ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಪಂಪಾ ಸರೋವರದಲ್ಲಿ ಮೂಲ ಲಕ್ಷ್ಮೀ ವಿಗ್ರಹಕ್ಕೆ ಧಕ್ಕೆ ಮಾಡಿದ ಆರೋಪ ಕೇಳಿ ಬಂದಿದ್ದು ಹಿಂದೂ ಜಾಗರಣ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ. ಪಂಪಾ ಸರೋವರದ ಪುನಶ್ಚೇತನ ಹೆಸರಲ್ಲಿ ಮೂಲ ಲಕ್ಷ್ಮೀ ವಿಗ್ರಹಕ್ಕೆ ಧಕ್ಕೆ ಮಾಡಲಾಗುತ್ತಿದೆ. ಗರ್ಭಗುಡಿಯಲ್ಲಿದ್ದ ಮೂಲ ವಿಗೃಹ ಕಿತ್ತಿಟ್ಟಿದ್ದಕ್ಕೆ ಹಿಂದೂ ಜಾಗರಣ ಕಾರ್ಯಕರ್ತರು, ಕೆಲಸ ಮಾಡ್ತಿದ್ದ ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡಿದ್ದಾರೆ.
ನಿಧಿಗಾಗಿ ನೀವು ಇಲ್ಲಿಗೆ ಬಂದಿದ್ದೀರಿ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ಕಳೆದ ಒಂದು ವರ್ಷದಿಂದ ಸುಮಾರು ಸುಮಾರು 2 ಕೋಟಿ ವೆಚ್ಚದಲ್ಲಿ ಬಿ.ಶ್ರೀರಾಮುಲು ಪಂಪಾ ಸರೋವರ ಅಭಿವೃದ್ಧಿ ಕಾರ್ಯ ಮಾಡಿಸುತ್ತಿದ್ದಾರೆ. ಆದ್ರೆ ಪುನಶ್ಚೇತನ ಹೆಸರಲ್ಲಿ ಮಹಾಲಕ್ಷ್ಮಿ ಮೂರ್ತಿಗೆ ಧಕ್ಕೆಯಾಗಿದೆ. ಇಲ್ಲಿಂದ ಹೋಗಿ ಎಂದು ಹಿಂದೂ ಜಾಗರಣ ಕಾರ್ಯಕರ್ತರು ಅಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವನು ಅಭಿವೃದ್ಧಿ ಮಾಡೋಕೆ ಹೇಳಿದ್ದು, ನೀವೆಲ್ಲ ನಿಧಿ ಕಳ್ಳರು ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: Bank Holidays in June 2022: ಜೂನ್ ತಿಂಗಳಲ್ಲಿ ಬ್ಯಾಂಕ್ ರಜಾ ದಿನಗಳು ಅದೆಷ್ಟು ಕಡಿಮೆ ಇವೆ ಗೊತ್ತೆ?
ಕೊಪ್ಪಳದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ವಿಗ್ರಹ ಕಿತ್ತುಹಾಕಿದ್ದು ಅಕ್ಷಮ್ಯ ಅಪರಾಧ
ಇನ್ನು ಪಂಪಾ ಸರೋವರದಲ್ಲಿ ಜಯಲಕ್ಷ್ಮಿ ವಿಗ್ರಹ ಧಕ್ಕೆ ವಿಚಾರಕ್ಕೆ ಸಂಬಂಧಿಸಿ ರಾತ್ರೋರಾತ್ರಿ ವಿಗ್ರಹ ಕಿತ್ತುಹಾಕಿದ್ದು ಅಕ್ಷಮ್ಯ ಅಪರಾಧ ಎಂದು ಗಂಗಾವತಿಯಲ್ಲಿ ಇತಿಹಾಸ ತಜ್ಞ ಡಾ. ಶರಣಬಸಪ್ಪ ಕೋಲ್ಕಾರ ಕೃತ್ಯಕ್ಕೆ ಅಸಮಾಧಾನ ಹೊರ ಹಾಕಿದ್ದಾರೆ. ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಪಂಪಾ ಸರೋವರ ಪುನಶ್ಚೇತನ ಮಾಡಲಾಗುತ್ತಿದೆ. ಗುತ್ತಿಗೆದಾರರಿಂದ ಪಂಪಾಸರೋವರದ ಮೂಲ ವಿಗ್ರಹಕ್ಕೆ ಧಕ್ಕೆ ಆರೋಪ ಕೇಳಿ ಬಂದಿದೆ. ಮೂಲ ವಿಗ್ರಹ ತೆಗೆಯುವಾಗ ಶ್ರೀಚಕ್ರ, ವಿಗ್ರಹಕ್ಕೆ ಧಕ್ಕೆ ಆಗಿದೆ. ಪ್ರಾಚೀನ ಸ್ಮಾರಕ ಕಾಯ್ದೆ-1961ರ ಪ್ರಕಾರ ಇದು ಶಿಕ್ಷಾರ್ಹ ಅಪರಾಧ. ವಿಗ್ರಹ ತೆರವು ಕಾರ್ಯಕ್ಕೆ ಮುನ್ನ ಗುತ್ತಿಗೆದಾರರ ಸಭೆಯಬೇಕಿತ್ತು. ಇಲಾಖೆ, ಧಾರ್ಮಿಕ ಮುಖಂಡರು, ಸಂತರ ಜತೆ ಸಭೆ ಮಾಡಬೇಕಿತ್ತು. ಆದರೆ ಗುತ್ತಿಗೆದಾರರು ಅಕ್ರಮವಾಗಿ ವಿಗ್ರಹವನ್ನು ತೆಗೆದಿದ್ದಾರೆ. ಪಂಪಾ ಸರೋವರ ಅಭಿವೃದ್ಧಿ ಹೆಸರಲ್ಲಿ ವಿಗ್ರಹಕ್ಕೆ ಧಕ್ಕೆ ಮಾಡಿದ್ದಾರೆ ಎಂದು ಇತಿಹಾಸ ತಜ್ಞ ಡಾ. ಶರಣಬಸಪ್ಪ ಕೋಲ್ಕಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Vikrant Rona: ಕನ್ನಡದಲ್ಲೇ ಮಾತನಾಡಿದ ಜಾಕ್ವೆಲಿನ್; ‘ರಕ್ಕಮ್ಮ’ಗಾಗಿ ಮೊದಲ ಬಾರಿಗೆ ರೀಲ್ಸ್ ಮಾಡಿದ ಕಿಚ್ಚ ಸುದೀಪ್
ಹಂಪಿ ಕ್ಷೇತ್ರದ ಅತ್ಯಂತ ಪ್ರಾಚೀನ ಸ್ಥಳ ಪಂಪಾ ಸರೋವರ. ಪುರಾಣ ಪ್ರಕಾರ ಪಂಪಾಂಬಿಕೆ ತಪ್ಪಸ್ಸು ಮಾಡಿ ಶಿವನನ್ನು ಒಲಿಸಿಕೊಂಡು ವಿವಾಹವಾದ ಸ್ಥಳ. ಐದು ಶ್ರೇಷ್ಠ ಸರೋವರಗಳಲ್ಲಿ ಪಂಪಾ ಸರೋವರ ಒಂದು. ರಾಮಾಯಣದಲ್ಲೂ ಪಂಪಾ ಸರೋವರದ ಬಗ್ಗೆ ಉಲ್ಲೇಖ ಇದೆ ಎಂದರು.
ಸ್ಥಳದಲ್ಲಿ ಹಿಂದೂ ಪರ ಸಂಘಟನೆ ಕಾರ್ಯಕರ್ತರು, ಸ್ಥಳೀಯರು ಜಮಾವಣೆಯಾಗಿದ್ದಾರೆ. ಸ್ಥಳಕ್ಕೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಭೇಟಿ ನೀಡಿದ್ದಾರೆ. ಶಾಸಕ ಪರಣ್ಣ ಮುನವಳ್ಳಿ, ತಹಶೀಲ್ದಾರ್ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಯಾರೋ ಬಂದು ಇಷ್ಟೆಲ್ಲ ಮಾಡಿದ್ರೂ ಕೈ ಕಟ್ಟಿ ಕುಳಿತಿದ್ದೀರಿ ಎಂದು ಗರಂ ಆಗಿದ್ದಾರೆ. ನೂರಾರು ವರ್ಷದ ದೇವಸ್ಥಾನವನ್ನ ರಾತ್ರೋರಾತ್ರಿ ಕಿತ್ತು ಹಾಕಿದ್ದಾರೆ. ಮಧ್ಯ ರಾತ್ರಿ ಮೂಲ ವಿಗ್ರಹ ತೆರವು ಮಾಡಿದ್ದೇಕೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಹಿಂದೂ ಪರ ಸಂಘಟನೆ ಕಾರ್ಯಕರ್ತರು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ. ಹಂಪಿ ಪ್ರಾಧಿಕಾರ, ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಸಂಬಂಧಪಟ್ಟವರ ವಿರುದ್ದ FIR ದಾಖಲು ಮಾಡಿಸುವುದಾಗಿ ಶಾಸಕ ಪರಣ್ಣ ಮುನವಳ್ಳಿ ಭರವಸೆ ನೀಡಿದ್ದಾರೆ.
Published On - 1:02 pm, Fri, 27 May 22