ಕಲ್ಯಾಣ ಕರ್ನಾಟಕದ ಬೆಳಕಿನ ಕಿರಣ ಕೊಪ್ಪಳದ ಗವಿಮಠ; ದಕ್ಷಿಣದ ಕುಂಭಮೇಳವೆಂದು ಮಠದ ಜಾತ್ರೆಯನ್ನು ಕೆರಯೋದೇಕೆ? ಅದರ ವಿಶೇಷವೇನು ಗೊತ್ತಾ?

ರಾಜ್ಯದಲ್ಲಿ ಅನೇಕ ಮಠ ಮಂದಿರಗಳಿದ್ದು, ಧರ್ಮ ರಕ್ಷಣೆ, ಶಿಕ್ಷಣ, ಸಾಹಿತ್ಯ ಸೇರಿದಂತೆ ಜನರ ನೋವು- ನಲಿವುಗಳಿಗೆ ಸ್ಪಂಧಿಸುವ ಕೆಲಸಗಳನ್ನು ಮಾಡುತ್ತಾ ಬಂದಿವೆ. ರಾಜ್ಯದ ಶ್ರೇಯೋಭಿವೃದ್ದಿಯಲ್ಲಿ ಮಠಗಳ ಪಾತ್ರ ಕೂಡ ದೊಡ್ಡದಿದೆ.  ಆ ಮಠದ ಜಾತ್ರೆ ದಕ್ಷಿಣ ಭಾರತದ ಕುಂಭಮೇಳ ಅಂತಲೇ ಪ್ರಸಿದ್ದಿಯಾಗಿದೆ.  ಹಾಗಾದ್ರೆ ಆ ಮಠ ಯಾವುದು, ಅದರ ವಿಶೇಷಗಳೇನು, ಆ ಮಠಕ್ಕಿರುವ ಐತಿಹಾಸಿಕ ಹಿನ್ನೆಲೆಯ ಪರಿಚಯ ಇಲ್ಲಿದೆ.

ಕಲ್ಯಾಣ ಕರ್ನಾಟಕದ ಬೆಳಕಿನ ಕಿರಣ ಕೊಪ್ಪಳದ ಗವಿಮಠ; ದಕ್ಷಿಣದ ಕುಂಭಮೇಳವೆಂದು ಮಠದ ಜಾತ್ರೆಯನ್ನು ಕೆರಯೋದೇಕೆ? ಅದರ ವಿಶೇಷವೇನು ಗೊತ್ತಾ?
ಕೊಪ್ಪಳ ಗವಿಮಠ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 25, 2024 | 8:09 PM

ಕೊಪ್ಪಳ, ಜ.25: ರಾಜ್ಯದಲ್ಲಿ ಗುರು ವಿರಕ್ತ ಪರಂಪರೆ ಸೇರಿದಂತೆ ಅನೇಕ ಪರಂಪರೆಗಳನ್ನು ಹೊಂದಿರುವ ನೂರಾರು ಮಠಗಳಿವೆ. ಪ್ರತಿಯೊಂದು ಮಠಗಳು ಕೂಡ ತಮ್ಮದೆ ಆದ ಚೌಕಟ್ಟಿನಲ್ಲಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿವೆ. ರಾಜ್ಯದಲ್ಲಿ ಶಿಕ್ಷಣದ ಬೆಳವಣಿಗೆ, ಸಾಹಿತ್ಯ, ಸಂಗೀತ,ಕ್ರೀಡೆಗೆ ಪ್ರೋತ್ಸಾಹ ಸೇರಿದಂತೆ ಅನೇಕ ಕೆಲಸಗಳನ್ನು ಮಠಮಾನ್ಯಗಳು ಮಾಡುತ್ತಲೇ ಇವೆ. ಅನ್ನದಾಸೋಹದ ಜೊತೆಗೆ ಶಿಕ್ಷಣ ದಾಸೋಹ ಮಾಡುವ ಮೂಲಕ ಸಾವಿರಾರು ಬಡ ಮಕ್ಕಳ ಬಾಳಿಗೆ ಬೆಳಕಾಗಿದ್ದು ಇದೇ ಮಠಗಳು ಎನ್ನುವುದು ಕೂಡ ವಿಶೇಷವಾಗಿದೆ. ತುಮಕೂರಿನಲ್ಲಿ ಸಿದ್ದಗಂಗಾ ಮಠ, ದಾಸೋಹ ಸೇರಿದಂತೆ ಶಿಕ್ಷಣದ ಮೂಲಕ ದೊಡ್ಡ ಹೆಸರು ಮಾಡಿದ್ದರೆ, ಇತ್ತ ಉತ್ತರ ಕರ್ನಾಟಕ ಭಾಗದಲ್ಲಿ ಅಂತಹದೊಂದು ಕೆಲಸವನ್ನು ಕೊಪ್ಪಳ ನಗರದಲ್ಲಿರುವ ಸುಪ್ರಸಿದ್ದ ಐತಿಹಾಸಿಕ ಗವಿಮಠ(Gavimath) ಮಾಡುತ್ತಿದೆ.

