30 ವರ್ಷಗಳಿಂದ ಗಣೇಶ ಮೂರ್ತಿ ತಯಾರಿಕೆ; ವಸ್ತ್ರ ಕುಟುಂಬದಿಂದ ಸಿದ್ಧವಾಗಿದೆ ಪರಿಸರ ಸ್ನೇಹಿ ಗಣಪ

| Updated By: ಸಾಧು ಶ್ರೀನಾಥ್​

Updated on: Sep 07, 2021 | 5:06 PM

ವಸ್ತ್ರದ ಕುಟುಂಬ ಮಹಾರಾಷ್ಟ್ರದಿಂದ ಬಾಂಬೆ ಕ್ಲೇ ಮಣ್ಣು ತಂದು ದೊಡ್ಡ ದೊಡ್ಡ ಗಣಪತಿ ತಯಾರು ಮಾಡುತ್ತಿದ್ದರು.ಕೆಂಪು ಮಣ್ಣು ಜಿಗಟಿರುತ್ತದೆ. ಕೆಲಸವೂ ಬಹಳ. ಆದರೆ ಬಾಂಬೆ ಕ್ಲೇ ಮಣ್ಣಿನಿಂದ ಕೆಲಸ ಆರಾಮಾಗಿರತ್ತದೆ. ಅಲ್ಲದೆ ನೀರಿನಿಲ್ಲಿ ಬೇಗ ಕರಗುತ್ತದೆ. ಆ ಕಾರಣಕ್ಕೆ ವಸ್ತ್ರದ ಕುಟುಂಬದವರು ಬಾಂಬೆ ಕ್ಲೇ ಮಣ್ಣಿನಿಂದ ಗಣಪತಿ ಮಾಡಿಕೊಡುತ್ತಿದ್ದಾರೆ.

30 ವರ್ಷಗಳಿಂದ ಗಣೇಶ ಮೂರ್ತಿ ತಯಾರಿಕೆ; ವಸ್ತ್ರ ಕುಟುಂಬದಿಂದ ಸಿದ್ಧವಾಗಿದೆ ಪರಿಸರ ಸ್ನೇಹಿ ಗಣಪ
30 ವರ್ಷಗಳಿಂದ ಗಣೇಶ ಮೂರ್ತಿ ತಯಾರಿಕೆ
Follow us on

ಕೊಪ್ಪಳ: ಕೊರೊನಾ ಸೋಂಕಿನ ಭೀತಿ ಹಾಗೂ ಲಾಕ್​ಡೌನ್​ ಪರಿಣಾಮ ಎಲ್ಲಾ ಕ್ಷೇತ್ರಗಳನ್ನು ಹಳಿ ತಪ್ಪಿಸಿದೆ. ಎರಡನೇ ಅಲೆ ನಂತರ ಮೂರನೇ ಅಲೆಯ ಭೀತಿ ಶುರುವಾಗಿದ್ದು, ಇನ್ನೂ ಸರಿದಾರಿಗೆ ಬರಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗಲೇ ಸಾರ್ವಜನಿಕ ಬೃಹತ್ ಗಣೇಶ ಮೂರ್ತಿ ತಯಾರಿಕೆ ಮೇಲೂ ಕೊರೊನಾ ಕರಿಛಾಯೆ ಬಿದ್ದಿದೆ. ಗಣೇಶ ಮೂರ್ತಿ ತಯಾರಕರು ಇದರಿಂದ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಆದರೂ ಕೈ ಹಿಡಿದ ಕೆಲಸ ಬಿಡಬಾರದು ಎನ್ನುವ ಉದ್ದೇಶಕ್ಕೆ ಕಲಾವಿದರು ಸಣ್ಣ ಸಣ್ಣ ಗಣೇಶ ಮೂರ್ತಿ ತಯಾರಿಸುತ್ತಿದ್ದಾರೆ.

