Savarkar: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಸಾವರ್ಕರ್ ಫೋಟೊ; ಕಾವೇರಿದ ಚರ್ಚೆ
BMRCL: ಚಂದ್ರಶೇಖರ್ ಆಜಾದ್ ಮತ್ತು ಉಧಮ್ ಸಿಂಗ್ ಇರುವ ಚಿತ್ರಪಟದಲ್ಲಿ ಸಾವರ್ಕರ್ ಅವರ ಚಿತ್ರವೂ ಎದ್ದು ಕಾಣುತ್ತದೆ. ಮೆಟ್ರೋ ನಿಗಮದ ಈ ನಡೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ನಗರದ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ವೀರ್ ಸಾವರ್ಕರ್ (Veer Savarkar) ಚಿತ್ರಪಟವನ್ನು ಬೆಂಗಳೂರು ಮೆಟ್ರೋ ನಿಗಮ (Bangalore Metro Rail Corporation Limited – BMRCL) ಪ್ರದರ್ಶಿಸಿದೆ. ಚಂದ್ರಶೇಖರ್ ಆಜಾದ್ ಮತ್ತು ಸರ್ದಾರ್ ಉಧಮ್ ಸಿಂಗ್ ಇರುವ ಚಿತ್ರಪಟದಲ್ಲಿ ಸಾವರ್ಕರ್ ಅವರ ಚಿತ್ರವೂ ಎದ್ದು ಕಾಣುತ್ತದೆ. ಮೆಟ್ರೋ ನಿಗಮದ ಈ ನಡೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಆರಂಭವಾಗಿದೆ.
ಮೆಟ್ರೋ ನಿಗಮದ ನಡೆಯನ್ನು ಪ್ರಶ್ನಿಸಿರುವ ‘ಬಹುತ್ವ ಕರ್ನಾಟಕ’ ಟ್ವಿಟರ್ ಪುಟವು, ‘ಹೆಲೊ, ಬೆಂಗಳೂರು ಮೆಟ್ರೋ ಅಧಿಕಾರಿಗಳೇ. ಯಾಕೆ ಸ್ವಾಮಿ ಸಾವರ್ಕರ್ ಚಿತ್ರ? ಅವರ ಕೊಡುಗೆಯೇನು? ಬ್ರಿಟಿಷರಿಗೆ ಕ್ಷಮೆ ಕೇಳಿದವರನ್ನು ನಾವೇಕೆ ಗೌರವಿಸಬೇಕು? ನಿಮಗೆ ಬೇರೆ ಯಾರೂ ಸಿಕ್ಕಿಲ್ಲವೇ? ಯಾರ ಆದೇಶ ಇದು’ ಎಂದು ಕೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ದೀಪಕ್ ಪೈ ಎನ್ನುವವರು, ‘ಸಾವರ್ಕರ್ ಫೋಟೋ ಭಾರತದ ಸಂಸತ್ತಿನಲ್ಲೂ ಇದೆ. ಅದನ್ನ ತೆರವುಗೊಳಿಸೋ ತಾಕತ್ ಇದೆಯಾ? ಸಾವರ್ಕರ್ ಫೋಟೋ ಹಾಕದೆ ಇನ್ನೇನು ಜಿನ್ನಾ ಫೋಟೋ ಹಾಕಬೇಕಿತ್ತಾ? ಭಾರತ ತುಂಡು ಮಾಡಿ ಭಯೋತ್ಪಾದಕರ ದೇಶ ಪಾಕಿಸ್ತಾನ ಕಟ್ಟಿ ಇಲ್ಲಿ ಭಾರತದಲ್ಲಿ ಕೂಡಾ ಭಯೋತ್ಪಾದನೆ ಬೆಳೆಸುತ್ತಿರುವವರ ಫೋಟೋ ಹಾಬೇಕಿತ್ತಾ’ ಎಂದು ಮರು ಪ್ರಶ್ನೆಗಳನ್ನು ಮಾಡಿದ್ದಾರೆ.
Hello @cpronammametro , ಯಾಕೆ ಸ್ವಾಮಿ ಸಾವರ್ಕರ್ ಅವರ ಚಿತ್ರ ಹಾಕಿರೋದು ? ಅವರ ಕೊಡುಗೆಯೇನು ? ಬ್ರಿಟಿಷರಿಗೆ ಕ್ಷಮೆ ಕೇಳಿದವರನ್ನು ನಾವೇಕೆ ಗೌವರಿಸಬೇಕು ? ನಿಮಗೆ ಬೇರೆ ಯಾರು ಸಿಕ್ಕಿಲ್ಲವ ? ಯಾರ ಆದೇಶಇದು ? https://t.co/xgtN4XiQ3C
— Bahutva Karnataka ಬಹುತ್ವ ಕರ್ನಾಟಕ (@BahutvaKtka) August 15, 2022
‘ಪಾಕಿಸ್ತಾನಕ್ಕೆ ಹೋಗಬೇಕಿದ್ದ ಕೆಲವರು ಭಾರತದಲ್ಲಿಯೇ ಉಳಿದು ಇಂದು ಸಾವರ್ಕರ್ ಅವರನ್ನು ಪ್ರಶ್ನಿಸುತ್ತಿದ್ದಾರೆ. ಭಾರತ ವಿಭಜನೆಗೆ ಕಾರಣರಾದವರು ನೆಹರು-ಜಿನ್ನಾ’ ಎಂದು ಕಾಮೆಂಟ್ ಮಾಡಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿ ಸಾವರ್ಕರ್ ಫೋಟೊ ಹಾಕಿರುವುದನ್ನು ಆಗಸ್ಟ್ 14ರಂದು ಮೊದಲ ಬಾರಿಗೆ ಸೈಯದ್ ಮೊಯೀನ್ ಎನ್ನುವವರು ಟ್ವೀಟ್ ಮಾಡಿದ್ದರು. ‘ಇದು ಆಕ್ಷೇಪಾರ್ಹ ಮತ್ತು ವಿವಾದಾತ್ಮಕ ನಡೆ’ ಎಂದು ಅವರು ಹೇಳಿದ್ದರು.
Published On - 9:39 am, Tue, 16 August 22