Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಂಪಿ ಸುತ್ತಮುತ್ತ ಅಕ್ರಮವಾಗಿ ರೆಸಾರ್ಟ್​ ನಡೆಸುತ್ತಿದ್ದ 11 ಮಾಲೀಕರ ವಿರುದ್ಧ ದೂರು ದಾಖಲು

ಹಂಪಿ ವಿಶ್ವಪರಂಪರೆ ಪ್ರಾಧಿಕಾರ ವ್ಯಾಪ್ತಿಯ ಅನಧಿಕೃತ ರೇಸಾರ್ಟ್​ಗಳು ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಹಂಪಿ ಪ್ರದೇಶ ನಿರ್ವಹಣಾ ಪ್ರಾಧಿಕಾರದಿಂದ ಅನುಮತಿ ಪಡೆಯದೆ ರೆಸಾರ್ಟ್​ ನಡೆಸ್ತಿದ್ದ ಹಿನ್ನೆಲೆ 11 ರೆಸಾರ್ಟ್ ಮಾಲೀಕರು ಮತ್ತು ಭೂಮಾಲೀಕರ ವಿರುದ್ದ ದೂರು ಸಲ್ಲಿಸಲಾಗಿದೆ.

ಹಂಪಿ ಸುತ್ತಮುತ್ತ ಅಕ್ರಮವಾಗಿ ರೆಸಾರ್ಟ್​ ನಡೆಸುತ್ತಿದ್ದ 11 ಮಾಲೀಕರ ವಿರುದ್ಧ ದೂರು ದಾಖಲು
ಹಂಪಿ(ಸಾಂದರ್ಭಿಕ ಚಿತ್ರ)
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಆಯೇಷಾ ಬಾನು

Updated on:Aug 13, 2023 | 12:35 PM

ಕೊಪ್ಪಳ, ಆ.13: ಹಂಪಿ(Hampi) ಸುತ್ತಮುತ್ತ ಅಕ್ರಮವಾಗಿ ರೆಸಾರ್ಟ್​ ನಡೆಸುತ್ತಿದ್ದ 11 ರೆಸಾರ್ಟ್ ಮಾಲೀಕರು ಹಾಗೂ ಭೂಮಾಲೀಕರ ವಿರುದ್ದ ಕೊಪ್ಪಳ ಜಿಲ್ಲೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಂಪಿ ಪ್ರದೇಶ ನಿರ್ವಹಣಾ ಪ್ರಾಧಿಕಾರದಿಂದ ಅನುಮತಿ ಪಡೆಯದೆ ರೆಸಾರ್ಟ್​ ನಡೆಸ್ತಿದ್ದ ಹಿನ್ನೆಲೆ ದೂರು ಸಲ್ಲಿಸಲಾಗಿದೆ. ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡೆಯದೇ ರೇಸಾರ್ಟ್​ ನಡೆಸುತ್ತಿದ್ದರು. ಈ ಹಿನ್ನಲೆ ಅಧಿಕಾರಿಗಳು ನಿನ್ನೆ ಖುದ್ದು ಸ್ಥಳಕ್ಕೆ ಭೇಟಿ ನೀಡಿ ದಾಖಲಾತಿ ಪರೀಶಿಲನೆ ಮಾಡಿದ್ದರು. ಈ ವೇಳೆ ಅನುಮತಿ ಪಡೆಯದೆ ಅಕ್ರಮವಾಗಿ ರೆಸಾರ್ಟ್ ನಡೆಸುತ್ತಿರುವುದು ಸಾಬೀತು ಹಿನ್ನೆಲೆ ದೂರು ದಾಖಲಿಸಿದ್ದಾರೆ.

ಹಂಪಿ ವಿಶ್ವಪರಂಪರೆ ಪ್ರಾಧಿಕಾರ ವ್ಯಾಪ್ತಿಯ ಅನಧಿಕೃತ ರೇಸಾರ್ಟ್​ಗಳು ಮೇಲೆ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಗಂಗಾವತಿ ತಾಲೂಕಿನ ಆನೆಗುಂದಿ ಸುತ್ತಮುತ್ತಲಿನ ಪೀಪಲ್ ಟ್ರಿ ರೇಸಾರ್ಟ್​, ನೇಚರ್ ಕಾಟೇಜ್, ವೈಲ್ಡ್ ಸ್ಟೋನ್ ಸಾಣಾಪುರ, ದಿ ಕಿಂಗ್, ಲೇಜಿ ಪಾಂಡಾ, ಕೊಕೊನೆಟ್ ಟ್ರಿ ಸೇರಿದಂತೆ 11 ರೇಸಾರ್ಟ್​ ಮಾಲೀಕರ ವಿರುದ್ಧ ಹಾಗೂ ರೆಸಾರ್ಟ್​​ನ ಭೂ ಮಾಲೀಕರ ವಿರುದ್ಧವೂ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ: Hampi: ಕಣ್ಣಿಗೆ ಕಟ್ಟುವಂತಿದೆ ಹಂಪಿಯ ಗತಕಾಲದ ವೈಭವದ AI ಚಿತ್ರಗಳು

