ಸರ್ಕಾರದಿಂದ ಇಡೋ-ಆಸೀಸ್ ಫೈನಲ್ ಪಂದ್ಯ ನೇರಪ್ರಸಾರ: 90 ಕಿ.ಮೀ. ದೂರದ ಹಳ್ಳಿಯಿಂದ ಕೊಪ್ಪಳಕ್ಕೆ ಬಂದ ಅಭಿಮಾನಿ

india australia world cup Final Match: ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಭಾರತ-ಆಸೀಸ್ ಹಣಾಹಣಿಗೆ ಕೌಂಟ್​​ಡೌನ್​​ ಶುರುವಾಗಿದೆ. ಫೈನಲ್​ ಪಂದ್ಯ ವೀಕ್ಷಣೆಗೆ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಇನ್ನೊಂದೆಡೆ ರಾಜ್ಯ ಸರ್ಕಾರ, ವರ್ಲ್ಡ್​​​ ಕಪ್ ಅಂತಿಮ ಪಂದ್ಯವನ್ನು ಸಾರ್ವಜನಿಕರ ವೀಕ್ಷಣೆಗೆ ಆಯಾ ಜಿಲ್ಲಾ ಕ್ರೀಡಾಂಗಣದಲ್ಲಿ ದೊಡ್ಡ ಸ್ಕ್ರೀನ್​ ಅವಳಡಿಕೆಗೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಅಭಿಮಾನಿಯೋರ್ವ 90 ಕಿ.ಮೀ ದೂರದಿಂದ ಕೊಪ್ಪಳಕ್ಕೆ ಆಗಮಿಸಿದ್ದಾರೆ.

Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ರಮೇಶ್ ಬಿ. ಜವಳಗೇರಾ

Updated on:Nov 19, 2023 | 11:39 AM

ಕೊಪ್ಪಳ, (ನವೆಂಬರ್ 19): ದೇಶದಾದ್ಯಂತ ವಿಶ್ವಕಪ್ ಕ್ರಿಕೆಟ್ ಫೀವರ್ ಜೋರಾಗಿದೆ. ಗುಜರಾತ್​ನ ಅಹಮದಾಬಾದ್​​​​​​ನಲ್ಲಿರೋ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ- ಆಸ್ಟ್ರೇಲಿಯಾ ಅಖಾಡಕ್ಕಿಳಿಯಲಿವೆ. ಮದಗಜಗಳ ಕಾಳಗವನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಗಿಫ್ಟ್​​ ನೀಡ್ತಿದೆ. ಫೈನಲ್ ಪಂದ್ಯದ ನೇರಪ್ರಸಾರವನ್ನ ಜಿಲ್ಲಾ ಕೇಂದ್ರಗಳಲ್ಲಿ ಮಾಡುವಂತೆ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಸುತ್ತೋಲೆ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಅಭಿಮಾನಿಯೋರ್ವ, 90 ಕಿ.ಮೀ. ದೂರದ ಹಳ್ಳಿಯಿಂದ ಕೊಪ್ಪಳ ನಗರಕ್ಕೆ ಆಗಮಿಸಿದ್ದಾನೆ.

ಕುಷ್ಟಗಿ ತಾಲೂಕಿನ ಅಡವಿಬಾವಿ ಗ್ರಾಮದ ನಿವಾಸಿ ರಮೇಶ್ , ತಮ್ಮೂರಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ 90 ಕಿ.ಮೀ. ದೂರದ ಕೊಪ್ಪಳ ನಗರಕ್ಕೆ ಬಂದಿದ್ದಾನೆ. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಮೇಶ್, ನಮ್ಮೂರಲ್ಲಿ ಕರೆಂಟ್ ಇರಲ್ಲ. ಹೀಗಾಗಿ ಕೊಪ್ಪಳಕ್ಕೆ ಬಂದಿದ್ದೇನೆ. ಸಂಬಂಧಿ ಮದುವೆ ಇತ್ತು. ಆದರೂ ಬಿಟ್ಟು ಕ್ರಿಕೆಟ್ ನೋಡಲು ಬಂದಿದ್ದೇನೆ. ನೂರು ರೂಪಾಯಿ ಬಸ್ ಚಾರ್ಜ್ ಹಾಕಿಕೊಂಡು ಕೊಪ್ಪಳಕ್ಕೆ ಬಂದಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: IND vs AUS Final: ಇತಿಹಾಸ ಸೃಷ್ಟಿಸಲು ಒಂದೇ ಹೆಜ್ಜೆ ಬಾಕಿ: ವಿಶ್ವಕಪ್ 2023 ರಲ್ಲಿ ಭಾರತದ ಪಯಣ ಹೇಗಿತ್ತು ನೋಡಿ

ರಾಜ್ಯದ ಎಲ್ಲ ಜಿಲ್ಲಾ ಕ್ರೀಡಾಂಗಣಗಳಲ್ಲಿ ಸಾರ್ವಜನಿಕರು ಹಾಗೂ ಕ್ರೀಡಾಪಟುಗಳಿಗೆ ಪಂದ್ಯ ವೀಕ್ಷಿಸಲು ಅನುಕೂಲ ಕಲ್ಪಿಸುವಂತೆ ಸುತ್ತೋಲೆ ಹೊರಡಿಸಿದ್ದು, ಎಲ್​ಇಡಿ ಸ್ಕ್ರೀನ್ ಅಳವಡಿಸುವಂತೆ ಸೂಚನೆ ನೀಡಿದೆ. ಸರ್ಕಾರದ ಆದೇಶದಂತೆ ಆಯಾ ಜಿಲ್ಲಾ ಕ್ರೀಡಾಂಗಣದಲ್ಲಿ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕ ಉಚಿತವಾಗಿ ನೋಡಲು ಜಿಲ್ಲಾಡಳಿತವೂ ಬೃಹತ್ ಎಲ್​ಇಡಿ ಸ್ಕ್ರೀನ್​ನನ್ನು ಅಳವಡಿಸಲು ಸಿದ್ಧತೆ ಮಾಡಿಕೊಂಡಿದೆ. ಜೊತೆಗೆ ಭದ್ರತೆಗೆ ಪೊಲೀಸರನ್ನ ನಿಯೋಜಿಸಿದೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:33 am, Sun, 19 November 23