ಐತಿಹಾಸಿಕ ದೇವಾಲಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನಾಥ; ಪುರಾತತ್ವ ಇಲಾಖೆಯ ವಿರುದ್ಧ ಜನರ ಆಕ್ರೋಶ

ಬಸವಕಲ್ಯಾಣ ತಾಲೂಕಿನ ಉಮಾಪುರ-ಲಾಹೇಶ್ವರ ಅವಳಿ ಊರು. ಇದು ಒಂದೇ ಊರಿನಂತೆ ಕಂಡರೂ ಊರಿನ ಮುಖ್ಯ ರಸ್ತೆಯ ಒಂದು ಮಗ್ಗುಲನ್ನು ಉಮಾಪುರ ಎಂತಲೂ, ಇನ್ನೊಂದನ್ನು ಲಾಹೇಶ್ವರ ಎಂತಲೂ ಗುರುತಿಸುವ ಪರಿಪಾಠವಿದೆ.

ಐತಿಹಾಸಿಕ ದೇವಾಲಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನಾಥ; ಪುರಾತತ್ವ ಇಲಾಖೆಯ ವಿರುದ್ಧ ಜನರ ಆಕ್ರೋಶ
ಮಹಾದೇವ ದೇವಸ್ಥಾನ
Follow us
TV9 Web
| Updated By: preethi shettigar

Updated on: Oct 19, 2021 | 11:47 AM

ಬೀದರ್: ಜಿಲ್ಲೆಯ ಉಮಾಪುರ ಗ್ರಾಮದಲ್ಲಿನ ಐತಿಹಾಸಿಕ ಶಿವ ಮತ್ತು ಪಾರ್ವತಿ ದೇವಾಲಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅನಾಥವಾಗಿದೆ. ಒಂಭತ್ತು ಶತಮಾನಗಳ ಇತಿಹಾಸವಿರುವ ಪುರಾತನ ದೇವಾಲಯ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ. ಈ ದೇವಾಲಯ ಪುರಾತತ್ವ ಇಲಾಖೆಯ ಸುಪರ್ಧಿಗೆಯಲ್ಲಿದ್ದರೂ ಇದರ ಜಿರ್ಣೋದ್ಧಾರ ಕಾರ್ಯಮಾತ್ರ ಇಲ್ಲಿಯವರೆಗೂ ಆಗಿಲ್ಲ. ಇದು ಸಹಜವಾಗಿಯೇ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬಸವಕಲ್ಯಾಣ ತಾಲೂಕಿನ ಉಮಾಪುರ-ಲಾಹೇಶ್ವರ ಅವಳಿ ಊರು. ಇದು ಒಂದೇ ಊರಿನಂತೆ ಕಂಡರೂ ಊರಿನ ಮುಖ್ಯ ರಸ್ತೆಯ ಒಂದು ಮಗ್ಗುಲನ್ನು ಉಮಾಪುರ ಎಂತಲೂ, ಇನ್ನೊಂದನ್ನು ಲಾಹೇಶ್ವರ ಎಂತಲೂ ಗುರುತಿಸುವ ಪರಿಪಾಠವಿದೆ. ಈ ಊರುಗಳಲ್ಲಿ ಇರುವ ನೀಲಕಂಠ, ಮಹಾದೇವ, ಪಾರ್ವತಿ, ಗಣಪತಿಯ ದೇವಸ್ಥಾನಗಳು ದೇವಾಲಯ ವಾಸ್ತು ಶೈಲಿಗೆ ಅತ್ಯುತ್ತಮ ನಿದರ್ಶನಗಳು. ಸಪ್ತ ರಥ ಮಾದರಿಯಲ್ಲಿರುವ ಮಹಾದೇವ ದೇವಸ್ಥಾನಕ್ಕೆ ಮೂರು ಮುಖ ಮಂಟಪಗಳಿವೆ.

ಆರನೇಯ ವಿಕ್ರಮಾದಿತ್ಯನ‌ ಕಾಲದಲ್ಲಿ ನಿರ್ಮಾಣವಾದ ದೇವಸ್ಥಾನ ಮೂಡಣ ದಿಕ್ಕಿನ ಕಡೆಗೆ ಮುಖ ಮಾಡಿದ ಈ ದೇವಸ್ಥಾನದ ಸಭಾಮಂಟಪ, ಗರ್ಭಗೃಹ, ಮಧ್ಯದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಪಾರ್ಶ್ವದ ಗೋಡೆಯಲ್ಲಿ ನವ ದೇವತೆಗಳ ಉಬ್ಬು ಶಿಲ್ಪಗಳನ್ನು ಕೊರೆಯಲಾಗಿದೆ. ಮುಂಭಾಗದ ಪಾರ್ಶ್ವ ಗೋಡೆಯಲ್ಲಿ ದ್ವಾರ ಪಾಲಕರ ವಿಗ್ರಹಗಳಿವೆ. ಇನ್ನೂ ದೇವಸ್ಥಾನದ ಅಲ್ಲಲ್ಲಿ ನರ್ತಕಿಯರು ನೃತ್ಯ ಭಂಗಿಯಲ್ಲಿರುವ ನಗ್ನ ಶಿಲ್ಪಗಳಿವೆ. ಕೈಯಲ್ಲಿ ಡಮರುಗ, ಮೃದಂಗ, ವೀಣೆ, ಮುಂತಾದವುಗಳಿವೆ. ಭಿತ್ತಿ ಗೋಡೆಯೊಳಗೆ ಮೂರು ದಿಕ್ಕಿನ ಕಡೆ ಒಂದೊಂದು ಪುಟ್ಟ ಮಂಟಪಗಳಿವೆ. ಅದರೊಳಗೆ ದೇವ ಕೋಷ್ಟಗಳಿವೆ. ನಟರಾಜ, ಚಾಮುಂಡಿ ಹಾಗೂ ನಗ್ನ ರೂಪದ ನೃತ್ಯ ಭಂಗಿಯ ವಿಗ್ರಹಗಳನ್ನ ಕೂಡಾ ಇಲ್ಲಿ ಕಾಣಬಹುದು. ಇನ್ನೂ ಈ ದೇವಸ್ಥಾನವನ್ನು ಆರನೇಯ ವಿಕ್ರಮಾಧಿತ್ಯನ ಕಾಲದಲ್ಲಿ ನಿರ್ಮಾಣವಾದ ದೇವಾಲಯ ಇದಾಗಿದೆ.

