ಕೊಪ್ಪಳ, (ಅಕ್ಟೋಬರ್ 10): ಗಣೇಶ ವಿಸರ್ಜನೆ ಮೆರವಣಿಗೆ (ganesha procession) ವೇಳೆ ಡಾನ್ಸ್ ಮಾಡುತ್ತಿದ್ದ ಯುವಕ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಕೊಪ್ಪಳ (Koppal) ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ. ಸುದೀಪ್ ಸಜ್ಜನ್ (30) ಮೃತ ಯುವಕ. ಪ್ರಶಾಂತ ನಗರದ 21 ದಿನದ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಈ ದುರ್ಘಟನೆ ನಡೆದಿದೆ. ಮೆರವಣಿಯಲ್ಲಿ ಬೆಳ್ಳಂಬೆಳಗ್ಗೆ ಯುವಕರು ಡಿಜೆ ಸೌಂಡ್‍ಗೆ ಹುಚ್ಚೆದ್ದು ಕುಣಿಯುತ್ತಿದ್ದರು. ಈ ವೇಳೆ ಸುದೀಪ್ ಸಜ್ಜನ್ಗೆ ಹೃದಯಾಘಾತವಾಗಿದೆ (heart attack) ಎಂದು ಹೇಳಲಾಗುತ್ತಿದೆ.
ಡಿಜೆ ವೇಳೆ ಡಿಜೆ ಸೌಂಡ್‍ಗೆ ಸುದೀಪ್ ಸಜ್ಜನ್ ಗೆ ಹೃದಯಾಘಾತವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಈ ಘಟನೆ ನಡೆಯುತ್ತಿದ್ದಂತೆಯೇ ಯುವಕರು ಸ್ವಯಂಪ್ರೇರಿತವಾಗಿ ಡಿಜೆಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಇನ್ನು ಗಂಗಾವತಿ ನಗರ ಠಾಣೆಯ ಪೊಲೀಸರು, ಡಿಜೆಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ರಾಯಚೂರು: ಡಿಜೆ ಸೌಂಡಿಗೆ 19 ದಿನದ ಹಸುಗೂಸು ಸಾವನ್ನಪ್ಪಿತೇ? ವೈದ್ಯರು ಹೇಳುವುದೇನು? ಇಲ್ಲಿದೆ ವಿವರ
ಮೊನ್ನೆ ರಾಯಚೂರಿನಲ್ಲಿ ಡಿಜೆ ಸೌಂಡ್‍ಗೆ ಮಲಗಿದ್ದಲ್ಲೇ 19 ದಿನದ ಮಗು ಸಾವನ್ನಪ್ಪಿರುವ ಆರೋಪ ಕೇಳಿಬಂದಿತ್ತು. ರಾಯಚೂರಿನ ಮಡ್ಡಿಪೇಟೆಯಲ್ಲಿ ಸೆಪ್ಟೆಂಬರ್ 27ರಂದು ಸುರೇಶ್ ಬಾಬು, ಸುಮತಿ ದಂಪತಿಯ ಹೆಣ್ಣು ಮಗು ಮೃತಪಟ್ಟಿತ್ತು, ಅತಿಯಾದ ಡಿಜೆ ಸೌಂಡ್ನಿಂದ ಮೃತಪಟ್ಟಿದೆ ಎಂದು ಆರೋಪ ಮಾಡಿದ್ದರು.
ಈ ಕುರಿತಾಗಿ ಟಿವಿ9ಗೆ ಇಎನ್ಟಿ ತಜ್ಞ ವೈದ್ಯ ಡಾ.ವೆಂಕಟೇಶ್ ಪ್ರತಿಕ್ರಿಯೆ ನೀಡಿದ್ದು, ಅತಿಯಾದ ಡಿಜೆ ಸೌಂಡ್ನಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಹೃದಯದ ಬಡಿತ ಏರುಪೇರಾಗುತ್ತೆ, ಖಿನ್ನತೆಯಂತಹ ಸಮಸ್ಯೆ ಆಗಬಹುದು. ಮಗು ಮಲಗಿದ್ದ ವೇಳೆ ಸಡನ್ ಆಗಿ ಅತಿಯಾದ ಶಬ್ದ ಕೇಳಿಬಂದರೆ ಆಘಾತವಾಗಬಹುದು ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