AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುರಾನ್​ಗೆ ಅವಮಾನ: ಅಫ್ಘಾನ್ ಮಾಡೆಲ್ ಹಖಿಕಿಯನ್ನು ಬಂಧಿಸಿದ ತಾಲಿಬಾನ್

ಇಸ್ಲಾಂ ಪವಿತ್ರ ಕುರಾನ್​ಗೆ ಅಪಮಾನ ಮಾಡಿದ್ದಾರೆ ಎನ್ನುವ ಆರೋಪದ ಮೇರೆಗೆ ಪ್ರಸಿದ್ಧ ಅಫ್ಘಾನ್ ಫ್ಯಾಷನ್ ಮಾಡೆಲ್ ಹಾಗೂ ಅವರ ಮೂರು ಸಹೋದ್ಯೋಗಿಗಳನ್ನು ತಾಲಿಬಾನ್ ಬಂಧನಕ್ಕೊಳಪಡಿಸಿದೆ.

ಕುರಾನ್​ಗೆ ಅವಮಾನ: ಅಫ್ಘಾನ್ ಮಾಡೆಲ್ ಹಖಿಕಿಯನ್ನು ಬಂಧಿಸಿದ ತಾಲಿಬಾನ್
TalibanImage Credit source: Associate Press
TV9 Web
| Edited By: |

Updated on: Jun 09, 2022 | 10:50 AM

Share

ಇಸ್ಲಾಂ ಪವಿತ್ರ ಕುರಾನ್​ಗೆ ಅಪಮಾನ ಮಾಡಿದ್ದಾರೆ ಎನ್ನುವ ಆರೋಪದ ಮೇರೆಗೆ ಪ್ರಸಿದ್ಧ ಅಫ್ಘಾನ್ ಫ್ಯಾಷನ್ ಮಾಡೆಲ್ ಹಾಗೂ ಅವರ ಮೂರು ಸಹೋದ್ಯೋಗಿಗಳನ್ನು ತಾಲಿಬಾನ್ ಬಂಧನಕ್ಕೊಳಪಡಿಸಿದೆ. ಯೂಟ್ಯೂಬ್ ಕ್ಲಿಪ್​ಗಳು, ಫ್ಯಾಶನ್​ ಶೋಗಳು ಹಾಗೂ ಮಾಡೆಲಿಂಗ್ ಈವೆಂಟ್​ಗಳಿಗೆ ಅಜ್ಮಲ್ ಹಖಕಿ ಪ್ರಸಿದ್ಧರಾಗಿದ್ದಾರೆ, ಇದೀಗ ಅವರನ್ನು ತಾಲಿಬಾನ್ ಬಂಧಿಸಿದೆ.

ಬಂಧನದ ಕುರಿತು ತಾಲಿಬಾನ್ ಗುಪ್ತಚರ ಸಂಸ್ಥೆ ಟ್ವಿಟ್ಟರ್​ನಲ್ಲಿ ವಿವಿಯೋ ಪೋಸ್ಟ್​ ಒಂದನ್ನು ಮಾಡಿದೆ. ಬಂಧನದ ನಂತರ ತಾಲಿಬಾನ್ ಹಖಕಿ ಮತ್ತು ಅವರ ಸಹೋದ್ಯೋಗಿಗಳ ವಿಡಿಯೋವನ್ನು ಬಿಡುಗಡೆ ಮಾಡಿದೆ. ಜೈಲು ಸಮವಸ್ತ್ರದಲ್ಲಿ ನಿಂತು ತಾಲಿಬಾನ್ ಸರ್ಕಾರ ಮತ್ತು ಧಾರ್ಮಿಕ ವಿದ್ವಾಂಸರಲ್ಲಿ ಹಖಕಿ ಕ್ಷಮೆ ಯಾಚಿಸಿದ್ದಾರೆ.

ಆ ಟ್ವೀಟ್ ಧಾರಿ ಭಾಷೆಯಲ್ಲಿದ್ದು, ಕುರಾನ್ ಪದ್ಯಗಳನ್ನು ಅಥವಾ ಪ್ರವಾದಿ ಮುಹಮ್ಮದ್ ಅವರ ಮಾತುಗಳನ್ನು ಅವಮಾನಿಸಲು ಯಾರಿಗೂ ಅವಕಾಶವಿಲ್ಲ ಎಂದು ಆ ವಿಡಿಯೋ ಪೋಸ್ಟ್​ನಲ್ಲಿ ತಾಲಿಬಾನ್ ಬರೆದಿದೆ.ಬುಧವಾರ ಅಮ್ನೆಸ್ಟಿ ಇಂಟರ್​ನ್ಯಾಷನಲ್ ಹಖಿಕಿ ಹಾಗೂ ಅವರ ಸಹೋದ್ಯೋಗಿಗಳನ್ನು ಬಿಡುಗಡೆ ಮಾಡುವಂತೆ ತಾಲಿಬಾನಿಗೆ ಒತ್ತಡ ಹೇರಿದ್ದರು.

ಅಮ್ನೆಸ್ಟಿ ಹೇಳಿಕೆ ಪ್ರಕಾರ, ತಾಲಿಬಾನ್ ಅಫ್ಘಾನಿಸ್ತಾನವನ್ನು ಯಾವಾಗ ತಮ್ಮ ಹಿಡಿತಕ್ಕೆ ತೆಗೆದುಕೊಂಡಿತ್ತೋ ಆಗಿನಿಂದ ಅಫ್ಘಾನಿಸ್ತಾನದಲ್ಲಿ ಕಿರುಕುಳ, ಹಿಂಸೆ ಹೆಚ್ಚಾಗಿದೆ. ಬಂಧನಕ್ಕೊಳಗಾದ ಕುಟುಂಬದವರೊಂದಿಗೆ ಮಾತುಕತೆ ಇನ್ನೂ ಸಾಧ್ಯವಾಗಿಲ್ಲ.

ಇತರೆ ವಿದೇಶಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