AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳ: ಕೆಂಪು ಸುಂದರಿ ಬೆಳೆದ ರೈತರಿಗೆ ಸಂಕಷ್ಟ- ದಿಢೀರ್​ ಕುಸಿದ ಒಣ ಮೆಣಸಿನಕಾಯಿ ಬೆಲೆ

ಕೆಂಪು ಸುಂದರಿಯನ್ನೇ ನಂಬಿದ್ದ ರೈತರ ಬದುಕು ಇದೀಗ ಬೀದಿಗೆ ಬಂದಿದೆ. ಈ ಬಾರಿ ಮೆಣಸಿನಕಾಯಿ ಡಿಮ್ಯಾಂಡ್ ಕಡಿಮೆಯಾಗಿದ್ದರಿಂದ ರೈತರು ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ಒಣ ಮೆಣಸಿನಕಾಯಿ ಬೆಲೆ ದಿಢೀರನೆ ಕಡಿಮೆಯಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮೆಣಸಿನಕಾಯಿ ಬೆಳದಿದ್ದ ಕೊಪ್ಪಳದ ರೈತರು ಇದೀಗ ಮಾರ್ಕೇಟ್​ನಲ್ಲಿ ಮಾರಾಟಕ್ಕೆ ತಗೆದುಕೊಂಡು ಹೋಗಿದ್ದ ಮೆಣಸಿನಕಾಯಿಯನ್ನು ಮರಳಿ ತಂದಿದ್ದಾರೆ.

ಕೊಪ್ಪಳ: ಕೆಂಪು ಸುಂದರಿ ಬೆಳೆದ ರೈತರಿಗೆ ಸಂಕಷ್ಟ- ದಿಢೀರ್​ ಕುಸಿದ ಒಣ ಮೆಣಸಿನಕಾಯಿ ಬೆಲೆ
ಕೊಪ್ಪಳ
ಸಂಜಯ್ಯಾ ಚಿಕ್ಕಮಠ
| Edited By: |

Updated on:Jan 07, 2024 | 2:43 PM

Share

ಕೊಪ್ಪಳ, ಜ.07: ಜಿಲ್ಲೆಯ ಯಲಬುರ್ಗಾ(Yalaburga) ತಾಲೂಕಿನ ಕೋಮಲಾಪುರ ಸೇರಿದಂತೆ ಕೆಲವೆಡೆ ಹೆಚ್ಚಿನ ರೈತರು ಮೆಣಸಿನಕಾಯಿಯನ್ನು ಬೆಳೆಯುತ್ತಾರೆ. ಬ್ಯಾಡಗಿ ತಳಿಯ ಉತ್ತಮ ಮೆಣಸಿನಕಾಯಿ(Chilli) ಯನ್ನು ಬೆಳೆಯುವ ರೈತರು, ಅವುಗಳು ಹಣ್ಣಾಗುವವರೆಗೂ ಕಾದು, ನಂತರ ಅವುಗಳನ್ನು ಒಣಗಿಸಿ ಮಾರಾಟ ಮಾಡುತ್ತಾರೆ. ಇದೆಲ್ಲಾ ಆಗಬೇಕಾದರೆ ನಾಲ್ಕು ತಿಂಗಳ ಸಮಯ ಬೇಕಾಗುತ್ತದೆ. ಜೊತೆಗೆ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಬೇಕಾಗುತ್ತಾದೆ. ಆದ್ರೆ, ಇದೆಲ್ಲವನ್ನು ಮಾಡಿ, ರೈತರು ತಾವು ಬೆಳೆದ ಒಣ ಮೆಣಸಿನಕಾಯಿಯನ್ನು ಮಾರ್ಕೇಟ್​ಗೆ ತಗೆದುಕೊಂಡು ಹೋದರೆ, ಅಲ್ಲಿನ ಬೆಲೆ ಕೇಳಿ ರೈತರಿಗೆ ದೊಡ್ಡಮಟ್ಟದ ನಿರಾಸೆಯಾಗುತ್ತಿದೆ.

