AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್​ಲೈನ್​ ಶಿಕ್ಷಣಕ್ಕಾಗಿ ಮೊಬೈಲ್ ಬೇಡಿ ರಸ್ತೆಯಲ್ಲಿ ನಿಂತ ಸೋದರಿಯರಿಗೆ ಸಿಕ್ತು ಮೊಬೈಲ್​! ಮನಮಿಡಿದು ಮೊಬೈಲ್​ ಕೊಡಿಸಿದವರು ಯಾರು?

online education: ಪತಿಯ ಸಾವು ಹಿನ್ನೆಲೆಯಲ್ಲಿ ಗಿರಿಜಾ-ಪ್ರೀತಿ ಅವರ ತಾಯಿ ನಿಂಬೆಹಣ್ಣು ಮಾರಾಟ ಮಾಡಿ, ಮಕ್ಕಳಿಬ್ಬರನ್ನೂ ಪೋಷಿಸುತ್ತಿದ್ದಾರೆ. ಯಾರಾದ್ರೂ ಸಹಾಯ ಮಾಡಿ, ತಮ್ಮ ಕಷ್ಟಕ್ಕೆ ನೆರವಾಗಿ ಎಂದು ಭಿತ್ತಿಪತ್ರ ಹಿಡಿದು ಮನವಿ ಮಾಡಿದ್ದರು. ಗಿರಿಜಾ ಎಂಟನೇ ತರಗತಿ ಓದುತ್ತಿದ್ರೆ, ಪ್ರೀತಿ ಹತ್ತನೆ ತರಗತಿಯಲ್ಲಿ ಓದುತ್ತಿದ್ದಾಳೆ.

ಆನ್​ಲೈನ್​ ಶಿಕ್ಷಣಕ್ಕಾಗಿ ಮೊಬೈಲ್ ಬೇಡಿ ರಸ್ತೆಯಲ್ಲಿ ನಿಂತ ಸೋದರಿಯರಿಗೆ ಸಿಕ್ತು ಮೊಬೈಲ್​! ಮನಮಿಡಿದು ಮೊಬೈಲ್​ ಕೊಡಿಸಿದವರು ಯಾರು?
ಆನ್​ಲೈನ್​ ಶಿಕ್ಷಣಕ್ಕಾಗಿ ಮೊಬೈಲ್ ಬೇಡಿ ರಸ್ತೆಯಲ್ಲಿ ನಿಂತ ಸೋದರಿಯರಿಗೆ ಸಿಕ್ತು ಮೊಬೈಲ್​! ಮನಮಿಡಿದು ಹೊಸ ಮೊಬೈಲ್​ ಕೊಡಿಸಿದವರು ಯಾರು?
TV9 Web
| Edited By: |

Updated on: Jul 09, 2021 | 4:36 PM

Share

ಕೊಪ್ಪಳ: ಇದು ಕರಾಳ ಕೊರೊನಾ ಕಾಲದ ಮನಮಿಡಿಯುವ ಪ್ರಕರಣಗಳಲ್ಲಿ ಒಂದಾಗಿದೆ. ಗಿರಿಜಾ ಹಾಗೂ ಪ್ರೀತಿ ಎಂಬ ಇಬ್ಬರು ಸಹೋದರಿಯರು ಆನ್​ಲೈನ್​ ಶಿಕ್ಷಣಕ್ಕಾಗಿ ತಮ್ಮ ಬಳಿ ಮೊಬೈಲ್ ಇಲ್ಲ. ಹೀಗಾಗಿ ಮೊಬೈಲ್ ಕೊಡಿಸುವಂತೆ ಭಿತ್ತಿ ಪತ್ರ ಹಿಡಿದುಕೊಂಡು ನಿನ್ನೆ ಬುಧವಾರ ಕೊಪ್ಪಳದಲ್ಲಿ ಗದಗ–ಹೊಸಪೇಟೆ ಹೆದ್ದಾರಿಯಲ್ಲಿ ವಿದ್ಯಾರ್ಥಿನಿಯರು ರಸ್ತೆಯಲ್ಲಿಯೇ ನಿಂತಿದ್ದರು. ಗಾಂಧಿ ನಗರ ನಿವಾಸಿಗಳಾದ ಗಿರಿಜಾ-ಪ್ರೀತಿ 19 ವರ್ಷಗಳ ಹಿಂದೆ ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ. ಇದನ್ನು ಕೇಳಿ ಮನಸು ಕರಗಿದ ಕೊಪ್ಪಳ ಸಂಸದ ಸಂಗಣ್ಣ ಕರಡಿ ಸಹೋದರಿಯರಿಬ್ಬರಿಗೂ ಇಂದು ಮೊಬೈಲ್ ಕೊಡಿಸಿದ್ದಾರೆ.