ಗಣೇಶೋತ್ಸವಕ್ಕೆ ದಿನಗಣನೆ ಆರಂಭಗೊಂಡಿದ್ದು, ದೊಡ್ಡ ದೊಡ್ಡ ಗಣೇಶ‌ ಮೂರ್ತಿಗಳನ್ನು ತಯಾರಿಸುತ್ತಿದ್ದವರು ಈಗ ಕೇವಲ ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ‌ ಮೂರ್ತಿಗಳನ್ನು ತಯಾರಿಸಿದ್ದಾರೆ. ಅದರಂತೆ ಕೊಪ್ಪಳದಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲಾಗುತ್ತಿದ್ದ ಬೃಹತ್ ಗಣೇಶ ಮೂರ್ತಿಗಳನ್ನು ವಸ್ತ್ರದ ಕುಟುಂಬ ಕಳೆದ 30 ವರ್ಷಗಳಿಂದ ತಯಾರಿಸುತ್ತಿತ್ತು. ಪ್ರತಿ ವರ್ಷವೂ ಸುಮಾರು 200 ಕ್ಕೂ ಹೆಚ್ಚು ದೊಡ್ಡ ದೊಡ್ಡ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸುತ್ತಿತ್ತು. ಆದರೆ ಕೊರೊನಾದಿಂದಾಗಿ ಅಂತಹ ಮೂರ್ತಿಗಳನ್ನು ತಯಾರಿ ಮಾಡೋದನ್ನು ಸ್ಥಗಿತಗೊಳಿಸಿದ್ದಾರೆ.

30 ವರ್ಷಗಳಿಂದ ಗಣೇಶ ಮೂರ್ತಿ ತಯಾರಿಕೆ
ವಸ್ತ್ರದ ಕುಟುಂಬ ಕಳೆದ ಮೂವತ್ತು ವರ್ಷಗಳಿಂದ ಗಣೇಶ ಮೂರ್ತಿ ತಯಾರು ಮಾಡುತ್ತಿದೆ. ಮೂಲತಃ ಕೊಪ್ಪಳ ತಾಲೂಕಿನ ಕಿನ್ನಾಳದವರಾದ ವಿಜಯಕುಮಾರ್ ವಸ್ತ್ರದ ಕಳೆದ 10 ವರ್ಷಗಳಿಂದ ಕೊಪ್ಪಳದಲ್ಲಿ ನೆಲಸಿದ್ದಾರೆ‌.ಕೊಪ್ಪಳ ನಗರ ಸೇರಿದಂತೆ ಬೇರೆ ಬೇರೆ ಭಾಗದ ಜನರಿಗೆ ದೊಡ್ಡ ದೊಡ್ಡ ಗಣೇಶ ಮೂರ್ತಿ ಮಾಡಿಕೊಡುತ್ತಿದ್ದರು. ಐದರಿಂದ ಹತ್ತು ಅಡಿವರೆಗೂ ಗಣೇಶ ಮೂರ್ತಿ ಮಾಡಿ ಮಾರಾಟ ಮಾಡುತ್ತಿದ್ದರು. ಕೊಪ್ಪಳದಲ್ಲಿ ಪ್ರತಿಷ್ಠಾಪನೆಯಾಗುತ್ತಿದ್ದ ದೊಡ್ಡ ದೊಡ್ಡ ಗಣಪತಿಗಳು ವಸ್ತ್ರದ ಕುಟುಂಬದ ಕೈಯಲ್ಲಿ ತಯಾರುಗುತ್ತಿದ್ದವು.ಕಳೆದ ಮೂವತ್ತು ವರ್ಷಗಳ ಹಿಂದೆ ಆರಂಭವಾದ ಗಣಪತಿ ತಯಾರಿಕೆ ಇನ್ನು ನಿಂತಿಲ್ಲ. ಆದರೆ ವಸ್ತ್ರದ ಕುಟುಂಬ ದೊಡ್ಡ ಗಣಪತಿ ಮಾಡದಂತೆ ಕೊರೊನಾ ತಡೆದಿದೆ.