ದಾಸೋಹ

ಸದ್ಯ ಕೊಪ್ಪಳದ ಗವಿಮಠ, ರಾಜ್ಯದ ಸುಪ್ರಸಿದ್ದ ಮಠಗಳ ಸಾಲಿನಲ್ಲಿದ್ದು, ಅನೇಕ ಜನಪರ ಕೆಲಸಗಳ ಮೂಲಕ ಮತ್ತು ವಿಶಿಷ್ಟವಾಗಿ ನಡೆಸುವ ಜಾತ್ರೆಯ ಮೂಲಕ ಜನಮಾನಸದಲ್ಲಿದೆ. ಅದರಲ್ಲೂ ಸದ್ಯದ ಮಠದ ಪೀಠಾಧಿಪತಿಯಾಗಿರುವ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಶಿಕ್ಷಣ ದಾಸೋಹ, ಅನ್ನ ದಾಸೋಹ ಸೇರಿದಂತೆ ಜನರ ಬಾಳಿಗೆ ಬೆಳಕಾಗುವ, ಅವರ ಸಮಸ್ಯೆಗಳಿಗೆ ಪರಿಹಾರಾತ್ಮಕ ಕೆಲಸಗಳ ಮೂಲಕ, ಸರ್ವಧರ್ಮಗಳ ನಡುವೆ ಸಮನ್ವಯತೆಯನ್ನು ಮೂಡಿಸುವ ಕೆಲಸಗಳ ಮೂಲಕ ಹೆಚ್ಚು ಪ್ರಸಿದ್ದಿಯನ್ನು ಪಡೆದಿದ್ದಾರೆ.

ಮಠದ ಐತಿಹಾಸಿಕ ಹಿನ್ನೆಲೆ

ಕೊಪ್ಪಳ ನಗರದಲ್ಲಿರುವ ಸುಪ್ರಸಿದ್ದ ಗವಿಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ವಾರಣಾಸಿಯಿಂದ ಬಂದ ಶ್ರೀ ರುದ್ರಮುನಿ ಶಿವಯೋಗಿಗಳು ಮಠವನ್ನು ಸ್ಥಾಪಿಸಿದ ಮೂಲ ಗುರುಗಳಾಗಿದ್ದಾರೆ. ರುದ್ರಮುನಿ ಶಿವಯೋಗಿಗಳಿಂದ ಆರಂಭವಾದ ಮಠದ ಪರಂಪರೆಯಲ್ಲಿ ಇದೀಗ ಹದಿನೆಂಟನೇ ಪೀಠಾಧಿಪತಿಯಾಗಿರುವುದು ಸದ್ಯ ಇರುವ ಅಭಿವನ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಯವರು.

ಇದನ್ನೂ ಓದಿ:ಗತವೈಭವಕ್ಕೆ ಮರಳಿದ ಕೊಪ್ಪಳದ ಗವಿಮಠ ಜಾತ್ರೆ, 6 ಲಕ್ಷ ಭಕ್ತ‘ಸಾಗರ’ ಭಾಗಿ, ಚಿತ್ರಗಳಲ್ಲಿ ನೀವೂ ನೋಡಿ