24 ಗಂಟೆಯಲ್ಲಿಯೇ ಸೋದರಿಯರಿಗೆ ಸಿಕ್ತು ಮೊಬೈಲ್​: ಮೊಬೈಲ್ ಇಲ್ಲದಿದ್ದಕ್ಕೆ ಆನ್‌ಲೈನ್ ಕ್ಲಾಸ್ ಕೇಳಲು ಪರದಾಡುತ್ತಿದ್ದ ಸಹೋದರಿಯರಿಬ್ಬರಿಗೆ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಸಂಗಣ್ಣ ಕರಡಿ ಮೊಬೈಲ್ ಕೊಡಿಸಿದ್ದಾರೆ. ಬಿಜೆಪಿ ಸಂಸದ ಸಂಗಣ್ಣ ಕರಡಿ ಪುತ್ರ ಗವಿಸಿದ್ದಪ್ಪ ಕರಡಿ ಅವರು ಈ ಇಬ್ಬರು ವಿದ್ಯಾರ್ಥಿನಿಯರಿಗೆ ಮೊಬೈಲ್ ವಿತರಣೆ ಮಾಡಿದರು.

ಪತಿಯ ಸಾವು ಹಿನ್ನೆಲೆಯಲ್ಲಿ ಗಿರಿಜಾ-ಪ್ರೀತಿ ಅವರ ತಾಯಿ ನಿಂಬೆಹಣ್ಣು ಮಾರಾಟ ಮಾಡಿ, ಮಕ್ಕಳಿಬ್ಬರನ್ನೂ ಪೋಷಿಸುತ್ತಿದ್ದಾರೆ. ಯಾರಾದ್ರೂ ಸಹಾಯ ಮಾಡಿ, ತಮ್ಮ ಕಷ್ಟಕ್ಕೆ ನೆರವಾಗಿ ಎಂದು ಭಿತ್ತಿಪತ್ರ ಹಿಡಿದು ಮನವಿ ಮಾಡಿದ್ದರು. ಗಿರಿಜಾ ಎಂಟನೇ ತರಗತಿ ಓದುತ್ತಿದ್ರೆ, ಪ್ರೀತಿ ಹತ್ತನೆ ತರಗತಿಯಲ್ಲಿ ಓದುತ್ತಿದ್ದಾಳೆ. ಕೊಪ್ಪಳದಲ್ಲಿ ಸಹೋದರಿಯರಿಗೆ ಸಿಗುತ್ತಿಲ್ಲ ಆನ್​ಲೈನ್​ ಶಿಕ್ಷಣ; ಮೊಬೈಲ್​ ಕೊಡಿಸಿ ಅಂತ ಭಿತ್ತಿ ಪತ್ರ ಹಿಡಿದು ರಸ್ತೆಯಲ್ಲಿ ನಿಂತ ವಿದ್ಯಾರ್ಥಿಗಳು

( Koppal bjp mp sanganna karadi helps two school going sisters stand on road pleading mobile phone for online education )

Follow Us
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್