ಕೊಪ್ಪಳ: ಬಾಲ್ಯವಿವಾಹದ ಕುರಿತು ಟಿವಿ9 ಮಂಥನ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಿತ್ತು ಈ ಕುರಿತು ಕೊಪ್ಪಳದಲ್ಲಿ ಪ್ರತಿಕ್ರಿಯೆ ನೀಡಿದ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್, ಬಾಲ್ಯ ವಿವಾಹದ ಕುರಿತು ನಮ್ಮ ರಾಜ್ಯದಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ನಾನು ಈ ಬಗ್ಗೆ ಅಂಕಿ ಸಂಖ್ಯೆ ಕೊಡುತ್ತೇನೆ. ಇಡೀ ರಾಜ್ಯದಲ್ಲಿ ಯಾದಗಿರಿ ಹಾಗೂ ದಕ್ಷಿಣ ಕರ್ನಾಟಕದ ಒಂದು ಜಿಲ್ಲೆಯಲ್ಲಿ ಬಾಲ್ಯ ವಿವಾಹ ಹೆಚ್ಚಾಗುತ್ತಿದೆ. ಅದನ್ನು ಹೊರತುಪಡಿಸಿದರೆ ಬೇರೆ ಕಡೆ ಬಾಲ್ಯವಿವಾಹ ಕಡಿಮೆಯಾಗಿದೆ. ಹೀಗಾಗಿ ಈ ಎರಡು ಜಿಲ್ಲೆಯಲ್ಲಿ ನಾವು ಹೆಚ್ಚಿಗೆ ಕೆಲಸ ಮಾಡಬೇಕಿದೆ ಎಂದು ಹೇಳಿಕೆ ನೀಡಿದ್ದಾರೆ.
ರಾಷ್ಟ್ರದ ಅಂಕಿ ಸಂಖ್ಯೆ ನೋಡಿದರೆ ಕರ್ನಾಟಕ ಉತ್ತಮ ಕೆಲಸ ಮಾಡಿದೆ. ನೀವೆ ಹೇಳಿದ ಹಾಗೆ ಕೊವಿಡ್ ಸಮಯದಲ್ಲಿ ಬಾಲ್ಯ ವಿವಾಹ ಹೆಚ್ಚಾಗಿದೆ. ಇದಕ್ಕೆ ಅನೇಕ ಕಾರಣಗಳಿವೆ. ಮಕ್ಕಳು ಇರುವ ಸಾಮಾಜಿಕ ವಾತಾವರಣ, ಅನಿವಾರ್ಯವಾಗಿ ಕೆಲಸಕ್ಕೆ ಹೋದ ವೇಳೆ ಮದುವೆ ಎಲ್ಲವೂ ಇದರಲ್ಲಿ ಮುಖ್ಯ ಪಾತ್ರವಹಿಸಿದೆ. ಇಂತಹ ಮೌಢ್ಯತೆ ದೂರ ಮಾಡಲು ಜಾಗೃತಿ ಅಗತ್ಯ ಎಂದು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.
ಟಿವಿ9 ಬಾಲ್ಯ ವಿವಾಹದ ಕುರಿತು ಮಂಥನ ವಿಶೇಷ ಕಾರ್ಯಕ್ರಮ
ರೋಣ ಪೊಲೀಸ್ ಠಾಣಾ ವ್ಯಾಪ್ತಿಯ 16 ವರ್ಷದ ಬಾಲಕಿಯನ್ನು ಯಲಬುರ್ಗಾ ತಾಲೂಕಿನ ಗ್ರಾಮದ 39 ವರ್ಷದ ಯುವಕನಿಗೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಮಾಡಿದ ನಂತರ ಗಂಡನ ಮನೆಯಲ್ಲಿ ಇರುವ ಬಾಲಕಿಯ ಬಗ್ಗೆ ಮಾಹಿತಿ ನೀಡಲಾಗಿತ್ತು. ಈ ಕುರಿತು ವರದಿ ತರೆಸಿಕೊಳ್ಳುತ್ತೇನೆ ಎಂದು ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.
ಜನ ಜಾಗೃತಿ ಎಲ್ಲಿವರೆಗೂ ನಾವು ಮಾಡಲ್ಲ. ಅಲ್ಲಿಯವರೆಗೆ ಮೌಢ್ಯ ಹೋಗಲ್ಲ. ನನ್ನ ಕ್ಷೇತ್ರದಲ್ಲಿ ಬಾಲ್ಯವಿವಾಹದ ಕುರಿತು ನನಗೆ ಮಾಧ್ಯಮದ ಮೂಲಕ ಗಮನಕ್ಕೆ ಬಂದಿದೆ. ನಾನು ವರದಿ ತರೆಸಿಕೊಂಡು ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.
ಗಣೇಶ ಹಬ್ಬದ ಆಚರಣೆ
ಸಮತಿ ವರದಿ ಆಧಾರದ ಮೇಲೆ ಮುಖ್ಯಮಂತ್ರಿ ಕ್ರಮ ಕೈಗೊಳ್ಳುತ್ತಾರೆ. ಇಂದು ಅಥವಾ ನಾಳೆ ಸಭೆ ಕರೆದು ಮುಖ್ಯಮಂತ್ರಿ ತೀರ್ಮಾನ ಮಾಡುತ್ತಾರೆ. ನಾನು ವೈಯಕ್ತಿಕ ನಿರ್ಧಾರ ಹಂಚಿಕೊಳ್ಳುವುದಿಲ್ಲ. ಸಮಿತಿ ನಿರ್ಣಯ ಆಧಾರದ ಮೇಲೆ ತೀರ್ಮಾನ ಎಂದು ಸಚಿವ ಹಾಲಪ್ಪ ಆಚಾರ್ ತಿಳಿಸಿದ್ದಾರೆ.
ಗಣೇಶ ಹಬ್ಬದ ಆಚರಣೆಗೆ ಯತ್ನಾಳ್ ಹೇಳಿಕೆ ಕುರಿತು ಮಾತನಾಡಿದ ಅವರು ಅದು ಅವರ ವೈಯಕ್ತಿಕ ಅಭಿಪ್ರಾಯ. ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ. ಆದರೆ ಜವಾಬ್ದಾರಿ ಮಾತುಗಳನ್ನು ಆಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ:
Published On - 12:44 pm, Sun, 5 September 21