ಶಿವಮೊಗ್ಗದಲ್ಲಿ ಚಾಕು ಇರಿತ ಪ್ರಕರಣ: ಸ್ವಾತಂತ್ರ್ಯ ಅಮೃತೋತ್ಸವದಂದೇ ಘಟನೆ ನಂಬಲಸಾಧ್ಯ ಎಂದ ರಣದೀಪ್ ಸುರ್ಜೇವಾಲ

ರಾಜ್ಯದಲ್ಲಿ ಅನಾವಶ್ಯಕವಾಗಿ ಆಟ ಆಡುತ್ತಿದ್ದಾರೆ. ಬಿಜೆಪಿ ಸರ್ಕಾರ ಉತ್ತಮ ಆಡಳಿತ ಕೊಡುವಲ್ಲಿ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲ ಎಂದು ಬೆಂಗಳೂರಿನಲ್ಲಿ ರಣದೀಪ್ ಸುರ್ಜೆವಾಲ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಶಿವಮೊಗ್ಗದಲ್ಲಿ ಚಾಕು ಇರಿತ ಪ್ರಕರಣ: ಸ್ವಾತಂತ್ರ್ಯ ಅಮೃತೋತ್ಸವದಂದೇ ಘಟನೆ ನಂಬಲಸಾಧ್ಯ ಎಂದ ರಣದೀಪ್ ಸುರ್ಜೇವಾಲ
ರಣದೀಪ್ ಸುರ್ಜೇವಾಲImage Credit source: India Today
Follow us
TV9 Web
| Updated By: ಆಯೇಷಾ ಬಾನು

Updated on:Aug 15, 2022 | 10:53 PM

ಬೆಂಗಳೂರು: ಶಿವಮೊಗ್ಗದಲ್ಲಿ ಯುವಕರಿಗೆ ಚಾಕು ಇರಿದಿರುವ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಉಸ್ತುವಾರಿ ರಣಧೀಪ್ ಸುರ್ಜೆವಾಲ(Randeep surjewala) ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ(BJP Government) ಆಡಳಿತದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಕರ್ನಾಟಕ ಪ್ರಗತಿಪರರ ರಾಜಧಾನಿ. ಇಂತಹ‌ ರಾಜ್ಯದಲ್ಲಿ ಈ ರೀತಿಯ ಘಟನೆ ಸ್ವಾತಂತ್ರ್ಯ ದಿನದಂದೆ ನಡೆದಿದೆ ಅಂದ್ರೆ ನಂಬಲಸಾಧ್ಯ. ಎಸ್‌ಡಿಪಿಐ ಮುಂದಿಟ್ಟುಕೊಂಡು ಕೋಮು ಗಲಭೆ ಸೃಷ್ಟಿಸಲಾಗಿದೆ. ರಾಜ್ಯದಲ್ಲಿ ಅನಾವಶ್ಯಕವಾಗಿ ಆಟ ಆಡುತ್ತಿದ್ದಾರೆ. ಬಿಜೆಪಿ ಸರ್ಕಾರ ಉತ್ತಮ ಆಡಳಿತ ಕೊಡುವಲ್ಲಿ ವಿಫಲವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ವಿಫಲ ಎಂದು ಬೆಂಗಳೂರಿನಲ್ಲಿ ರಣದೀಪ್ ಸುರ್ಜೆವಾಲ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ಇದೇ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಮಾತನಾಡಿದ್ದು ಪ್ರಕರಣ ಸಂಬಂಧ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಸ್ಥಳೀಯ ನಾಯಕರು ಸಹ ಸಹಕಾರ ನೀಡುತ್ತಿದ್ದಾರೆ ಎಂದಿದ್ದಾರೆ. ಈಗಾಗಲೇ ಶಿವಮೊಗ್ಗದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ನಡೆಯಬಾರದ ಘಟನೆ ಅದು. ಯಾರೇ ತಪ್ಪು ಮಾಡಿದ್ರೂ ಕಠಿಣ ಕ್ರಮ ಕೈಗೊಳ್ಳುವ ಆದೇಶ ಮಾಡಿದ್ದೇನೆ. ಈಗಾಗಲೇ ಹೆಚ್ಚುವರಿ ಪೋಲಿಸರ ನಿಯೋಜನೆ‌ ಮಾಡಿದ್ದೇನೆ. ಶಾಂತಿ ನೆಲೆಸಲು ಎಲ್ಲಾ ಕ್ರಮ ಕೈಗೊಂಡಿದ್ದೇನೆ ಎಂದರು.

ಸಮಾಜಘಾತುಕ ಶಕ್ತಿಗಳಿಗೆ ಸರ್ಕಾರದ ಭಯವಿಲ್ಲ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಮೊದಲು ಕೋಮು ಸಂಘರ್ಷದ ಘಟನೆಗಳು ನಮ್ಮ ಸರ್ಕಾರದಲ್ಲಿ ನಡೆಯುತ್ತಿರಲಿಲ್ಲ. ಸಮಾಜಘಾತುಕ ಶಕ್ತಿಗಳಿಗೆ ಸರ್ಕಾರದ ಭಯವಿಲ್ಲ. ಪದೇ ಪದೇ ಹೀಗಾಗಲು ಸರ್ಕಾರ ಕೋಮುವಾದಿಗಳ ಕೈಯಲ್ಲಿ ಸರ್ಕಾರ ರಾಜ್ಯವನ್ನು ಕೊಟ್ಟಿದೆ. ಕಾನೂನು, ಪೊಲೀಸ್ ಇಲಾಖೆಯ ಭಯವಿಲ್ಲದೇ ಇರುವುದೇ ಕಾರಣ. ಸೌಹಾರ್ದಯುತ ಸಮಾಜ ನಿರ್ಮಾಣ ಮಾಡಿವಲ್ಲಿ ಸರ್ಕಾರ ದೂರವಾಗಿದೆ ಎಂದು ಯುಟಿ ಖಾದರ್ ಹೇಳಿದ್ರು.

