AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Section 144 in Shivamogga: ಶಿವಮೊಗ್ಗದಲ್ಲಿ ಹಿಂಸಾಚಾರ; ಕುವೆಂಪು ವಿವಿಗೆ ರಜೆ ಘೋಷಣೆ, ಪರೀಕ್ಷೆಗಳು ಮುಂದೂಡಿಕೆ

Shimoga News: ಚಾಕು ಇರಿತ ಪ್ರಕರಣದ ನಂತರ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಅದರಂತೆ ಕುವೆಂಪು ವಿವಿಗೂ ರಜೆ ಘೋಷಿಸಿ ಕುಲಪತಿಯವರು ಆದೇಶಿಸಿದ್ದಾರೆ.

Section 144 in Shivamogga: ಶಿವಮೊಗ್ಗದಲ್ಲಿ ಹಿಂಸಾಚಾರ; ಕುವೆಂಪು ವಿವಿಗೆ ರಜೆ ಘೋಷಣೆ, ಪರೀಕ್ಷೆಗಳು ಮುಂದೂಡಿಕೆ
ಕೆವೆಂಪು ವಿವಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Aug 16, 2022 | 9:17 AM

ಶಿವಮೊಗ್ಗ: ಜಿಲ್ಲೆಯಲ್ಲಿ ಟಿಪ್ಪು ಸುಲ್ತಾನ್ ಮತ್ತು ವೀರ ಸಾವರ್ಕರ್ ಫೋಟೋ ವಿಚಾರದಲ್ಲಿ ನಡೆದ ಘರ್ಷಣೆ ನಂತರ ಬಿಗುವಿನ ವಾತಾವಣ ಸೃಷ್ಟಿಯಾಗಿದ್ದು, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಹಿನ್ನೆಲೆ ಕುವೆಂಪು ವಿಶ್ವವಿದ್ಯಾಲಯಕ್ಕೆ ರಜೆ ಘೋಷಣೆ ಮಾಡಲಾಗಿದೆ. ಇಂದು ನಡೆಯಬೇಕಿದ್ದ ಕುವೆಂಪು ವಿವಿಯ ಪರೀಕ್ಷೆಗಳು ಮುಂದೂಡಿಕೆಯಾಗಿವೆ ಎಂದು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ನವೀನ್​ ಕುಮಾರ್ ಹೇಳಿದ್ದಾರೆ.

ವೀರ ಸಾವರ್ಕರ್ ಭಾವಚಿತ್ರದಲ್ಲಿ ಗಾಂಧಿ ಬಜಾರ್​ನಲ್ಲಿ ಉಂಟಾದ ಘರ್ಷಣೆ ಚಾಕು ಇರಿತಕ್ಕೆ ತಿರುಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅಲ್ಲದೆ ಸೆಕ್ಷನ್ 144 ಜಾರಿ ಮಾಡಲಾಗಿದೆ. ಈ ಹಿನ್ನೆಲೆ ಈಗಾಗಲೇ ಶಿವಮೊಗ್ಗ ಮತ್ತು ಭದ್ರಾವತಿ ನಗರ ಪ್ರದೇಶದ ಶಾಲೆ ಮತ್ತು ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ಆಗಸ್ಟ್ 16ರಂದು ರಜೆ ಘೋಷಿಸಿತ್ತು. ನಂತರ ಕುವೆಂಪು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕೂಡ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ರಜೆ ಘೋಷಿಸಿ ಆದೇಶಿಸಿದ್ದಾರೆ.

ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಿಂದ ಕುವೆಂಪು ವಿವಿಗೆ ಪ್ರತಿ ದಿನ ವಿದ್ಯಾರ್ಥಿಗಳು ಪ್ರಯಾಣಿಸುತ್ತಾರೆ. ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆ ಘೋಷಣೆ ಮಾಡಲಾಗಿದ್ದು, ಉಪನ್ಯಾಸಕರು ಮತ್ತು ಅಧ್ಯಾಪಕೇತರ ಸಿಬ್ಬಂದಿಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಸೆಕ್ಷನ್ 144 ಜಾರಿಗೊಳಿಸಿರುವುದರಿಂದ ಶಿವಮೊಗ್ಗ ಮತ್ತು ಭದ್ರಾವತಿ ನಗರ ಪ್ರದೇಶದ ಶಾಲೆ ಮತ್ತು ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ನಾಳೆ ನಡೆಯಬೇಕಾಗಿದ್ದ ಎಂಎಸ್​ಸಿ (ಹಾನರ್ಸ್) ಮತ್ತು ಪಿಎಚ್​ಡಿ ಕೋರ್ಸ್ ವರ್ಕ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪರೀಕ್ಷೆಯ ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್.‌ಕೆ. ನವೀನ್ ಕುಮಾರ್ ತಿಳಿಸಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:57 am, Tue, 16 August 22

