ವಾರದ ಹಿಂದಷ್ಟೇ ಮದ್ವೆಯಾಗಿದ್ದ ಜೋಡಿಯನ್ನು ಅಗಲಿಸಿದ ಜಾತಿ: ಹೆಂಡ್ತಿಬೇಕೆಂದು ಎಸ್ಪಿ ಮೊರೆ ಹೋದ ಯುವಕ
ಕೊಪ್ಪಳ ಜಿಲ್ಲೆಯಲ್ಲಿ ಹಸಮಣೆ ಏರಬೇಕಾಗಿದ್ದ ಜೋಡಿ ಫೋಟೋ ಶೂಟ್ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಅಪಘಾತದಲ್ಲಿ ದುರಂತ ಅಂತ್ಯಕಂಡಿತ್ತು. ಈ ಸುದ್ದಿ ಕೇಳಿ ಕೊಪ್ಪಳ ಜಿಲ್ಲೆ ಜನರ ಕಣ್ಣಂಚಲ್ಲಿ ನೀರು ತಿರಿಸಿತ್ತು. ಇದರ ಮಧ್ಯೆ ಇನ್ನೊಂದು ಜೋಡಿ ವಾರದ ಹಿಂದಷ್ಟೇ ಮದುವೆಯಾಗಿದ್ದ ಜೋಡಿಯನ್ನು ಜೋಡಿಯನ್ನು ಯುವತಿಯ ಪೋಷಕರು ಅಗಲಿಸಿದ್ದಾರೆ. ಹೀಗಾಗಿ ಯುವಕ ಹೆಂಡ್ತಿ ಬೇಕೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಅಷ್ಟಕ್ಕೂ ಏನಿದು,ನವ ಜೋಡಿ,ಜಾತಿ ವ್ಯವಸ್ಥೆ ಅಂತೀರಾ ಈ ಸ್ಟೋರಿ ಓದಿ.

ಕೊಪ್ಪಳ, (ಡಿಸೆಂಬರ್ 09): ಕೊಪ್ಪಳ (Koppal) ಕಲ್ಯಾಣ ಕರ್ನಾಟಕ ಭಾಗದ ಅತ್ಯಂತ ಹಿಂದುಳಿದ ಜಿಲ್ಲೆ.ಕೊಪ್ಪಳ ಜಿಲ್ಲೆಯಲ್ಲಿ ಇನ್ನು ಜಾತಿ (caste )ವ್ಯವಸ್ಥೆ ಜೀವಂತವಾಗಿದೆ.ಜಿಲ್ಲೆಯ ಕೆಲ ಕಡೆ ಅಸ್ಪ್ರಶ್ಯತೆ ಅನ್ನೋ ಪೆಡಂಭೂತ ಜೀವಂತವಾಗಿದೆ. ಕಳೆದ ಕೆಲ ದಿನಗಳ ಹಿಂದೆ ದಲಿತರ ಮನೆಗೆ ಬೆಂಕಿ ಹಚ್ಚಿರೋ ಪ್ರಕರಣ ಇನ್ನು ಮಾಸಿಲ್ಲ.ಹೀಗೆ ಜಿಲ್ಲೆಯಲ್ಲಿ ಒಂದಲ್ಲ ಒಂದು ಕಡೆ ಜಾತಿ ಪದ್ದತಿ ಇನ್ನು ಜೀವಂತವಾಗಿದೆ. ಇದೀಗ ಇದೇ ಜಾತಿ ಪದ್ದತಿ ಪ್ರೀತಿಸಿ ಮದುವೆಯಾಗಿದ್ದ ನವ ಜೋಡಿಯನ್ನ ಬೇರ್ಪಡಿಸಿದೆ.
