ಕೊಪ್ಪಳ: ವಿದ್ಯಾರ್ಥಿಗಳ ಖಾತೆಗೆ ಹಾಕಬೇಕಿದ್ದ ಹಣ ತಾವೇ ಬಳಸಿಕೊಂಡ ಶಿಕ್ಷಕ
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಬೈಲಕ್ಕಂಪುರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಬ್ಯಾಂಕ್ ಖಾತೆಗೆ ಹಾಕಬೇಕಾದ ಹಣವನ್ನು ಮುಖ್ಯ ಶಿಕ್ಷಕ ತಾನೇ ಬಳಸಿಕೊಂಡಿರುವಂತ ಘಟನೆ ನಡೆದಿದೆ. ಕೊರೊನಾ ಸಂದರ್ಭದಲ್ಲಿ ಬಿಸಿಯೂಟದ ಹಣವನ್ನು ವಿದ್ಯಾರ್ಥಿಗಳ ಖಾತೆಗೆ ಹಾಕಲು ಸರ್ಕಾರ ಸೂಚನೆ ನೀಡಿತ್ತು. ತನಿಖೆಗೆ ಹೆದರಿ ರಾತ್ರೋರಾತ್ರಿ ವಿದ್ಯಾರ್ಥಿಗಳ ಕುಟುಂಬದವರಿಗೆ ಮುಖ್ಯ ಶಿಕ್ಷಕ ಹಣ ನೀಡಿದ್ದಾರೆ.
ಕೊಪ್ಪಳ, ಮಾರ್ಚ್ 13: ಮಕ್ಕಳ ಬ್ಯಾಂಕ್ ಖಾತೆಗೆ ಹಾಕಬೇಕಾದ ಹಣ (money) ವನ್ನು ಮುಖ್ಯ ಶಿಕ್ಷಕ ತಾನೇ ಬಳಸಿಕೊಂಡಿರುವಂತ ಘಟನೆ ಜಿಲ್ಲೆಯ ಕನಕಗಿರಿ ತಾಲೂಕಿನ ಬೈಲಕ್ಕಂಪುರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಉಮೇಶ ಎಂಬ ಮುಖ್ಯ ಶಿಕ್ಷಕರಿಂದ ಹಣ ದುರ್ಬಳಕೆ ಮಾಡಲಾಗಿದೆ. ಸುಮಾರು 20 ಸಾವಿರ ರೂಪಾಯಿ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಬಿಸಿಯೂಟದ ಹಣವನ್ನು ವಿದ್ಯಾರ್ಥಿಗಳ ಖಾತೆಗೆ ಹಾಕಲು ಸರ್ಕಾರ ಸೂಚನೆ ನೀಡಿತ್ತು.
ಪ್ರತಿ ವಿದ್ಯಾರ್ಥಿಗೆ 248 ರೂಪಾಯಿ ಡಿಬಿಟಿ ಮೂಲಕ ನೀಡಬೇಕಿತ್ತು. ಡಿಬಿಟಿ ಮಾಡಬೇಕಾದ ಹಣವನ್ನು ಸ್ವಂತ ಖಾತೆಗೆ ಮುಖ್ಯ ಶಿಕ್ಷಕ ಹಾಕಿಸಿಕೊಂಡಿದ್ದಾರೆ. ಆದರೆ ಇಲಾಖೆಯಿಂದ ತನಿಖೆ ಹಿನ್ನೆಲೆ ಎಚ್ಚೆತ್ತು ಬಳಿಕ ರಾತ್ರೋರಾತ್ರಿ ವಿದ್ಯಾರ್ಥಿಗಳ ಕುಟುಂಬದವರಿಗೆ ಮುಖ್ಯ ಶಿಕ್ಷಕ ಹಣ ನೀಡಿದ್ದಾರೆ.
ಎಟಿಎಂ ನಲ್ಲಿ ಹಣ ಡ್ರಾ ಮಾಡಿಕೊಡ್ತಿನಿ ಅಂತಾ ಕಾರ್ಡ್ ಬದಲಿಸಿ ವಂಚನೆ
ದೇವನಹಳ್ಳಿ: ಇತ್ತೀಚೆಗೆ ಬ್ಯಾಂಕ್ಗಳ ಬಳಿ ಅಪರಿಚಿತರು ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಅಮಾಯಕರ ಬಳಿ ಸಾಕಷ್ಟು ಹಣವನ್ನ ದೋಚುತ್ತಿದ್ದಾರೆ. ಹೀಗೆ ಬಡ ರೈತನೊಬ್ಬ ತಾನು ಕಷ್ಟ ಪಟ್ಟು ದುಡಿದು ಮಾರಾಟ ಮಾಡಿದ ರೇಷ್ಮೆ ಬೆಳೆ ಹಣವನ್ನ ಎಟಿಎಂನಲ್ಲಿ ತೆಗೆದುಕೊಳ್ಳಲು ಹೋಗಿದ್ದಾಗ ಎಟಿಎಂ ಕಾರ್ಡ್ ಬದಲಿಸಿದ ಖದೀಮನೊಬ್ಬ ರೈತನಿಗೆ ಟೋಪಿ ಹಾಕಿ ಎಸ್ಕೆಪ್ ಆಗಿದ್ದಾನೆ.
