ಕೋಲಾರ: ನವಜಾತ ಶಿಶುವನ್ನು ಕದ್ದಿದ್ದ ಕಳ್ಳಿ ಅರೆಸ್ಟ್​: ತಾಯಿ ಮಡಿಲು ಸೇರಿದ ಮಗು

ಕೋಲಾರ ಜಿಲ್ಲಾ ಆಸ್ಪತ್ರೆಯಿಂದ ನವಾಜಾತ ಶಿಶುವನ್ನು ಕದ್ದು ಪರಾರಿಯಾಗುತ್ತಿದ್ದ ಆರೋಪಿಗಳನ್ನು ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿ ಹೆಡೆಮುರಿ ಕಟ್ಟಿದ್ದಾರೆ. ಅಪರಿಚಿತ ಮೂವರು ಮಹಿಳೆಯರು ನವಜಾತ ಶಿಶುವನ್ನು ಕದ್ದು ತಮಿಳುನಾಡಿಗೆ ಸಾಗಿಸುತ್ತಿದ್ದರು.

ಕೋಲಾರ: ನವಜಾತ ಶಿಶುವನ್ನು ಕದ್ದಿದ್ದ ಕಳ್ಳಿ ಅರೆಸ್ಟ್​: ತಾಯಿ ಮಡಿಲು ಸೇರಿದ ಮಗು
ತಾಯಿ ಮಡಿಲು ಸೇರಿದ ಮಗು
Follow us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ವಿವೇಕ ಬಿರಾದಾರ

Updated on:Oct 27, 2023 | 3:12 PM

ಕೋಲಾರ ಅ.27: ಎಸ್‌ಎನ್‌‌ ಜಿಲ್ಲಾ ಆಸ್ಪತ್ರೆ(Diaristic Hospital) ಹೆರಿಗೆ ವಾರ್ಡ್‌ನಿಂದ ಕಳುವಾಗಿದ್ದ ನವಜಾತ ಶಿಶುವನ್ನು (Baby) ಕೋಲಾರ (Kolar) ಮಹಿಳಾ ಪೊಲೀಸ್ ಠಾಣೆ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಮಗು ಕಳ್ಳತನ ಮಾಡಿದ್ದ ಆರೋಪಿಗಳ ಪೈಕಿ ಓರ್ವ ಮಹಿಳೆಯನ್ನು ಬಂಧಿಸಲಾಗಿದೆ.

ಗುರುವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ವಾರ್ಡ್‌ನಲ್ಲಿ ತಾಯಿ ನಿದ್ದೆ ಹೋದ ಸಂದರ್ಭದಲ್ಲಿ ಮೂವರು ಅಪರಿಚಿತ ಮಹಿಳೆಯರು ಹೊಂಚು ಹಾಕಿ ಮಗುವನ್ನು ಕದ್ದೊಯ್ದಿದಿದ್ದಾರೆ. ಮೂವರು ಮಹಿಳೆಯರು ನವಜಾತ ಗಂಡು ಶಿಶುವನ್ನು ಯಾರಿಗೂ ಗೊತ್ತಾಗದಂತೆ ಕಾಲೇಜು ಬ್ಯಾಗಿನಲ್ಲಿ ಬಚ್ಚಿಟ್ಟುಕೊಂಡು ಪರಾರಿಯಾಗಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದು ಆಟೊ ಹತ್ತುತ್ತಿರುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಇದನ್ನೂ ಓದಿ: ಕೊಪ್ಪಳ: ಮನೆ ಮುಂದಿನ ಕಾಲುವೆಗೆ ಬಿದ್ದು 14 ತಿಂಗಳ ಮಗು ಸಾವು

ವಿಷಯ ತಿಳಿದು ಪೊಲೀಸರು ಕ್ಷಿಪ್ರವಾಗಿ ಕಾರ್ಯಾಚರಣೆಗೆ ಇಳಿದ ಮಹಿಳಾ ಪೊಲೀಸರು ಆರೋಪಿಗಳ ಚಲನವನದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಲ್ಲದೆ ಆಸ್ಪತ್ರೆ ಮತ್ತು ನಗರದ ವಿವಿಧ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಆರೋಪಿಗಳು ಬೈಕ್​​ನಲ್ಲಿ ತಮಿಳುನಾಡಿನ ಕಡೆ ಹೋಗುತ್ತಿರುವುದು ಗೊತ್ತಾಗಿದೆ. ಕೂಡಲೆ ಪೊಲೀಸರು ಆರೋಪಿಗಳನ್ನು ಚೇಸ್​​ ಮಾಡಿ ತಮಿಳುನಾಡಿನ ಬೇರಿಕೆ ಬಳಿ ಹಿಡಿದಿದ್ದಾರೆ. ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಉಳಿದ‌ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ನಾಲ್ಕು ದಿನದ ಕಂದಮ್ಮ ತಾಯಿ ಮಡಿಲು ಸೇರಿದೆ. ಮಗುವನ್ನು ಕಂಡು ತಾಯಿಯ ಕಣ್ಣೀರು ಹಾಕಿದ್ದಾರೆ. ತಾಯಿ ಮಗುವನ್ನು ಬಿಗಿದಪ್ಪಿ ಸಂತೋಷಪಟ್ಟಿದ್ದಾಳೆ. ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಸಿಎಂ ಸಿದ್ದರಾಮಯ್ಯ ಶ್ಲಾಘನೆ

ನವಜಾತ ಶಿಶು ಅಪಹರಣ ಪ್ರಕರಣ ಸುಖ್ಯಾಂತ ಕಂಡ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ ಟ್ವೀಟ್​ ಮೂಲಕ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರು ಅಭಿನಂದನೆ ತಿಳಿಸಿದ್ದಾರೆ. ಅಪಹರಣವಾಗಿದ್ದ ನವಜಾತ ಶಿಶುವನ್ನು ಕೋಲಾರ ಪೊಲೀಸ್ ಇಲಾಖೆ ಕೇವಲ 5 ಗಂಟೆಯಲ್ಲಿ ಪತ್ತೆ ಹಚ್ಚಿದೆ. ಮಗುವನ್ನು ಮತ್ತೆ ತಾಯಿ ಮಡಿಲಿಗೆ ಸೇರಿಸಿದ್ದ ಪೊಲೀಸರ ಕಾರ್ಯವೈಖರಿಗೆ ಮೆಚ್ಚಗೆ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ 

Published On - 7:41 am, Fri, 27 October 23