ಬಾಕಿ ಬಿಲ್ ಬಿಡುಗಡೆ ಮಾಡುವಂತೆ ಆಗ್ರಹ: ಕ್ರಿಮಿನಾಶಕ ಹಿಡಿದು ಸಿಇಓ ಕಚೇರಿ ಮುಂದೆ ಪ್ರತಿಭಟನೆ

ಕೊಪ್ಪಳ ಜಿಲ್ಲಾ ಪಂಚಾಯತ್ ಕಚೇರಿ ಮುಂದೆ ಇಂದು ಕೆಲಕಾಲ ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು. ಜಿಲ್ಲೆಯ ಕುಷ್ಟಗಿ ತಾಲೂಕಿನ ಅನೇಕ ಸಾಮಾಗ್ರಿ ಸರಬರಾಜುದಾರರು ಪ್ರತಿಭಟನೆಗೆ ಕೂತಿದ್ದರು. ಸುಮ್ಮನೇ ಪ್ರತಿಭಟನೆ ನಡೆಸಿದ್ದರೆ ಯಾರು ಕೂಡ ಅಷ್ಟೊಂದು ಗಂಭೀರವಾಗ್ತಿರಲಿಲ್ಲಾ. ಆದರೆ ಪ್ರತಿಭಟನೆಗೆ ಕೂತವರು, ತಾವು ಬರುವಾಗ, ಕ್ರಿಮಿನಾಶಕದ ಬಾಟಲ್​ಗಳನ್ನು ಕೂಡ ತಂದಿದ್ದರು.

ಬಾಕಿ ಬಿಲ್ ಬಿಡುಗಡೆ ಮಾಡುವಂತೆ ಆಗ್ರಹ: ಕ್ರಿಮಿನಾಶಕ ಹಿಡಿದು ಸಿಇಓ ಕಚೇರಿ ಮುಂದೆ ಪ್ರತಿಭಟನೆ
ಸಾಮಾಗ್ರಿ ಸರಬರಾಜುದಾರರ ಪ್ರತಿಭಟನೆ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಗಂಗಾಧರ​ ಬ. ಸಾಬೋಜಿ

Updated on: Jan 18, 2024 | 9:55 PM

ಕೊಪ್ಪಳ, ಜನವರಿ 18: ಜಿಲ್ಲಾ ಪಂಚಾಯತ್ (Zilla Panchayat) ಕಚೇರಿಗೆ ಕ್ರಿಮಿನಾಶಕದ ಬಾಟಲ್​ಗಳನ್ನು ಹಿಡಿದು ಬಂದಿದ್ದರು. ಅಧಿಕಾರಿಗಳ ಮುಂದೆ, ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಇಲ್ಲವೇ, ನಮ್ಮ ಸಮಸ್ಯೆ ಬಗೆಹರಿಸಿ ಅಂತ ಪಟ್ಟು ಹಿಡಿದು ಕೂತಿದ್ದರು. ನಮ್ಮ ಸಾವಿಗೆ ಅಧಿಕಾರಿಗಳೇ ಕಾರಣರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಅಧಿಕಾರಿಗಳು, ಪೊಲೀಸರು ಧಾವಿಸಿದ್ದು, ಕೆಲಹೊತ್ತು ಕಚೇರಿ ಮುಂದೆ ಹೈಡ್ರಾಮಾವೇ ನಡೆಯಿತು.

ಜಿಲ್ಲಾ ಪಂಚಾಯತ್ ಕಚೇರಿ ಮುಂದೆ ಸರಬರಾಜುದಾರರ ಪ್ರತಿಭಟನೆ

ಕೊಪ್ಪಳ ಜಿಲ್ಲಾ ಪಂಚಾಯತ್ ಕಚೇರಿ ಮುಂದೆ ಇಂದು ಕೆಲಕಾಲ ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು. ಜಿಲ್ಲೆಯ ಕುಷ್ಟಗಿ ತಾಲೂಕಿನ ಅನೇಕ ಸಾಮಾಗ್ರಿ ಸರಬರಾಜುದಾರರು ಪ್ರತಿಭಟನೆಗೆ ಕೂತಿದ್ದರು. ಸುಮ್ಮನೇ ಪ್ರತಿಭಟನೆ ನಡೆಸಿದ್ದರೆ ಯಾರು ಕೂಡ ಅಷ್ಟೊಂದು ಗಂಭೀರವಾಗ್ತಿರಲಿಲ್ಲಾ. ಆದರೆ ಪ್ರತಿಭಟನೆಗೆ ಕೂತವರು, ತಾವು ಬರುವಾಗ, ಕ್ರಿಮಿನಾಶಕದ ಬಾಟಲ್​ಗಳನ್ನು ಕೂಡ ತಂದಿದ್ದರು.

