Monkeypox: ಸಮುದಾಯಕ್ಕೆ ಹರಡುತ್ತಿದೆ ಮಂಕಿಪಾಕ್ಸ್, ಮಕ್ಕಳು, ಗರ್ಭಿಣಿಯರಿಗೆ ಅಪಾಯ: WHO

ಈಗಾಗಲೇ 29 ದೇಶಗಳಿಗಿಂತಲೂ ಹೆಚ್ಚು ದೇಶಗಳ ನಿದ್ದೆಗೆಡಿಸಿರುವ ಮಂಕಿ ಪಾಕ್ಸ್ ಸಮುದಾಯಕ್ಕೆ ಹರಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

Monkeypox: ಸಮುದಾಯಕ್ಕೆ ಹರಡುತ್ತಿದೆ ಮಂಕಿಪಾಕ್ಸ್, ಮಕ್ಕಳು, ಗರ್ಭಿಣಿಯರಿಗೆ ಅಪಾಯ: WHO
ಮಂಕಿಪಾಕ್ಸ್​
Follow us
TV9 Web
| Updated By: ನಯನಾ ರಾಜೀವ್

Updated on:Jun 09, 2022 | 10:15 AM

ಈಗಾಗಲೇ 29 ದೇಶಗಳಿಗಿಂತಲೂ ಹೆಚ್ಚು ದೇಶಗಳ ಜನರ ನಿದ್ದೆಗೆಡಿಸಿರುವ ಮಂಕಿ ಪಾಕ್ಸ್ ಸಮುದಾಯಕ್ಕೆ ಹರಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಈಗಾಗಲೇ ಮಂಕಿಪಾಕ್ಸ್ 29ದೇಶಗಳಿಗೆ ಹರಡಿದ್ದು, 1 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಹಾಗೆಯೇ ಸೋಂಕು ಮಕ್ಕಳು ಹಾಗೂ ಗರ್ಭಿಣಿಯರನ್ನೂ ಕಾಡಬಹುದು ಎಂದು ಅಂದಾಜಿಸಲಾಗಿದೆ.

ಕೆಲವು ದೇಶಗಳಲ್ಲಿ ಸಮುದಾಯದಲ್ಲಿ ಸೋಂಕು ಹರಡುತ್ತಿದೆ, ಹಾಗೂ ಮಹಿಳೆಯರಲ್ಲಿ ಹೆಚ್ಚು ಕಂಡುಬರುತ್ತಿದೆ. ಈ ದೇಶಗಳಲ್ಲಿ ಇದುವರೆಗೂ ಮಂಕಿಪಾಕ್ಸ್​ನಿಂದಾಗಿ ಸಾವನ್ನಪ್ಪಿರುವ ಕುರಿತು ವರದಿಯಾಗಿಲ್ಲ. ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಿರುವ ದೇಶಗಳನ್ನು ಸಂಪರ್ಕಿಸಿ, ಸೋಂಕು ಹೆಚ್ಚಾಗಿ ಹರಡದಂತೆ ನಿಗಾ ಇರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ. ಮಂಕಿಪಾಕ್ಸ್ ಇಂಗ್ಲೆಂಡ್​ನಲ್ಲಿ ಹೆಚ್ಚಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತಿದೆ.