ಮಹಾದೇವ ದೇವಸ್ಥಾನದ ಬಲ ಹಿಂಬದಿಯಲ್ಲಿ ಪಾರ್ವತಿ ದೇವಸ್ಥಾನವಿದೆ. ಇದು ಮಹಾದೇವ ಮಂದಿರಕ್ಕಿಂತ ಸ್ವಲ್ಪ ಚಿಕ್ಕದು. ಇದರ ಸಭಾ ಮಂಟಪ ಚೌಕಾಕಾರದಲ್ಲಿದೆ. ಮೇಲ್ಛಾವಣಿಯೂ ಇದೆ. ಸಭಾ ಮಂಟಪದ ಸುತ್ತ ತೆರೆದ ಕಕ್ಷಾಸನವಿದೆ. ಕಕ್ಷಾಸನದ ಹೊರಭಾಗದ ಎದುರಿನ ಎರಡೂ ಬದಿಗೆ ನೃತ್ಯ ಭಂಗಿಯಲ್ಲಿರುವ ನಗ್ನ ಶಿಲ್ಪಗಳಿವೆ. ಗರ್ಭಗುಡಿಯ ದ್ವಾರದ ಎರಡೂ ಬದಿಗೆ ದೇವ ಕೋಷ್ಟಗಳಿವೆ. ಮಧ್ಯದಲ್ಲಿ ಉಮಾ- ಮಹೇಶ್ವರ ವಿಗ್ರಹವಿದೆ. ಮಹೇಶ್ವರನ ತೊಡೆಯ ಮೇಲೆ ಪಾರ್ವತಿ ಕುಳಿತಿದ್ದಾಳೆ. ಈ ದೇವಾಲಯದ ಗೋಡೆಯಲ್ಲಿ 20 ಕ್ಕೂ ಹೆಚ್ಚು ಆಕರ್ಷಕ ಮದನಿಕಾ ನಾಟ್ಯ ರಾಣಿಯರ ಚಿತ್ರಗಳನ್ನು ಕೆತ್ತಲಾಗಿದೆ.

ಹಿಂದಿನ ಕಾಲದಲ್ಲಿ ಈ ಕಲ್ಲಿನ ಕಂಭಗಳಿಂದ ಇಂಪಾದ ಸಂಗೀತ ಕೆಳುತ್ತಿತ್ತು ಎಂದು ಪೂರ್ವ ಜರು ಹೇಳುತ್ತಾರೆ. ಯುಗಾದಿ ಹಬ್ಬದ ದಿನದಂದು ಸೂರ್ಯನ ಕಿರಣಗಳು ಇಲ್ಲಿನ ಶಿವಲಿಂಗದ ಮೇಲೆ ಬೀಳುವುದು ಇಲ್ಲಿನ ಇನ್ನೊಂದು ವಿಶೇಷವಾಗಿದೆ. ಇಂತಹ ಅಪರೂಪದ ದೇವಾಲಯ ಇಂದು ಶಾಲಾ ಮಕ್ಕಳು ಆಟವಾಡುವ ಸ್ಥಳವಾಗಿ ಮಾರ್ಪಾಡಾಗಿದೆ. ಇಲ್ಲಿನ ಕಂಬಗಳು ಅಲ್ಲಲ್ಲಿ ಬಿರುಕುಬಿಟ್ಟಿದ್ದು ದೇವಾಲಯದ ಮೇಲ್ಚಾವಣಿಯು ಕೂಡ ಹಾಳಾಗಿದೆ. ಗೋಡೆಯ ಮೇಲೇ ಕೆತ್ತಲಾದ ಸುಂದರ ಕಲಾಕೃತಿಗಳು ಕೂಡಾ ಹಾಳಾಗಿವೆ. ಇಂತಹ ಅಪರೂಪದ ದೇವಸ್ಥಾನವನ್ನು ಪುರಾತತ್ವ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ ಮಾಡಿದ್ದಾರೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದು, ಅಪರೂಪದ ದೇವಾಲಯವನ್ನು ಕಾಪಾಡಿಕೊಂಡು ಹೋಗಬೇಕೆಂದು ಇಲ್ಲಿನ ಜನರು ಸರ್ಕಾರಕ್ಕೆ ವಿನಂತಿಸುತ್ತಿದ್ದಾರೆ.

ವರದಿ: ಸುರೇಶ್ ನಾಯಕ್

ಇದನ್ನೂ ಓದಿ: ಉಡುಪಿ: ಉಚ್ಚಿಲದ ಮಹಾಲಕ್ಷ್ಮಿ ದೇವಾಲಯದ ವಿಶೇಷತೆ ಏನು ಗೊತ್ತಾ?

ದ್ವೈತ ಮಠಕ್ಕೆ ಸೇರಿದ ಪ್ರಸನ್ನ ಸುಬ್ರಹ್ಮಣ್ಯ ದೇವಾಲಯ; ಏಳು ಹೆಡೆಗಳ ನಾಗದೇವತೆಯ ವಿಶೇಷತೆ ಏನು ಗೊತ್ತಾ?

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್