ಇನ್ನು ಕೊಪ್ಪಳದ ಗವಿಮಠದ ಪ್ರಮುಖ ಆರಾಧ್ಯಕೇಂದ್ರ ಗವಿಸಿದ್ದೇಶ್ವರ ಕರ್ತೃ ಗದ್ದುಗೆ. ಇದು ಮಠದ ಹನ್ನೊಂದಡೆ ಪೀಠಾಧಿಪಾತಿಯಾಗಿದ್ದ ಗವಿಸಿದ್ದೇಶ್ವರ ಸ್ವಾಮೀಜಿಯವರ ಕ್ರಿಯಾಸಮಾಧಿಯಾಗಿದೆ. ಇದೇ ಕರ್ತೃ ಗುದ್ದುಗೆ ಭಕ್ತರ ಆರಾಧನೆಯ ಕೇಂದ್ರವಾಗಿದೆ. ಗವಿಸಿದ್ದೇಶ್ವರ ಶ್ರೀಗಳ ಗುರುಗಳಾಗಿದ್ದ ಹತ್ತನೇ ಪೀಠಾಧಿಪತಿ ಚನ್ನಬಸವ ಸ್ವಾಮೀಜಿ, ತಾವು ಲಿಂಗೈಕ್ಯರಾಗಲು ಮಠದಲ್ಲಿ ನಿರ್ಮಿಸಿಕೊಂಡಿದ್ದ ಕ್ರಿಯಾಸಮಾಧಿಯನ್ನು ತಾವೇ ಜೀವಂತ ಪ್ರವೇಶಿಸಿದ್ದ ಹನ್ನೊಂದನೆ ಪೀಠಾಧಿಪತಿ ಗವಿಸಿದ್ದೇಶ್ವರ ಸ್ವಾಮೀಜಿಯವರು ಗುರುಗಳ ಬದಲಿಗೆ ತಾವೇ ಕ್ರಿಯಾ ಸಮಾಧಿಯನ್ನು ಪ್ರವೇಶಿಸಿ, ಲಿಂಗ ಪೂಜೆ ಮಾಡುತ್ತಾ ಜೀವಂತ ಸಮಾದಿಯಾಗಿದ್ದಾರಂತೆ. ಹೀಗಾಗಿ ಅವರನ್ನು ಈ ಭಾಗದಲ್ಲಿ ದೇವರ ಸ್ವರೂಪದಲ್ಲಿ ಭಕ್ತರು ಕಾಣುತ್ತಾರೆ. ಗವಿಸಿದ್ದೇಶ್ವರ ಸ್ವಾಮೀಜಿಯ ಗದ್ದುಗೆ ದರ್ಶನದಿಂದ ಜೀವನದ ಸಂಕಷ್ಟಗಳೆಲ್ಲಾ ದೂರವಾಗುತ್ತೆವ ಅನ್ನೋ ನಂಬಿಕೆ ಗವಿಮಠದ ಭಕ್ತರಲ್ಲಿದೆ. ಹೀಗಾಗಿ ಮಠಕ್ಕೆ ಬರುವ ಭಕ್ತರು ಗವಿಸಿದ್ದೇಶ್ವರ ಶ್ರೀಗಳ ಗದುಗೆಯ ದರ್ಶನ ಪೆಡದು ಪುನಿತರಾಗುತ್ತಾರೆ.

ಮಠದ ಕೀರ್ತಿಯನ್ನು ಪ್ರಕಾಶಮಾನಗೊಳಿಸಿದ್ದು ಅಭಿನವ ಶ್ರೀಗವಿಸಿದ್ದೇಶ್ವರ ಸ್ವಾಮೀಜಿ

ಇನ್ನು ಅನೇಕ ವರ್ಷಗಳ ಇತಿಹಾಸ ಹೊಂದಿರುವ ಮಠ ಕಳೆದ ಕೆಲ ವರ್ಷಗಳಿಂದ ಹೆಚ್ಚು ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಸದ್ಯದ 18ನೇ ಪೀಠಾಧಿಪತಿಯಾಗಿರುವ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು. ಹೌದು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಹೊಸ ಹೊಸ ಯೋಜನೆ,ಯೋಚನೆಗಳ ಮೂಲಕ ಮಠದ ಹೆಸರನ್ನು ಉಚ್ಛ್ರಾಯ ಸ್ಥಿತಿಗೆ ತಗೆದುಕೊಂಡು ಹೋಗುತ್ತಿದ್ದಾರೆ. ಮಠದ ಅಭಿವೃದ್ದಿಯ ಜೊತೆಗೆ ಮಠದ ಭಕ್ತರ ಶ್ರಯೋಭಿವೃದ್ದಿಗಾಗಿ ಅನೇಕ ಜನಪರ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಸ್ವಾಮೀಜಿಯವರ ಪ್ರವಚನಗಳನ್ನು ಕೇಳಲು ಲಕ್ಷಾಂತರ ಸೇರುತ್ತಾರೆ. ಮಠದಲ್ಲಿ ಅನೇಕ ಬದಲಾವಣೆಗಳಿಗೆ ಕಾರಣೀಭೂತರಾಗಿರುವ ಸ್ವಾಮೀಜಿ, ತಮ್ಮ ಕಾಯಕ ಮತ್ತು ನಡೆ ನುಡಿಗಳಿಂದ ಹೆಚ್ಚು ಪ್ರಸಿದ್ದಿಯನ್ನು ಪಡೆದಿದ್ದಾರೆ.

