ಖಬರಸ್ತಾನ್ ಜಾಗದಲ್ಲಿ ಸರ್ವೆ ವೇಳೆ ಆಂಜನೇಯ ದೇಗುಲದ ಕೊಂಡ ಪತ್ತೆ: ಎರಡು ಧರ್ಮೀಯರ ಮಧ್ಯೆ ವಾಕ್ಸಮರ

| Updated By: preethi shettigar

Updated on: Dec 15, 2021 | 4:15 PM

ಖಬರಸ್ತಾನ ಜಾಗದ ವಸ್ತು ಸ್ಥಿತಿ ವರದಿ ನೀಡಲು ಜಿಲ್ಲಾಡಳಿತಕ್ಕೆ ಕೋರ್ಟ್ ಆದೇಶಿಸಿದೆ. ಹೀಗಾಗಿ ವಸ್ತು ಸ್ಥಿತಿ ಅಧ್ಯಯನಕ್ಕೆ ಜಿಲ್ಲಾಡಳಿತ ಆಗಮಿಸಿದ್ದು, ಈ ವೇಳೆ ಆಂಜನೇಯನ‌ ಕೊಂಡ ಪತ್ತೆಯಾಗಿದೆ.

ಖಬರಸ್ತಾನ್ ಜಾಗದಲ್ಲಿ ಸರ್ವೆ ವೇಳೆ ಆಂಜನೇಯ ದೇಗುಲದ ಕೊಂಡ ಪತ್ತೆ: ಎರಡು ಧರ್ಮೀಯರ ಮಧ್ಯೆ ವಾಕ್ಸಮರ
ಗ್ರಾಮದಲ್ಲಿ ಎರಡೂ ಧರ್ಮಿಯರ ನಡುವೆ ಮಾತಿನ ಚಕಮಕಿ
Follow us on

ಕೊಪ್ಪಳ: ಖಬರಸ್ತಾನದಲ್ಲಿ ಆಂಜನೇಯ ದೇವಸ್ಥಾನದ ಕೊಂಡ ಪತ್ತೆಯಾದ ಘಟನೆ ಕೊಪ್ಪಳ ತಾಲೂಕಿನ ಮಂಗಳಾಪೂರದಲ್ಲಿ ನಡೆದಿದೆ. ಜಿಲ್ಲಾಡಳಿತದ ಸರ್ವೆ ವೇಳೆ ಆಂಜನೇಯನ ಕೊಂಡ ಪತ್ತೆಯಾಗಿದೆ. ಖಬರಸ್ತಾನದ ಭೂಮಿ‌ ವಿವಾದದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸರ್ವೆ ಕೈಗೊಂಡಿದ್ದು, ಈ ವೇಳೆ ಆಂಜನೇಯನ ಕೊಂಡ ಪತ್ತೆಯಾಗಿದೆ. ಆಂಜನೇಯನ ಕೊಂಡ ಪತ್ತೆಯಾಗುತ್ತಿದ್ದಂತೆ ಗ್ರಾಮದಲ್ಲಿ ಎರಡೂ ಧರ್ಮಿಯರ ನಡುವೆ ಮಾತಿನ ಚಕಮಕಿ ನಡೆದಿದೆ.

ಖಬರಸ್ತಾನದ ಜಾಗದಲ್ಲಿ ಈ ಮುಂಚೆ ಮಂಗಳಾಪೂರ ಗ್ರಾಮ ಇತ್ತು. ಹಳ್ಳದ ಪ್ರವಾಹದ ವೇಳೆ ಗ್ರಾಮವನ್ನು ಪಕ್ಕದಲ್ಲಿ ಸ್ಥಳಾಂತರ ಮಾಡಲಾಗಿತ್ತು. ಬಳಿಕ‌ ಗ್ರಾಮ ಇದ್ದ ಜಾಗದಲ್ಲಿ ಖಬರಸ್ತಾನ ನಿರ್ಮಾಣವಾಗಿತ್ತು. ಅಂದಿನಿಂದ ಗ್ರಾಮದ ಹಿಂದೂಗಳು ಖಬರಸ್ತಾನ ಜಾಗ ಎಲ್ಲರಿಗೂ ಸೇರಬೇಕೆಂದು ವಾದಿಸುತ್ತಾ ಬಂದಿದ್ದರು. ಈ ಕುರಿತು ಕೋರ್ಟ್​ನಲ್ಲಿಯೂ ಹಿಂದೂ ಸಮಾಜದವರು ದಾವೆ ಹೂಡಿದ್ದರು. ಈ ಹಿನ್ನಲೆಯಲ್ಲಿ ಖಬರಸ್ತಾನ ಜಾಗದ ವಸ್ತು ಸ್ಥಿತಿ ವರದಿ ನೀಡಲು ಜಿಲ್ಲಾಡಳಿತಕ್ಕೆ ಕೋರ್ಟ್ ಆದೇಶಿಸಿದೆ. ಹೀಗಾಗಿ ವಸ್ತು ಸ್ಥಿತಿ ಅಧ್ಯಯನಕ್ಕೆ ಜಿಲ್ಲಾಡಳಿತ ಆಗಮಿಸಿದ್ದು, ಈ ವೇಳೆ ಆಂಜನೇಯನ‌ ಕೊಂಡ ಪತ್ತೆಯಾಗಿದೆ.