ಪ್ರೇಮ್​ಸಿಂಗ್​ಗೆ ಚೂರಿ ಇರಿದವರನ್ನು ಕೂಡಲೇ ಬಂಧಿಸಬೇಕು

ಸಾವರ್ಕರ್​ ಫ್ಲೆಕ್ಸ್​ ತೆಗೆದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಆಗ್ರಹಿಸಿದ್ದಾರೆ. ಸಾವರ್ಕರ್​ ಅವಮಾನಿಸಿದವರು ದೇಶದ್ರೋಹಿಗಳು, ಉಗ್ರರು. ಪ್ರೇಮ್​ಸಿಂಗ್​ಗೆ ಚೂರಿ ಇರಿದವರನ್ನು ಕೂಡಲೇ ಬಂಧಿಸಬೇಕು. ರಾಜ್ಯದಲ್ಲಿ ಗಲಭೆ ಸೃಷ್ಟಿಸುವ ಎಸ್​​ಡಿಪಿಐ ಹಿಂದೆ ಕಾಂಗ್ರೆಸ್ ಇದೆ. ಹಿಂದೆ ನಡೆದ ಅನೇಕ ಗಲಭೆಗಳನ್ನು ಸರ್ಕಾರ ನಿಯಂತ್ರಿಸಿದೆ. ಎಸ್​ಡಿಪಿಐ ರಾಜಕೀಯ ಪಕ್ಷ. ಎಸ್​ಡಿಪಿಐ ನಿಷೇಧಿಸಲು ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದರು.

ಗಾಯಾಳು ಪ್ರೇಮ್​ಸಿಂಗ್ ಆರೋಗ್ಯ ವಿಚಾರಿಸಿದ ಆರಗ ಜ್ಞಾನೇಂದ್ರ

ಹೊಟ್ಟೆಗೆ ಚಾಕು ಇರಿದಿರುವುದರಿಂದ ಪ್ರೇಮ್​ಸಿಂಗ್​ ಸ್ಥಿತಿ ಗಂಭೀರವಾಗಿದೆ. ಸದ್ಯ ಮೆಗ್ಗಾನ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಪಡೀತಿರುವ ಪ್ರೇಮ್​ಸಿಂಗ್​ನನ್ನು ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಪ್ರೇಮ್ ಸಿಂಗ್​ಗೆ ಶಸ್ತ್ರಚಿಕಿತ್ಸೆಯಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಗಾಯಾಳು ಪ್ರೇಮ್​ ಸಿಂಗ್​ಗೆ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಮೆಗ್ಗಾನ್ ಆಸ್ಪತ್ರೆಯಲ್ಲಿ ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಇನ್ನು ಪ್ರಕರಣ ಸಂಬಂಧ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಶಿವಮೊಗ್ಗದಲ್ಲಿ ಎಲ್ಲಾ ರೀತಿಯ ಬಂದೋಬಸ್ತ್​ ಮಾಡಲಾಗಿದೆ. ತಪ್ಪಿತಸ್ಥ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಶಿವಮೊಗ್ಗ ಜಿಲ್ಲೆಯವರೇ ಗೃಹ ಮಂತ್ರಿಗಳಿದ್ದಾರೆ

ನಾವು ಸರ್ಕಾರಕ್ಕೆ ಪದೇ ಪದೇ ಎಚ್ಚರಿಕೆ ಕೊಡುತ್ತಲೇ ಬಂದಿದ್ದೇವೆ. ಮಂಗಳೂರು ಗಲಭೆ, ಮರ್ಡರ್ ಬಳಿಕ‌ ಎಚ್ಚೆತ್ತುಕೊಳ್ಳಬೇಕಿತ್ತು. ಆದರೂ ಇಂತಹ ಘಟನೆ ಮುಂದುವೆರೆದಿದೆ. ಶಿವಮೊಗ್ಗ ಜಿಲ್ಲೆಯವರೇ ಗೃಹ ಮಂತ್ರಿಗಳಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಮಾಡುವ‌ ಜನರಲ್ಲಿ ಯಾವ ರೀತಿ ಭಾವನೆ ಮೂಡುತ್ತೆ. ಸಾವರ್ಕರ್, ಟಿಪ್ಪು ಹೆಸರಲ್ಲಿ ಸಮುದಾಯ ಒಡೆಯುವ ಕೆಲಸವನ್ನ ಈ ಸರ್ಕಾರ ಮಾಡುತ್ತಿದೆ. ನಿಯಂತ್ರಣಕ್ಕೆ ತರುವ ಸುಳಿವು ಸಿಕ್ಕರೂ ಸರ್ಕಾರ ನಿರ್ಲಕ್ಷ ಮಾಡಿದೆ. ಇದಕ್ಕೆ ಸರ್ಕಾರವೇ ಸಂಪೂರ್ಣ ಹೊಣೆ ಎಂದು ಡಾ.ಜಿ.ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ.

Published On - 8:38 pm, Mon, 15 August 22