ದಕ್ಷಿಣದ ಕುಂಭಮೇಳ ಕೊಪ್ಪಳದ ಗವಿಮಠದ ಜಾತ್ರೆ

ಇನ್ನು ಪ್ರತಿವರ್ಷ ಮಠದ ಹನ್ನೊಂದನೆ ಪೀಠಾಧಿಪತಿಯಾಗಿರುವ ಗವಿಸಿದ್ದೇಶ್ವರ ಸ್ವಾಮೀಜಿಯವರ ಸ್ಮರಣಾರ್ಥ ಜಾತ್ರೆ ನಡೆಯುತ್ತದೆ. ಈ ಜಾತ್ರೆಯನ್ನು ದಕ್ಷಿಣದ ಕುಂಭಮೇಳ ಅಂತಲೆ ಕರೆಯಲಾಗುತ್ತದೆ. ಯಾಕಂದ್ರೆ ಈ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗಿಯಾಗುತ್ತಾರೆ. ಈ ವರ್ಷ ಕೂಡಾ ಜನವರಿ 27 ರಂದು ಮಠದ ಆವರಣದಲ್ಲಿ ರಥೋತ್ಸವ ನಡೆಯಲಿದೆ. ಜನವರಿ 27 ರಿಂದ ಮೂರು ದಿನಗಳ ಕಾಲ ಮಠದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದ್ರೆ ಒಂದು ತಿಂಗಳ ಕೂಡಾ ಜಾತ್ರೆ ನಡೆಯುತ್ತದೆ. ಜಾತ್ರೆಯ ಅಂಗವಾಗಿ ತೆಪ್ಪೋತ್ಸವ, ಗಂಗಾರತಿ ಕಾರ್ಯಕ್ರಮಗಳು ಕೂಡಾ ನಡೆಯುತ್ತವೆ. ಜಾತ್ರೆಗೆ ರಾಜ್ಯವಲ್ಲದೇ ಸುತ್ತಮುತ್ತಲಿನ ಅನೇಕ ರಾಜ್ಯಗಳಿಂದ ಸಾವಿರಾರು ಭಕ್ತರು, ಜಾತ್ರೆಗೆ ಬರುವುದ ವಿಶೇಷ. ಇನ್ನು ಗವಿಮಠದ ಜಾತ್ರೆ ದಾಸೋಹದಿಂದ ಕೂಡಾ ಹೆಚ್ಚು ಸುದ್ದಿಯಲ್ಲಿದೆ. ಈ ಜಾತ್ರೆಗೆ ನಾಡಿನ ಅನೇಕ ಭಕ್ತರು ಸ್ವಯಂಪ್ರೇರಣೆಯಿಂದ ಲಕ್ಷ ಲಕ್ಷ ಹೋಳಿಗೆ, ಮಾದಲಿ, ರೊಟ್ಟಿ ಸೇರಿದಂತೆ ಅನೇಕ ಆಹಾರ ಪದಾರ್ಥಗಳನ್ನು ತಂದು ಕೊಡ್ತಾರೆ. ಲಕ್ಷಾಂತರ ಭಕ್ತರು, ಭಕ್ಷ್ಯ ಬೋಜನಗಳನ್ನು ಜಾತ್ರೆಯ ಸಮಯದಲ್ಲಿ ಸವಿಯುತ್ತಾರೆ. ಜಾತ್ರೆಯ ಮಾರನೆ ದಿನ ನಡೆಯುವ ಮಿರ್ಚಿ ಜಾತ್ರೆಯಲ್ಲಿ ಕೂಡಾ ಲಕ್ಷಾಂತರ ಜನರಿಗೆ ಮಿರ್ಚಿ ನೀಡಲಾಗುತ್ತದೆ. ರಥೋತ್ಸವದ ದಿನವೇ ಸರಿಸುಮಾರು ಆರರಿಂದ ಎಂಟು ಲಕ್ಷ ಜನ ಸೇರುವದರಿಂದ, ಕೊಪ್ಪಳದ ಗವಿಮಠದ ಜಾತ್ರೆಯನ್ನು ದಕ್ಷಿಣದ ಕುಂಭಮೇಳ ಅಂತ ಕರೆಯಲಾಗುತ್ತದೆ.