ಹೌದು…ಕೊಪ್ಪಳ ತಾಲೂಕಿನ ಚುಕ್ಕನಕಲ್ ಗ್ರಾಮದ ನಿವಾಸಿ ಗಣೇಶ್ ಹಾಗೂ ಉಷಾರಾಣಿ ಪ್ರೀತಿಸಿದ್ದು, ಕಳೆದ ವಾರ ಹುಲಗೆಮ್ಮ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಯುವಕ ಗಣೇಶ್ ಉಷಾರಾಣಿಗೆ ತಾಳಿ ಕಟ್ಟಿ ಕಾಲುಂಗರ ಹಾಕಿದ್ದ. ಆದ್ರೆ, ಮದುವೆಯಾದ ಒಂದು ವಾರದ ಬಳಿಕ ಗಣೇಶ ಹಾಗೂ ಉಷಾರಾಣಿಯನ್ನು ಬೇರೆ ಮಾಡಲಾಗಿದೆ. ರಾಜೀ ಸಂಧಾನಕ್ಕೆ ಅಂತ ಬಂದು ಉಷಾರಾಣಿ ಪೋಷಕರು ಆಕೆಯನ್ನ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ಮದುವೆಗೂ ಮುನ್ನ ಮಸಣ ಸೇರಿದ ಜೋಡಿ: ಅಪಘಾತಕ್ಕೂ ಮೊದಲು ನಡೆದಿತ್ತು ಫೋಟೋ ಶೂಟ್
ಗಣೇಶ ವಾಲ್ಮೀಕಿ ಸಮುದಾಯಕ್ಕೆ ಸೇರಿದ್ದರೆ, ಉಷಾರಾಣಿ ರಡ್ಡಿ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ, ಜೀವಭಯದಿಂದ ನವ ಜೋಡಿ ಪೊಲೀಸ್ ಠಾಣೆಗೆ ಬಂದಾಗ ಇಬ್ಬರನ್ನು ದೂರ ಮಾಡಿದ್ದಾರೆ. ಇದರಿಂದ ಕಂಗಾಲಾದ ಗಣೇಶ್, ಇದಕ್ಕೆಲ್ಲ ಜಾತಿ ವ್ಯವಸ್ಥೆ ಕಾರಣ ಎಂದು ಆರೋಪಿಸಿದ್ದು, ಹೆಂಡತಿ ಬೇಕೆಂದು ಎಸ್ ಕೊಪ್ಪಳ ಎಸ್ಪಿ ಕಚೇರಿ ಮೆಟ್ಟಿಲೇರಿದ್ದಾನೆ.
ಈ ಸಂಬಂಧ ಗಣೇಶ್ ತಂದೆ ಪ್ರತಿಕ್ರಿಯಿಸಿದ್ದು, ಗಣೇಶ್ ಕಳೆದ ಒಂದು ವಾರದ ಹಿಂದೆ ಮದುವೆಯಾದ ಜೋಡಿಯನ್ನ ಇದೀಗ ಪೋಷಕರು ಬೇರ್ಪಡಿಸಿದ್ದಾರೆ. ಒಂದು ವಾರದಿಂದ ಪತ್ನಿಗಾಗಿ ಗಣೇಶ್ ಅಲೆದಾಡುತ್ತಿದ್ದಾನೆ. ಒಂದು ವಾರದಿಂದ ಹೆಂಡತಿ ಮುಖ ನೋಡದ ಹಿನ್ನಲೆ ನ್ಯಾಯಕ್ಕಾಗಿ ಇಂದು ತನ್ನ ತಂದೆ ಸುರೇಶ್ ಜೊತೆ ಎಸ್ ಪಿ ಕಚೇರಿಗೆ ಬಂದಿದ್ದಾನೆ.ನಿನ್ನೆ ಅಷ್ಟೇ ಕೊಪ್ಪಳದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಗೆ ಹೋದ ಜೋಡಿ ಅಪಘಾತದಲ್ಲಿ ದುರಂತ ಸಾವು ಕಂಡಿದೆ. ಈ ಘಟನೆ ಮಾಸೋ ಮುನ್ನವೇ ಕೊಪ್ಪಳದಲ್ಲಿ ಇದೀಗ ಜಾತಿ ವ್ಯವಸ್ಥೆಯಿಂದ ನವ ಜೋಡಿ ದೂರಾಗಿವೆ. ಮಗನಿಗೆ ಏನಾದರೂ ಆದ್ರೆ ಯಾರು ಹೊಣೆ? ಮದುವೆಯಾದ ಯವತಿ ಬಂದು ಇಷ್ಟ ಇಲ್ಲ ಅಂದ್ರೆ ಎಲ್ಲವೂ ಸರಿ ಆಗತ್ತೆ. ನನ್ನ ಮಗ ಕೈ ಬಿಡುತ್ತಾನೆ ಎಂದು ಅಳಲು ತೋಡಿಕೊಂಡಿದ್ದಾರೆ.