ಕಳೆದ 15 ವರ್ಷದಿಂದ ಆ ಭೂಮಿ ಎರಡು ಧರ್ಮಿಯರ ವಿವಾದದ ಕೇಂದ್ರ ಬಿಂದುವಾಗಿತ್ತು. ಈಗ ಆ ವಿವಾದಿತ ಖಬರಸ್ತಾನ ಜಾಗದಲ್ಲಿ ಆಂಜನೇಯ ದೇವಸ್ಥಾನದ ಕುರುಹು ಪತ್ತೆ ಆಗಿದ್ದು, ಗ್ರಾಮಕ್ಕೆ ಸೀಮಿತವಾಗಿದ್ದ ವಿವಾದ ರಾಜ್ಯಾದ್ಯಂತ ಸುದ್ದಿಯಾಗಿದೆ. ಮಂಗಳಾಪೂರ ಹೊರ ಹೊಲಯದಲ್ಲಿನ 2.27 ಎಕರೆ ಭೂಮಿ ಕಳೆದ 40 ವರ್ಷದಿಂದ ವಿವಾದದಲ್ಲಿದೆ.‌ ಈ ಜಾಗ ಸರ್ಕಾರಿ ದಾಖಲೆಯಲ್ಲಿ ಗಾವ್ ಠಾಣಾ ಎಂದಿದೆ. ಕಳೆದ 40 ವರ್ಷದಿಂದ ಈ ಜಾಗದಲ್ಲಿ ಒಂದು ಧರ್ಮಿಯರು ಶವ ಸಂಸ್ಕಾರ ಮಾಡುತ್ತಿದ್ದಾರೆ. ಈ ಭೂಮಿಯ ಅರ್ಧ ಜಾಗವನ್ನು ಹಿಂದೂಗಳಿಗೆ ಶವ ಸಂಸ್ಕಾರಕ್ಕೆ ಬಿಟ್ಟು ಕೊಡುವಂತೆ ಬೇಡಿಕೆ ಇಟ್ಟಿದ್ದು ವಿವಾದಕ್ಕೆ ಕಾರಣ ಎನ್ನಲಾಗಿದೆ.

ಒಟ್ಟು 2 ಎಕರೆ 27 ಗುಂಟೆ ಭೂಮಿಯ ಪೈಕಿ ಅಡಿ ಜಾಗವನ್ನೂ ಕೊಡುವುದಿಲ್ಲ ಎಂದು ಹೇಳಿದಾಗ, ಹಿಂದೂ ಧರ್ಮಿಯರು ಕಳೆದ 2007 ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನು 2011ರಲ್ಲಿ ವಿವಾದಿತ ಜಾಗವನ್ನು ವಕ್ಫ ಬೋರ್ಡ್​ಗೆ ಹಸ್ತಾಂತರಿಸಿ ಪಹಣಿ ತಿದ್ದುಪಡಿ ಮಾಡಲಾಗಿದೆ. ಈ ಎಲ್ಲ ಕಾರಣದಿಂದ, ಇದು ಹಿಂದೂಗಳಿಗೆ ಸೇರಿದ ಭೂಮಿ ಎಂದು ವಾದಿಸಲು ಸಾಕ್ಷಿ ಹುಡುಕಲು ಮುಂದಾಗಿದ್ದಾರೆ.

ಕಳೆದ 2 ದಿನದಿಂದ ನೂರಾರು ಹನುಮ ಮಾಲಾಧಾರಿಗಳು ಹುಡುಕಾಡಿದ್ದು, ನಿನ್ನೆ ವಿವಾದಿತ ಭೂಮಿಯಲ್ಲಿ ಆಂಜನೇಯ ದೇವಸ್ಥಾನದ ಕೊಂಡ ಪತ್ತೆ ಆಗಿದೆ. ಈ ಹಿನ್ನೆಲೆಯಲ್ಲಿ ಇಂದು ಹಿಂದೂ ಪರ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆ ಹಳ್ಳಿ  ಭೇಟಿ ನೀಡಿ, ಪತ್ತೆಯಾದ ಕೊಂಡಕ್ಕೆ ಪೂಜೆ ಸಲ್ಲಿಸಿದ್ದಾರೆ. ಈ ಮೂಲಕ ಗ್ರಾಮಕ್ಕೆ ಸೀಮಿತವಾಗಿದ್ದ ವಿವಾದ ಈಗ ರಾಜ್ಯಾದ್ಯಂತ ಸುದ್ದಿ ಆಗುತ್ತಿದೆ.

ವಿವಾದ ದೊಡ್ಡದಾಗುವ ಮಾಹಿತಿ ತಿಳಿದ ಪೊಲೀಸರು, ಸ್ಥಳದಲ್ಲೇ ಮೊಕ್ಕಾ ಹೂಡಿದ್ದಾರೆ. ಕೋರ್ಟ್

ಇದನ್ನೂ ಓದಿ:
ಮೈಸೂರು ವಸ್ತು ಸಂಗ್ರಹಾಲಯಕ್ಕೆ ಬೆಳ್ಳಿಹಬ್ಬದ ಸಂಭ್ರಮ, ಕಾಡಿನ ರೂಪದಲ್ಲೇ ಸೃಷ್ಟಿಯಾಗಿದೆ ವಿಶೇಷ ಶೋಕೇಸ್

ಐತಿಹಾಸಿಕ ದೇವಾಲಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನಾಥ; ಪುರಾತತ್ವ ಇಲಾಖೆಯ ವಿರುದ್ಧ ಜನರ ಆಕ್ರೋಶ

Published On - 9:03 am, Wed, 15 December 21