ಹುಲಿ ಹೈದರ್ ಮಾರಾಮಾರಿ ಪ್ರಕರಣ: 38 ಮಂದಿ ಅರೆಸ್ಟ್, ನಡು ರಸ್ತೆಯಲ್ಲೇ ಎರಡು ಹೆಣ ಬಿದ್ದ ವಿಡಿಯೋ ವೈರಲ್
ಹುಲಿಹೈದರ್ನಲ್ಲಿ ನಡೆದ ಮಾರಾನರಿ ಪ್ರಕರಣ ಸಂಬಂಧ ಒಟ್ಟು 38 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಂದೆಡೆ, ಘಟನೆ ವೇಳೆ ನಡುರಸ್ತೆಯಲ್ಲೇ ಇಬ್ಬರ ಹೆಣ ಬಿದ್ದಿರುವ ವಿಡಿಯೋ ವೈರಲ್ ಆಗುತ್ತಿದೆ.
ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ನಲ್ಲಿ ಎರಡು ಗುಂಪುಗಳ ನಡುವೆ ನಡೆದ ಮಾರಾಮರಿ ಪ್ರಕರಣ ಸಂಬಂಧ ಒಟ್ಟು 38 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಗುಂಪು ಘರ್ಷಣೆಯಲ್ಲಿ ಯಂಕಪ್ಪ ಹಾಗೂ ಭಾಷಾವಲಿ ಎಂಬವರು ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದರು. ಈ ಪೈಕಿ ಓರ್ವನಿಗೆ ಗಂಭೀರ ಗಾಯಗಳಾಗಿವೆ. ಪ್ರಕರಣ ಸಂಬಂಧ ಒಟ್ಟು ಒಟ್ಟು 58 ಮಂದಿ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ 38 ಮಂದಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಕರಣದ ಮತ್ತೊಂದು ವಿಡಿಯೋ ವೈರಲ್
ಹುಲಿಹೈದರ್ ಮಾರಾಮಾರಿ ಪ್ರಕರಣದ ಮತ್ತೊಂದು ವಿಡಿಯೋ ವೈರಲ್ ಆಗದೆ. ವೈರಲ್ ವಿಡಿಯೋದಲ್ಲಿ ಇವರುವಂತೆ, ಮಾರಾಮರಿಯ ನಂತರ ಬಾಷಾವಲಿ ಮತ್ತು ಯಂಕಪ್ಪ ಅವರ ಮೃತದೇಹ ನಡುರಸ್ತೆಯಲ್ಲೇ ಬೀಳುತ್ತದೆ. ಈ ವೇಳೆ ಒಂದಷ್ಟು ಮಂದಿ ಯಂಕಪ್ಪನನ್ನು ಪೊಲೀಸ್ ವಾಹನದಲ್ಲಿ ಕಳುಹಿಸುತ್ತಾರೆ. ಆದರೆ ಬಾಷಾವಲಿ ಮೃತದೇಹವನ್ನು ರಸ್ತೆಯಲ್ಲೇ ಬಿಟ್ಟು ಹೋಗಲಾಗಲಾಗಿದೆ. ಅಷ್ಟೇ ಅಲ್ಲದೆ ರಸ್ತೆ ಬದಿ ಬಿದ್ದಿದ್ದ ಬಾಷಾವಲಿ ಮೃತದೇಹದ ಬಳಿ ಯಾರೂ ಕೂಡ ಸುಳಿಯಲೇ ಇಲ್ಲ. ಕೆಲ ಹೊತ್ತಿನ ಬಳಿಕ ಒಂದಷ್ಟು ಯುವಕರ ತಂಡ ಬಂದು ಬಾಷಾವಲಿ ದೇಹವನ್ನು ಎತ್ತುಕೊಂಡು ಹೋಗಿದ್ದಾರೆ. ಪೊಲೀಸರ ಎದುರೇ ನಡೆದ ಈ ಗುಂಪು ಘರ್ಷಣೆಯಲ್ಲಿ ಕಲ್ಲು ತೂರಾಡಿ ಹಲ್ಲೆ ನಡೆಸಿ ಇಬ್ಬರು ಸಾವನ್ನಪ್ಪಿದ್ದರೂ ಪೊಲೀಸರು ಸುಮ್ಮನಿದ್ದರು. ಬೈಕ್ನಲ್ಲಿ ಕುಳಿತಿದ್ದ ಪೊಲೀಸ್ ಸಿಬ್ಬಂದಿ ಮೃತದೇಹವನ್ನು ಕಂಡು ಕಾಣದಂತೆ ಮಾಡಿದಾಗ ಗ್ರಾಮಸ್ಥರು ಮೃತದೇಹದ ಬಳಿ ‘ನೀವು ಹೋಗಿ’ ಎಂದು ಹೇಳಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಏನಿದು ಪ್ರಕರಣ?
ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಆಗಸ್ಟ್ 11ರಂದು ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಯಂಕಪ್ಪ ಹಾಗೂ ಭಾಷಾವಲಿ ಎಂಬ ಇಬ್ಬರು ಮೃತಪಟ್ಟಿದ್ದಾರೆ. ಈ ಪ್ರಕರಣವು ಪೊಲೀಸರ ಎದುರೇ ನಡೆದಿದ್ದು, ಒಟ್ಟು 58 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಆರಂಭದಲ್ಲಿ 30 ಜನರನ್ನ ವಶಕ್ಕೆ ಪಡೆದಿದ್ದ ಪೊಲೀಸರು 22 ಮಂದಿಯನ್ನು ಬಂಧಿಸಿತ್ತು. ಇದಾದ ನಂತರ ಆರೋಪಿಗಳು ಪರಾರಿಯಾಗಲು ನೆರವು ನೀಡಿದ ಆರೋಪದಡಿ ಕೆಡಿಪಿ ಮಾಜಿ ಸದಸ್ಯ ಗುರನಗೌಡನನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಂಧಿತರ ಸಂಖ್ಯೆ 38ಕ್ಕೆ ಏರಿಕೆಯಾಗಿದ್ದು, ಪೊಲೀಸರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಲ್ಲದೆ ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:58 am, Tue, 16 August 22