ಕೊಪ್ಪಳದ ರೈತನ ಚೆಂಡು ಹೂವಿನ ತೋಟದಲ್ಲಿ ರಾರಾಜಿಸುತ್ತಿದೆ ಪ್ರಧಾನಿ ಮೋದಿ ಹೆಸರು

Edited By:

Updated on: Nov 03, 2026 | 2:36 PM

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಕ್ಕಳ ಗ್ರಾಮದ ರೈತ ಬಸವರಾಜ ಜಾಲಿಹಾಳ ತಮ್ಮ 1 ಎಕರೆ ಜಮೀನಿನಲ್ಲಿ ಮೋದಿ ಹೆಸರು ಮೂಡುವಂತೆ ಚೆಂಡು ಹೂವಿನ ಕೃಷಿ ಮಾಡಿದ್ದಾರೆ. ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರು ಈ ವಿಡಿಯೋ ನೋಡಿ ರೈತನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ,ನ.3: ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನವನ್ನು ತೋರ್ಪಡಿಸಲು ಅಭಿಮಾನಿಗಳು ನಾನಾ ದಾರಿಗಳನ್ನು ಕಂಡುಕೊಳ್ಳುತ್ತಾರೆ. ಆದರೆ ಕೊಪ್ಪಳ ಜಿಲ್ಲೆಯ ರೈತನೊಬ್ಬ ತಮ್ಮ ಒಂದು ಎಕರೆ ಜಮೀನಿನಲ್ಲಿ ಕೆಂಪು ಹಾಗೂ ಹಳದಿ ಬಣ್ಣದ ಚೆಂಡು ಹೂವಿನ ಗಿಡಗಳನ್ನು ನೆಟ್ಟು, ಮೇಲಿಂದ ನೋಡಿದರೆ ‘ಮೋದಿ’ (MODI) ಎಂದು ಬರೆಯಲ್ಪಟ್ಟಂತೆ ಕಾಣುವ ವಿನೂತನ ಕೃಷಿ ಪ್ರಯೋಗ ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ‘ಮಕ್ಕಳ’ ಗ್ರಾಮದ ಬಸವರಾಜ ಜಾಲಿಹಾಳ ಎಂಬ ರೈತ ಈ ಸೃಜನಶೀಲ ಕೃಷಿ ಸಾಹಸ ಮೆರೆದವರು. ತಮ್ಮ ಒಂದು ಎಕರೆ ಪ್ರದೇಶದ ಜಮೀನಿನಲ್ಲಿ ಚೆಂಡು ಹೂವಿನ ಕೃಷಿ ಮಾಡಿರುವ ಬಸವರಾಜ, ಸಸಿ ನೆಡುವಾಗಲೇ ‘ಮೋದಿ’ ಎಂದು ಅಕ್ಷರಗಳು ಮೂಡುವಂತೆ ಪ್ಲಾನ್ ಮಾಡಿ ಕೆಂಪು ಹಾಗೂ ವಿವಿಧ ತಳಿಯ ಚೆಂಡು ಹೂವಿನ ಸಸಿಗಳನ್ನು ವಿನ್ಯಾಸಗೊಳಿಸಿ ನೆಟ್ಟಿದ್ದರು. ಪ್ರಸ್ತುತ ಜಮೀನಿನಲ್ಲಿ ಗಿಡಗಳು ಬೆಳೆದು ಪೂರ್ಣಪ್ರಮಾಣದಲ್ಲಿ ಹೂವುಗಳು ಅರಳಿದ್ದು, ಇಡೀ ಹೊಲದಲ್ಲಿ ‘ಮೋದಿ’ ಎಂಬ ಹೆಸರು ಎದ್ದು ಕಾಣುತ್ತಿದೆ. ಭೂಮಿಯ ಮೇಲಿಂದ ನೋಡಿದರೆ ಹೂವಿನ ಸಾಲುಗಳಂತೆ ಕಾಣುವ ಈ ಕೃಷಿ ಕಲಾಕೃತಿಯನ್ನು ಡ್ರೋನ್ ಕ್ಯಾಮೆರಾ ಮೂಲಕ ಮೇಲಿಂದ ಸೆರೆಹಿಡಿಯಲಾಗಿದೆ. ಆಕಾಶದ ಎತ್ತರದಿಂದ ನೋಡಿದಾಗ ಹಸಿರು ತೋಟದ ಮಧ್ಯೆ ಹೂವುಗಳಿಂದ ಕೆತ್ತಲ್ಪಟ್ಟ ‘ಮೋದಿ’ ಎಂಬ ಹೆಸರು ಅತ್ಯಂತ ಸ್ಪಷ್ಟವಾಗಿ ಮತ್ತು ಸುಂದರವಾಗಿ ಗೋಚರಿಸುತ್ತಿದೆ. ರೈತ ಬಸವರಾಜ ಅವರ ಈ ಅಪರೂಪದ ಕೃಷಿ ಪ್ರೀತಿ ಹಾಗೂ ನರೇಂದ್ರ ಮೋದಿ ಅವರ ಮೇಲಿನ ಅಭಿಮಾನದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗುತ್ತಿದ್ದು, ಕೃಷಿಕನ ಸೃಜನಶೀಲತೆಗೆ ಸಾರ್ವಜನಿಕರು ಹಾಗೂ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 03, 2026 02:33 PM
Loading...
Unable to load recommendations.
Follow Us
ಶಿವಕುಮಾರ್ ಪತ್ತಾರ್

ಶಿವಕುಮಾರ್ ಎಸ್ ಪತ್ತಾರ.. ಹುಟ್ಟಿದ್ದು ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ.ಕೊಪ್ಪಳದಿಂದ ಆರಂಭವಾಗಿರೋ ವೃತ್ತಿ ಬದುಕು ‌ಸದ್ಯ ಹುಬ್ಬಳ್ಳಿಗೆ ಬಂದು ನಿಂತಿದೆ.ಈ ಮದ್ಯೆ ರಾಯಚೂರು,ಬಳ್ಳಾರಿ,ವರದಿಗಾರನಾಗಿ ಕೆಲಸ ಮಾಡಿದ್ದೇನೆ.ರಹಸ್ಯ ಕಾರ್ಯಾಚರಣೆ ನನಗಿಷ್ಟ.ಟಿವಿ9 ನಲ್ಲಿ ಕೆಲ ರಹಸ್ಯ ಕಾರ್ಯಾಚರಣೆಗಳ ವರದಿಯನ್ನು ಮಾಡಿದ್ದೇನೆ.ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More