ತಮ್ಮ ಸಮಸ್ಯೆ ಬಗೆಹರಿಸಿ, ಇಲ್ಲವೇ ನಾವು ಇಲ್ಲಿಯೇ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ನಮ್ಮ ಸಾವಿಗೆ ಅಧಿಕಾರಿಗಳೇ ಕಾರಣ ಅಂತ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಪ್ರತಿಭಟನೆಗೆ ಕೂತವರೆಲ್ಲಾ, ಕುಷ್ಟಗಿ ತಾಲೂಕಿನಲ್ಲಿ, ಉದ್ಯೋಗ ಖಾತ್ರಿ ಯೋಜನೆಯ ಚೆಕ್ ಡ್ಯಾಮ್ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಸಿಮೆಂಟ್, ಕಂಕರ್, ಸೇರಿದಂತೆ ಅನೇಕ ವಸ್ತುಗಳನ್ನು ಸರಬರಾಜು ಮಾಡಿದ್ದ ಸರಬರಾಜುದಾರರು.

ಪ್ರತಿಭಟನೆಗೆ ಕಾರಣವೇನು?

2019 ಮತ್ತು 2020 ರ ಸಮಯದಲ್ಲಿ ಕುಷ್ಟಗಿ ತಾಲೂಕಿನ ಅನೇಕ ಕಡೆ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳಿಗೆ 150ಕ್ಕೂ ಹೆಚ್ಚು ಸಾಮಾಗ್ರಿ ಸರಬರಾಜುದಾರರು ವಿವಿಧ ರೀತಿಯ ಸಾಮಾಗ್ರಿಗಳನ್ನು ಸರಬರಾಜು ಮಾಡಿದ್ದಾರೆ. ಆದರೆ ಐದು ವರ್ಷವಾದರೂ ಕುಷ್ಟಗಿ ತಾಲೂಕು ಪಂಚಾಯತ್ ಅಧಿಕಾರಿಗಳು ಬಿಲ್ ಪಾವತಿ ಮಾಡುತ್ತಿಲ್ಲವಂತೆ. ಸರಿಸುಮಾರು 37 ಕೋಟಿ ರೂಪಾಯಿ ಬಿಲ್ ಬಾಕಿಯಿದ್ದು, ಬಿಲ್ ಗಾಗಿ ಅಲೆದು ಅಲೆದು ಸುಸ್ತಾಗಿದ್ದ ಸರಬರಾಜುದಾರರು.

ಇದನ್ನೂ ಓದಿ: ಪ್ರವಾಸೀ ತಾಣ ಹೊಸಪೇಟೆಯಲ್ಲಿ ವೇಶ್ಯಾವಾಟಿಕೆ, ಲಾಡ್ಜ್ ಸಿಬ್ಬಂದಿಯ ಏರ್ಪಾಟು ನೋಡಿ ಪೊಲೀಸರಿಗೇ ಶಾಕ್!

ಇಂದು ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ತಮ್ಮ ಸಮಸ್ಯೆ ಬಗೆಹರಿಸಿ, ಇಲ್ಲವೇ ನಾವು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ನಮ್ಮ ಸಾವಿಗೆ ಅಧಿಕಾರಿಗಳೇ ಕಾರಣರಾಗ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ ಸಾಮಾಗ್ರಿ ಸರಬರಾಜು ಮಾಡಿದ್ದು ಸುಖಮುನಿ.