ಕಳೆದ ವರ್ಷ ಪ್ರತಿ ಕ್ವಿಂಟಲ್ ಒಣ ಮೆಣಸಿನಕಾಯಿ 40 ರಿಂದ 50 ಸಾವಿರಕ್ಕೆ ಕ್ವಿಂಟಲ್ ಮಾರಾಟವಾಗಿತ್ತು. ಎರಡು ವಾರದ ಹಿಂದೆ ಕೂಡಾ ನಲವತ್ತು ಸಾವಿರಕ್ಕೆ ಕ್ವಿಂಟಲ್ ಮಾರಾಟವಾಗಿತ್ತು. ಈ ಹಿನ್ನಲೆ ತಮ್ಮ ಬೆಳೆಗ ಉತ್ತಮ ಬೆಲೆ ಸಿಗುತ್ತೆ ಎಂದ ರೈತರು, ನಿನ್ನೆ ಗದಗ ಮಾರ್ಕೇಟ್​ಗೆ ಸಾಕಷ್ಟು ಒಣ ಮೆಣಸಿನಕಾಯಿಗಳನ್ನು ತಗೆದುಕೊಂಡು ಹೋಗಿದ್ದರು. ಆದ್ರೆ, ಇದೀಗ ಪ್ರತಿ ಕ್ವಿಂಟಲ್ ಮೆಣಸಿನಕಾಯಿ ಹದಿನೈದರಿಂದ ಇಪ್ಪತ್ತು ಸಾವಿರಕ್ಕೆ ಮಾರಾಟವಾಗುತ್ತಿದೆಯಂತೆ. ಹೀಗಾಗಿ ರೈತರು ತಾವು ಬೆಳೆದ ಒಣ ಮೆಣಸಿನಕಾಯಿಯನ್ನು ಮಾರಾಟ ಮಾಡದೆ ಮರಳಿ ತಂದಿದ್ದಾರೆ.

ಇದನ್ನೂ ಓದಿ:ದಿಢೀರ್ ಕುಸಿದ ಮೆಣಸಿನಕಾಯಿ ದರ; ಬೆಂಬಲ ಬೆಲೆ ನೀಡುವಂತೆ ರೈತರ ಒತ್ತಾಯ

ಬೆಳೆ ಬೆಳೆಯಲು ಮಾಡಿರುವ ಖರ್ಚು ಬಾರದೇ ರೈತರು ಕಂಗಾಲು

ಇನ್ನು ಒಂದು ಕ್ವಿಂಟಲ್ ಮೆಣಸಿನಕಾಯಿಯನ್ನು ಬೆಳೆಯಲು ರೈತರು ಇಪ್ಪತ್ತರಿಂದ ಮೂವತ್ತು ಸಾವಿರ ರೂಪಾಯಿ ಖರ್ಚಾಗುತ್ತದೆಯಂತೆ. ಆದ್ರೆ, ಇದೀಗ ಮಾರ್ಕೇಟ್​ನಲ್ಲಿ ಒಂದು ಕ್ವಿಂಟಲ್ ಮೆಣಸಿನಕಾಯಿ, ಹದಿನೈದರಿಂದ ಇಪ್ಪತ್ತು ಸಾವಿರಕ್ಕೆ ಮಾರಾಟವಾಗುತ್ತಿದೆ. ಹೀಗಾಗಿ ಬೆಳೆ ಬೆಳೆಯಲು ಮಾಡಿದ ಖರ್ಚು ಕೂಡ ಬಾರದಂತಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಇನ್ನು ಈ ಬಾರಿ ಬರಗಾಲದಿಂದ ರೈತರು ಕಂಗಾಲಾಗಿದ್ದಾರೆ.

ಮಳೆಯಾಗದೇ ಇರುವುದರಿಂದ ರೈತರು ಟ್ಯಾಂಕರ್ ಮೂಲಕ ಬೇರಡೆಯಿಂದ ನೀರು ತಂದು, ಮೆಣಸಿನಕಾಯಿ ಬೆಳೆಯನ್ನು ಬೆಳದಿದ್ದರು. ಆದ್ರೆ ಇದೀಗ ಬೆಲೆ ಕುಸಿತ ರೈತರಿಗೆ ದೊಡ್ಡ ಮಟ್ಟದ ಶಾಕ್ ನೀಡಿದೆ. ಹೀಗಾಗಿ ಸರ್ಕಾರ ಬೆಂಬಲ ಬೆಲೆಯನ್ನು ಘೋಷಿಸಬೇಕು. ಪ್ರತಿ ಕ್ವಿಂಟಲ್ ಗೆ ಕನಿಷ್ಟ ನಲವತ್ತು ಸಾವಿರ ರೂಪಾಯಿ ಸಿಗುವಂತಹ ವ್ಯವಸ್ಥೆ ಮಾಡಬೇಕು ಅಂತ ರೈತ ಕೃಷ್ಣಪ್ಪಾ ಆಗ್ರಹಿಸಿದ್ದಾರೆ. ಸದ್ಯ ಒಣ ಮೆಣಸಿನಕಾಯಿ ಬೆಳೆದ ರೈತರಿಗೆ ಸಂಕಷ್ಟ ಬಂದಿದ್ದು, ಇಂತಹ ಸಂಕಷ್ಟದ ಸಮಯದಲ್ಲಿ ರೈತರ ನೆರವಿಗೆ ಸರ್ಕಾರ ಬರಬೇಕಿದೆ. ಮೊದಲೇ ಬರಗಾಲದಿಂದ ಕೆಂಗಟ್ಟಿರುವ ರೈತರಿಗೆ ನೆರವಾಗುವ ಮೂಲಕ, ರೈತರು ಆತ್ಮಹತ್ಯೆಯ ಹಾದಿ ಹಿಡಿಯುವದನ್ನು ತಪ್ಪಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:19 pm, Sun, 7 January 24