ಇದನ್ನೂ ಓದಿ:Gavisiddeshwara Mattu Jatre: ಕೊಪ್ಪಳ ಗವಿಮಠ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರಿಗೆ ಅನ್ನದಾಸೋಹ

ಇನ್ನು ಜಾತ್ರೆ ಅಂದ್ರೆ ರಥೋತ್ಸವ, ಸಂಭ್ರಮ ಮಾತ್ರವಲ್ಲಾ. ಅನೇಕ ವೈಚಾರಿಕ ಕೆಲಸಗಳಿಗೆ, ಜಾಗೃತಿಯ ಕಾರ್ಯಕ್ರಮಗಳಿಗೆ ಕೂಡಾ ಸಾಕ್ಷಿಯಾಗುತ್ತಿರುವದು ಕೊಪ್ಪಳ ಗವಿಮಠ ಜಾತ್ರೆಯ ವಿಶೇಷವಾಗಿದೆ. ಜನ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಈ ಬಾರಿ ಸ್ವಯಂ ಉದ್ಯೋಗ ಮಾಡಿ ಸ್ವಾವಲಂಭಿಯಾಗಿರುವ ನೂರಾರು ಜನರ ಬದುಕಿನ ಕಥೆಗಳನ್ನು ತೋರಿಸುವ ಕೆಲಸಕ್ಕೆ ಸ್ವಾಮೀಜಿ ಮುಂದಾಗಿದ್ದಾರೆ. ಈ ಹಿಂದೆ ಕೂಡಾ ಅಭಿವನ ಗವಿಸಿದ್ದೇಶ್ವರ ಸ್ವಾಮೀಜಿ, ಬಾಲ್ಯ ವಿವಾಹ, ಜಲ ಸಂರಕ್ಷಣೆ, ರಕ್ತಧಾನ, ಲಕ್ಷ ವೃಕ್ಷೋತ್ಸವದ ಅನೇಕ ಜಾಥಾಗಳನ್ನು ಮಾಡಿ, ಅರಿವು, ಆರೋಗ್ಯ, ಶಿಕ್ಷಣದ ಬೆಳವಣಿಗೆ ಮಾಡುವ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ ಅಂತಾರೆ ಮಠದ ಭಕ್ತ ನೂರಂದಯ್ಯ ಕಂಬಾಳಿಮಠ, ಮಠದ ಭಕ್ತ

ಕೊಪ್ಪಳದ ಗವಿಮಠ ಇದೀಗ ದೇಶದ ಸುಪ್ರಸಿದ್ದ ಮಠಗಳಲ್ಲಿ ಒಂದು ಅನ್ನೋ ಹೆಸರನ್ನು ಪಡೆದಿದೆ. ಗವಿಮಠದ ಜಾತ್ರೆ ದಕ್ಷಿಣದ ಕುಂಭಮೇಳ ಅಂತ ಪ್ರಸಿದ್ದಿ ಪಡೆದಿದ್ದು ಲಕ್ಷಾಂತರ ಭಕ್ತರು ಜಾತ್ರೆಗೆ ಬರುವುದು ವಿಶೇಷವಾಗಿದೆ. ಸದ್ಯದ ಮಠದ ಪೀಠಾಧಿಪತಿಯಾಗಿರುವ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಬಡ ಮಕ್ಕಳಿಗೆ ಉಚಿತ ಶಿಕ್ಷಣ, ದಾಸೋಹದ ಜೊತೆಗೆ ವೈಚಾರಿಕ ಅರಿವು, ಸಮಾಜ ಸುಧಾರಣೆಯ ಕೆಲಸವನ್ನು ಮಾಡುತ್ತಾ, ಧಾರ್ಮಿಕ ಸುಧಾರಕರಾಗಿ ಕೆಲಸ ಮಾಡುತ್ತಿರುವದು ಶ್ಲಾಘನೀಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಅಕ್ಕಿ ಮೂಟೆ ಹೊತ್ತು ಗಂಗಾವತಿಯಿಂದ ಮಂತ್ರಾಲಯದವರೆಗೆ ಭಕ್ತನ ಪಾದಯಾತ್ರೆ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ಸಾಕ್ಷಿ: ವಿಡಿಯೋ ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ಎದುರಗಡೆ ಆನೆ​, ಪಕ್ಕದಲ್ಲಿ ಎರಡೆರಡು ಹುಲಿ: ಸಫಾರಿಗರ ಪಾಡು ಏನಾಯ್ತು ನೋಡಿ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ವಾರ ಭವಿಷ್ಯ, ಜುಲೈ 08ರಿಂದ 14ರ ತನಕದ ರಾಶಿ ಭವಿಷ್ಯ ಹೀಗಿದೆ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಬಂಧುಗಳ ಮನೆಗೆ ಬರಿಗೈಯಲ್ಲಿ ಏಕೆ ಹೋಗಬಾರದು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಲು ಈ ವಿಡಿಯೋ ನೋಡಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