ಇನ್ನು ಎಲ್ಲಾ ಕಾಮಾಗಾರಿಗಳು ಮುಗಿದರು ಕೂಡ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಬಿಲ್ ಪಾವತಿ ಮಾಡ್ತಿಲ್ಲಾ ಅಂತ ಸರಬರಾಜುದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಲಕ್ಷಾಂತರ ರೂಪಾಯಿ ಸಾಲ ಮಾಡಿ, ಸಾಮಾಗ್ರಿಗಳನ್ನು ಸರಬರಾಜು ಮಾಡಿದ್ದೇವೆ. ಇದೀಗ ಬಿಲ್ ಪಾವತಿಯಾಗದೇ ಇರೋದರಿಂದ ಸಾಲಗಾರರ ಕಿರುಕುಳ ಹೆಚ್ಚಾಗಿದೆ. ಹೀಗಾಗಿ ನಾವು ಮನೆಯಲ್ಲಿ ಕೂಡಾ ಇರಲಾರದಂತಹ ಸ್ಥಿತಿ ಬಂದಿದೆ. ಹೀಗಾಗಿ ನಮಗೆ ಬರಬೇಕಾಗಿರುವ ಬಿಲ್ ಪಾವತಿ ಮಾಡಬೇಕು ಅಂತ ಆಗ್ರಹಿಸಿದ್ದರು.

ವಾರದಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ

ಸರಬರಾಜುದಾರರು ಪ್ರತಿಭಟನೆಗೆ ಕೂತಿದ್ದ ಸ್ಥಳಕ್ಕೆ ಆಗಮಿಸಿದ ಕೊಪ್ಪಳ ಜಿಲ್ಲಾ ಪಂಚಾಯತ್ ನ ಸಿಇಓ ರಾಹುಲ್ ರತ್ನಂ ಪಾಂಡ್ವೆ, ಅನೇಕ ಕಾಮಗಾರಿಗಳು ಸರಿಯಾಗಿಲ್ಲಾ ಅಂತ ದೂರುಗಳು ಬಂದಿವೆ. ದೂರುಗಳ ಹಿನ್ನೆಲೆಯಲ್ಲಿ ಬಿಲ್ ಪಾವತಿ ತಡೆಹಿಡಲಾಗಿದೆ ಅಂತ ಹೇಳಿದ್ದಾರೆ. ಇದಕ್ಕೆ ಸರಬರಾಜುದಾರರು ಆಕ್ರೋಶ ವ್ಯಕ್ತಪಡಿಸಿದ್ರು. ಈ ಹಿಂದೆ ಕೂಡಾ ಅನೇಕ ದೂರುಗಳು ಬಂದಿದ್ದವು. ಆಗ ಕೂಡ ಅಧಿಕಾರಿಗಳೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ವಿಡಿಯೋ ನೋಡಿ: ಟಿಪ್ಪರ್ ಲಾರಿ ಮಾಲೀಕರಿಂದ ‘ಗುಲಾಬಿ’ ಹೋರಾಟ

ಕಳಪೆ ಕಾಮಗಾರಿಗಳು ಆಗಿದ್ದರೆ ಅವುಗಳ ಬಿಲ್ ತಡೆ ಹಿಡಿಯಲಿ, ಎಲ್ಲಾ ಬಿಲ್ ಗಳನ್ನು ತಡೆಹಿಡಿದರೆ ಹೇಗೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಆಗ ಕೊಪ್ಪಳ ಸಿಇಓ ರಾಹುಲ್ ರತ್ನಂ ಪಾಂಡ್ವೆ, ಖುದ್ದು ತಾನೇ ಕಾಮಾಗಿರಗಳನ್ನು ಪರಿಶೀಲಿಸಿ, ಬಿಲ್ ಪಾವತಿಗೆ ವ್ಯವಸ್ಥೆ ಮಾಡ್ತೇನೆ ಅಂತ ಭರವಸೆ ನೀಡಿದ್ದಾರೆ.

ಕೊಪ್ಪಳ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕೆಲಹೊತ್ತು ಆತಂಕದ ವಾತಾವಾರಣ ನಿರ್ಮಾಣವಾಗಿತ್ತು. ಆದರೆ ಅಧಿಕಾರಿಗಳ ಭರವಸೆ ಮೇರೆಗೆ ಸಾಮಾಗ್ರಿ ಸರಬರಾಜುದಾರರು ಇನ್ನು ಒಂದು ವಾರ ಕಾಯಲು ಮುಂದಾಗಿದ್ದಾರೆ. ಆಗಲು ಕೂಡ ಬಿಲ್ ಪಾವತಿ ಮಾಡದೇ ಇದ್ದರೆ ಕುಟುಂಬ ಸಮೇತ ಜಿಲ್ಲಾಧಿಕಾರಿ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ, ಕ್ರಮಕೈಗೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.