆ ಸಿಲುಕಿ ಬಲವಾಗಿ ಗಾಯಗೊಂಡಿದ್ದ ಹುಲಿ ಮಾರ್ಗಮಧ್ಯದಲ್ಲೇ ಅಸುನೀಗಿದೆ. ಸಾಮಾನ್ಯವಾಗಿ ಹುಲಿಗಳ ನಡುವೆ ತಮ್ಮ ನೆಲೆಗಾಗಿ, ಸಂಗಾತಿಗಾಗಿ ಈ ರೀತಿಯ ಕಾಳಗ ನಡೆಯುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಬಲಿಷ್ಠ ಹುಲಿ ಮೇಲುಗೈ ಸಾಧಿಸುತ್ತದೆ.
ಇದನ್ನೂ ಓದಿ: ಭಾರತದ ಸುಂದರ್ಬನ್ಸ್ನಲ್ಲಿದ್ದ ಹುಲಿಯು ನಾಪತ್ತೆಯಾದ ನಾಲ್ಕು ತಿಂಗಳ ನಂತರ ಬಾಂಗ್ಲಾದೇಶದ ದ್ವೀಪವೊಂದರಲ್ಲಿ ಪತ್ತೆಯಾಯಿತು! ಕೊಡಗು ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿಗೆ ಮರಿಯಾನೆ ಸಾವು; ಮತ್ತೊಂದೆಡೆ ಕಾಡಾನೆ ಸಾವು