ವಿಶ್ವ ಪಾರಂಪರಿಕ ಸ್ಥಳವಾದ ಹಂಪಿಗೆ ಸಾವಿರಾರು ಪ್ರವಾಸಿಗರು ಪ್ರತಿ ದಿನ ಭೇಟಿ ನೀಡುತ್ತಾರೆ. ಅದರಲ್ಲೂ ಹಂಪಿಗೆ ಹೆಚ್ಚಾಗಿ ಫಾರಿನರ್ಸ್​ಗಳು ಭೇಟಿ ನೀಡುತ್ತಾರೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ರೆಸಾರ್ಟ್​ಗಳಲ್ಲಿ ಅಕ್ರಮವಾಗಿ ಗಾಂಜಾದಂತಹ ಮಾದಕ ದ್ರವಗಳ ಸೇವನೆಯಾಗುತ್ತಿದೆ ಎಂಬ ಮಾತು ಕೇಳಿ ಬಂದಿತ್ತು. ಇನ್ನು ಅಂಜನಾದ್ರಿ ಬೆಟ್ಟದ ಬಳಿ ಕೂಡ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಧ್ವನಿ ಎತ್ತಿದ್ದರು. ಈ ಬೆನ್ನಲ್ಲೆ ನಿನ್ನೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ  ಅಕ್ರಮವಾಗಿ ರೆಸಾರ್ಟ್​ ನಡೆಸುತ್ತಿದ್ದ 11 ರೆಸಾರ್ಟ್ ಮಾಲೀಕರು ಹಾಗೂ ಭೂಮಾಲೀಕರ ವಿರುದ್ದ ದೂರು ದಾಖಲಿಸಿದ್ದಾರೆ.

ಇನ್ನು ಈ ರೀತಿ ಅಕ್ರಮವಾಗಿ ತೆರೆಯಲಾದ ರೆಸಾರ್ಟ್​ಗಳ ವಿರುದ್ಧ ದೂರು ದಾಖಲಿಸುತ್ತಿರುವುದು ಇದೇ ಮೊದಲೇನಲ್ಲ.  ಈ ಹಿಂದೆ ಅಂದರೆ ಫೆಬ್ರವರಿ ತಿಂಗಳಲ್ಲಿ ಸಾಣಾಪುರದಲ್ಲಿ ಅಕ್ರಮ ರೆಸಾರ್ಟ್ ಗಳಿಗೆ ಕೊಪ್ಪಳ ಜಿಲ್ಲಾಡಳಿತ ಬೀಗ ಜಡಿದಿತ್ತು. ಹಂಪಿ, ಅಂಜನಾದ್ರಿ, ಆನೆಗೊಂದಿಗೆ ಬರುವ ವಿದೇಶಿ ಹಾಗೂ ದೇಶೀಯ ಪ್ರವಾಸಿಗರ ವಾಸ್ತವ್ಯ, ಊಟ ತಿಂಡಿಗಾಗಿ ಸಾಣಾಪುರ ಬಳಿಯಲ್ಲಿ ನಿರ್ಮಿಸಲಾಗಿದ್ದ  ರೆಸಾರ್ಟ್ ಗಳು ಹಾಗೂ ಹೋಂ ಸ್ಟೇಗಳನ್ನು ಮುಚ್ಚಿಸಲಾಗಿತ್ತು.

ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:34 pm, Sun, 13 August 23

ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಜಾರಕಿಹೊಳಿ-ಕುಮಾರಸ್ವಾಮಿ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು: ರವಿ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ಇದು ಸಂಭ್ರಮಿಸುವ ಟೈಮಲ್ಲ, ಯತ್ನಾಳ್ ಕೊರತೆ ನೀಗಿಸುವೆಡೆ ಯೋಚಿಸಬೇಕು: ಸಂಸದ
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ನನಗೂ ನೋಟೀಸ್ ಜಾರಿಯಾಗಿದೆ, ಸಮರ್ಪಕ ಉತ್ತರ ನೀಡುತ್ತೇನೆ: ಸೋಮಶೇಖರ್
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಸಿಎಂ ಆಗಲು ಕುಮಾರಸ್ವಾಮಿ ಬೆಂಬಲ ಕೇಳಿರಬಹುದು ಸತೀಶ್: ಜಿಟಿಡಿ
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಈ ನಾಯಿ ಮುಖ ನೋಡಿ ನಿಮ್ಗೆ ದಂಡ ಹಾಕ್ತಿಲ್ಲ:ಟ್ರಾಫಿಕ್ ಪೊಲೀಸ್
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ
ಶ್ರೀನಗರ-ಜಮ್ಮು ಹೆದ್ದಾರಿಯ ನವಯುಗ್ ಸುರಂಗ ಮಾರ್ಗದಲ್ಲಿ ಭೀಕರ ಅಪಘಾತ
ಏರ್ ಕಂಪ್ರೆಸರ್ ಬ್ರೇಕ್​ಗಳು ಏರ್ ಲೀಕಾಗುತ್ತಿದ್ದರೆ ಬ್ರೇಕ್ ಹತ್ತಲ್ಲ?
ಏರ್ ಕಂಪ್ರೆಸರ್ ಬ್ರೇಕ್​ಗಳು ಏರ್ ಲೀಕಾಗುತ್ತಿದ್ದರೆ ಬ್ರೇಕ್ ಹತ್ತಲ್ಲ?