Koppal News:ಕೆಜಿಗೆ 2.50 ಲಕ್ಷ ರೂ, 1 ಹಣ್ಣಿಗೆ 40 ಸಾವಿರ: ಕೊಪ್ಪಳದಲ್ಲಿ ಈ ಮಾವಿನ ಹಣ್ಣು ನೋಡಲು ಮುಗಿಬಿದ್ದ ಜನ

|

Updated on: May 25, 2023 | 10:11 AM

ಹಣ್ಣುಗಳ ರಾಜ ಅಂದ್ರೆ ಅದು ಮಾವು, ಬೇಸಿಗೆ ಬಂದ್ರೆ ಸಾಕು ಮಾವಿನ ಹಣ್ಣಿನ ರುಚಿ ಸವಿಯಲು ಜನರು ಮುಂದಾಗ್ತಾರೆ, ಆದ್ರೆ ಕೊಪ್ಪಳದಲ್ಲಿ ನಡೆದ ಮಾವಿನ ಮೇಳ ಎಲ್ಲರ ಗಮನವನ್ನೂ ತನ್ನತ್ತ ಸೆಳೆದಿದೆ. ಹಣ್ಣುಗಳ ರಾಜನ ಸಮಾವೇಶದಲ್ಲಿ ಜನರು ಮುಗಿ ಬಿದ್ದು ಖರಿದಿಸ್ತಾಯಿದ್ದಾರೆ.ಅದರಲ್ಕೂ ಅದೊಂದು ಹಣ್ಣು ಎಲ್ಲರನ್ನ ಹುಬ್ಬೇರಿಸುವಂತೆ ಮಾಡಿತ್ತು. ಯಾಕೆಂದ್ರೆ ಅದರ ಬೆಲೆ ಕೇಳಿದ್ರೆ ಅಚ್ಚರಿ ಆಗ್ತೀರಾ....?

Koppal News:ಕೆಜಿಗೆ 2.50 ಲಕ್ಷ ರೂ, 1 ಹಣ್ಣಿಗೆ 40 ಸಾವಿರ: ಕೊಪ್ಪಳದಲ್ಲಿ ಈ ಮಾವಿನ ಹಣ್ಣು ನೋಡಲು ಮುಗಿಬಿದ್ದ ಜನ
ಕೊಪ್ಪಳ ಮಾವಿನ ಮೇಳ
Follow us on

ಕೊಪ್ಪಳ: ಎಲ್ಲಿ ನೋಡಿದ್ರು ಕಲರ್ ಕಲರ್ ಮಾವಿನ ಹಣ್ಣು(Mango)ಗಳು, ಹಣ್ಣುಗಳನ್ನ ನೋಡಲು ಮುಗಿ ಬಿದ್ದಿರೊ ಜನರು, ಹಣ್ಣುಗಳ ರಾಜನ ಮೇಳದಲ್ಲಿ ಒಂದಕ್ಕಿಂತ ಒಂದು ವೆರೈಟಿಗಳು, ಹಳದಿ ಬಣ್ಣದಿಂದ ರಸತುಂಬಿ ನಿಂತ ಮಾವುಗಳು ಒಂದೆಡೆಯಾದ್ರೆ ಇನ್ನೊಂದೆಡೆ ಹಚ್ಚ ಹಸಿರಿನ ಎಳೆನೀರ ಗಾತ್ರದ ಆಮ್ಲೇಟ್ ಮಾವಿನಕಾಯಿಗಳು, ಇಷ್ಟೆ ಅಲ್ಲದೆ ಜಗತ್ತಿನ ದುಬಾರಿ ಖ್ಯಾತಿಯ ಮಿಯಾ ಜಾಕಿ ಹಣ್ಣು(miyazaki mango), ಅದರ ಬೆಲೆ ಪ್ರತಿ ಕೆ.ಜಿಗೆ ಬರೊಬ್ಬರಿ 2.70 ಲಕ್ಷ ರೂ. ಒಂದು ಹಣ್ಣಿನ ಬೆಲೆ 40 ಸಾವಿರ ರೂಪಾಯಿ. ಹೀಗೆ ಒಂದಲ್ಲ ಎರಡಲ್ಲ ನೂರಾರು ಬಗೆಯ ಮಾವಿನ ಸಮಾಗಮವೇ ಕೊಪ್ಪಳದ ತೋಟಗಾರಿಕೆ ಇಲಾಖೆಯ ಆರಣದಲ್ಲಿ ಕೂಡಿತ್ತು.