ಹನುಮಾನ್ ಭಕ್ತರೊಬ್ಬರ ಅಂತ್ಯಕ್ರಿಯೆಗೆ ಬಂದ ಕೋತಿ
ಹನುಮಾನ್ ಭಕ್ತರೊಬ್ಬರ ಅಂತ್ಯಕ್ರಿಯೆಗೆ ಬಂದ ಕೋತಿ
ಶ್ರೀಕಾಂತ್ ಮತ್ತವನ ತಂಡದಿಂದ ಮಚ್ಚಿನಿಂದ ಹಲ್ಲೆ, ಹಂತಕರು ಪರಾರಿ
ಶ್ರೀಕಾಂತ್ ಮತ್ತವನ ತಂಡದಿಂದ ಮಚ್ಚಿನಿಂದ ಹಲ್ಲೆ, ಹಂತಕರು ಪರಾರಿ
ಕೃಷ್ಣ ನಟನೆಯ ‘ಬ್ರ್ಯಾಟ್’ ಚಿತ್ರದ ಟೀಸರ್ ನೋಡಿದ ಮಗಳು ಪರಿ ರಿಯಾಕ್ಷನ್ ನೋಡಿ
ಕೃಷ್ಣ ನಟನೆಯ ‘ಬ್ರ್ಯಾಟ್’ ಚಿತ್ರದ ಟೀಸರ್ ನೋಡಿದ ಮಗಳು ಪರಿ ರಿಯಾಕ್ಷನ್ ನೋಡಿ
ಶ್ರೀನಿವಾಸಪುರದಿಂದ ಬೇರೆ ಊರುಗಳಿಗೆ ಹೋಗುವ ರಸ್ತೆಗಳು ಬಂದ್
ಶ್ರೀನಿವಾಸಪುರದಿಂದ ಬೇರೆ ಊರುಗಳಿಗೆ ಹೋಗುವ ರಸ್ತೆಗಳು ಬಂದ್
ರಾಜಾ ರಘುವಂಶಿ ಕೊಲೆ ಆರೋಪಿಗೆ ಏರ್​ಪೋರ್ಟ್​ನಲ್ಲಿ ಪ್ರಯಾಣಿಕರಿಂದ ಕಪಾಳಮೋಕ್ಷ
ರಾಜಾ ರಘುವಂಶಿ ಕೊಲೆ ಆರೋಪಿಗೆ ಏರ್​ಪೋರ್ಟ್​ನಲ್ಲಿ ಪ್ರಯಾಣಿಕರಿಂದ ಕಪಾಳಮೋಕ್ಷ
Daily Devotional: ನಿತ್ಯ ಪೂಜೆಯಲ್ಲಿ ಗಣಪತಿ ಸ್ಮರಣೆಯ ಮಹತ್ವ ತಿಳಿಯಿರಿ
Daily Devotional: ನಿತ್ಯ ಪೂಜೆಯಲ್ಲಿ ಗಣಪತಿ ಸ್ಮರಣೆಯ ಮಹತ್ವ ತಿಳಿಯಿರಿ
Daily Horoscope: ಜೇಷ್ಠ ನಕ್ಷತ್ರದಲ್ಲಿ ಚಂದ್ರನ ಸಂಚಾರ
Daily Horoscope: ಜೇಷ್ಠ ನಕ್ಷತ್ರದಲ್ಲಿ ಚಂದ್ರನ ಸಂಚಾರ
ಹಾಡಿನ ಒಂದು ಸಾಲಿನಿಂದಲೇ ಶುರುವಾಗಿದ್ದು ‘ದೂರ ತೀರ ಯಾನ’ ಸಿನಿಮಾ: ಮಂಸೋರೆ
ಹಾಡಿನ ಒಂದು ಸಾಲಿನಿಂದಲೇ ಶುರುವಾಗಿದ್ದು ‘ದೂರ ತೀರ ಯಾನ’ ಸಿನಿಮಾ: ಮಂಸೋರೆ
ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ
ರಾಜಸ್ಥಾನ ತಂಡದಲ್ಲಿ ಸ್ಥಾನ ಕೊಡಿಸುವುದಾಗಿ ಬೆಳಗಾವಿ ಕ್ರಿಕೆಟರ್​​ಗೆ ವಂಚನೆ