ಕೊಪ್ಪಳ: ಗ್ರಾಮ ಪಂಚಾಯತ ಚುನಾವಣಾ ದ್ವೇಷ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿರುವಂತಹ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಮಲ್ಕಾಪುರದಲ್ಲಿ ನಡೆದಿದೆ. ಜಮೀನಿಗೆ ತೆರಳುತ್ತಿದ್ದಾಗ ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಗೌಡರ್, ರಾಮನಗೌಡರಿಂದ ಬೈಕ್ ಅಡ್ಡ ಹಾಕಿ ಬಿಜೆಪಿ ಬೆಂಬಲಿಗ ಸಂಗಪ್ಪ ಅರಹುಣಸಿ ಎಂಬುವವರ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಬೈಕ್ ಅಡ್ಡಗಟ್ಟಿ ಹಲ್ಲೆ ಮಾಡಿದಲ್ಲದೆ ಮನೆಗೆ ಬಂದು ಹಲ್ಲೆ ಮಾಡಿದ್ದಾರೆ. ಗ್ರಾಮ ಪಂಚಾಯತ ಚುನಾವಣೆಯ ಹಳೆ ದ್ವೇಷದ ಹಿನ್ಮಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಸಂಗಪ್ಪ ಅರಹುಣಸಿ ಕುಟುಂಬದವರ ಮೇಲೆ ಹಲ್ಲೆ ಮಾಡಿದ್ದು, ಕುಷ್ಟಗಿ ಕೈ ಶಾಸಕ ಅಮರೇಗೌಡ ಬಯ್ಯಾಪೂರ ಬೆಂಬಲಿಗರಿಂದ ಹಲ್ಲೆ ಆರೋಪ ಮಾಡಲಾಗಿದೆ.
ಇದನ್ನೂ ಓದಿ: Monkeypox: ಸಮುದಾಯಕ್ಕೆ ಹರಡುತ್ತಿದೆ ಮಂಕಿಪಾಕ್ಸ್, ಮಕ್ಕಳು, ಗರ್ಭಿಣಿಯರಿಗೆ ಅಪಾಯ: WHO
ಸಂಗಪ್ಪ ಅರಹುಣಸಿಯಿಂದ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ಕಾರ್ಯಕರ್ತರು ಆಗಾಗ ಬೆದರಿಕೆ ಹಾಕುತ್ತಿದ್ದರು. ನಿನ್ನೆ ಏಕಾಏಕಿ ಜಮೀನಿಗೆ ತೆರಳಿದಾಗ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಣೆ ಮಾಡಿದ್ದಾರೆ. ಪ್ರಶ್ನೆ ಮಾಡಿದಾಗ ಮನೆಗೆ ಬಂದು ಆರೋಪಿಗಳು ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: India Covid Updates: ಕೊರೊನಾ 4ನೇ ಅಲೆ ಆತಂಕ: ದೇಶದಲ್ಲಿ 7240 ಮಂದಿಗೆ ಕೊರೊನಾ ಸೋಂಕು
ಈ ಕುರಿತಾಗಿ ಸಂಗಪ್ಪ ಅರಹುಣಸಿ ಮಾತನಾಡಿದ್ದು, ಇದಕ್ಕೆಲ್ಲ ಗ್ರಾಪಂ ಚುನಾವಣೆ ಕಾರಣ. ಅದೇ ದ್ವೇಷದಿಂದ ಕಳೆದ ಒಂದು ವರ್ಷದಿಂದ ಆಗಾಗ ಬೆದರಿಕೆ ಹಾಕ್ತೀದಾರೆ. ನಿನ್ನೆ ಜಮೀನಿಗೆ ಹೋಗಿ ವಾಪಸ್ ಬರೋವಾಗ ಬೈಕ್ ಅಡ್ಡಗಟ್ಟಿದ್ರು. ಕೇಳಿದ್ರೆ ನನಗೆ ಧಮ್ಕಿ ಹಾಕಿ ಮನೆಗೆ ಬಂದು ಹಲ್ಲೆ ಮಾಡಿದ್ದಾರೆ. ಸುರೇಶ್ ಗೌಡ ಗೌಡರ್, ರಾಮನಗೌಡ ಇಬ್ಬರು ನಮ್ಮ ಕುಟುಂಬದ ಮೇಲೆ ಹಲ್ಲೆ ಮಾಡಿದ್ದಾರೆ. ಎಲ್ಲೆ ಇದರು ಅವರನ್ನು ಅರೆಸ್ಟ್ ಮಾಡಬೇಕು ಎಂದು ಹೇಳಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:23 am, Thu, 9 June 22