ಇದನ್ನೂ ಓದಿ: ಗದಗ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಗೆ ಬಿಗ್ ಟ್ವಿಸ್ಟ್, ಪ್ರಕರಣದ ಹಿಂದೆ ಹೆಣ್ಣಿನ ಕೈವಾಡ ಶಂಕೆ..!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಭಟ್ರೇನಹಳ್ಳಿ ಗ್ರಾಮದ ನಿವಾಸಿಯಾದ ಈತ ಹಣ ಡ್ರಾ ಮಾಡಿಕೊಳ್ಳಲು ಎಟಿಎಂಗೆ ಹೋಗಿದ್ದಾಗ ಈತನ ಯಾಮಾರಿಸಿದ ಖದೀಮನೊಬ್ಬ ಎಟಿಎಂ ಕಾರ್ಡ್ ಬದಲಿಸಿ ಸಾವಿರಾರು ರೂ ಹಣ ಎಗರಿಸಿ ಎಸ್ಕೇಪ್ ಆಗಿರುವಂತಹ ಘಟನೆ ನಡೆದಿದೆ. ಅಂದಹಾಗೆ ರೈತ ರಾಜಣ್ಣ ರೇಷ್ಮೆ ಬೆಳೆಗಾರನಾಗಿದ್ದು ತಿಂಗಳೆಲ್ಲಾ ಕಷ್ಟ ಪಟ್ಟು ರೇಷ್ಮೆ ಬೆಳೆದು ತನ್ನ ದುಡಿಮೆಯಲ್ಲಿ ಜೀವನ ಕಟ್ಟಿಕೊಂಡಿದ್ದರು.
ಇದನ್ನೂ ಓದಿ: ಬೆಳಗಾವಿ: ಹುಕ್ಕಾ ಬಾರ್ & ತಂಬಾಕಿನ ಉತ್ಪನ್ನ ಮಾರಾಟ ಮಳಿಗೆ ಮೇಲೆ ದಾಳಿ; 5 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ವಶಕ್ಕೆ
ಹೀಗೆ ಬೆಳೆದ ಬೆಳೆಯನ್ನ ಮಾರುಕಟ್ಟೆಗೆ ಹೋಗಿ ಗೂಡನ್ನ ಮಾರಿದ್ದು ಅಕೌಂಟ್ಗೆ ಬಂದಿದ್ದ ಹಣವನ್ನ ಡ್ರಾ ಮಾಡಿಕೊಳ್ಳಲು ವಿಜಯಪುರ ಪಟ್ಟಣದ ಕರ್ನಾಟಕ ಬ್ಯಾಂಕ್ ಎಟಿಂಗೆ ತೆರಳಿದ್ದ. ಈ ವೇಳೆ ಅಪರಿಚಿತ ನಾನು ಹಣ ಡ್ರಾ ಮಾಡಿಕೊಡ್ತಿನಿ ಅಂತ ರೈತನಿಂದ ಎಟಿಎಂ ಪಡೆದಿದ್ದು ಮೊದಲು 10 ಸಾವಿರ ಹಣ ಡ್ರಾ ಮಾಡಿಕೊಟ್ಟಿದ್ದಾನೆ. ರೈತ ಹಣವನ್ನ ಎಣಿಕೆ ಮಾಡಿಕೊಳ್ಳುಷ್ಟರಲ್ಲಿ ಕೈಯಲ್ಲಿದ್ದ ಎಟಿಎಂ ಬದಲಿಸಿದ ಖದೀಮ ಬೇರೆಯೊಂದು ಬ್ಯಾಂಕ್ ನ ಎಟಿಎಂ ಕಾರ್ಡ ಅನ್ನ ರೈತನ ಕೈಗಿಟ್ಟು ಅಲ್ಲಿಂದ ಎಸ್ಕೆಪ್ ಆಗಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.