ಜಪಾನ್ ಮೂಲದ ಮಾವಿನ ಹಣ್ಣು, ಈ ಮಿಯಾ ಜಾಕಿ

ಕೊಪ್ಪಳ ಭಾಗದ ಮಾವು ಬೆಳಗಾರರು ಬೆಳೆದ ಮಾವಿನ ಹಣ್ಣು ಪ್ರದರ್ಶನ ಹಾಗೂ ಮಾರಾಟ ಮೇಳವನ್ನ ಆಯೋಜನೆ ಮಾಡಲಾಗಿತ್ತು. ಈ ಮಾವು ಮೇಳದಲ್ಲಿ ರೈತರು ತಾವು ಬೆಳೆದ ವಿವಿಧ ಬಗೆಯ ಮಾವಿನ ಹಣ್ಣುಗಳನ್ನ ಮಾರಾಟಕ್ಕೆ ತಂದು ಇಡಲಾಗಿತ್ತು. ಇದರ ಜೊತೆ ಜಗತ್ತೀನ ಅತೀ ದುಬಾರಿ ಮಾವಿನಹಣ್ಣುಗಳಲ್ಲಿ ಒಂದಾದ ಜಪಾನ್ ಮೂಲದ ಮೀಯಾ ಜಾಕಿ ತಳಿಯ ಹಣ್ಣನ್ನ ಪ್ರದರ್ಶನಕ್ಕೆ ತರಲಾಗಿತ್ತು. ಹೌದು ಇದರ ಬೆಲೆ 1 ಕೆ.ಜಿಗೆ ಬರೊಬ್ಬರಿ 2.50 ಲಕ್ಷ ರೂಪಾಯಿಗಳು. ಈ ತಳಿಯ ಒಂದು ಹಣ್ಣಗೆ 40 ಸಾವಿರ ರೂಪಾಯಿ ಕೊಟ್ಟು ತಂದಿರುವ ತೋಟಗಾರಿಕೆ ಇಲಾಖೆ, ಮಾವಿನ ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿತ್ತು.

ಇದನ್ನೂ ಓದಿ:Summer Health Tips: ಮಧುಮೇಹಿಗಳು ಮಾವಿನ ಹಣ್ಣು ತಿನ್ನಬಹುದೇ? ತಜ್ಞರು ನೀಡಿರುವ ಸಲಹೆ ಇಲ್ಲಿದೆ

ಇನ್ನು ಈ ಮಿಯಾ ಜಾಕಿ ಹಣ್ಣು ಎಲ್ಲರ ಗಮನ ಸೆಳೆಯುತ್ತಿದ್ದು, ಇದನ್ನ ನೋಡಲು ಜನರು ಮುಗಿಬಿದ್ದಿದ್ದಾರೆ. ಇಂತಹ ತಳಿಯನ್ನ ಇದೇ ಮೊದಲ ಬಾರಿಗೆ ಪರಿಚಯಿಸುತ್ತಿರುವ ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಜಪಾನ್ ನಲ್ಲಿ ಹೆಚ್ಚಾಗಿ ಬೆಳೆಯುವ ಹಣ್ಣು ಔಷಧಿ ಗುಣಗಳನ್ನ ಹೊಂದಿದೆಯಂತೆ. ಈ ಮೀಯಾ ಜಾಕಿ ಹಣ್ಣಿನ ಒಂದು ಸಸಿಗೆ ಬರೊಬ್ಬರಿ 15 ಸಾವಿರ ರೂಪಾಯಿಗಳಂತೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಕೃಷ್ಣಾ ಉಕ್ಕುಂದ್ ತಿಳಿಸಿದರು. ಸದ್ಯ ಕೊಪ್ಪಳದಲ್ಲಿ ನಡೆಯುತ್ತಿರುವ ಮಾವು ಮೇಳಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಮಾವು ಮೇಳದಲ್ಲಿ ಮಾವಿನ ಉತ್ಪನ್ನಗಳನ್ನು ಸಹ ಮಾರಾಟ ಮಾಡಲಾಗುತ್ತಿದೆ. ಹೊಸ ಬಗೆಯ ತಳಿಗಳನ್ನು ಪರಿಚಯ ಮಾಡಿಸಲಾಗುತ್ತಿದೆ. ಸದ್ಯ ತೋಟಗಾರಿಕೆ ಇಲಾಖೆಯ ಆಯೋಜನೆ ಮಾಡಿರೋ ಮಾವು ಮೇಳ ಜಿಲ್ಲೆಯ ರೈತರಿಗೆ ಅನುಕೂಲವಾಗಿರೋದಂತೂ ಸತ್ಯ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