Summer Health Tips: ಮಧುಮೇಹಿಗಳು ಮಾವಿನ ಹಣ್ಣು ತಿನ್ನಬಹುದೇ? ತಜ್ಞರು ನೀಡಿರುವ ಸಲಹೆ ಇಲ್ಲಿದೆ

ನೀವು ಮಧುಮೇಹಿಗಳಾಗಿದ್ದು, ಮಾವಿನ ಹಣ್ಣು ತಿಂದರೆ, ಅದು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಚಿಂತೆಯೇ? ಹಾಗಿದ್ದರೆ ನಿಮ್ಮೆಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಉತ್ತರ ಇಲ್ಲಿದೆ.

Summer Health Tips: ಮಧುಮೇಹಿಗಳು ಮಾವಿನ ಹಣ್ಣು ತಿನ್ನಬಹುದೇ? ತಜ್ಞರು ನೀಡಿರುವ ಸಲಹೆ ಇಲ್ಲಿದೆ
Follow us
ಅಕ್ಷತಾ ವರ್ಕಾಡಿ
|

Updated on: Apr 15, 2023 | 6:26 AM

ಬೇಸಿಗೆ ಪ್ರಾರಂಭವಾಗಿದೆ, ಜೊತೆಗೆ ಇದು ಮಾವಿನ ಹಣ್ಣಿನ ಸೀಸನ್​​ ಕೂಡ ಹೌದು. ಮನೆಯಲ್ಲೊಂದು ಮಾವಿನ ಹಣ್ಣಿದ್ದರೆ ಇಡೀ ಮನೆಯೇ ಅದರ ಸುವಾಸನೆಯಿಂದಲೇ ಕೂಡಿರುತ್ತದೆ. ಜೊತೆಗೆ ಬಾಯಲ್ಲಿ ನೀರುರಿಸುವುದಂತೂ ಖಂಡಿತಾ. ಆದರೆ ನೀವು ಮಧುಮೇಹಿಗಳಾಗಿದ್ದು, ಮಾವಿನ ಹಣ್ಣು ತಿಂದರೆ, ಅದು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬ ಚಿಂತೆಯೇ? ಹಾಗಿದ್ದರೆ ನಿಮ್ಮೆಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಉತ್ತರ ಇಲ್ಲಿದೆ.

ದೆಹಲಿಯ ಪ್ರೈಮಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆರೋಗ್ಯ ತಜ್ಞರಾದ ಅಂಕಿತಾ ಘೋಷಾಲ್ ನೀಡಿರುವ ಮಾಹಿತಿ ಇಲ್ಲಿದೆ. ಮಧುಮೇಹಿಗಳು ಮಾವಿನ ಹಣ್ಣನ್ನು ಮಿತವಾಗಿ ಸೇವಿಸಿ, ನಿಮ್ಮ ಆಹಾರ ಕ್ರಮದಲ್ಲಿ ಜೋಡಿಸಿ ಎಂದು ಆಹಾರ ತಜ್ಞರು ಹೇಳುತ್ತಾರೆ. ನೀವು ಖಾಲಿ ಮಾವಿನ ಹಣ್ಣನ್ನು ಸೇವಿಸುವ ಬದಲಾಗಿ ಸಲಾಡ್‌, ಮೊಸರಿನೊಂದಿಗೆ ಸೇವಿಸಿ ಎಂದು ಅಂಕಿತಾ ಘೋಷಾಲ್ ಹೇಳುತ್ತಾರೆ. ಮಾವಿನಹಣ್ಣಿನಲ್ಲಿರುವ ಕರಗುವ ಮತ್ತು ಕರಗದ ನಾರುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ನಾರುಗಳು ದೇಹದಲ್ಲಿನ ಸಕ್ಕರೆ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ ಮತ್ತು ಇದರಿಂದಾಗಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟಗಳ ಮೇಲೆ ಕನಿಷ್ಠ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಹೊಟ್ಟೆ ಉಬ್ಬರಕ್ಕೆ ಈ 5 ಆಹಾರಗಳು ಕಾರಣ; ಇವುಗಳನ್ನು ಮಿತವಾಗಿ ಸೇವಿಸಿ

ನೀವು ಮಧುಮೇಹಿಯಾಗಿರಲಿ ಅಥವಾ ಮಧುಮೇಹ ಪೂರ್ವದವರಾಗಿರಲಿ, ಮಾವಿನಹಣ್ಣನ್ನು ಸೇವಿಸುವಾಗ ಕೆಲವು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆಹಾರ ತಜ್ಞ ಅಂಕಿತಾ ಘೋಷಾಲ್ ಅವರು ಈ ಕೆಳಗಿನ ಸಲಹೆಗಳನ್ನು ನೀಡಿದ್ದಾರೆ.

  • ಮಾವಿನಹಣ್ಣನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿ ಅರ್ಧ ಕಪ್ ಅಥವಾ ಒಂದು ಕಪ್‌ಗೆ ಮಿತಿಗೊಳಿಸಿ.
  • ಕಡಿಮೆ ಗ್ಲೈಸೆಮಿಕ್ ಹೊಂದಿರುವ ಮಾವಿನಹಣ್ಣುಗಳನ್ನು ಆರಿಸಿಕೊಳ್ಳಿ.
  • ಮಾವಿನಹಣ್ಣನ್ನು ಸೇವಿಸಿದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಎಷ್ಟಿದೆ ಎಂದು ತಿಳಿದಿಕೊಳ್ಳಿ.

ಮಧುಮೇಹಿಗಳೇ ಈ ತಪ್ಪು ಮಾಡದಿರಿ:

  • ಮಾವಿನ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದನ್ನು ತಪ್ಪಿಸಿ ಏಕೆಂದರೆ ಅವುಗಳು ಹೆಚ್ಚಿನ ಸಕ್ಕರೆಯನ್ನು ಹೊಂದಿರುತ್ತವೆ.
  • ಮಾವಿನಹಣ್ಣಿನ ರಸ ಅಥವಾ ಸ್ಮೂಥಿಗಳಿಂದ ದೂರವಿರಿ ಏಕೆಂದರೆ ಅವುಗಳು ಸೇರಿಸಿದ ಸಕ್ಕರೆಗಳನ್ನು ಹೊಂದಿರಬಹುದು.
  • ಈಗಾಗಲೇ ಕಾರ್ಬೋಹೈಡ್ರೇಟ್‌ಗಳು ಹೆಚ್ಚಿರುವ ಊಟದೊಂದಿಗೆ ಮಾವಿನಹಣ್ಣನ್ನು ಸೇವಿಸುವುದನ್ನು ತಪ್ಪಿಸಿ.
  • ದ್ರಾಕ್ಷಿಗಳು, ಬಾಳೆಹಣ್ಣುಗಳು ಅಥವಾ ಚೆರ್ರಿಗಳಂತಹ ಹೆಚ್ಚಿನ ಸಕ್ಕರೆಯ ಹಣ್ಣುಗಳೊಂದಿಗೆ ಮಾವಿನಹಣ್ಣುಗಳನ್ನು ಸೇವಿಸಬೇಡಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