ವಸ್ತ್ರ ಕುಟುಂಬದಿಂದ ಸಿದ್ಧವಾಗಿದೆ ಪರಿಸರ ಸ್ನೇಹಿ ಗಣಪ

ದೊಡ್ಡ ಗಣಪತಿಗೆ ಬ್ರೇಕ್
ವಸ್ತ್ರದ ಕುಟುಂಬ ಮಹಾರಾಷ್ಟ್ರದಿಂದ ಬಾಂಬೆ ಕ್ಲೇ ಮಣ್ಣು ತಂದು ದೊಡ್ಡ ದೊಡ್ಡ ಗಣಪತಿ ತಯಾರು ಮಾಡುತ್ತಿದ್ದರು.ಕೆಂಪು ಮಣ್ಣು ಜಿಗಟಿರುತ್ತದೆ. ಕೆಲಸವೂ ಬಹಳ. ಆದರೆ ಬಾಂಬೆ ಕ್ಲೇ ಮಣ್ಣಿನಿಂದ ಕೆಲಸ ಆರಾಮಾಗಿರತ್ತದೆ. ಅಲ್ಲದೆ ನೀರಿನಿಲ್ಲಿ ಬೇಗ ಕರಗುತ್ತದೆ. ಆ ಕಾರಣಕ್ಕೆ ವಸ್ತ್ರದ ಕುಟುಂಬದವರು ಬಾಂಬೆ ಕ್ಲೇ ಮಣ್ಣಿನಿಂದ ಗಣಪತಿ ಮಾಡಿಕೊಡುತ್ತಿದ್ದಾರೆ. ಕಳೆದ ಎರಡು ವರ್ಷದಿಂದ ದೊಡ್ಡ ದೊಡ್ಡ ಗಣಪತಿಗಳಿಗೆ ಅವಕಾಶ ಇಲ್ಲ. ಹಾಗಾಗಿ ವಸ್ತ್ರದ ಇದೀಗ ಮನೆಯಲ್ಲಿ ಇಡುವ  ಗಣಪತಿ ಮಾಡುತ್ತಿದ್ದಾರೆ. ಅದು ಕೇವಲ ಹತ್ತಿಪ್ಪತ್ತು. ಯಾಕಂದರೆ ಮೂಲ ವೃತ್ತಿ ಬಿಡಬಾರದು ಎನ್ನುವುದೇ ಆಗಿದೆ.

ಈಗ ಕೇವಲ ಮನೆಯಲ್ಲಿ ಪ್ರತಿಷ್ಠಾಪಿಸುವ ಸಣ್ಣ ಗಣೇಶ ಮೂರ್ತಿಗಳನ್ನು ಮಾತ್ರ ಒಂದಿಷ್ಟು ತಯಾರಿಸುತ್ತಿದ್ದೇವೆ. ಸುಮಾರು ವರ್ಷಗಳಿಂದ ಮಾಡಿಕೊಂಡು ಬರುತ್ತಿರುವ ಈ ವೃತ್ತಿ ಹಾಗೂ ಕಲೆಯನ್ನು ಕೈಬಿಡಬಾರದು ಎಂದುಕೊಂಡು ಸಣ್ಣ ಗಣೇಶ ಮೂರ್ತಿಗಳನ್ನು ಮಾತ್ರ ತಯಾರಿಸಿದ್ದೇವೆ ಎಂದು ಕಲಾವಿದ ವಿಜಯಕುಮಾರ್ ವಸ್ತ್ರದ ಹೇಳಿದ್ದಾರೆ.

ವರದಿ: ಶಿವಕುಮಾರ್ ಪತ್ತಾರ್

ಇದನ್ನೂ ಓದಿ:
ಪರಿಸರ ಸ್ನೇಹಿ ಗಣೇಶ ವಿಗ್ರಹಗಳು; ಧಾರವಾಡದ ಕಲಾವಿದ ಕುಟುಂಬದ ಅದ್ಭುತ ಕಾರ್ಯ

ಯಾದಗಿರಿ: ಆರ್ಥಿಕ ಸಂಕಷ್ಟದಲ್ಲಿರುವ ಶಿಕ್ಷಕರಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ತಯಾರಿ

Published On - 10:29 am, Mon, 6 September 21