ಮಂಕಿ ಪಾಕ್ಸ್​ ಎಂದರೇನು? ಸಿಡಿಸಿ ಪ್ರಕಾರ, ಮಂಕಿಪಾಕ್ಸ್ ಅನ್ನು ಮೊದಲು 1958 ರಲ್ಲಿ ಕಂಡುಹಿಡಿಯಲಾಯಿತು. ಮಂಕಿಪಾಕ್ಸ್ ಎಂಬುದು ವೈರಸ್​ನಿಂದ ಹರಡುವ ಕಾಯಿಲೆಯಾಗಿದೆ. ಇದು ಆರ್ಥೋಪಾಕ್ಸ್ ವೈರಸ್ ಕುಲಕ್ಕೆ ಸೇರಿದ್ದು, ಇದರಲ್ಲಿ ವೆರಿಯೊಲಾ ವೈರಸ್, ವ್ಯಾಕ್ಸಿನಿಯಾ ವೈರಸ್ ಮತ್ತು ಕೌಪಾಕ್ಸ್ ಕೂಡ ಸೇರಿವೆ. ಮಂಕಿಪಾಕ್ಸ್ ಒಂದು ಝೂನೋಸಿಸ್ ಆಗಿದೆ, ಇದು ಸೋಂಕಿತ ಪ್ರಾಣಿಯಿಂದ ಮನುಷ್ಯರಿಗೆ ಹರಡುವ ರೋಗ ಎಂದು ಹೇಳಬಹುದು.

ಮಂಕಿಪಾಕ್ಸ್ ವೈರಸ್ ಹರಡುವುದು ಹೇಗೆ? ಈ ಮೊದಲು ಈ ಸೋಂಕಿಗೆ ಒಳಗಾಗಿದ್ದ ವ್ಯಕ್ತಿಯ ಸಂಪರ್ಕಕ್ಕೆ ಬಂದಾಗ ಸೋಂಕು ತಗುಲುತ್ತದೆ. ಈ ಸೋಂಕು ಕಣ್ಣು, ಮೂಗು, ಬಾಯಿ, ಬಿರುಕುಬಿಟ್ಟ ಚರ್ಮದ ಮೂಲಕವೂ ದೇಹವನ್ನು ಪ್ರವೇಶಿಸಬಹುದಾಗಿದೆ.

ಸೋಂಕು ಎಷ್ಟು ದಿನಗಳ ಕಾಲ ದೇಹದಲ್ಲಿ ಇರಬಲ್ಲದು? ಸೋಂಕು ಕಾಣಿಸಿಕೊಂಡ ಬಳಿಕ ರೋಗಿಗೆ ಸುಮಾರು 3 ರಿಂದ 4 ದಿನಗಳವರೆಗೆ ಜ್ವರ ಇರಲಿದ್ದು, ದೇಹದಲ್ಲಿ ಕೆಂಪು ಕಲೆಗಳು ಕಾಣಿಸಿಕೊಳ್ಳಬಹುದು, ರೋಗವು ಸಾಮಾನ್ಯವಾಗಿ 2 ರಿಂದ 4 ವಾರಗಳವರೆಗೆ ಇರುತ್ತದೆ. ಚರ್ಮದ ಮೇಲಿರುವ ಗುಳ್ಳೆಗಳು ಅಥವಾ ದದ್ದುಗಳು 2 ರಿಂದ 4 ವಾರಗಳವರೆಗೆ ಇರುತ್ತದೆ. ​

ಮಂಕಿಪಾಕ್ಸ್ ಆರಂಭಿಕ ಲಕ್ಷಣಗಳು ​ಮಂಕಿಪಾಕ್ಸ್​ ಸೋಂಕು ತಗುಲಿದ ಮೊದ ಮೊದಲು ಶೀತ, ಜ್ವರ, ಆಯಾಸ, ಸ್ನಾಯು ಸೆಳೆತ, ಬೆನ್ನುಹುರಿ ನೋವು, ಆಯಾಸ ಉಂಟಾಗಬಹುದು. ಇದು ಸಿಡುಬಿನಂತೆಯೇ ಕಂಡರೂ ಅಷ್ಟು ಗಂಭೀರ ಕಾಯಿಲೆಯಾಗಿರುವುದಿಲ್ಲ. ಇದುವರೆಗೂ ಎಲ್ಲೂ ಸಅವನ್ನಪ್ಪಿರುವ ಕುರಿತು ವರದಿಯಾಗಿಲ್ಲ.

ಇತರೆ ವಿದೇಶಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:13 am, Thu, 9 June 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್