ಶಿಕ್ಷಕರಿಗೇ ಪಾಠ – ಇದು ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳ ಏಳಿಗೆಗಾಗಿ
ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಫಲಿತಾಂಶ ಬಂದಾಗ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಫಲಿತಾಂಶವನ್ನು ಮೇಲಿಂದ ನೋಡುವ ಬದಲು ಕೆಳಗಿನಿಂದಲೇ ನೋಡುವುದು ರೂಢಿಯಾಗಿದೆ! ಇದನ್ನು ಏರುಪೇರು ಮಾಡಲು ಹೊಸ ಯೋಜನೆ - ಮಕ್ಕಳ ಬದಲು ಟೀಚರ್ಸ್ ಗೆ ಪಾಠ!
ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಫಲಿತಾಂಶ ಬಂದಾಗ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಫಲಿತಾಂಶವನ್ನು ಮೇಲಿಂದ ನೋಡುವ ಬದಲು ಕೆಳಗಿನಿಂದಲೇ ನೋಡುವುದು ರೂಢಿಯಾಗಿದೆ! ಇದಕ್ಕೆ ಕಾರಣ ಫಲಿತಾಂಶ ಪ್ರಕಟವಾದಾಗ ಕೊನೆಯ ಸ್ಥಾನದಲ್ಲಿರೋದು ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳು. ಹೌದು ಕಲ್ಯಾಣ ಕರ್ನಾಟಕ ಭಾಗ ಶೈಕ್ಷಣಿಕವಾಗಿ ಹಿಂದುಳಿದಿದೆ. ಆದ್ರೆ ಈ ಹಣೆಪಟ್ಟಿಯನ್ನು ಬದಲಾಯಿಸಲು ಅನೇಕ ಪ್ರಯತ್ನಗಳು ಆರಂಭವಾಗಿವೆ. ಹೌದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಮುಂದೆ ತರಲು ಕೆ ಕೆ ಆರ್ ಡಿ ಬಿ ಹೊಸ ಪ್ಲ್ಯಾನ್ ರೂಪಿಸಿದೆ. ಮಕ್ಕಳ ಬದಲು ಟೀಚರ್ಸ್ ಗೆ ಪಾಠ ಹೇಳಲು ಮುಂದಾಗಿದೆ.
ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ರಿಸಲ್ಟ್ ಬಂದಾಗ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಕೊನೆಯಿಂದ ಸ್ಥಾನ ಸಿಗೋದು ಮಾತ್ರ ಪ್ರತಿ ವರ್ಷ ಪಕ್ಕಾ ಆಗಿರುತ್ತೆ. ಅದಕ್ಕೆ ಕಾರಣ ಗುಣಮಟ್ಟದ ಶಿಕ್ಷಣ ಕೊರತೆ, ಮೂಲಭೂತ ಸೌಕರ್ಯ ಕೊರತೆ, ತಾಂಡವವಾಡುವ ಬಡತನ, ಶಿಕ್ಷಕರ ಕೊರತೆ ಸೇರಿದಂತೆ ಅನೇಕಾನೇಕ ಕಾರಣಗಳಿವೆ. ಆದ್ರೆ ಸದ್ಯ ಕಲ್ಯಾಣ ಕರ್ನಾಟಕ ಹೊತ್ತುಕೊಂಡಿರೋ ಈ ಹಣೆಪಟ್ಟಿಯನ್ನ ಹೋಗಲಾಡಿಸಲು ಸರ್ಕಾರ ಹೊಸ ಪ್ಲ್ಯಾನ್ ರೂಪಿಸಿದೆ.
ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಮೊದಲು ಮಕ್ಕಳ ಬದಲಿಗೆ ಶಿಕ್ಷಕರಿಗೆ ಪಾಠ ಮಾಡಲು ಮುಂದಾಗಿದೆ. ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಫಲಿತಾಂಶದ ಸುಧಾರಣೆಗೆ ಕೆಕೆಆರ್ ಡಿಬಿ ವಿಭಿನ್ನ ಯೋಜನೆ ರೂಪಿಸಿದೆ. ಮಕ್ಕಳ ಬದಲಾಗಿ ಈ ಭಾಗದ ಶಿಕ್ಷಕರಿಗೆ ವ್ಯಕ್ತಿತ್ವ ವಿಕಸನ ತರಬೇತಿ ನೀಡಲು ಮುಂದಾಗಿದ್ದಾರೆ. ಪ್ರಾಯೋಗಿಕವಾಗಿ ಕಲ್ಯಾಣ ಕರ್ನಾಟಕ ವ್ಯಾಪ್ತಿಯ 7 ಜಿಲ್ಲೆಗಳಲ್ಲಿ ಜಿಲ್ಲೆಗೆ ಒಂದರಂತೆ ತರಬೇತಿ ಶಿಬಿರ ಆಯೋಜಿಸಲಾಗುತ್ತಿದೆ. ಸ್ವತಃ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಜಯ್ ಸಿಂಗ್ ಶಿಬಿರ ಆಯೋಜನೆಗೆ ಆದೇಶಿಸಿದ್ದು ವಿಶೇಷವಾಗಿದೆ. ಅಂತಾರಾಷ್ಟ್ರೀಯ ತರಬೇತುದಾರ ಹಾಗೂ ಮಾರ್ಗದರ್ಶಕ ಜಯಪ್ರಕಾಶ ನಾಗತಿಹಳ್ಳಿ ಅವರು ಕಲ್ಯಾಣ ಕರ್ನಾಟಕದ ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಜನ ಸಾಕಷ್ಟು ಪ್ರತಿಭಾವಂತರಿದ್ದಾರೆ. ಆದರೆ ಶಾಲಾ ಹಂತದಲ್ಲಿ ಸೂಕ್ತ ಮಾರ್ಗದರ್ಶನದ ಕೊರತೆಯಿಂದ ಹೆಚ್ಚು ಫಲಿತಾಂಶ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಭಾಗದ ಮಕ್ಕಳಿಗೆ ತರಬೇತಿ ಸಿಗಬೇಕು ಎಂದಾದರೆ ಇಲ್ಲಿನ ಶಿಕ್ಷಕರಿಗೆ ವ್ಯಕ್ತಿತ್ವ ವಿಕಸನದ ತರಬೇತಿ ಅಗತ್ಯ ಎಂದು ನಿರ್ಧರಿಸಿ, ಶಿಕ್ಷಕರಿಗೆ ತರಬೇತಿ ಕೊಡಿಸಲು ಮುಂದಾಗಿದ್ದಾರೆ. ಯೋಜನೆಯನ್ನು ಪ್ರಾಯೋಗಿಕವಾಗಿ ಈಗಾಗಲೇ ಅನುಷ್ಠಾನಕ್ಕೆ ಮುಂದಾಗಿದ್ದಾರೆ.
ಕಲ್ಯಾಣ ಕರ್ನಾಟಕ 7 ಜಿಲ್ಲೆಯಲ್ಲಿ ಜಿಲ್ಲೆಗೆ ಒಂದರಂತೆ ಒಂದು ದಿನದ ತರಬೇತಿ ಶಿಬಿರ ಆಯೋಜಿಸಲಾಗಿದೆ. ಈಗಾಗಲೇ ಬಳ್ಳಾರಿ, ವಿಜಯನಗರ ಮುಗಿಸಿ, ಇಂದು ಕೊಪ್ಪಳದಲ್ಲಿ ಶಿಬಿರ ನಡೆಯಿತು. ಜಿಲ್ಲೆಯ ಆಯ್ದ 100 ಶಿಕ್ಷಕರು ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಪ್ರಾಯೋಗಿಕ ಶಿಬಿರದಲ್ಲಿ ಭಾಗವಹಿಸಿದ ಶಿಕ್ಷಕರ ಪ್ರತಿಕ್ರಿಯೆ ನೋಡಿಕೊಂಡು ತಾಲೂಕು ಮಟ್ಟದಲ್ಲೂ ಶಿಬಿರ ನಡೆಸುವ ಚಿಂತನೆ ಮಂಡಳಿಗೆ ಇದೆ ಅಂತಾರೆ. ಬುಧವಾರ ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಈ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ನಡೆದಿದ್ದು ನೂರಾರು ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.
Published On - 3:44 pm, Thu, 22 February 24